ರಾಜಸ್ಥಾನದ (Rajasthan) ಬನ್ಸರಾ ಜಿಲ್ಲೆಯಲ್ಲಿ (District) ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ವ್ಯಕ್ತಿಯನ್ನು (Person) ಆಂಬ್ಯುಲೆನ್ಸ್ (Ambulance) ನಲ್ಲಿ ಕರೆದೊಯ್ಯುತ್ತಿದ್ದಾಗ ಇಂಧನ (Fuel) ಖಾಲಿಯಾಗಿದೆ. ಈ ವೇಳೆ ರೋಗಿಯು (Patient) ಮಾರ್ಗ ಮಧ್ಯದಲ್ಲೇ (Death) ಮೃತಪಟ್ಟಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಮನೆಯ ಸದಸ್ಯನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ತೆಗೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಈ ಮಧ್ಯೆ ಆಂಬ್ಯುಲೆನ್ಸ್ ಡೀಸೆಲ್ ಖಾಲಿಯಾಗಿದ್ದಕ್ಕೆ, ಆಂಬ್ಯುಲೆನ್ಸ್ ನ್ನು ಕುಟುಂಬ ಸದಸ್ಯರು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜಸ್ಥಾನದಲ್ಲಿ ಡೀಸೆಲ್ ಇಲ್ಲದ್ದರಿಂದ ಆಂಬ್ಯುಲೆನ್ಸ್ ನಲ್ಲೇ ರೋಗಿಯ ಸಾವು
ರಾಜಸ್ಥಾನದ ಬನ್ಸರಾ ಜಿಲ್ಲೆಯ ದಾನ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಇಂಧನ ಖಾಲಿಯಾಗಿ ಚಲಿಸದೇ ರೋಗಿಯು ವಾಹನದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಘೋಡಿ ತೇಜ್ ಪುರದ ಭಾನ್ ಪುರ ಗ್ರಾಮದ ಹತ್ತಿರ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ತೇಜ್ಪಾಲ್ ಎಂಬ ವ್ಯಕ್ತಿ ತನ್ನ ಮಗಳನ್ನು ನೋಡಲು ಹೋಗಿದ್ದ. ಆಕೆ ಅತ್ತೆಯ ಮನೆಯಲ್ಲಿ ಇದ್ದಳು. ಆಗ ತೇಜ್ ಪಾಲ್ ಅವರ ಆರೋಗ್ಯ ಏಕಾಏಕಿ ಹದಗೆಟ್ಟಿತ್ತು. ತೇಜ್ ಪಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕುಟುಂಬಸ್ಥರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ರು.
ಆದ್ರೆ 108 ಆಂಬ್ಯುಲೆನ್ಸ್ ಬೇಗ ಬರದೇ, ಸುಮಾರು ಒಂದು ಗಂಟೆ ತಡವಾಗಿ ಬಂದಿತ್ತು. ಅಷ್ಟೇ ಅಲ್ಲದೇ ರೋಗಿ ತೇಜ್ ಪಾಲ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಆಂಬ್ಯುಲೆನ್ಸ್ ಇಂಧನ ಖಾಲಿಯಾಗಿದೆ.
ಆಂಬ್ಯುಲೆನ್ಸ್ ಡೀಸೆಲ್ ಖಾಲಿಯಾಗಿದೆ ಅಂತಾ ಚಾಲಕ ಕುಟುಂಬಸ್ಥರಿಗೆ ಹೇಳಿದ್ದಾನೆ. ಜೊತೆಗೆ ಡೀಸೆಲ್ ತರುವಂತೆ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಆದ್ರೆ ಡೀಸೆಲ್ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಯಾಕಂದ್ರೆ ರೋಗಿ ತೇಜ್ ಪಾಲ್ ಆಂಬ್ಯುಲೆನ್ಸ್ ನಲ್ಲೇ ಉಸಿರು ಚೆಲ್ಲಿದ್ದಾರೆ.
ಆಂಬ್ಯುಲೆನ್ಸ್ ನಲ್ಲೇ ನರಳಾಡುತ್ತಾ ಸಾವನ್ನಪ್ಪಿದ ರೋಗಿ ತೇಜ್ ಪಾಲ್
ಹೀಗೆ ಆಂಬುಲೆನ್ಸ್ ನಲ್ಲಿ ಇಂಧನ ಕೊರತೆಯಿಂದ ರೋಗಿ ತೇಜ್ ಪಾಲ್ ಸಾವನ್ನಪ್ಪಿದ್ದಾರೆ. ರೋಗಿಯನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ನಡೆದ ಅನಾಹುತ ಕುಟುಂಬಸ್ಥರನ್ನು ಕಂಗಾಲು ಮಾಡಿದೆ. ಮನೆಯ ಸದಸ್ಯನನ್ನ ಕಳೆದುಕೊಂಡು ಆಕ್ರಂದನ ಮುಗಿಲು ಮುಟ್ಟಿದೆ.
ಸಂಬಂಧಿಕರ ಪ್ರಕಾರ, ದಾರಿಯಲ್ಲಿ ಇಂಧನ ಖಾಲಿಯಾಯಿತು. ಇದಾದ ಬಳಿಕ ರೋಗಿ ಸಂಬಂಧಿಕರು ಆಂಬ್ಯುಲೆನ್ಸ್ ನ್ನು ತಳ್ಳಿಕೊಂಡು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ. ಆದರೆ ರೋಗಿ ತೇಜ್ ಪಾಲ್ ಆಂಬ್ಯುಲೆನ್ಸ್ ನಲ್ಲೇ ಸಾವನ್ನಪ್ಪಿದ್ದರು. ದಾರಿಯಲ್ಲಿ ಡೀಸೆಲ್ ಖಾಲಿಯಾಗಿದ್ದೇ ರೋಗಿ ತೇಜ್ ಪಾಲ್ ಸಾವಿಗೆ ಕಾರಣ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ.
ಡೀಸೆಲ್ ಹಾಕಿದ್ರೂ ಆಂಬ್ಯುಲೆನ್ಸ್ ಸ್ಟಾರ್ಟ್ ಆಗಿಲ್ಲ
ಚಾಲಕ, ರೋಗಿಯ ಸಂಬಂಧಿಕರಿಗೆ 500 ರೂ ಕೊಟ್ಟು ಡೀಸೆಲ್ ತರುವಂತೆ ಹೇಳಿದ್ದಾನೆ. ಆಗ ಆಂಬ್ಯುಲೆನ್ಸ್ ರಸ್ತೆಯಲ್ಲೇ ನಿಂತಿತ್ತು. ಸಂಬಂಧಿಕರು ಬನ್ಸರಾದಿಂದ ಡೀಸೆಲ್ ತಂದು ಹಾಕಿದ್ರು. ಆದ್ರೂ ಸಹ ಆಂಬ್ಯುಲೆನ್ಸ್ ಸ್ಟಾರ್ಟ್ ಆಗಿಲ್ಲ. ನಂತರ ಸಂಬಂಧಿಕರು ತಡ ಮಾಡುವುದು ಬೇಡವೆಂದುಕೊಂಡು ಆಂಬ್ಯುಲೆನ್ಸ್ ಅನ್ನು ಆಸ್ಪತ್ರೆ ಕಡೆಗೆ ತಳ್ಳಿಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.
ಇದನ್ನೂ ಓದಿ: ಕೃಷಿ ತ್ಯಾಜ್ಯ ಸುಡುವಿಕೆಗೆ ಪರಿಹಾರವೇನು? ಇದಕ್ಕೆ ಚೀನಾ, ಉಗಾಂಡಾದ ರೈತರು ಏನ್ಮಾಡ್ತಾರೆ?
ಆಮೇಲೆ ಆಂಬ್ಯುಲೆನ್ಸ್ ಚಾಲಕ ಮತ್ತೊಂದು ಆಂಬ್ಯುಲೆನ್ಸ್ ಗೆ ಕರೆ ಮಾಡಿ, ಸ್ಥಳಕ್ಕೆ ಕರೆಯಿಸಿದ್ದಾನೆ. ರೋಗಿಯನ್ನು ಬೇರೆ ಆಂಬ್ಯುಲೆನ್ಸ್ ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಅಷ್ಟರಲ್ಲಾಗಲೇ ತಡವಾಗಿ ಹೋಗಿತ್ತು. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಮತ್ತು ಚಿಕಿತ್ಸೆ ಸಿಗದೇ ರೋಗಿ ತೇಜ್ ಪಾಲ್ ಮೃತಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ