ತಾಯಿಗರ್ಭದಿಂದ ಹೊರಬರುತ್ತಿರುವಾಗಲೇ ವೈದ್ಯರನ್ನ ಗುರಾಯಿಸಿದ ಮಗು; ಇಂಟರ್ನೆಟ್ ಸ್ಟಾರ್ ಆಗಿದೆ ಬ್ರೆಜಿಲ್ ಬೇಬಿ

ಬ್ರೆಜಿಲ್​ನ ಈ ಮಗು ಈಗ ಸದ್ಯ ಇಂಟರ್​ನೆಟ್​ ಸ್ಟಾರ್​ ಆಗಿದೆ. ಮಗು ಜನಿಸಿದ ಕೂಡಲೇ ಛಾಯಾಗ್ರಾಹಕ ರೊಡ್ರಿಗೋ ಕುನ್ಸ್ಟ್​ಮನ್​​ ತಮ್ಮ ಕ್ಯಾಮೆರಾದಲ್ಲಿ ಮಗುವಿನ ಚಿತ್ರ ಸೆರೆ ಹಿಡಿದಿದ್ದಾರೆ. ಈ ಚಿತ್ರವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಗಂಟೆಯೊಳಗೆ ಈ ಚಿತ್ರ ವೈರಲ್​ ಆಗಿದೆ.

Seema.R | news18-kannada
Updated:February 26, 2020, 11:48 AM IST
ತಾಯಿಗರ್ಭದಿಂದ ಹೊರಬರುತ್ತಿರುವಾಗಲೇ ವೈದ್ಯರನ್ನ ಗುರಾಯಿಸಿದ ಮಗು; ಇಂಟರ್ನೆಟ್ ಸ್ಟಾರ್ ಆಗಿದೆ ಬ್ರೆಜಿಲ್ ಬೇಬಿ
ಮಗುವಿನ ಚಿತ್ರ
  • Share this:
ಆಗಷ್ಟೇ ಹುಟ್ಟಿದ ಮಕ್ಕಳು ಆಳುವುದು ಸಾಮಾನ್ಯ… ಆದರೆ, ಇಲ್ಲೊಂದು ಮಗು ಹುಟ್ಟಿದ ತಕ್ಷಣ ವೈದರಿಗೇ ಹೆದರಿಕೆ ಹುಟ್ಟಿಸಿದೆ. ಅಮ್ಮನ ಹೊಟ್ಟೆಯಿಂದ ಹೊರಬಂದಾಕ್ಷಣ ಹುಬ್ಬುಗಂಟ್ಟಿಕ್ಕಿ ವೈದ್ಯರನ್ನು ದಿಟ್ಟಿಸಿ ನೋಡಿ ಅಚ್ಚರಿ ಮೂಡಿಸಿದೆ.

ಬ್ರೆಜಿಲ್​ನ ಈ ಮಗು ಈಗ ಸದ್ಯ ಇಂಟರ್​ನೆಟ್​ ಸ್ಟಾರ್​ ಆಗಿದೆ. ಫೆ.13ರಂದು ಡಯೇನ್​ ಡಿ ಜೀಸಸ್​ ಈ ಮಗುವಿಗೆ ಜನ್ಮ ನೀಡಿದ್ದಾರೆ. ರಿಯೊ ಡಿ ಜನೆರಿಯೊ ನಗರದ ಆಸ್ಪತ್ರೆಯಲ್ಲಿ ಮಗು ಜನಿಸಿದ ಕೂಡಲೇ ಛಾಯಗ್ರಾಹಕ ರೊಡ್ರಿಗೋ ಕುನ್ಸ್ಟ್​ಮನ್​​ ತಮ್ಮ ಕ್ಯಾಮೆರಾದಲ್ಲಿ ಮಗುವಿನ ಚಿತ್ರ ಸೆರೆ ಹಿಡಿದಿದ್ದಾರೆ. ಈ ಚಿತ್ರವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಗಂಟೆಯೊಳಗೆ ಈ ಚಿತ್ರ ವೈರಲ್​ ಆಗಿದೆ.

ಸಿ ಸೆಕ್ಷನ್​ ಮೂಲಕ ಮಗುವನ್ನು ತಾಯಿ ಗರ್ಭದಿಂದ ಹೊರ ತೆಗೆದಾಗ ಮಗು ಸಿಟ್ಟಿನಿಂದ ನೋಡುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಕರುಳ ಬಳ್ಳಿ ಕತ್ತರಿಸುವವರೆಗೂ ಮಗು ಇದೇ ರೀತಿ ಹುಬ್ಬು ಗಂಟ್ಟಿಕ್ಕಿಕೊಂಡಿತ್ತು. ಇದಾದ ಬಳಿಕ ಮಗು ಅಳಲು ಆರಂಭಿಸಿತು ಎಂದಿದ್ದಾರೆ.ಇಸಾಬೆಲಾ ಪಿರೇರಾ ಎಂಬ ಈ ಹೆಣ್ಣು ಮಗುವಿನ ಲುಕ್​ ಬಗ್ಗೆ ಈಗ ಸದ್ಯ ಸಾಕಷ್ಟು ಮೀಮ್ಸ್​ಗಳು ಹುಟ್ಟಿಕೊಂಡಿದೆ.
View this post on Instagram

Mamãe e papai 🥰


A post shared by Isa Bravinha (@isa_bravinha1) on
Published by: Seema R
First published: February 26, 2020, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading