ನವದೆಹಲಿ (ಜ. 28): ಆರ್ಥಿಕ ಹಿಂಜರಿತ, ಕೋವಿಡ್ ನಂತಹದ ಸಾವಲುಗಳ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದೇ ಫೆ. 1 ರಂದು ಅವರು 2011-22ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ಕೋವಿಡ್ನಿಂದ ಆರ್ಥಿಕತೆ ಮೇಲೆ ಪೆಟ್ಟು ಬಿದ್ದಿದ್ದು, ಉದ್ಯಗಳು ಕೂಡ ಸಂಕಷ್ಟಕ್ಕೆ ಒಳಗಾಗಿದೆ. ಇದರಿಂದಾಗಿ ಈ ಬಾರಿಯ ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ಇದು ಆರ್ಥಿಕತೆಗೆ ವೇಗ ನೀಡಲಿದೆಯೇ ಎಂಬ ಕುತೂಹಲ ಮೂಡಿದೆ. ಆದಾಯ ಹೆಚ್ಚಳ ಜೊತೆಗೆ ಉದ್ಯೋಗ ಸೃಷ್ಟಿ ಭರವಸೆಯನ್ನು ಕೂಡ ಈ ಬಾರಿ ಬಜೆಟ್ನಲ್ಲಿ ಜನಸಾಮಾನ್ಯರು ಎದುರು ನೋಡುತ್ತಿದ್ದಾರೆ. ಈ ನಡುವೆ ತೆರಿಗೆ ಕಡಿತ, ಆದಾಯ ಹೆಚ್ಚಳ ಬಗ್ಗೆ ಮಧ್ಯಮ ವರ್ಗದ ತೆರಿಗೆದಾರರು ಈ ಬಾರಿ ಬಜೆಟ್ ಮೇಲೆ ಸಾಕಷ್ಟು ಭರವಸೆ ಹೊಂದಿದ್ದಾರೆ.
ಕೋವಿಡ್ನಿಂದಾಗಿ ವರ್ಕ್ ಫ್ರಾಮ್ ಹೋಂ ಹೆಚ್ಚಿರುವ ಹಿನ್ನಲೆ ಈ ಬಾರಿ ಬಜೆಟ್ನಲ್ಲಿ ಮನೆಯಿಂದ ಕೆಲಸ ಮಾಡುವ ನೌಕರರ ಪಡೆಯವ ಸಂಬಳದ ಮೇಲಿನ ವೆಚ್ಚ ಕಡಿಮೆಯಾಗಬಹುದೆಂಬ ನಿರೀಕ್ಷೆ ಕೂಡ ಮೂಡಿದೆ.
ಮಧ್ಯಮ ವರ್ಗದ ತೆರಿಗೆದಾರರು ಸಂಬಳದ ಮೇಲಿನ ವೆಚ್ಚದ ಕೆಲವು ವಿನಾಯಿತಿ ನಿರೀಕ್ಷಿಸುತ್ತಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಕೂಡ ಪ್ರಾಮಾಣಿತ ಕಡಿತದ ಮಿತಿಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಪ್ರಮಾಣಿತ ಕಡಿತವು ನಿರ್ಧಿಷ್ಟ ಆದಾಯ ತೆರಿಗೆ ಕಡಿತವಾಗಿದೆ. ವೈದ್ಯಕೀಯ ಮತ್ತು ಸಾರಿಗೆ ಭತ್ಯೆಗೆ ಬದಲಾಗಿ 2018ರ-19ರಲ್ಲಿ ಬಜೆಟ್ನಲ್ಲಿ ಈ ಪ್ರಮಾಣಿತ ಕಡಿತ ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ಕಡಿತವಾದ ಸಂಬಳದ ಹಣವನ್ನು 40 ಸಾವಿರದವರೆಗೆ ತಮ್ಮ ಆದಾಯದಲ್ಲಿ ಕ್ಲೈಮ್ ಮಾಡಿ ಪಡೆಯಹುದಿತ್ತು. ಇದಾದ ಬಳಿಕ ಮುಂದಿನ ಬಜೆಟ್ನಲ್ಲಿ ಈ ಮೊತ್ತವನ್ನು 50 ಸಾವಿರಕ್ಕೆ ಏರಿಸಲಾಯಿತು.
ಇದನ್ನು ಓದಿ: ಆದಾಯ ತೆರಿಗೆ ಕಡಿತಗೊಳಿಸಲು ಈ ಬಾರಿ ಬಜೆಟ್ನಲ್ಲಿ ಚಿಂತನೆ
ಸೆಕ್ಷನ್ 80ರ ಅಡಿ ವ್ಯಕ್ತಿಯೊರ್ವ ಜೀವ ವಿಮಾ ಕಂತುಗಳು, ಗೃಹ ಸಾಲದ ಪ್ರೀಮಿಯಂ ಪಾವತಿ, ಸ್ಥಿರ ಠೇವಣಿ, ಭವಿಷ್ಯ ನಿಧಿ ಸೇರಿದಂತೆ ವಿವಿಧ ಪಾವತಿಗಳ ಮೇಲೆ 1.5 ಲಕ್ಷ ರೂಗಳ ತೆರಿಗೆ ವಿನಾಯಿತಿ ಪಡೆಯಲು ಅರ್ಹನಾಗಿರುತ್ತಾನೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರದಿಂದಾಗಿ ಸರ್ಕಾರ ಇದರ ಮೇಲಿನ ಮಿತಿಯನ್ನು 2.5 ರಿಂದ 3 ಲಕ್ಷ ರೂಗೆ ಏರಿಸಿದೆ. ಈ ವಿನಾಯಿತಿ ಮಿತಿಯ ಹೆಚ್ಚಳ ಸರ್ಕಾರದ ಬೆಂಬಲದೊಂದಿಗೆ ತೆರಿಗೆ ಉಳಿಸುವ ಸಾಧನವಾಗಿದೆ.
ಕೋವಿಡ್ ಸಾಂಕ್ರಾಮಿಕತೆ ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ ವಿಮೆ ಅವಶ್ಯಕವಾಗಿದೆ ಎಂಧು ತಿಳಿಸಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಈ ವಿಮೆಗಳು ಅಗತ್ಯವಾಗಿದ್ದು, ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಈ ಆರೋಗ್ಯ ವಿಮೆಯನ್ನು ಕಡ್ಡಾಯಗೊಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸೆಕ್ಷನ್ 80 ಡಿ ಅಡಿಯಲ್ಲಿ ಆರೋಗ್ಯ ವಿಮಾ ಕಂತಿನ ಮೇಲಿನ ಮಿತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ