HOME » NEWS » National-international » IN RARE SIGHT STUDENTS OF ST STEPHENS COLLEGE WALK OUT OF CLASSROOMS CHANTING INQUILAB SLOGANS MAK

ಸಿಎಎ ವಿರೋಧಿಸಿ ರಸ್ತೆಗಿಳಿದ ದೆಹಲಿಯ ಪ್ರತಿಷ್ಟಿತ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಗಳು; ಕೇಂದ್ರದ ವಿರುದ್ಧ ಘೋಷಣೆ

ಈ ಪ್ರತಿಭಟನೆ ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆಯೇ ಹೊರತು ಯಾವುದೇ ರಾಜಕೀಯ ಪಕ್ಷದ ಸಂಘಟನೆಯ ಜೊತೆಗೆ ಸಂಬಂಧವಿಲ್ಲ. ಇಡೀ ದೇಶ ಸಿಎಎ ಎನ್ಆರ್​ಸಿ ವಿರುದ್ಧ ದ್ವನಿ ಎತ್ತಿದ್ದು, ಈ ದ್ವನಿಗೆ ವಿದ್ಯಾರ್ಥಿಗಳು ಶಕ್ತಿ ತುಂಬಲು ಮುಂದಾಗಿದ್ದಾರೆ ಎಂದು ಪ್ರತಿಭಟನೆಯ ಆಯೋಜಕರು ನ್ಯೂಸ್ 18ಗೆ ತಿಳಿಸಿದ್ದಾರೆ.

MAshok Kumar | news18-kannada
Updated:January 8, 2020, 9:16 PM IST
ಸಿಎಎ ವಿರೋಧಿಸಿ ರಸ್ತೆಗಿಳಿದ ದೆಹಲಿಯ ಪ್ರತಿಷ್ಟಿತ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಗಳು; ಕೇಂದ್ರದ ವಿರುದ್ಧ ಘೋಷಣೆ
ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ನಿರತರಾಗಿರುವ ಸೇಂಟ್ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಗಳು.
  • Share this:
ದೆಹಲಿ (ಜನವರಿ 08); ಪೌರತ್ವ ತಿದ್ದುಪಡಿ, ಪೌರತ್ವ ನೋಂದಣಿ ಕಾಯ್ದೆ ವಿರೋಧಿಸಿ ಹಾಗೂ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಸೇಂಟ್ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಗಳು ಇಂದು ಸ್ವಯಂ ಪ್ರೇರಿತವಾಗಿ ತರಗತಿಗಳನ್ನು ಭಹಿಷ್ಕರಿಸಿದ್ದಾರೆ. ಅಲ್ಲದೆ, ಆಜಾದಿ ಘೋಷಣೆಗಳನ್ನು ಕೂಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.

ತರಗತಿಗಳನ್ನು ಭಹಿಷ್ಕರಿಸಿದ ಪ್ರತಿಭಟನಾಕಾರರು ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಕಟ್ಟಡಕ್ಕೆ ಮೆರವಣಿಗೆ ನಡೆಸಿದರು. ಈ ವೇಳೆ ಕಲಾ ವಿಭಾಗದ ಎಲ್ಲಾ ವಿದ್ಯಾರ್ಥಿಗಳೂ ಸಹ ಪ್ರತಿಭಟನೆಗೆ ಮುಂದಾದರು. ಅಲ್ಲದೆ, ಸಿಎಎ ಎನ್ಆರ್​ಸಿ ದೇಶದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂಬ ಭಿತ್ತಿಪತ್ರಗಳನ್ನು ಹಿಡಿದು ಕ್ರಾಂತಿ ಕವಿ ಫೈಜ್ ಅವರ ಹಾಡುಗಳನ್ನು ಹಾಡುವ ಮೂಲಕ ಪ್ರತಿಭಟಿಸಿದ್ದಾರೆ.


ಆದರೆ, ಈ ಪ್ರತಿಭಟನೆ ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆಯೇ ಹೊರತು ಯಾವುದೇ ರಾಜಕೀಯ ಪಕ್ಷದ ಸಂಘಟನೆಯ ಜೊತೆಗೆ ಸಂಬಂಧವಿಲ್ಲ. ಇಡೀ ದೇಶ ಸಿಎಎ ಎನ್ಆರ್​ಸಿ ವಿರುದ್ಧ ದ್ವನಿ ಎತ್ತಿದ್ದು, ಈ ದ್ವನಿಗೆ ವಿದ್ಯಾರ್ಥಿಗಳು ಶಕ್ತಿ ತುಂಬಲು ಮುಂದಾಗಿದ್ದಾರೆ ಎಂದು ಪ್ರತಿಭಟನೆಯ ಆಯೋಜಕರು ನ್ಯೂಸ್ 18ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಅಮೆರಿಕ-ಇರಾನ್ ಸೇನಾ ಬಲಾಬಲವೇನು?; ಚುನಾವಣಾ ಸಂದರ್ಭಗಳಲ್ಲೇ ಯುದ್ಧ ನಡೆಯುವುದೇಕೆ? ಇಲ್ಲಿದೆ ಡೀಟೈಲ್ಸ್
Youtube Video
Published by: MAshok Kumar
First published: January 8, 2020, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories