ನವದೆಹಲಿ (ಆ. 23): ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್ ವೆಬ್ಸೈಟ್ನಲ್ಲಿ ( e-filing portal ) ಸಮಸ್ಯೆ ಹಾಗೂ ಜಾಲತಾಣದಲ್ಲಿ ತೆರಿಗೆದಾರರು (taxpayers) ಎದುರಿಸುತ್ತಿರುವ ಸಮಸ್ಯೆಗಳನ್ನು ಇನ್ನು ಸೆಪ್ಟಂಬರ್ 15ರೊಳಗೆ ಸರಿಪಡಿಸಲಾಗುವುದು ಎಂದು ಇನ್ಫೋಸಿಸ್ (Infosys) ತಿಳಿಸಿದೆ. ಈ ಮೂಲಕ ಪೋರ್ಟಲ್ ಅನ್ನು ತೆರಿಗೆದಾರರ ಸ್ನೇಹಿಯಾಗಿ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ತಂಡ ತಿಳಿಸಿದೆ. ಸಮನ್ಸ್ ಜಾರಿ ಬೆನ್ನಲ್ಲೆ ಇಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Nirmala Sitharaman )ಅವರನ್ನು ಇನ್ಫೋಸಿಸ್ ತಂಡ ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದರು. ಈ ವೇಳೆ ಹೊಸ ಪೋರ್ಟಲ್ ಆರಂಭವಾದಾಗಿನಿಂದ ಅಂದರೆ ಕಳೆದ ಎರಡೂವರೆ ತಿಂಗಳಿನಿಂದ ಪದೇ ಪದೇ ಉದ್ಭವಿಸುತ್ತಿರುವ ಈ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂಬಂಧ ವಿವರಣೆ ನೀಡಿದ ತಂಡ ಶೀಘ್ರದಲ್ಲಿಯೇ ಈ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಈ ವೇಳೆ ಹಣಕಾಸು ಸಚಿವರು ಸಮಸ್ಯೆ ಬಗೆಹರಿಸಲು ಇನ್ಫೋಸಿಸ್ನಿಂದ ಹೆಚ್ಚಿನ ಸಂಪನ್ಮೂಲವನ್ನು ನೀಡಬೇಕು. ಜೊತೆಗೆ ಅಧಿಕ ಇದರ ನಿವಾರಣೆಗೆ ಅಧಿಕ ಪ್ರಯತ್ನವನ್ನು ನಡೆಸುವಂತೆ ತಿಳಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಎಂಡಿ ಹಾಗೂ ಸಿಇಒ ಸಲೀಲ್ ಪರೇಖ್ (Infosys MD and CEO Salil Parekh) ಕಾರ್ಯ ನಿರ್ವಹಣೆಯಲ್ಲಿನ ವಿಳಂಬದಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ ಎಂಬುದರ ಕುರಿತು ಸಚಿವರಿಗೆ ಮನವರಿಕೆ ಮಾಡಿದರು.
ಪೋರ್ಟಲ್ ಸುಗಮ ನಿರ್ವಹಣೆಗಾಗಿ ತಮ್ಮ ತಂಡ ಎಲ್ಲಾ ರೀತಿಯ ಕಾರ್ಯ ನಿರ್ವಹಣೆ ಮಾಡುತ್ತಿದೆ. ತಂಡದಲ್ಲಿ 750ಕ್ಕೂ ಹೆಚ್ಚು ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಇನ್ಫೋಸಿಸ್ನ ಸಿಒಒ ಪ್ರವೀಣ್ ರಾವ್ ಈ ಯೋಜನೆಯನ್ನು ವೈಯಕ್ತಿಕವಾಗಿ ನೋಡಿಕೊಳ್ಳುತ್ತಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಪೋರ್ಟಲ್ನಲ್ಲಿ ತೆರಿಗೆದಾರರು ಅನುಭವಿಸದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ಓದಿ: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ನಲ್ಲಿ ಸಮಸ್ಯೆ; ಇನ್ಫೋಸಿಸ್ ಸಿಇಒಗೆ ಸಮನ್ಸ್
ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್ ವೆಬ್ಸೈಟ್ನಲ್ಲಿ ತಾಂತ್ರಿಕ ದೋಷಗಳು ಮುಂದುವರೆದ ಕಾರಣ ಈ ಕುರಿತು ವಿವರಣೆ ನೀಡುವಂತೆ ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್ಗೆ ನಿನ್ನೆ ಆದಾಯ ತೆರಿಗೆ ಇಲಾಖೆಯಿಂದ ಸಮನ್ಸ್ ನೀಡಲಾಗಿತ್ತು. ಕಳೆದ ಜೂನ್ನಲ್ಲಿ ಆರಂಭವಾದ ಈ ಜಾಲತಾಣದಲ್ಲಿ ಆರಂಭದ ದಿನದಿಂದ ಸಾಕಷ್ಟು ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಈ ಸಂಬಂಧ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಖುದ್ದು ಭೇಟಿಯಾಗಿ ವಿವರಣೆ ನೀಡುವಂತೆ ಹಣಕಾಸು ಸಚಿವಾಲಯ ಸೂಚಿಸಿತು.
ರಾಷ್ಟ್ರೀಯ ಇ ಆಡಳಿತದ ಯೋಜನೆ ಅಡಿ ತೆರಿಗೆದಾರರಿಗೆ ಅನುಕೂಲವಾಗುವ ಹೊಸ ಪೀಚರ್ಗಳ ಮೂಲಕ ಇನ್ಫೋಸಿಸ್ ಈ ಪೋರ್ಟಲ್ ಅಭಿವೃದ್ಧಿ ಪಡಿಸಿತ್ತು. ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರಿಗೆ ಆದಾಯ ತೆರಿಗೆ ಸಂಬಂಧಿತ ಸೇವೆಗಳಿಗೆ ಒಂದೇ ವೇದಿಕೆ ಒದಗಿಸುವುದು ಈ ಪೋರ್ಟಲ್ನ ಉದ್ದೇಶವಾಗಿದೆ. ಕಳೆದ ಜೂನ್ 7ರಂದು ಈ ಜಾಲತಾಣ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ