ಮಹಾ ಮೈತ್ರಿಯಲ್ಲಿ ಬಿರುಕು?; ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ದ್ವಂದ್ವ ನಿಲುವು ತಾಳಿದ ಎನ್​ಸಿಪಿ-ಶಿವಸೇನೆ

ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಶೇ. 5 ಮೀಸಲಾತಿ ನೀಡುವ ವಿಚಾರದಲ್ಲಿ ಎನ್​ಸಿಪಿ ಹಾಗೂ ಶಿವಸೇನೆ ಬೇರೆ ಬೇರೆ ರೀತಿಯ ಹೇಳಿಕೆ ನೀಡುತ್ತಿವೆ. ಈ ಬಗ್ಗೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ

 • Share this:
  ಮುಂಬೈ (ಫೆ.29): ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್​ ಅಘಾಡಿ (ಎಂವಿಎ) ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈ ಮಧ್ಯೆ ಮುಸ್ಲಿಮರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಶಿವಸೇನೆ ಹಾಗೂ ಎನ್​ಸಿಪಿ ನಡುವೆ ತಿಕ್ಕಾಟ ಆರಂಭವಾಗುವ ಲಕ್ಷಣ ಗೋಚರವಾಗಿದೆ.

  ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಶೇ. 5 ಮೀಸಲಾತಿ ನೀಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಹಾಗೂ ಎನ್​ಸಿಪಿ ನಾಯಕ ನವಾಬ್​ ಮಲಿಕ್ ಘೋಷಣೆ ಮಾಡಿದ್ದರು. ಅಲ್ಲದೆ, ಇದನ್ನು ಆದಷ್ಟು ಬೇಗ ಜಾರಿ ಮಾಡಲಾಗುವುದು ಎಂದು ಹೇಳಿದ್ದರು.

  ಈ ಹೇಳಿಕೆ ನಂತರ ಪ್ರತಿಕ್ರಿಯಿಸಿರುವ ಶಿವಸೇನೆ ಹಿರಿಯ ನಾಯಕ ಹಾಗೂ ಸಚಿವ ಏಕಾಂತ್​ ಶಿಂಧೆ, “ನವಾಬ್​ ಮಲಿಕ್​ ನೀಡಿದ ಹೇಳಿಕೆ ಸರಿ ಇಲ್ಲ. ಮೂರು ಪಕ್ಷಗಳು ಸೇರಿ ಈ ಬಗ್ಗೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ,” ಎಂದಿದ್ದಾರೆ.

  ಇದನ್ನೂ ಓದಿ: ಬೆಳಗಾವಿ ಗಡಿಭಾಗ ಉದ್ವಿಗ್ನ; ಶಿವಸೇನೆ ಪುಂಡಾಡಿಕೆ; ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿ; ಬೀದಿಗಿಳಿದ ಕನ್ನಡಪರ ಸಂಘಟನೆಗಳು

  ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ಅಧಿಕಾರಕ್ಕೆ ಏರಿದ ನಂತರ ಬಿಜೆಪಿ ತೀವ್ರ  ಟೀಕೆ ಮಾಡಿತ್ತು. ಮೂರು ಪಕ್ಷಗಳ ಸಿದ್ಧಾಂತಗಳು ಬೇರೆ. ಹೀಗಿರುವಾಗ ಈ ಪಕ್ಷಗಳು ಒಟ್ಟಿಗೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿತ್ತು. ಈಗ ಮೀಸಲಾತಿ ವಿಚಾರದಲ್ಲಿ ಎರಡೂ ಪಕ್ಷಗಳು ದ್ವಂದ್ವ ನಿರ್ಧಾರ ತಾಳಿರುವುದು ಬಿಜೆಪಿಗೆ ವರದಾನವಾಗಲಿದೆ.
  First published: