HOME » NEWS » National-international » INCOME TAX DEPARTMENT MAY TAKE TOUGH STAND IF INDIVIDUALS FAIL TO LINK THEIR PAN WITH AADHAAR CARDS SESR

Income Tax: ಪ್ಯಾನ್​ ಅನ್ನು ಆಧಾರ್​ ಜೊತೆ ಲಿಂಕ್​ ಮಾಡಿಲ್ವಾ; ಹಾಗಾದ್ರೆ ಮುಂದಿನ ತಿಂಗಳಿನಿಂದ ಸಂಬಳ ಬರುವುದು ಅನುಮಾನ

ಒಂದು ವೇಳೆ ಈ ಕಾರ್ಯ ಮಾಡುವಲ್ಲಿ ವಿಫಲವಾದಲ್ಲಿ ಕಂಪನಿಗಳು ಮುಂದಿನ ತಿಂಗಳ ಸಂಬಳವನ್ನು ಜಮಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

news18-kannada
Updated:June 22, 2021, 3:51 PM IST
Income Tax: ಪ್ಯಾನ್​ ಅನ್ನು ಆಧಾರ್​ ಜೊತೆ ಲಿಂಕ್​ ಮಾಡಿಲ್ವಾ; ಹಾಗಾದ್ರೆ ಮುಂದಿನ ತಿಂಗಳಿನಿಂದ ಸಂಬಳ ಬರುವುದು ಅನುಮಾನ
ಪ್ರಾತಿನಿಧಿಕ ಚಿತ್ರ
  • Share this:
ಈ ತಿಂಗಳ ಅಂತ್ಯದೊಳಗೆ ನಿಮ್ಮ ಪ್ಯಾನ್​ ಕಾರ್ಡ್​ನ್ನು ಆಧಾರ್​ ಕಾರ್ಡ್​ನೊಂದಿಗೆ ಲಿಂಕ್ ಮಾಡುವಲ್ಲಿ ವಿಫಲವಾದರೆ, ನಿಮಗೆ ಮುಂದಿನ ತಿಂಗಳು ಸಂಬಳ ಕೈ ಸೇರುವುದು ಅನುಮಾನ. ಈ ರೀತಿಯ ಬಿಗಿ ನಿಲುವನ್ನು ಈಗ ಆಧಾಯ ತೆರಿಗೆ ಇಲಾಖೆ ತೆಗೆದುಕೊಳ್ಳಲು ಮುಂದಾಗಿದೆ. ಈಗಾಗಲೇ ಶಾಶ್ವತ ಪ್ಯಾನ್​ ಅನ್ನು ಆಧಾರ್​ ಕಾರ್ಡ್​​ನೊಂದಿಗೆ ಲಿಂಕ್​ ಮಾಡುವ ದಿನಾಂಕವನ್ನು ಜೂನ್​ 30ರವರೆಗೆ ವಿಸ್ತರಿಸಿದ್ದು, ಈ ಸಮಯದೊಳಗೆ ನಿಮ್ಮ ಪ್ಯಾನ್​ ಲಿಂಕ್​ ಮಾಡುವುದು ಕಡ್ಡಾಯವಾಗಿದೆ. ಪ್ಯಾನ್​ ಆಧಾರ್​ನೊಂದಿಗೆ ಲಿಂಗ್​ ಆಗಿದೆಯಾ ಎಂಬುದನ್ನು ಉದ್ಯೋಗಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಕಂಪನಿಗಳು ತಿಳಿಸಿವೆ. ಒಂದು ವೇಳೆ ಈ ಕಾರ್ಯ ಮಾಡುವಲ್ಲಿ ವಿಫಲವಾದಲ್ಲಿ ಕಂಪನಿಗಳು ಮುಂದಿನ ತಿಂಗಳ ಸಂಬಳವನ್ನು ಜಮಾ ಮಾಡುವುದಿಲ್ಲ ಎಂದು ತಿಳಿಸಿದೆ ಎಂದು ನ್ಯೂಸ್​ 18 ಹಿಂದಿ ವರದಿ ಮಾಡಿದೆ.

ಆಧಾರ್​ ಕಾರ್ಡ್​ಗೆ ಲಿಂಕ್​ ಮಾಡದ ಪ್ಯಾನ್​ ಕಾರ್ಡ್​ಗಳನ್ನು ಜೂನ್​ 30ರ ನಂತರ ನಿಷ್ಕ್ರಿಯ ಎಂದು ಘೋಷಿಸಲಾಗುವುದು. ಆಧಾರ್​ ಕಾರ್ಡ್​ ನಂಬರ್​ ನೀಡದೇ ಹೋದ ವ್ಯಕ್ತಿ ಪ್ಯಾನ್​ ನಂಬರ್​ ಅನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್​ 139 ಎಎ ಯ ಷರತ್ತು 41 ಪ್ರಕಾರ ರದ್ದು ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈಗಾಗಲೇ ಕೋವಿಡ್​ ನಿಂದಾಗಿ ಆದಾಯ ತೆರಿಗೆ ಇಲಾಖೆ ಈ ಗಡವನ್ನು ಮುಂದೂಡಿದ್ದು. ಇದೇ ಜೂನ್​ 30 ಕಡೆ ದಿನವಾಗಿದೆ.

ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗಿರುವ ಪ್ಯಾನ್​ನ ವಿಶಿಷ್ಟ 10 ಅಲ್ಫಾನ್ಯೂಮರಿಕ್​ ಸಂಖ್ಯೆಯ ಮೂಲಕ ಆದಾಯ ತೆರಿಗೆ ವಂಚನೆ ತಡೆಯಲು ತೆರಿಗೆ ಅಧಿಕಾರಿಗಳಿಗೆ ಸಹಾಯವಾಗುತ್ತದೆ. ಅಲ್ಲದೇ, ಈ ಪ್ಯಾನ್​ ಸಂಖ್ಯೆ ಎಲ್ಲಾ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಾಗಿದೆ

ಇದನ್ನು ಓದಿ: ದುಬೈಗೆ ಹೋಗೋ ಪ್ಲ್ಯಾನ್‌ ಇದೆಯಾ..? ಹಾಗಾದ್ರೆ ನೀವು ಈ ಷರತ್ತುಗಳನ್ನು ಪಾಲಿಸಲೇಬೇಕು..!

ಈ ಮೊದಲು ಉದ್ಯೋಗಿಗಳಿಗೆ ಇಪಿಎಫ್​ಒ ಇತರೆ ಸೌಲಭ್ಯ ಪಡೆಯಲು ಆಧಾರ್​​ ಕಾರ್ಡ್​​ ಅನ್ನು ಪಿಎರ್ಫ್ ಯುಎಎನ್​ ನೊಂದಿಗೆ ಲಿಂಕ್​ ಮಾಡುವುದನ್ನು ಕಡ್ಡಾಯ ಮಾಡಿತ್ತು. ಇಪಿಎಫ್​ ಗ್ರಾಹಕರು ತಮ್ಮ ಆಧಾರ್​ಕಾರ್ಡ್​ ಅನ್ನು ಪಿಎಫ್​ನೊಂದಿಗೆ ಲಿಂಕ್​ ಮಾಡಲು ಸೆಪ್ಟೆಂಬರ್​ವರೆಗೆ ಸಮಯವಿದೆ.

ಯುಎಎನ್​ನೊಂದಿಗೆ ಆಧಾರ್​ ಲಿಂಕ್​ ಮಾಡುವುದು ಕಡ್ಡಾಯವಾಗಿದೆ. ಸೆಪ್ಟೆಂಬರ್​ 1ರಿಂದ ಲಿಂಕ್​ ಮಾಡಿಲ್ಲದ ಉದ್ಯೋಗಿಗಳಿಗೆ ಪಿಎಫ್​ ನೀಡುವುದು ಕೂಡ ಕಷ್ಟವಾಗಿದೆ ಎಂದು ಡೆಲಾಯ್ಟ್​ ಇಂಡಿಯಾದ ಪಾಲುದಾರರಾಗಿರುವ ಸರಸ್ವತಿ ಕಸ್ತೂರಿರಂಗನ್​ ತಿಳಿಸಿದ್ದಾರೆ2021ರ ಬಜೆಟ್​ ನಲ್ಲಿ ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಕಾಯ್ದೆ ಸೆಕ್ಷನ್​ 234 ಎಚ್​ ಅನ್ನು ಸೇರಿಸಿದೆ. ಇದರ ಅನ್ವಯ ಗಡುವು ಮುಗಿದ ನಂತರ ಪ್ಯಾನ್​ ಮತ್ತು ಆಧಾರ್​ ಲಿಂಕ್​ ಮಾಡದ ಉದ್ಯೋಗಿಯೂ ವೈಯಕ್ತಿಯ ದಂಡವನ್ನು ಪಾವತಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ 1000 ದಂಡವನ್ನು ಕಟ್ಟಬೇಕಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಹೇಗೆ ಪತ್ತೆ ಮಾಡುವುದು ಪ್ಯಾನ್​ ಮತ್ತು ಆಧಾರ್​ ಲಿಂಕ್​ ಆಗಿದೆ ಎಂದು

  • www.incometax.gov.in. ಎಂಬ ಆದಾಯ ತೆರಿಗೆ ಇಲಾಖೆ ಅಧಿಕೃತ ಪೇಜ್​ಗೆ ಭೇಟಿ ನೀಡಬೇಕು

  • ಇದರಲ್ಲಿ ನಮ್ಮ ಸೇವೆ (‘Our Services)ಗೆ ಹೋದಾಗ ಅಲ್ಲಿ ಲಿಂಕ್​ ಆಧಾರ್​ ಎಂಬ ಆಯ್ಕೆ ಕಾಣಿಸಲಿದೆ.

  • ಲಿಂಕ್​ ಆಧಾರ್​ ಅಲ್ಲಿ ನಿಮ್ಮ ಪ್ಯಾನ್​ ಕಾರ್ಡ್​ನ ಸ್ಟೇಟಸ್​ ತಿಳಿಯಿರಿ ಆಯ್ಕೆ ನೀಡಿ

  • ಈ ವೇಳೆ ಹೊಸ ಪೇಜ್​ ಓಪನ್​ ಆಗಲಿದೆ. ಅಲ್ಲಿ ಸೂಚಿಸಲಾದ ಬಾಕ್ಸ್​ನಲ್ಲಿ ಆಧಾರ್​ ಕಾರ್ಡ್ ಮತ್ತು ಪ್ಯಾನ್​ ಕಾರ್ಡ್​ ಡಿಟೈಲ್ಸ್ ಹಾಕಿ

  • ವಿವರ ಭರ್ತಿಯಾದ ಬಳಿಕ ವೀವ್​ ಲಿಂಕ್​ ಆಧಾರ್​ ಸ್ಟೇಟಸ್​ ಕ್ಲಿಕ್​ ಮಾಡಿ

  • ಆಧಾರ್​​​ ಮತ್ತು ಪ್ಯಾನ್​ ಕಾರ್ಡ್​ ಸ್ಟೇಟಸ್​ ಈ ವೇಳೆ ಲಿಂಕ್​ ಆಗಿರುವುದು ನಿಮಗೆ ತಿಳಿಯಲಿದೆ

Published by: Seema R
First published: June 22, 2021, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories