• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Weird News: ಈ ದೇಶದಲ್ಲಿ ವೇಶ್ಯಾವಾಟಿಕೆ ಅಪರಾಧ, ಆದ್ರೆ ಹಣ ಕೊಟ್ಟು ಟೆಂಪರರಿ ಮ್ಯಾರೇಜ್ ಆಗಬಹುದಂತೆ!

Weird News: ಈ ದೇಶದಲ್ಲಿ ವೇಶ್ಯಾವಾಟಿಕೆ ಅಪರಾಧ, ಆದ್ರೆ ಹಣ ಕೊಟ್ಟು ಟೆಂಪರರಿ ಮ್ಯಾರೇಜ್ ಆಗಬಹುದಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇರಾನ್‌ನಲ್ಲಿ ತಾತ್ಕಾಲಿಕ ವಿವಾಹ ಹಲವು ವರ್ಷಗಳಿಂದ ನಡೆಯುತ್ತಿದೆ. ಇದನ್ನು ಶಿಯಾ ಮುಸ್ಲಿಮರಲ್ಲಿ ಮಾಡಲಾಗುತ್ತದೆ. ವಿಚಿತ್ರವೆಂದರೆ ಈ ರೀತಿಯ ಮದುವೆಯು ಕೆಲವು ನಿಮಿಷಗಳಿಂದ 99 ವರ್ಷಗಳವರೆಗೆ ಮಾನ್ಯವಿರುತ್ತದೆ! ಪುರುಷ ತಾನೂ ಯಾವಾಗ ಬೇಕಾದರೂ ಈ ವಿವಾಹವನ್ನು ಮುರಿದುಕೊಳ್ಳಬಹುದು!

  • Share this:

ಇರಾನ್: ಮದುವೆ (Marriage) ಎಂಬುದು ಜನ್ಮ ಜನ್ಮಗಳ ಅನುಬಂಧ ಎನ್ನಲಾಗುತ್ತದೆ. ಇದರಲ್ಲಿ ಇಬ್ಬರು ವ್ಯಕ್ತಿಗಳು ಜೀವಮಾನವಿಡೀ ಪರಸ್ಪರರ ಕೈ ಹಿಡಿದು ತಮ್ಮ ಜೀವನವನ್ನು ಒಟ್ಟಿಗೆ ಕಳೆಯುತ್ತಾರೆ. ಪ್ರತಿಯೊಂದು ಧರ್ಮದಲ್ಲೂ (Religion) ಮದುವೆಗೆ ಬೇರೆ ಬೇರೆ ಅರ್ಥಗಳಿವೆ. ಹಿಂದೂಗಳಲ್ಲಿ (Hindu) ಮದುವೆಯನ್ನು ಪವಿತ್ರ ಸಂಬಂಧ ಪರಿಗಣಿಸಿದರೆ, ಮುಸ್ಲಿಮರಲ್ಲಿ (Muslim) ಮದುವೆಯನ್ನು ಒಪ್ಪಂದವೆಂದು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ನಾಲ್ಕು ವಿಧದ ಮುಸ್ಲಿಂ ವಿವಾಹಗಳಿವೆ. ಇರಾನ್​ನಲ್ಲಿ ಜಾರಿಯಿರುವ ನಿಖಾ​ ಮುತಾಹ್ (Nikah mut'ah) ಅಥವಾ ತಾತ್ಕಾಲಿಕ ವಿವಾಹ ಇವುಗಳಲ್ಲಿ ಅತ್ಯಂತ ವಿಚಿತ್ರವಾದದ್ದು ಎಂದು ಪರಿಗಣಿಸಲಾಗಿದೆ.


ಇರಾನ್‌ನಲ್ಲಿ ತಾತ್ಕಾಲಿಕ ವಿವಾಹ ಹಲವು ವರ್ಷಗಳಿಂದ ನಡೆಯುತ್ತಿದೆ. ಇದನ್ನು ಶಿಯಾ ಮುಸ್ಲಿಮರಲ್ಲಿ ಮಾಡಲಾಗುತ್ತದೆ. ವಿಚಿತ್ರವೆಂದರೆ ಈ ರೀತಿಯ ಮದುವೆ  ಕೆಲವು ನಿಮಿಷಗಳಿಂದ 99 ವರ್ಷಗಳವರೆಗೆ ಮಾನ್ಯವಿರುತ್ತದೆ. ಪುರುಷ ತಾನು ಯಾವಾಗ ಬೇಕಾದರೂ ಈ ವಿವಾಹವನ್ನು ಮುರಿದುಕೊಳ್ಳಬಹುದು.


ವೇಶ್ಯಾವಾಟಿಕೆ ಕಾನೂನು ಬಾಹಿರ


ಇರಾನ್ ಷರಿಯಾ ಕಾನೂನಿನಡಿಯಲ್ಲಿ ನಡೆಯುವ ದೇಶವಾಗಿದ್ದು, ಅಲ್ಲಿ ವ್ಯಭಿಚಾರ ಅಥವಾ ಮದುವೆಗೆ ಮೊದಲು ಲೈಂಗಿಕತೆಯನ್ನು ಹೊಂದಿರುವುದು ಅಪರಾಧವಾಗಿದೆ. ಇಂತಹ ಅಪರಾಧಗಳಿಗೆ ಇರಾನ್‌ನಂತಹ ದೇಶಗಳಲ್ಲಿ ಚಾಟಿಯಲ್ಲಿ ದಂಡಿಸುವುದು, ಕಲ್ಲಲ್ಲಿ ಹೊಡೆಯುವುದು ಮತ್ತು ಶಿಕ್ಷೆಯಾಗಿ ಸೆರೆಮನೆ ವಾಸ ಸಾಮಾನ್ಯ. ಇರಾನ್, ಇರಾಕ್‌ನಂತಹ ದೇಶಗಳಲ್ಲಿ ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಏಕೆಂದರೆ ವೇಶ್ಯಾವಾಟಿಕೆ ಧರ್ಮ ವಿರೋಧಿ ಚಟುವಟಿಕೆ ಎಂದು ಭಾವಿಸಲಾಗುತ್ತದೆ.


ಇದನ್ನೂ ಓದಿ: Weird Marriage: ತನ್ನ ತಂದೆಯನ್ನೇ ಮದುವೆಯಾದ ಯುವತಿ! ವಿಚಿತ್ರ ವಿವಾಹದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ


ಮುತಾಹ್ ಮದುವೆಗಳು ಏಕೆ ನಡೆಯುತ್ತವೆ?


ವೇಶ್ಯಾವಾಟಿಕೆ ಅಪರಾಧವಾಗಿರುವುದರಿಂದ ಅಲ್ಲಿ ಈ ವ್ಯವಹಾರವನ್ನು ಕಾನೂನುಬದ್ಧವಾಗಿ ಮಾಡಲು ಮುತಾಹ್ ಮದುವೆಯನ್ನು ಮಾಡಲಾಗುತ್ತದೆ. ದಿ ಗಾರ್ಡಿಯನ್ ವೆಬ್‌ಸೈಟ್‌ನ ವರದಿಯ ಪ್ರಕಾರ, ದೀರ್ಘಕಾಲದವರೆಗೆ ಮನೆಯಿಂದ ಹೊರಗಿರುವ ಯಾತ್ರಿಕರು ಅಥವಾ ಇತರ ಪ್ರಯಾಣಿಕರು ಈ ರೀತಿಯ ಮದುವೆಯನ್ನು ಆಗಬಹುದಾಗಿದೆ. ಈ ಮದುವೆಯನ್ನು ಖಾಸಗಿಯಾಗಿ ಮತ್ತು ಮಾತನಾಡುವ ಮೂಲಕ ಅಥವಾ ಬರಹದ ಮೂಲಕ ಮಾಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಪ್ರಯಾಣಿಕರು ತಮ್ಮ ಹೆಂಡತಿಯರನ್ನು ಬಿಟ್ಟು ಬೇರೆ ಊರಿಗೆ ಯಾವುದೋ ಕೆಲಸದ ನಿಮಿತ್ತ ಹೋಗುತ್ತಿದ್ದಾಗ ಅಲ್ಲಿ ತಾತ್ಕಾಲಿಕ ವಿವಾಹಗಳನ್ನು ಮಾಡಿಕೊಳ್ಳುತ್ತಿದ್ದರು ಎಂದು ನಂಬಲಾಗಿದೆ. ಇದರಿಂದ ಅವರು ದೈಹಿಕ ಸಂಬಂಧವನ್ನು ಮಾಡಬಹುದು. ಅಲ್ಲಿಂದ ವಾಪಸ್ ಬರುವಾಗ ಮತ್ತೆ ಮಹಿಳೆಗೆ ವಿಚ್ಛೇದನ ನೀಡಿ ಬರುತ್ತಾರೆ.
ತಾತ್ಕಾಲಿಕ ವಿವಾಹಕ್ಕೆ ಮಿತಿಯಿಲ್ಲ


ಇರಾನ್​ನಲ್ಲಿ ಪುರುಷರು ಮುತಾಹ್ ವಿವಾಹಗಳನ್ನು ಎಷ್ಟು ಬಾರಿಯಾದರೂ ಆಗಬಹುದು. ಅಲ್ಲಿ ವಿಧವೆಯರು, ಬಡವರು ಅಥವಾ ಆರ್ಥಿಕ ಸಹಾಯದ ಅಗತ್ಯವಿರುವ ಮಹಿಳೆಯರು ಮಾತ್ರ ಇಂತಹ ವಿವಾಹಗಳನ್ನು ಮಾಡಿಕೊಳ್ಳುತ್ತಾರೆ. ಮದುವೆಯ ಸಮಯದಲ್ಲಿ, ಪತಿಯು ಮಹ್ರೀಹ್ ಮೊತ್ತವನ್ನು ಅಂದರೆ ವಧುದಕ್ಷಿಣೆಯನ್ನು ನಿರ್ಧರಿಸಬೇಕು. ಈ ರೀತಿಯ ವಿವಾಹವನ್ನು ಆ ವ್ಯಕ್ತಿ ಯಾವಾಗ ಬೇಕಾದರೂ  ಮುರಿದುಕೊಳ್ಳಬಹುದು.


ತಾತ್ಕಾಲಿಕ ವಿವಾಹಕ್ಕೆ ವಯಸ್ಸು


ಇಂತಹ ತಾತ್ಕಾಲಿಕ ವಿವಾಹವನ್ನು 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ಮತ್ತು 13 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಮಾಡಿಕೊಳ್ಳಬಹುದು. ಅವಿವಾಹಿತ ಹುಡುಗಿಯರು ಈ ರೀತಿಯ ಮದುವೆಯಾಗಲು ತಮ್ಮ ತಂದೆಯ ಅನುಮತಿಯನ್ನು ಪಡೆಯಬೇಕು. ಈ ಮದುವೆಯ ನಂತರ, ಪುರುಷನು ತನ್ನ ಹೆಂಡತಿಗೆ ಶಾಶ್ವತ ಮದುವೆಯಂತೆ ಆರ್ಥಿಕವಾಗಿ ಸಹಾಯ ಮಾಡುವುದು ಅನಿವಾರ್ಯವಲ್ಲ. ಪುರುಷರು ಇಂತಹ ತಾತ್ಕಾಲಿಕ ವಿವಾಹವನ್ನು ಎಷ್ಟು ಬಾರಿ ಬೇಕಾದರೂ ಮಾಡಿಕೊಳ್ಳಬಹುದು.


ಯಾರು ಇಂತಹ ವಿವಾಹಗಳನ್ನು ಮಾಡಿಕೊಳ್ಳುತ್ತಾರೆ?


ಈ ರೀತಿಯ ವಿವಾಹಗಳ ಬಗ್ಗೆ ಪರ-ವಿರೋಧಗಳಿವೆಯಾದರೂ ಬಹುತೇಕರು ಇದನ್ನು ಒಪ್ಪಿಕೊಂಡಿದ್ದಾರೆ. ವಿವಾಹವಾಗದ ಒಬ್ಬಂಟಿಗಳು, ಹೆಂಡತಿ ಸತ್ತಿರುವವರು ಅಥವಾ ಹೆಂಡತಿ ಆನಾರೋಗ್ಯದಿಂದ ಬಳಲುತ್ತಿದ್ದರೆ, ಅಂತಹ ಪುರುಷರು ಹಣ ಪಾವತಿಸಿ ತಾತ್ಕಾಲಿಕ ವಿವಾಹ ಮಾಡಿಕೊಳ್ಳುವ ವ್ಯವಸ್ಥೆಯಿಂದ ಲೈಂಗಿಕ ಆಸೆಯನ್ನು ಪೂರೈಸಿಕೊಳ್ಳುತ್ತಾರೆ. ಅಲ್ಲದೆ ದೀರ್ಘಾವಧಿಯವರೆಗೆ ಪ್ರಯಾಣಿಸುವ ಪುರುಷರು ಇಂತಹ ವಿವಾಹಗಳನ್ನು ಹೆಚ್ಚಾಗಿ ಆಗುತ್ತಾರೆ ಎನ್ನಲಾಗಿದೆ.


ಆನ್​ಲೈನ್​ನಲ್ಲಿ ಬುಕ್ಕಿಂಗ್


ಈ ರೀತಿ ತಾತ್ಕಾಲಿಕ ವಿವಾಹ ಬಯಸುವ ಪುರುಷರು ಮ್ಯಾಚಿಂಗ್ ವೆಬ್​ಸೈಟ್​ಗಳ ಮೂಲಕ ತಮ್ಮ ಹೆಂಡತಿಯನ್ನು ಆರಿಸಬಹುದು. ಇದಕ್ಕಾಗಿಯೇ ಅಲ್ಲಿ ಹಲವಾರು ಮ್ಯಾಚಿಂಗ್ ವೆಬ್​ ಸೈಟ್‌ಗಳಿವೆ. ಈ ವೆಬ್​ಸೈಟ್​ ಮಹಿಳೆಯರ ದಾಖಲೆಗಳನ್ನು ಒದಗಿಸುತ್ತದೆ. ಮಹಿಳೆಯರ ಪಟ್ಟಿ, ವಯಸ್ಸು, ತೂಕ, ಅವರ ಕಣ್ಣುಗಳ ಬಣ್ಣ, ಕೂದಲು ಮತ್ತು ಇತರ ಗುಣಲಕ್ಷಣಗಳ ವಿವರಣೆಗಳೊಂದಿಗೆ ಮಾಹಿತಿ ಲಭ್ಯವಾಗಿರುತ್ತದೆ. ಇರಾನ್​ನ ಮಶಾದ್‌ ನಗರದ ಕೆಲವು ಹೋಟೆಲ್‌ನಲ್ಲಿ ಇಂತಹ ವಿವಾಹಕ್ಕಾಗಿ ಮಹಿಳೆಯರನ್ನು ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.

Published by:Rajesha M B
First published: