ದೆಹಲಿಯಲ್ಲಿ ಮತ್ತೊಮ್ಮೆ ಗೋಲಿಮಾರೋ ಸದ್ದು: ಆರು ಮಂದಿ ಬಂಧನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಸಂದರ್ಭದಲ್ಲಿ ಪ್ರಾರಂಭಗೊಂಡ ದೆಹಲಿ ಹಿಂಸಾಚಾರದಲ್ಲಿ ಈವರೆಗೆ 42ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ಧಾರೆ. ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. 600ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ಧಾರೆ.

news18
Updated:February 29, 2020, 4:53 PM IST
ದೆಹಲಿಯಲ್ಲಿ ಮತ್ತೊಮ್ಮೆ ಗೋಲಿಮಾರೋ ಸದ್ದು: ಆರು ಮಂದಿ ಬಂಧನ
ರಾಜೀವ್ ಚೌಕ್ ಮೆಟ್ರೋ ನಿಲ್ದಾಣ
  • News18
  • Last Updated: February 29, 2020, 4:53 PM IST
  • Share this:
ನವದೆಹಲಿ(ಫೆ. 29): ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ದೇಶದ ರಾಜಧಾನಿಯಲ್ಲಿ ಧ್ವೇಷದ ಘೋಷಣೆ ಕೂಗು ಕೇಳಿಬಂದಿದೆ. ಇಲ್ಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ಬಳಿ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದು ಘೋಷಣೆ ಕೂಗಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

“ರಾಜೀವ್ ಚೌಕ್ ಮೆಟ್ರೋ ಸ್ಟೇಷನ್​ನಲ್ಲಿ ‘ದೇಶ್ ಕೆ ಗದ್ದಾರೋಂ ಕೋ, ಗೋಲಿ ಮಾರೋ ಸಾಲೋಂ ಕೋ’ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂದು ಆರು ಮಂದಿ ಘೋಷಣೆ ಕೂಗಿದ್ದು ಕಂಡುಬಂದಿತು. ರಾಜೀವ್ ಚೌಕ್ ಮೆಟ್ರೋ ಪೊಲೀಸ್ ಸ್ಟೇಷನ್​ನಲ್ಲಿ ಅವರೆಲ್ಲರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ” ಎಂದು ಡಿಸಿಪಿ ವಿಕ್ರಮ್ ಪೊರ್ವಲ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಎರಡು ತಿಂಗಳು ನಿರಂತರವಾಗಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ವೇಳೆ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮೊದಲಾದ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಗೋಲಿಮಾರೋ ಘೋಷಣೆಗಳನ್ನು ಕೂಗಿ ಪ್ರಚೋದನೆಗೆ ಕಾರಣರಾದರೆಂಬ ಆರೋಪವಿದೆ. ದೆಹಲಿಯಲ್ಲಿ ಈಗ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಗೋಲಿಮಾರೋ ಘೋಷಣೆಗಳನ್ನ ಬಳಕೆ ಮಾಡುವ ಟ್ರೆಂಡ್ ಸೃಷ್ಟಿಯಾಗಿದೆ. ಇವತ್ತು ರಾಜೀವ್ ಚೌಕ್ ಮೆಟ್ರೋ ಸ್ಟೇಷನ್​ನಲ್ಲಿ ಇದೇ ಪುನಾವರ್ತನೆಯಾಗಿದ್ದು.

ಇದನ್ನೂ ಓದಿ: ಆನ್​ಲೈನ್ ಮೂಲಕವೇ ಡೆಲಿವರಿ ಆಗಿತ್ತು ಪುಲ್ವಾಮ ದಾಳಿಗೆ ಬಳಸಿದ್ದ ಸ್ಫೋಟಕ; ಹೊರಬಿತ್ತು ಶಾಕಿಂಗ್ ವಿಚಾರ

ಮೆಟ್ರೋ ಸ್ಟೇಷನ್​ನಲ್ಲಿ ರೈಲು ಇಳಿಯುವ ಸಮಯದಲ್ಲಿ ಕೇಸರಿ ವಸ್ತ್ರ ಧರಿಸಿ ಒಳಗಿದ್ದ ಜನರ ಗುಂಪು ಗೋಲಿಮಾರೋ ಘೋಷಣೆ ಕೂಗಲು ಆರಂಭಿಸಿದೆ. ರೈಲಿನಿಂದ ಇಳಿದ ಬಳಿಕವೂ ಅವರು ಈ ಘೋಷಣೆ ಕೂಗುವುದನ್ನು ಮುಂದುವರಿಸಿದ್ಧಾರೆ. ಇದು ಕೆಲ ಸಹ ಪ್ರಯಾಣಿಕರನ್ನೂ ಪ್ರಚೋದಿಸಿ ಅವರೂ ಘೋಷಣೆಗೆ ಧ್ವನಿಗೂಡಿಸಿದ್ದಾರೆ. ಮೆಟ್ರೋ ಸ್ಟೇಷನ್​ನಲ್ಲಿದ್ದ ಹಲವರಿಗೆ ಈ ಘೋಷಣೆಯ ಸದ್ದು ಬೆಚ್ಚಿಬೀಳಿಸಿದೆ. ದೆಹಲಿ ಮೆಟ್ರೋದ ಭದ್ರತೆಯ ಜವಾಬ್ದಾರಿ ಇರುವ ಸಿಐಎಸ್​ಎಫ್ ಸಿಬ್ಬಂದಿ ಕೂಡಲೇ ಈ ಯುವಕರನ್ನು ತಡೆದು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೆಟ್ರೊ ರೈಲಾಗಲೀ ಅಥವಾ ನಿಲ್ದಾಣದಲ್ಲಾಗಲೀ ಯಾವುದೇ ರೀತಿಯ ಪ್ರತಿಭಟನೆ, ಗಲಾಟೆಗಳನ್ನು ಮಾಡುವಂತಿಲ್ಲ. ಅಂಥ ಕೃತ್ಯದಲ್ಲಿ ನಿರತರಾಗಿರುವವರನ್ನು ಮೆಟ್ರೋ ಪ್ರಾಂಗಣದಿಂದ ಹೊರಹಾಕುವ ಅಧಿಕಾರ ದೆಹಲಿ ಮೆಟ್ರೋಗೆ ಇದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಸಂದರ್ಭದಲ್ಲಿ ಪ್ರಾರಂಭಗೊಂಡ ದೆಹಲಿ ಹಿಂಸಾಚಾರದಲ್ಲಿ ಈವರೆಗೆ 42ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ಧಾರೆ. ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. 600ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ಧಾರೆ. ಇದೀಗ ಹಿಂಸಾಚಾರ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗುತ್ತಿದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading