Sushma ChakreSushma Chakre
|
news18-kannada Updated:May 27, 2020, 9:45 PM IST
ಸತ್ತ ಅಮ್ಮನನ್ನು ಎಬ್ಬಿಸುತ್ತಿರುವ ಮಗು
ಪಾಟ್ನಾ (ಮೇ 27): ಲಾಕ್ಡೌನ್ನಿಂದಾಗಿ ಅದೆಷ್ಟೋ ಬಡ ಕಾರ್ಮಿಕರ, ಕೂಲಿಗಳ, ದಿನಗೂಲಿ ನೌಕರರ, ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಿದೆ. ಇದ್ದಕ್ಕಿದ್ದಂತೆ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಯಾವುದೋ ಊರಿನಲ್ಲಿ ಕೆಲಸ ಮಾಡುತ್ತಿದ್ದವರು ಊರಿಗೆ ಹೋಗಲಾರದೆ ಸಿಕ್ಕಿಹಾಕಿಕೊಂಡಿದ್ದಾರೆ. ಅದೆಷ್ಟೋ ಜನರು ಕಾಲ್ನಡಿಗೆಯಲ್ಲೇ ಊರು ಸೇರುವ ಹುಂಬ ಉತ್ಸಾಹದಲ್ಲಿ ಜೀವವನ್ನೇ ಕಳೆದುಕೊಂಡಿದ್ದಾರೆ. ಬಿಹಾರದಲ್ಲಿ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ತನ್ನ ಅಮ್ಮ ಸಾವನ್ನಪ್ಪಿದ್ದಾಳೆ ಎಂದು ತಿಳಿಯದ ಕಂದಮ್ಮ ತನ್ನ ಅಮ್ಮನನ್ನು ಎಬ್ಬಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ವಿಡಿಯೋ ನೋಡಿದರೆ ಎಂಥವರ ಕರುಳೂ ಚುರ್ ಎನ್ನುತ್ತದೆ.
ಬಿಹಾರದ ಮುಜಾಫರ್ ನಗರದ ರೈಲ್ವೆ ನಿಲ್ದಾಣವೊಂದರಲ್ಲಿ ಶ್ರಮಿಕ್ ರೈಲಿನಲ್ಲಿ ಬಂದಿಳಿದ ಮಹಿಳೆಯೊಬ್ಬಳು ಹಸಿವು, ಸುಸ್ತಿನಿಂದ ರೈಲ್ವೆ ನಿಲ್ದಾಣದಲ್ಲೇ ಸಾವನ್ನಪ್ಪಿದ್ದಳು. ಆ ಮಹಿಳೆ ಸಾವನ್ನಪ್ಪಿರುವ ವಿಷಯ ಗೊತ್ತಾಗುತ್ತಿದ್ದಂತೆ ಜೊತೆಗಿದ್ದ ಸಂಬಂಧಿಕರು ಆಕೆಯ ಮೃತದೇಹವನ್ನು ಮುಜಾಫರ್ ನಗರದ ರೈಲ್ವೆ ನಿಲ್ದಾಣದಲ್ಲೇ ಬಟ್ಟೆಯಿಂದ ಸುತ್ತಿ ಇರಿಸಿದ್ದರು. ಆದರೆ, ಆ ಬಟ್ಟೆಯನ್ನು ಎಳೆದು ತೆಗೆದ ಆಕೆಯ ಮಗು ಅಮ್ಮನನ್ನು ಎಬ್ಬಿಸಲು ಪರದಾಡುತ್ತಿತ್ತು.
ಇದನ್ನೂ ಓದಿ: TikTok: ಆ ಒಂದು ಟಿಕ್ಟಾಕ್ ವಿಡಿಯೋದಿಂದ ಸಿಕ್ಕಿಬಿದ್ದಳು ಖತರ್ನಾಕ್ ಕಳ್ಳಿ!
23 ವರ್ಷದ ಬಿಹಾರ ಮೂಲದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಗುಜರಾತ್ನ ಅಲಹಾಬಾದ್ನಲ್ಲಿ ವಾಸವಾಗಿದ್ದಳು. ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಆಕೆಗೆ ಲಾಕ್ಡೌನ್ ಬಳಿಕ ಯಾವುದೇ ಸಂಪಾದನೆ ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಆಕೆ ಶ್ರಮಿಕ್ ರೈಲಿನಲ್ಲಿ ಊರು ಸೇರಿಕೊಳ್ಳಲು ಬಂದಿದ್ದಳು. ಆದರೆ, ನಿಶ್ಯಕ್ತಿ, ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಗೆ ರೈಲಿನಲ್ಲಿಯೂ ಊಟ, ತಿಂಡಿ ಸಿಕ್ಕಿರಲಿಲ್ಲ. ಬಿಹಾರದಲ್ಲಿ 50 ಡಿಗ್ರಿ ಸೆಲ್ಷಿಯಸ್ಗೂ ಹೆಚ್ಚು ಉಷ್ಣಾಂಶವಿದ್ದುದರಿಂದ ಆಕೆ ಇನ್ನಷ್ಟು ಬಳಲಿದ್ದಳು. ಇದರಿಂದಾಗಿ ರೈಲ್ವೆ ನಿಲ್ದಾಣದಲ್ಲಿಯೇ ಆಕೆ ಸಾವನ್ನಪ್ಪಿದ್ದಳು.
ಅಮ್ಮ ಸಾವನ್ನಪ್ಪಿರುವ ವಿಷಯ ಅರ್ಥವಾಗದ ಆಕೆಯ ಪುಟ್ಟ ಕಂದಮ್ಮ ಆಕೆಯ ಬಟ್ಟೆಯನ್ನು ಎಳೆಯುತ್ತಾ, ಅದರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡುತ್ತಾ ಅಮ್ಮ ಎಂದು ಕರೆದು ಎಬ್ಬಿಸುತ್ತಿರುವ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
Published by:
Sushma Chakre
First published:
May 27, 2020, 9:39 PM IST