Sheena Bora Murder Case: ಮಗಳು ಶೀನಾಳನ್ನೇ ಕೊಂದ ಇಂದ್ರಾಣಿ ಮುಖರ್ಜಿ ಪ್ರಕರಣ ಏನಾಯ್ತು ಗೊತ್ತಾ?

ಶೀನಾ ಬೋರಾಳನ್ನು ಚಾಲಕ ಮತ್ತು ಆಕೆಯ ಎರಡನೇ ಪತಿ ಸಂಜೀವ್ ಖನ್ನಾ ಸಹಾಯದಿಂದ ಇಂದ್ರಾಣಿ ಕೊಲೆ ಮಾಡಿದ್ದಳು.  ಹಿಂದಿನ ವಿವಾಹದಿಂದ ಪೀಟರ್ ಮುಖರ್ಜಿಯವರ ಮಗ ರಾಹುಲ್ ಮುಖರ್ಜಿಯೊಂದಿಗೆ ಶೀನಾ ಸಂಬಂಧದ ಬಗ್ಗೆ ಇಂದ್ರಾಣಿ ಕೋಪಗೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಕೊಲೆಯಾದ ಶೀನಾ ಬೋರ ಹಾಗೂ ತಾಯಿ ಇಂದ್ರಾಣಿ

ಕೊಲೆಯಾದ ಶೀನಾ ಬೋರ ಹಾಗೂ ತಾಯಿ ಇಂದ್ರಾಣಿ

  • Share this:
ಮುಂಬೈ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಸ್ವಂತ ಮಗಳನ್ನೇ ತಂಗಿಯೆಂದು ಪರಿಚಯಿಸಿದ್ದ ತಾಯಿ ಇಂದ್ರಾಣಿ ಮುಖರ್ಜಿ ಕೊನೆಗೆ ಆಕೆಯನ್ನೇ ಕೊಲೆ ಮಾಡುತ್ತಾಳೆ. ಮೊದಲ ಪತಿಯ ಮಗಳನ್ನು 2ನೇ ಪತಿಯ ಮಗ ಪ್ರೀತಿಸಿದ ಹಿನ್ನೆಲೆಯಲ್ಲಿ ಹತ್ಯೆ ನಡೆದಿತ್ತು. ಸದ್ಯ ಆರೋಪಿ ಇಂದ್ರಾಣಿ ಮುಖರ್ಜಿ ಜೈಲು ಪಾಲಾಗಿದ್ದಾರೆ. ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ ವಿಚಾರಣೆ ಎದುರಿಸುತ್ತಿರುವ ಶೀನಾ ಬೋರಾ ಹತ್ಯೆಯ ತನಿಖೆಯನ್ನು ಸಿಬಿಐ ಮುಚ್ಚಲು ನಿರ್ಧರಿಸಿದೆ. 2012 ರ ಕೊಲೆ ಪ್ರಕರಣದಲ್ಲಿ ತನ್ನ ತನಿಖೆ ಮುಗಿದಿದೆ ಎಂದು ತನಿಖಾ ಸಂಸ್ಥೆ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಸಿಬಿಐ ಮೂರು ಚಾರ್ಜ್‌ಶೀಟ್‌ಗಳನ್ನು ಮತ್ತು ಎರಡು ಪೂರಕ ಚಾರ್ಜ್ ಶೀಟ್‌ಗಳನ್ನು ಇಂದ್ರಾಣಿ ಮುಖರ್ಜಿ, ಆಕೆಯ ಚಾಲಕ ಶ್ಯಾಮವರ್ ರೈ, ಆಕೆಯ ಮಾಜಿ ಪತಿಗಳಾದ ಸಂಜೀವ್ ಖನ್ನಾ ಮತ್ತು ಪೀಟರ್ ಮುಖರ್ಜಿಯವರ ವಿರುದ್ಧ ಸಲ್ಲಿಸಿದೆ.  2015 ರಲ್ಲಿ 25 ವರ್ಷದ ಶೀನಾ ಬೋರಾಳ ಕೊಲೆ ಪ್ರರಕಣದಲ್ಲಿ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಲಾಯಿತು.  ಮೂರು ತಿಂಗಳ ನಂತರ, ಇಂದ್ರಾಣಿ ಹತ್ಯೆಗೆ ಸಹಾಯ ಮಾಡಿದ ಆರೋಪದ ಮೇಲೆ ಪೀಟರ್ ಮುಖರ್ಜಿಯನ್ನು ಬಂಧಿಸಲಾಯಿತು.

ಪ್ರತ್ಯೇಕ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿಯ ಚಾಲಕನ ಬಂಧನದೊಂದಿಗೆ ಕೊಲೆ ಬಯಲಾಗಿದೆ. ಶ್ಯಾಮವರ್ ರೈ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.  ಶೀನಾ ಬೋರಾಳನ್ನು ಚಾಲಕ ಮತ್ತು ಆಕೆಯ ಎರಡನೇ ಪತಿ ಸಂಜೀವ್ ಖನ್ನಾ ಸಹಾಯದಿಂದ ಇಂದ್ರಾಣಿ ಕೊಲೆ ಮಾಡಿದ್ದಳು.  ಹಿಂದಿನ ವಿವಾಹದಿಂದ ಪೀಟರ್ ಮುಖರ್ಜಿಯವರ ಮಗ ರಾಹುಲ್ ಮುಖರ್ಜಿಯೊಂದಿಗೆ ಶೀನಾ ಸಂಬಂಧದ ಬಗ್ಗೆ ಇಂದ್ರಾಣಿ ಕೋಪಗೊಂಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಹತ್ಯೆಯ ನಂತರ, ಇಂದ್ರಾಣಿ ತನ್ನ ಸ್ನೇಹಿತೆ ಎಂದು ಹೇಳಿದ್ದರು. ಮಗಳನ್ನು ಯಾವಾಗಲೂ ತನ್ನ ಸಹೋದರಿ ಎಂದು ಬಿಂಬಿಸುತ್ತಿದ್ದಳು.

ಇದನ್ನೂ ಓದಿ: ಕೊನೆಕ್ಷಣದಲ್ಲಿ ಚಾಣಾಕ್ಷವಾಗಿ ಕಾಬೂಲ್​​ನಿಂದ ಭಾರತಕ್ಕೆ ಹಿಂತಿರುಗಿದ ಪತ್ರಕರ್ತೆ: ಭಯಾನಕ ಅನುಭವವನ್ನು ಬಿಚ್ಚಿಟ್ಟ ಬಸು

ಚಾಲಕನ ಹೇಳಿಕೆಯ ಆಧಾರದ ಮೇಲೆ, ಶೀನಾಳ ಅರ್ಧ ಸುಟ್ಟ ದೇಹವನ್ನು ಮುಂಬೈನ ಸಮೀಪದ ಕಾಡಿನಿಂದ ಅಗೆದು ತೆಗೆಯಲಾಯಿತು.  ಶೀನಾ ಬೋರಾ ತನ್ನ ತಾಯಿಯ ನಡುವಿನ ಹಣಕಾಸಿನ ವಿವಾದದ ನಂತರ ತನ್ನ ತಾಯಿಯ ಅಕ್ರಮ ಬಯಲಿಗೆಳೆಯುವ ಬೆದರಿಕೆ ಹಾಕಿದ್ದಳು ಎಂದು ಸಿಬಿಐ ಹೇಳಿದೆ.  2017 ರಲ್ಲಿ ಆರಂಭವಾದ ವಿಚಾರಣೆಯಲ್ಲಿ ಸುಮಾರು 60 ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ  ತಮ್ಮ 17 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿ, 2019ರಲ್ಲಿ ವಿಚ್ಛೇದನ ಪಡೆದರು. ಪೀಟರ್ ಮುಖರ್ಜಿಗೆ ಕಳೆದ ವರ್ಷ ಜಾಮೀನು ನೀಡಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: