ಚುಂಬನ (ಮುತ್ತು) ಎಂದರೆ ಒಬ್ಬರ ತುಟಿಯಿಂದ (Lips) ಇನ್ನೊಬ್ಬರ ತುಟಿಗೆ, ಕೆನ್ನೆ (Cheek) ಅಥವಾ ಕೈಗೆ (Hand) ಸ್ಪರ್ಶಿಸುವುದಾಗಿದೆ. ಮುತ್ತು ಕೊಡುವುದು ಕೂಡ ಒಂದು ಕಲೆ. ಸಾಮಾನ್ಯವಾಗಿ ಮನುಷ್ಯರು ತಮ್ಮ ಪ್ರೀತಿ (Love) ಮತ್ತು ಭಾವನೆಗಳನ್ನು (Feelings) ಚುಂಬಿಸುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಅದರಲ್ಲಿಯೂ ಚುಂಬನದಲ್ಲಿ ಸಾಕಷ್ಟು ವಿಧಗಳಿದೆ. ಮನುಷ್ಯರ (Human) ಜೀವನ ರೂಪುಗೊಂಡಿರುವುದೇ ಪ್ರೀತಿಯಿಂದ. ಪ್ರೀತಿಯಿಂದಲೇ ಈ ಜಗತ್ತು ನಿರ್ಮಾಣವಾಗಿದೆ. ಆಲಿಂಗನ, ಚುಂಬನ, ಕಣ್ಣೀರು, ನಗು ಎಲ್ಲವೂ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಗಳಾಗಿವೆ. ಚುಂಬಿಸುವುದರಿಂದ ಪ್ರೀತಿ, ಭಾವೋದ್ರೇಕ, ಪ್ರಣಯ, ಲೈಂಗಿಕ ಆಕರ್ಷಣೆ, ಲೈಂಗಿಕ ಚಟುವಟಿಕೆ, ಲೈಂಗಿಕ ಪ್ರಚೋದನೆ, ವಾತ್ಸಲ್ಯ, ಗೌರವ, ಶುಭಾಶಯ, ಸ್ನೇಹ, ಶಾಂತಿ ಹೀಗೆ ವಿವಿಧ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದಾಗಿದೆ. ಆದರೆ ಇಂತಹ ಮುತ್ತನ್ನು ಬಹಿರಂಗವಾಗಿ ಈ ದೇಶಗಳಲ್ಲಿ ನೀವು ನೀಡುವಂತಿಲ್ಲ. ಒಂದು ವೇಳೆ ನಿಮ್ಮ ಸಂಗಾತಿಗೆ ಚುಂಬಿಸಿದರೆ ಕೈಗೆ ಕೊಳಬೀಳುವುದಂತೂ ಗ್ಯಾರಂಟಿ. ಅಷ್ಟಕ್ಕೂ ಅವು ಯಾವ ದೇಶಗಳು ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.
ದುಬೈ: ದುಬೈ ತುಂಬಾ ಅಭಿವೃದ್ಧಿ ಹೊಂದಿರುವ ದೇಶವಾಗಿದ್ದರೂ ಇಲ್ಲಿನ ಜನರ ಜೀವನ ಶೈಲಿಯೇ ಬೇರೆ ರೀತಿ ಇದೆ. ಈ ದೇಶದಲ್ಲಿ ಬಹಿರಂಗವಾಗಿ ಚುಂಬಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಅಪ್ಪಿ, ತಪ್ಪಿ ಬಹಿರಂಗವಾಗಿ ಚುಂಬಿಸಿದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ ಅಥವಾ ದೊಡ್ಡ ಮೊತ್ತದಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ.
ಚೀನಾ: ಟೆಕ್ನಿಕಲಿ ಈ ದೇಶ ಹಲವು ದೇಶಗಳಿಗೆ ಸಖತ್ ಪೈಪೋಟಿ ನೀಡುತ್ತಿದ್ದು, ಪ್ರಪಂಚದಲ್ಲಿಯೇ ಅಗ್ರಸ್ಥಾನಕ್ಕೇರಲು ಸಾಕಷ್ಟು ಪ್ರಯತ್ನಿಸುತ್ತಿದೆ. ಇಷ್ಟೇಲ್ಲಾ ಇದ್ದರೂ ಚೀನಾದ ಸಂಪ್ರದಾಯ ಮತ್ತು ಪದ್ಧತಿಗಳು ಪುರಾತನ ಕಾಲದ್ದಾಗಿದೆ. ಇಲ್ಲಿ ಕೂಡ ಬಹಿರಂಗವಾಗಿ ಚುಂಬಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ವಿಯೆಟ್ನಾಂ: ವಿಯೆಟ್ನಾಂ ಪ್ರಸಿದ್ಧ ಪ್ರವಾಸಿಗರ ತಾಣವಾಗಿದ್ದು, ಪ್ರಪಂಚದ ಮೂಲೆ, ಮೂಲೆಗಳಿಂದ ಜನ ಪ್ರವಾಸಕ್ಕೆ ಹೋಗುತ್ತಾರೆ. ತಮ್ಮ ಪ್ರೀತಿ ಪಾತ್ರರೊಂದಿಗೆ ವಿಯೆಟ್ನಾಗೆ ಭೇಟಿ ನೀಡುವ ಜನ ಎಂದಿಗೂ ಸಾರ್ವಜನಿಕವಾಗಿ ಪ್ರೀತಿ ಪ್ರದರ್ಶಿಸುವಂತಿಲ್ಲ. ಒಂದು ವೇಳೆ ಕಿಸ್ ಮಾಡಿದರೇ ಅಪರಾಧ ಎಂದು ಪರಿಗಣಿಸಲಾಗುತ್ತದೆ. ವಿಯೆಟ್ನಾಂ, ಹನೋಯಿ ಮತ್ತು ಸೈಗಾನ್ನಂತಹ ನಗರಗಳಲ್ಲಿ ಸಾರ್ವಜನಿಕವಾಗಿ ಚುಂಬಿಸುವುದವರಿಗೆ ಶಿಕ್ಷೆ ನೀಡಲಾಗುತ್ತದೆ.
ಜಿಂಬಾಬ್ವೆ: ಜಿಂಬಾಬ್ವೆ ದೇಶದಲ್ಲಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಚುಂಬಿಸಿರುವುದು ಕಂಡು ಬಂದರೆ ಅವರನ್ನು ಕೂಡಲೇ ಕಾಲೇಜಿನಿಂದ ಡಿಬಾರ್ ಮಾಡುತ್ತಾರೆ.
ಕ್ಯಾಥೋಲಿಕ್ ಮಾಸ್: ಕ್ಯಾಥೋಲಿಕ್ ಮಾಸ್ ದೇಶದಲ್ಲಿಯೂ ಪಬ್ಲಿಕ್ ಪ್ಲೇಸ್ನಲ್ಲಿ ಕಿಸ್ ಮಾಡುವುದು ದೊಡ್ಡ ಅಪರಾಧವಾಗಿದೆ. ರಸ್ತೆಯಲ್ಲಿ ಕೈ-ಕೈ ಹಿಡಿದುಕೊಂಡು ನಡೆಯುವುದು, ಪರಸ್ಪರ ಚುಂಬಿಸಬಾರದು ಎಂದು ತಿಳಿಸಲಾಗಿದೆ.
ಕತಾರ್: ಕತಾರ್ ದೇಶದಲ್ಲಿ ರಾತ್ರಿ ವೇಳೆ ಕೈ ಹಿಡಿದುಕೊಂಡು ನಡೆದರೆ ವಿರೋಧವಿಲ್ಲ. ಆದರೆ ಒಂದೇ ಲಿಂಗದ ಅಥವಾ ಸ್ನೇಹಿತರು ಮಾತ್ರ ಪರಸಪರ ಚುಂಬಿಸಬಹುದು. ಆದರೆ ಸಲಿಂಗ ಕಾಮವನ್ನು ಈ ದೇಶ ಪ್ರೋತ್ಸಾಹಿಸುವುದಿಲ್ಲ.
ಭಾರತ: ಭಾರತದ ದೇಶದಲ್ಲಿಯೂ ಕೂಡ ಬಹಿರಂಗವಾಗಿ ಚುಂಬಿಸುವಂತಿಲ್ಲ. ಅಲ್ಲದೇ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ರ ಅಡಿಯಲ್ಲಿ ಪರಸ್ಪರ ಮುಕ್ತವಾಗಿ ಚುಂಬಿಸಿದರೆ ಅಥವಾ ತಪ್ಪು ಕೃತ್ಯವೆಸಗಿದರೆ ಮೂರು ತಿಂಗಳು ಜೈಲು ಶಿಕ್ಷೆಗೆ ಒಳಗಾಗಬೇಕಾಗಿರುತ್ತದೆ ಅಥವಾ ದಂಡ ಕಟ್ಟಬೇಕಾಗುತ್ತದೆ.
ಇಂಡೋನೇಷ್ಯಾ: ಸಾಮಾನ್ಯವಾಗಿ ಅನೇಕ ಮಂದಿ ತಮ್ಮ ಹನಿಮೂನ್ಗೆ ತೆರಳುತ್ತಾರೆ. ನವ ಜೋಡಿಗಳು ಈ ದೇಶದಲ್ಲಿ ತಮ್ಮ ಹನಿಮೂನ್ ಅನ್ನು ಸಖತ್ ಆಗಿ ಎಂಜಾಯ್ ಮಾಡಬಹುದು. ಆದರೆ ಬಹಿರಂಗವಾಗಿ ಚುಂಬಿಸುವಂತಿಲ್ಲ. ಒಂದು ವೇಳೆ ಸೂರ್ಯಾಸ್ತವಾಗಿದೆ ಯಾರಿಗೂ ತಿಳಿಯುವುದಿಲ್ಲ ಎಂದು ಚುಂಬಿಸಿ ಸಿಕ್ಕಿಕೊಂಡರೆ ಖಂಡಿತ ಜೈಲು ಶಿಕ್ಷೆ ಗ್ಯಾರಂಟಿ.
ಇದನ್ನೂ ಓದಿ: Shilpa Shetty: ನಟಿ ಶಿಲ್ಪಾಗೆ ವೇದಿಕೆಯಲ್ಲೇ ಕಿಸ್ ಮಾಡಿದ್ದ ಹಾಲಿವುಡ್ ನಟ! ಪ್ರಕರಣಕ್ಕೆ ಟ್ವಿಸ್ಟ್
ಥೈಲ್ಯಾಂಡ್: ಥೈಲ್ಯಾಂಡ್ ಕೂಡ ಹನಿಮೂನ್ ಸ್ಪಾಟ್ ಆಗಿದೆ. ಈ ದೇಶಕ್ಕೆ ಭೇಟಿ ನೀಡುವ ಜನ ಸಖತ್ ಮೋಜು, ಮಸ್ತಿ ಮಾಡಬಹುದು. ಅಲ್ಲದೇ ಜನ ಇಲ್ಲಿ ಏನು ಬೇಕಾದರೂ ಮಾಡಬಹುದು ಅಂದುಕೊಂಡಿರುತ್ತಾರೆ. ಒಂದು ವೇಳೆ ನೀವು ಈ ರೀತಿ ಭಾವಿಸಿದ್ದರೆ, ಅದು ನಿಮ್ಮ ತಪ್ಪು ಕಲ್ಪನೆ. ಬ್ಯಾಂಕಾಕ್ನಲ್ಲಿ ಕೈ ಹಿಡಿದುಕೊಂಡು ಅನೇಕ ಮಂದಿ ಬಹಿರಂಗವಾಗಿ ಚುಂಬಿಸುತ್ತಾರೆ. ಆದರೆ ಕೆಲ ಪ್ರದೇಶಗಳಲ್ಲಿ ಮಾತ್ರ ಚುಂಬಿಸುವುದನ್ನು ನಿಷೇಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ