• Home
  • »
  • News
  • »
  • national-international
  • »
  • Singapore: ಏನ್​ ಗುರೂ, ಈ ದೇಶದಲ್ಲಿ ಬೈಕ್​ ಬೆಲೆಗಿಂತ ಅದಕ್ಕೆ ಕೊಡೋ ಪರ್ಮಿಟ್​ ಬೆಲೆನೇ ದುಬಾರಿ!

Singapore: ಏನ್​ ಗುರೂ, ಈ ದೇಶದಲ್ಲಿ ಬೈಕ್​ ಬೆಲೆಗಿಂತ ಅದಕ್ಕೆ ಕೊಡೋ ಪರ್ಮಿಟ್​ ಬೆಲೆನೇ ದುಬಾರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

10-ವರ್ಷದ ಮೋಟಾರ್‌ ಸೈಕಲ್ ಪರವಾನಗಿ (Motor Cycle Permission) ಪ್ರಸ್ತುತ ಮೋಟಾರ್‌ಸೈಕಲ್‌ (Motor Cycle) ಗಳನ್ನು ಕೊಳ್ಳುವುದಕ್ಕಿಂತ ಹೆಚ್ಚಾಗಿದೆ ಎನ್ನಲಾಗುತ್ತಿದೆ.

  • Trending Desk
  • Last Updated :
  • Othe, India
  • Share this:

ವಿಶ್ವ (World) ದ ಅತ್ಯಂತ ದುಬಾರಿ ನಗರ (Costliest City) ಗಳಲ್ಲಿ ಒಂದಾಗಿರುವ ಸಿಂಗಾಪುರ (Singapore) ಅದರ ಅಗ್ಗದ ಸಾರಿಗೆ ವಿಧಾನಗಳ ಮೂಲಕ ಇನ್ನಷ್ಟು ದುಬಾರಿಯಾಗಿದೆ. 10-ವರ್ಷದ ಮೋಟಾರ್‌ ಸೈಕಲ್ ಪರವಾನಗಿ (Motor Cycle Permission) ಪ್ರಸ್ತುತ ಮೋಟಾರ್‌ಸೈಕಲ್‌ (Motor Cycle) ಗಳನ್ನು ಕೊಳ್ಳುವುದಕ್ಕಿಂತ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಲ್ಯಾಂಡ್ ಟ್ರಾನ್ಸ್‌ಪೋರ್ಟ್ (Land Transport) ಅಥಾರಿಟಿಯ ಮಾಹಿತಿಯ ಪ್ರಕಾರ ನಗರ-ರಾಜ್ಯದಲ್ಲಿ 10-ವರ್ಷದ ಮೋಟಾರ್‌ಸೈಕಲ್ ಪರವಾನಗಿಯ ವೆಚ್ಚವು ಈ ತಿಂಗಳು ದಾಖಲೆಯ S$12,801 ($8,984) ಅನ್ನು ತಲುಪಿದೆ, ನಾಲ್ಕು ವರ್ಷಗಳಲ್ಲಿ 200% ಕ್ಕಿಂತ ಹೆಚ್ಚಾಗಿದೆ ಮತ್ತು ಹೊಸದರ ಬೆಲೆಗಿಂತ ಏರಿಕೆ ಆಗಿದೆ ಎಂದು ಅಂಕಿಅಂಶಗಳು ತೋರಿಸಿವೆ.


ವಾಹನಗಳ ಸಂಖ್ಯೆ ನಿಯಂತ್ರಿಸಲು ಈ ಕ್ರಮ


ರಸ್ತೆಯಲ್ಲಿರುವ ಮೋಟರ್‌ಸೈಕಲ್‌ಗಳು ಮತ್ತು ಕಾರುಗಳ ಸಂಖ್ಯೆಯನ್ನು ಮಿತಿಗೊಳಿಸುವ ಮಾರ್ಗವಾಗಿ ಸಿಂಗಾಪುರವು ಪರವಾನಿಗೆ ವೆಚ್ಚ ಹೆಚ್ಚಿಸಿ ಇದನ್ನು ಅರ್ಹತೆಯ ಪ್ರಮಾಣಪತ್ರಗಳು ಎಂದು ನೀಡುತ್ತಿದೆ. ಸಿಂಗಾಪುರದಲ್ಲಿ ಸೆಪ್ಟೆಂಬರ್‌ನ ಹೊತ್ತಿಗೆ, ನಗರವು 142,000 ಮೋಟಾರ್‌ ಸೈಕಲ್ ಗಳನ್ನು ಮತ್ತು ಸುಮಾರು 650,000 ಕಾರುಗಳನ್ನು ಹೊಂದಿರಲಿದೆ.


ಬೈಕ್​ ಪರ್ಮಿಟ್​ಗೆ S$20,000 ವೆಚ್ಚ


ಪ್ರಸ್ತುತ ಪರವಾನಗಿ ದರಗಳಲ್ಲಿ, ಚಾಲಕರು S$5,000 (ರೂ. 293035) ಮೌಲ್ಯದ ಎಂಟ್ರಿ ಮಟ್ಟದ ಮೋಟಾರ್‌ಸೈಕಲ್ ಅನ್ನು ಹೊಂದಲು ಮತ್ತು ಚಲಾಯಿಸಲು ಸುಮಾರು S$20,000 ಗಳನ್ನು ವ್ಯಯಿಸಬೇಕಿದೆ.


ಈಗಿನಂತೆ, ಅಸ್ತಿತ್ವದಲ್ಲಿರುವ ಪರವಾನಗಿಯನ್ನು ನವೀಕರಿಸಲು $11,000 ಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಇದು ಒಂದು ದಶಕದ ಹಿಂದಿನ ಬೆಲೆಗಿಂತ ಸುಮಾರು ಆರು ಪಟ್ಟು ಹೆಚ್ಚಾಗಿದೆ ಎಂದು ಸಿಂಗಾಪುರ್ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಉಪನ್ಯಾಸಕ ನಾಥನ್ ಪೆಂಗ್ ಬ್ಲೂಮ್‌ಬರ್ಗ್‌ಗೆ ತಿಳಿಸಿದರು.


ಇದನ್ನೂ ಓದಿ: ರಾಯಲ್ ಫ್ಯಾಮಿಲಿಯಲ್ಲಿ ಈ ವರ್ಷ ಇಬ್ಬರು ರಾಜರು! ತಜ್ಞರು ಹೀಗಂದಿದ್ಯಾಕೆ?


"ಮೋಟಾರ್ ಸೈಕಲ್‌ಗಳು ಹೆಚ್ಚಿನವರಿಗೆ ಜೀವನಶೈಲಿಯ ಆಯ್ಕೆ ಎಂದು ನಾನು ಭಾವಿಸುವುದಿಲ್ಲ. ಸುರಕ್ಷತೆ ಮತ್ತು ಸೌಕರ್ಯದಂತಹ ಕಾಳಜಿಗಳ ಕಾರಣ ಅವರು ಮೋಟಾರ್ಸೈಕಲ್ ಅನ್ನು ಖರೀದಿಸದಿರಬಹುದು. ಅವರು ಆಯ್ಕೆಯನ್ನು ಹೊಂದಿದ್ದರೆ ಅವರು ಹೆಚ್ಚುವರಿ ಅಪಾಯವನ್ನು ಏಕೆ ತೆಗೆದುಕೊಳ್ಳುತ್ತಾರೆ?" ಎಂದು ಪೆಂಗ್‌ ಪ್ರಶ್ನಿಸುತ್ತಾರೆ.


ಶುಲ್ಕ ಹೆಚ್ಚಿಸಿಕೊಂಡ ಬೈಕ್ ಬಾಡಿಗೆಗೆ ಬಿಡುವ ಸಂಸ್ಥೆ


ಹೆಚ್ಚಿದ ಶುಲ್ಕವನ್ನು ಸ್ವಂತ ಬೈಕ್ ಹೊಂದಿರುವವರು ನೇರವಾಗಿ ಪಾವತಿಸುತ್ತಾರೆ ಮತ್ತು ಇನ್ನೂ ಬೈಕ್‌ಗಳನ್ನು ಬಾಡಿಗೆಗೆ ಬಿಡುವ ಸಂಸ್ಥೆಯು ತಮ್ಮ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆಗಳೂ ಕೂಡ ಇವೆ. ಸಿಂಗಾಪುರದಲ್ಲಿ ಅನೇಕ ವಿತರಣಾ ಚಾಲಕರು ತಮ್ಮ ವಾಹನಗಳನ್ನು ಸ್ವತಂತ್ರ ನಿರ್ವಾಹಕರಿಂದ ಅಥವಾ ಆಹಾರ ವಿತರಣಾ ಕಂಪನಿಯಿಂದ ಬಾಡಿಗೆಗೆ ಪಡೆಯುತ್ತಾರೆ.


ಸಿಂಗಾಪುರದ ಹಲವಾರು ಮೋಟಾರ್‌ ಸೈಕಲ್ ಗುತ್ತಿಗೆ ಕಂಪನಿಗಳು ಹೆಚ್ಚಿನ ಪರವಾನಗಿ ವೆಚ್ಚವನ್ನು ಸರಿದೂಗಿಸಲು ದರ ಹೆಚ್ಚಳ ಮಾಡಿದೆ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ಒಂದು ಕಂಪನಿ, ಗಿಗಾರೈಡರ್, ತನ್ನ ಕಾರ್ಪೊರೇಟ್ ಕ್ಲೈಂಟ್‌ಗಳಿಗಾಗಿ 2023 ರ ಮೊದಲ ತ್ರೈಮಾಸಿಕದಲ್ಲಿ 10% ಬಾಡಿಗೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಬೆಲೆ ಏರಿಕೆಯಿಂದಾಗಿ ಬಾಡಿಗೆ ಶುಲ್ಕಗಳು ಹೆಚ್ಚಾಗಬಹುದು ಎಂದು ಅದರ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.


ಕಾರುಗಳ ಮೇಲೂ ಸರ್ಕಾರದ ಕಣ್ಣು


ಸಿಂಗಾಪುರ ಕೇವಲ ಮೋಟಾರ್‌ಸೈಕಲ್‌ಗಳನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಸಣ್ಣ ದೇಶವು ರಸ್ತೆಯಲ್ಲಿ ಕಾರುಗಳನ್ನು ಸೀಮಿತಗೊಳಿಸಲು ಸಹ ಎದರು ನೋಡುತ್ತಿದೆ. ಪ್ರವೇಶ ಮಟ್ಟದ ಕಾರುಗಳ ಪರವಾನಗಿಗಳ ವೆಚ್ಚ $80,000 ಕ್ಕಿಂತ ಹೆಚ್ಚಾಗಿದ್ದು, 2018 ರ ನಂತರ ಇದು ಸುಮಾರು ಮೂರು ಪಟ್ಟು ಏರಿಕೆ ಕಂಡಿದೆ.


ಇದನ್ನೂ ಓದಿ: ಭಾರತದ ಯುವಜನತೆಗೆ ಆರಂಭವಾಗಿದೆ ಜಾಗತಿಕ ಯುದ್ಧ! ಯಾರಿಗೆ ಸಿಗಬಹುದು ಜಯ


ಒಟ್ಟಾರೆ ಈ ವೆಚ್ಚ ಬಡ ಕುಟುಂಬಗಳಿಗೆ ದೊಡ್ಡ ಹೊಡೆತವಾಗಿದ್ದು, ಅನೇಕ ಕಡಿಮೆ-ಆದಾಯದ ಕೆಲಸಗಾರರಿಗೆ, ಕೆಲಸ ಅಥವಾ ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲು ಕೆಲವು ವೆಚ್ಚ-ಪರಿಣಾಮಕಾರಿ ಮಾರ್ಗಗಳಲ್ಲಿ ಮೋಟಾರ್‌ಸೈಕಲ್‌ ಪರ್ಮಿಟ್ ಕೂಡ ಒಂದಾಗಿದೆ. ಜೀವನ ವೆಚ್ಚ ಹೆಚ್ಚುತ್ತಿರುವಾಗಲೂ ಸಿಂಗಾಪುರ ತನ್ನ ಸಂಪತ್ತಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.

Published by:ವಾಸುದೇವ್ ಎಂ
First published: