News18 India World Cup 2019

Lok Sabha Election Result 2019: 'ಇದು ಜನರ, ಪ್ರಜಾಪ್ರಭುತ್ವದ ಗೆಲುವು': ಪ್ರಧಾನಿ ನರೇಂದ್ರ ಮೋದಿ

ಇಂದು ಯಾರಾದರೂ ಗೆದ್ದಿದ್ದಾರೆ ಎಂದರೆ ಅದು ಹಿಂದೂಸ್ಥಾನದ ಗೆಲುವು.  ಪ್ರಜಾಪ್ರಭುತ್ವದ ಗೆಲುವು. ಅದುವೇ ಜನತಾ ಜನಾರ್ದನ ಶಕ್ತಿ- ಮೋದಿ

Seema.R | news18
Updated:May 23, 2019, 9:04 PM IST
Lok Sabha Election Result 2019: 'ಇದು ಜನರ, ಪ್ರಜಾಪ್ರಭುತ್ವದ ಗೆಲುವು': ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿ ಜಯಭೇರಿ
Seema.R | news18
Updated: May 23, 2019, 9:04 PM IST
ನವದೆಹಲಿ,(ಮೇ 23): ದೇಶದೆಲ್ಲೆಡೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಮತ್ತೊಮ್ಮೆ ಮೋದಿ ಎಂಬ ಬಿಜೆಪಿ ಕಾರ್ಯಕರ್ತರ ಆಶಯ ಸಾಕಾರಗೊಂಡಿದೆ. ಐತಿಹಾಸಿಕ ಗೆಲುವಿಗೆ  ಕಾರಣರಾದ ಜನರಿಗೆ ಶುಭಾಶಯ ಕೋರಿದ್ದಾರೆ.

ತಮ್ಮ 2014ರ ದಾಖಲೆಗಳನ್ನು ಮುರಿದು 2019ರಲ್ಲಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿ ಕಚೇರಿಯಲ್ಲಿ ತಮ್ಮ ಗೆಲುವಿಗೆ ಕಾರಣರಾದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿ ಮಾತನಾಡಿದರು.

"ಇದು ಪ್ರಪಂಚದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ದೊಡ್ಡ ಐತಿಹಾಸಿಕ ಘಟನೆ. ದೇಶಕ್ಕೆ ಸ್ವಾತಂತ್ರ ಸಿಕ್ಕಿದ ಬಳಿಕ ಅನೇಕ ಚುನಾವಣೆ ನಡೆದಿದೆ ಹಾಗೂ ನಡೆಯಬೇಕಿದೆ. ಈ ಚುನಾವಣಾ ಇತಿಹಾಸದಲ್ಲಿಯೇ ಅಧಿಕ ಸಂಖ್ಯೆಯ ಮತದಾನ ಈ ಬಾರಿ ಆಗಿದೆ.  ಅದು ತಾಪಮಾನ ಏರಿಕೆಯಂತಹ ಸಂದರ್ಭದಲ್ಲಿ. ಇದು ಪ್ರಜಾಪ್ರಭುತ್ವದತ್ತ ಭಾರತದ ನಾಗರಿಕರ ಅರಿವು ತೋರಿಸುತ್ತದೆ. ಜಗತ್ತು ಇದನ್ನು ಗುರುತಿಸಬೇಕಿದೆ. ಭಾರತದ ಜನರು ಪ್ರಜಾಪ್ರಭುತ್ವ ಶಕ್ತಿಯ ಬಗ್ಗೆ ತಿಳಿಯುತ್ತಿದ್ದಾರೆ" ಎಂದರು.

"ಇಂದು ಯಾರಾದರೂ ಗೆದ್ದಿದ್ದಾರೆ ಎಂದರೆ ಅದು ಹಿಂದೂಸ್ಥಾನದ ಗೆಲುವು.  ಪ್ರಜಾಪ್ರಭುತ್ವದ ಗೆಲುವು. ಅದುವೇ ಜನತಾ ಜನಾರ್ದನ ಶಕ್ತಿ" ಎಂದು ತಮ್ಮ ಗೆಲುವನ್ನು ಜನರಿಗೆ ಸಮರ್ಪಿಸಿದರು.

"ಭಾರತದಲ್ಲಿ ಇಂದು ಜಾತಿ ಇದ್ದರೆಮ ಅದು ಬಡವರು ಮತ್ತು ಬಡತನ ನಿರ್ಮೂಲನೆಗೆ ಕಾರ್ಯ ಮಾಡುವವರು" ಎಂದರು

ಇದನ್ನೂ ಓದಿ: ‘ದಿ ಯುನೈಟರ್ ಇನ್ ಚೀಫ್ ಆಫ್ ಇಂಡಿಯಾ’; ಜಾತಿ, ಧರ್ಮ, ಪ್ರಾದೇಶಿಕತೆಗೆ ಅಂಟಿಕೊಂಡಿದ್ದ ಭಾರತ ಚುನಾವಣೆಗೆ ಮೋದಿಯಿಂದ ಹೊಸ ಭಾಷ್ಯ
Loading...

"ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯಭೇರಿ ಸಾಧಿಸಲು ಕಾರಣವಾಗಿದ್ದು ಕಾರ್ಯಕರ್ತರಿಗೆ ಧನ್ಯವಾದಗಳು. ಮೋದಿ ಅವರ ಎಲ್ಲರ ಜೊತೆಯಲ್ಲಿ ಎಲ್ಲರ ಏಳಿಗೆ ಎಂಬ ಧ್ಯೇಯೋದ್ದೇಶದಿಂದಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು' ಎಂದರು

"ಕೋಟಿ ಕೋಟಿ ಕಾರ್ಯಕರ್ತರಿಂದ ಈ ಗೆಲುವು ಸಾಧ್ಯವಾಯಿತು. ನಿಸ್ವಾರ್ಥ ಭಾವದಿಂದ ಜನತಂತ್ರದ ಬಾವುಟ ಹಾರಿಸಿದ್ದಾರೆ. ನಮ್ಮ ಗೆಲುವಿಗೆ ಕಾರಣರಾದ ಮತದಾರರಿಗೆ ಅನಂತ ಧನ್ಯವಾದಗಳು". 2019ರ ಲೋಕಸಭಾ ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟವಾಗಿ ನಿಭಾಯಿಸಿದ ಚುನಾವಣಾ ಆಯೋಗ ಮತ್ತು ರಕ್ಷಣಾ ಅಧಿಕಾರಿಗಳಿಗೂ ಧನ್ಯವಾದಗಳನ್ನು ತಿಳಿಸಿದರು.

ದೇಶದ ಜನರು ಶ್ರೀ ಕೃಷ್ಣನಂತೆ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಇದು ಹಿಂದೂಸ್ತಾನದ ಗೆಲುವು. ಯಾರಾದರೂ ಈ ಚುನಾವಣೆಯಲ್ಲಿ ಗೆದ್ದರೆ ಅದು ಭಾರತದ ಗೆಲುವು ಎಂದರು.
ಬಿಜೆಪಿ ಒಕ್ಕೂಟ ಮತ್ತು ಸಂವಿಧಾನದ ವ್ಯವಸ್ಥೆಗೆ ಬದ್ದವಾಗಿದೆ. ಇದು ಪ್ರಜಾಪ್ರಭುತ್ವದ ಗೆಲುವು. ಇದು ಜಯ. ಇದು ಮೋದಿಯ ಗೆಲುವಲ್ಲ. ಉತ್ತಮ ಜೀವನದ ಕನಸು ಕಂಡಿದ್ದ ಜನರ ಜಯ. ಇದು ದೇಶದ ವಿಕಾಸದ ಜಯ. ರೈತರ ಜಯ. ಪಿಂಚಣಿ ಯೋಜನೆಯಿಂದಾಗಿ ಗೌರವಯುತ ಜೀವನ ನಡೆಸುತ್ತಿರುವ 40 ಮಿಲಿಯನ್ ಅಸಂಘಟಿತ ಕಾರ್ಯಕರ್ತರ ಜಯ. ಇದು 4-5 ವರ್ಷಗಳಿಂದ ದುಡ್ಡಿಲ್ಲದೇ ನರಳುತ್ತಿದ್ದ ವ್ಯಕ್ತಿಗಳು ಇಂದು ಚಿಕಿತ್ಸೆ ಪಡೆಯಲಿದ್ದಾರೆ. ಮನೆಯಿಲ್ಲದೇ ಜೀವನ ನಡೆಸುತ್ತಿದ್ದ ಜನರು ಈಗ ಶಾಶ್ವತ ಮನೆ ಪಡೆಯಲಿದ್ದು, ಇದು ಅವರ ಜಯ ಎಂದರು.

ರಾಜಕೀಯ ಪಂಡಿತರು ತಮ್ಮ ಹಳೆಯ ಚಿಂತನೆಗಳನ್ನು ಕೈ ಬಿಡಬೇಕು. ರಾಜಕೀಯ ವ್ಯವಸ್ಥೆ ಬದಲಾಗುತ್ತಿದೆ. ಬಿಜೆಪಿ ದೃಷ್ಟಿಕೋನದ ಮೂಲಕ ದೇಶ ಸಬಲೀಕರಣಗೊಳ್ಳುತ್ತಿದೆ. ದೇಶದಲ್ಲಿನ ಬಡತನ ನಿರ್ಮೂಲನೆ ಮಾಡುವುದು ನಮ್ಮ ಪಕ್ಷದ ಗುರಿ ಎಂದರು.

ಭಾರತದ ಸಂವಿಧಾನ ಬಿಜೆಪಿಗಿಂತ ದೊಡ್ಡದು. ಪ್ರತಿಪಕ್ಷಗಳನ್ನು ನಮ್ಮ ಪಕ್ಷದ ಜೊತೆಯಲ್ಲಿ ಕರೆದುಕೊಂಡು ಹೋಗಲು ಸಿದ್ದವಿದ್ದೇವೆ. ಎನ್​ಡಿಎ ಮೈತ್ರಿಯಿಂದಾಗಿ ಈ ಭರ್ಜರಿ ಗೆಲುವು ಸಾಧ್ಯವಾಗಿದೆ ಎಂದು ಅವರಿಗೆ ಧನ್ಯವಾದ ತಿಳಿಸಿದರು.

ನನ್ನನ್ನು ನಾನು ದೇಶದ ಅಭಿವೃದ್ಧಿಗೆ ಸಮರ್ಪಿಸಿಕೊಂಡಿದ್ದೇನೆ. ಅಲ್ಲದೇ ನಿಮ್ಮಿಂದ ಬರುವ ಟೀಕೆ ಎದುರಿಸಲು ನಾನು ಸಿದ್ಧನಾಗಿದ್ದೇನೆ. ನಾನು ಏನೇ ತಪ್ಪು ಮಾಡಿದರೂ ಅದು ಕೆಟ್ಟ ಉದ್ದೇಶದಿಂದ ಅಲ್ಲ. ಯಾವುದೇ ವೈಯಕ್ತಿಕ ಲಾಭಕ್ಕೆ ನಾನು ಕೆಲಸ ಮಾಡುವುದಿಲ್ಲ. ನನ್ನ ಎಲ್ಲಾ ಸಮಯ ಮತ್ತು ಶಕ್ತಿಯನ್ನು ದೇಶ ಹಾಗೂ ಜನರಿಗಾಗಿ ಮೀಸಲಿಟ್ಟಿದ್ದೇನೆ ಎಂದು ಹೇಳಿದರು.

First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...