ಅಂದು ದ್ವೇಷ ಭಾಷಣ; ಇಂದು ಶಾಂತಿ ಮೆರವಣಿಗೆಯಲ್ಲಿ ಭಾಗಿ; ಅಚ್ಚರಿ ಮೂಡಿಸಿದ ಬಿಜೆಪಿ ನಾಯಕನ ನಡೆ

ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಆಗಮಿಸಿದ ವೇಳೆ  ದೆಹಲಿಯಲ್ಲಿ ಸಿಎಎ ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿತ್ತು. ಈ ವೇಳೆ ಕಪಿಲ್​ ಮಿಶ್ರಾ ದ್ವೇಷ ಭಾಷಣ ಮಾಡಿದ್ದರು. ಈಗ ಶಾಂತಿಯುತ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.

news18-kannada
Updated:February 29, 2020, 1:28 PM IST
ಅಂದು ದ್ವೇಷ ಭಾಷಣ; ಇಂದು ಶಾಂತಿ ಮೆರವಣಿಗೆಯಲ್ಲಿ ಭಾಗಿ; ಅಚ್ಚರಿ ಮೂಡಿಸಿದ ಬಿಜೆಪಿ ನಾಯಕನ ನಡೆ
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಪಿಲ್​ ಮಿಶ್ರಾ
  • Share this:
ನವದೆಹಲಿ (ಫೆ.29): ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೂ ಮೊದಲು ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕ ಕಪಿಲ್​ ಮಿಶ್ರಾ ಇಂದು ಶಾಂತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಳೆದ ಭಾನುವಾರ ಈಶಾನ್ಯ ದೆಹಲಿ ಭಾಗದಲ್ಲಿ ಸಿಎಎ ಪ್ರತಿಭಟನೆ ವೇಳೆ ಹಿಂಸಾಚಾರ ಏರ್ಪಟ್ಟಿತ್ತು. ಹಿಂಸಾಚಾರ ತೀವ್ರ ಸ್ವರೂಪ ತಾಳಿ 42 ಜನರು ಮೃತಪಟ್ಟಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ಈ ಹಿಂಸಾಚಾರಕ್ಕೂ ಮೊದಲು ಕಪಿಲ್​ ಮಿಶ್ರಾ ದ್ವೇಷ ಭಾಷಣ ಮಾಡಿದ್ದರು. ಈಗ, ದೆಹಲಿ ಹಿಂಸಾಚಾರ ಖಂಡಿಸಿ ಪೀಸ್​ ಫೋರಂ ಎನ್​ಜಿಒ ಜಂತರ್​ ಮಂತರ್​ನಲ್ಲಿ ಶಾಂತಿಯುತ ಜಾತಾ ನಡೆಸಿತು. ಇದರಲ್ಲಿ ಕಪಿಲ್​ ಮಿಶ್ರಾ ಕೂಡ ಪಾಲ್ಗೊಂಡರು.

ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಆಗಮಿಸಿದ ವೇಳೆ  ದೆಹಲಿಯಲ್ಲಿ ಸಿಎಎ ವಿರೋಧಿಸಿ ಭಾರೀ ಪ್ರತಿಭಟನೆ ಏರ್ಪಟ್ಟಿತ್ತು. ಈ ವೇಳೆ ಟ್ವೀಟ್​ ಮಾಡಿದ್ದ ಕಪಿಲ್​ ಮಿಶ್ರಾ, “ಡೊನಾಲ್ಡ್ ಟ್ರಂಪ್​ ಭಾರತದಲ್ಲಿ ಇರುವವರೆಗೆ ಮಾತ್ರ ನಾವು ಶಾಂತಿಯುತವಾಗಿ ವರ್ತಿಸುತ್ತೇವೆ. ನಂತರ ನಾವು ರಸ್ತೆಗೆ ನುಗ್ಗಿ ಸಿಎಎ ಪ್ರತಿಭಟನಾಕಾರರನ್ನು ಓಡಿಸುತ್ತೇವೆ. ಪೊಲೀಸರ ಮಾತನ್ನೂ ಕೇಳುವುದಿಲ್ಲ,” ಎಂದು  ಹೇಳಿದ್ದರು. ದ್ವೇಷ ಭಾಷಣ ಮಾಡಿದ್ದಕ್ಕೆ ಅವರನ್ನು ಬಂಧಿಸುವಂತೆ ಆಗ್ರಹ ಕೇಳಿ ಬಂದಿತ್ತು.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಇಲ್ಲಿಯವರೆಗೂ 630 ಮಂದಿ ಬಂಧನ; 123 ವಿರುದ್ಧ ಎಫ್​​​ಐಆರ್​​

ನವದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಮತ್ತು ಎನ್​​ಆರ್​​ಸಿ ವಿರೋಧಿ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ ದಿನದಿಂದ ದಿನಕ್ಕೇರುತ್ತಲೇ ಇದೆ. ಇಲ್ಲಿಯವರೆಗೂ ಈ ಗಲಭೆಯಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 123 ಮಂದಿ ವಿರುದ್ಧ ಎಫ್​​ಐಆರ್​​ ದಾಖಲಾಗಿದ್ದು, 630 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading