ಅಪರೂಪದ ಬೆಳವಣಿಗೆ; ರಾಜ್ಯಸಭೆ ಭಾಷಣದಲ್ಲಿ ಪ್ರಧಾನಿ ಮೋದಿ ಬಳಸಿದ ಪದ ಕಡತದಿಂದ ಹೊರಕ್ಕೆ

ಪ್ರಧಾನಿಗಳ ಭಾಷಣದ ಪದಗಳನ್ನು ಕಡತದಿಂದ ತೆಗೆದುಹಾಕುವುದು ಅಪರೂಪದ ಬೆಳವಣಿಗೆಯಾಗಿದೆ. 2018ರಲ್ಲಿಯೂ ಒಮ್ಮೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಟೀಕೆ ಮಾಡುವಾಗ ಬಳಸಿದ್ದ ಪದವನ್ನು ಕಡತದಿಂದ ತೆಗೆದುಹಾಕಲಾಗಿತ್ತು. 

ಪ್ರಧಾನಿ ಮೋದಿ.

ಪ್ರಧಾನಿ ಮೋದಿ.

 • Share this:
  ನವದೆಹಲಿ: ಪ್ರಧಾನಿ ಮೋದಿ ಅವರು ರಾಜ್ಯಸಭೆಯಲ್ಲಿ ಭಾಷಣದಲ್ಲಿ ಬಳಸಲಾದ ಪದವನ್ನು ಕಡತದಿಂದ ಹೊರತೆಗೆದ ಅಪರೂಪದ ಬೆಳವಣಿಗೆ ನಡೆದಿದೆ.

  ಗುರುವಾರ ಪ್ರಧಾನಿ ಮೋದಿ ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನ ನಿರ್ಣಯ ಭಾಷಣದ ಚರ್ಚೆ ವೇಳೆ ಬಳಸಿದ ಪದವನ್ನು ಕಡತದಿಂದ ತೆಗೆಯುವಂತೆ ಸಭಾಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಎರಡು ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

   

  ಅದೇ ರೀತಿ ಎನ್​ಪಿಆರ್​ ಕುರಿತಾಗಿ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್​ನ ಗುಲಾಂ ನಬಿ ಆಜಾದ್ ಆಡಿದ ಪದವನ್ನು ಕಡತದಿಂದ ತೆಗೆಯುವಂತೆ ಸಭಾಪತಿ ಸೂಚನೆ ನೀಡಿದ್ದಾರೆ.

  ಪ್ರಧಾನಿಗಳ ಭಾಷಣದ ಪದಗಳನ್ನು ಕಡತದಿಂದ ತೆಗೆದುಹಾಕುವುದು ಅಪರೂಪದ ಬೆಳವಣಿಗೆಯಾಗಿದೆ. 2018ರಲ್ಲಿಯೂ ಒಮ್ಮೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಟೀಕೆ ಮಾಡುವಾಗ ಬಳಸಿದ್ದ ಪದವನ್ನು ಕಡತದಿಂದ ತೆಗೆದುಹಾಕಲಾಗಿತ್ತು.

  ಇದನ್ನು ಓದಿ: ದೆಹಲಿ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಎಎಪಿಗೆ ಚಿಕ್ಕ ರಾಜ್ಯದ ಗೆಲುವು ಯಾವ್ಯಾವ ಕಾರಣಕ್ಕೆ ಮುಖ್ಯ?

  ಎನ್​ಪಿಆರ್​ ಕುರಿತು ಕಾಂಗ್ರೆಸ್​ ಆರೋಪ ವಿಚಾರವಾಗಿ ಮಾತನಾಡಿದ ಪ್ರಧಾನಿ ಮೋದಿ ಎನ್​ಪಿಆರ್​ಅನ್ನು ಬಲವಾಗಿ ಸಮರ್ಥಿಸಿಕೊಂಡರು. ವಿರೋಧ ಪಕ್ಷಗಳು ಸರ್ಕಾರವನ್ನು ಗುರಿಯನ್ನಾಗಿಸಿಕೊಂಡು ಕಲ್ಯಾಣ ಯೋಜನೆಯನ್ನು ವಿರೋಧಿಸುತ್ತಿವೆ. ಎನ್​ಪಿಆರ್ ವಿಷಯದಲ್ಲಿ ಕಾಂಗ್ರೆಸ್ ಯೂಟರ್ನ್​ ಹೊಡೆದಿದೆ. ಅದೇ ಪಕ್ಷ 2010ರಲ್ಲಿ ಎನ್​ಪಿಆರ್ ತಂದಿತ್ತು. 2015ರಲ್ಲಿ ಅದನ್ನು ಪರಿಷ್ಕರಿಸಲಾಗಿತ್ತು ಎಂದು ಹೇಳಿದ ಮೋದಿ ಅದಕ್ಕೆ ಸಂಬಂಧಿಸಿದ್ದ ಫೋಟೋಗಳು ಮತ್ತು ಬಯೋಮೆಟ್ರಿಕ್ ದತ್ತಾಂಶಗಳನ್ನು ನೀಡಿದ್ದರು.
  First published: