BJP Hate Speech| 'ಮತಾಂತರಿಗಳ ತಲೆ ತೆಗೆಯಿರಿ': ಛತ್ತೀಸ್​ಗಢದ ಬಿಜೆಪಿ ನಾಯಕರ ವೇದಿಕೆಯಲ್ಲಿ ಕೋಮು ದ್ವೇಷ ಭಾಷಣ!

ನಾನೊಬ್ಬ ಸಂತ. ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಮನೆಯಲ್ಲಿ ಲಾಠಿ ಇಟ್ಟುಕೊಳ್ಳಿ, ನಮ್ಮ ಹಳ್ಳಿಗಳಲ್ಲಿ ಜನರು ಕೈ ಕೊಡಲಿ ಇಟ್ಟಕೊಳ್ಳುತ್ತಾರೆ. ಅವರು ಕೊಡಲಿಗಳನ್ನು ಏಕೆ ಇಟ್ಟುಕೊಳ್ಳುತ್ತಾರೆ ಗೊತ್ತೆ? ಮತಾಂತರಿಗಳ ತಲೆ ತೆಗೆಯಲು. ಹೀಗಾಗಿ ನೀವು ನಿಮ್ಮ ಹತ್ತಿರ ಪರಶು ಇಟ್ಟುಕೊಳ್ಳಿ ಎಂದು ಪರಮಾತ್ಮಾನಂದ ಹೇಳಿದ್ದಾರೆ.

ಕೋಮು ಭಾಷಣ ಮಾಡಿದ ಹಿಂದುತ್ವವಾದಿ ನಾಯಕ ಪರಮಾತ್ಮಾನಂದ.

ಕೋಮು ಭಾಷಣ ಮಾಡಿದ ಹಿಂದುತ್ವವಾದಿ ನಾಯಕ ಪರಮಾತ್ಮಾನಂದ.

 • Share this:
  ಸಾಮಾಜಿಕ ವೇದಿಕೆಯಲ್ಲಿ ಬಿಜೆಪಿ ನಾಯಕರು (BJP Leaders) ದ್ವೇಷ ಭಾಷಣ (Hate Speech) ಮಾಡುವುದು ಹೊಸ ವಿಚಾರ ಏನಲ್ಲ. ಆದರೆ, ಛತ್ತೀಸ್​ಗಢದ ಸ್ವಾಮಿ ಪರಮಾತ್ಮಾನಂದ ಒಂದು ಹೆಜ್ಜೆ ಮುಂದೆ ಹೋಗಿ, "ಮತಾಂತರ ಮಾಡಲು ಬಂದವರ ತಲೆ ತೆಗೆಯಿರಿ" ಎಂದು ಹೇಳುವ ಮೂಲಕ ಮತೀತ ದ್ವೇಷ ಹರಡಲು ಯತ್ನಿಸಿದ್ದಾರೆ. ವೈರಲ್ ಆಗಿರುವ (Viral Video) ವಿಡಿಯೋದಲ್ಲಿ  ಪರಮಾತ್ಮಾನಂದ (Paramatmananda), "ನಾನು ಸಂತನಾಗಿದ್ದರೂ ದ್ವೇಷವನ್ನು ಹರಡುತ್ತಿದ್ದೇನೆ ಎಂದು ನೀವು ಹೇಳಬಹುದು. ಆದರೆ ಕೆಲವೊಮ್ಮೆ ಬೆಂಕಿಯನ್ನು ಹೊತ್ತಿಸುವುದು ಮುಖ್ಯ. ನಾನು ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಮನೆ, ರಸ್ತೆ, ನೆರೆಹೊರೆ, ಹಳ್ಳಿಗೆ ಯಾರೇ ಬಂದರು ಅವರನ್ನು ಕ್ಷಮಿಸಬೇಡಿ ತಲೆ ತೆಗೆಯಿರಿ’ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

  ಬಿಜೆಪಿ ನಾಯಕರಿದ್ದ ವೇದಿಕೆಯಲ್ಲಿ ಕೋಮು ದ್ವೇಷ ಭಾಷಣ:

  ಸಮಾನ ಮನಸ್ಕ ಹಿಂದುತ್ವವಾದಿಗಳ ಒಕ್ಕೂಟ, ಸರ್ವ ಸನಾತನ ಹಿಂದು ರಕ್ಷಾ ಮಂಚ್ ಅಕ್ಟೋಬರ್‌ 1ರಂದು ಆಯೋಜಿಸಿದ್ದ ‘ಧಾರ್ಮಿಕ ಮತಾಂತರ ನಿಲ್ಲಿಸಿ’ (ಬಂದ್‌ ಕರೋ ಧರ್ಮಾಂತರನ್‌) ಪ್ರತಿಭಟನೆಯಲ್ಲಿ ಸ್ವಾಮಿ ಪರಮಾತ್ಮಾನಂದ ಈ ದ್ವೇಷ ಭಾಷಣ ಮಾಡುವಾಗ ಛತ್ತೀಸ್ ಗಡದ ಬಿಜೆಪಿಯ ಪ್ರಭಾವಿ ನಾಯಕರಾದ ರಾಮ್ವಿಚಾರ್ ನೇತಮ್, ನಂದಕುಮಾರ್ ಸಾಯಿ ಮತ್ತು ಬಿಜೆಪಿಯ ವಕ್ತಾರ ಅನುರಾಗ್ ಸಿಂಗ್ ದೇವ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ವೇದಿಕೆಯಲ್ಲಿ ಹಾಜರಿದ್ದರು ಎಂದು ದಿ ವೈರ್ ವರದಿ ಮಾಡಿದೆ.  ಮತಾಂತರಿಗಳ ತಲೆ ತೆಗೆಯಿರಿ ಎಂದು ಕರೆ:

  ವಿಡಿಯೋದಲ್ಲಿ, "ನಾನೊಬ್ಬ ಸಂತ, ಹೆದರುವುದಿಲ್ಲ. ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಮನೆಯಲ್ಲಿ ಲಾಠಿ ಇಟ್ಟುಕೊಳ್ಳಿ, ನಮ್ಮ ಹಳ್ಳಿಗಳಲ್ಲಿ ಜನರು ಕೈ ಕೊಡಲಿ ಇಟ್ಟಕೊಳ್ಳುತ್ತಾರೆ. ಅವರು ಕೊಡಲಿಗಳನ್ನು ಏಕೆ ಇಟ್ಟುಕೊಳ್ಳುತ್ತಾರೆ ಗೊತ್ತೆ? ಮತಾಂತರಿಗಳ ತಲೆ ತೆಗೆಯಲು. ಹೀಗಾಗಿ ನೀವು ನಿಮ್ಮ ಹತ್ತಿರ ಪರಶು ಇಟ್ಟುಕೊಳ್ಳಿ" ಎಂದು ಕೋಮು ದ್ವೇಷ ಕಾರಿದ್ದಾರೆ.

  ಮುಂದುವರೆದು, "ನೀವೇಕೆ ಬಾವಿಗಾಗಿ ಸಾಗರವನ್ನು ತೊರೆಯುತ್ತೀರಿ? ಎಂದು ಮತಾಂತರಗೊಂಡ ಕ್ರೈಸ್ತರೊಂದಿಗೆ ಮೊದಲು ಸೌಜನ್ಯದೊಂದಿಗೆ ಕೇಳಲು ಬಯಸುತ್ತೇನೆ. ಬೇಡ ಎನ್ನುತ್ತೇನೆ, ಕೊನೆಗೆ ಕೊಲ್ಲುತ್ತೇನೆ ಎಂದು ನಿಲ್ಲು, ಪ್ರತಿಭಟಿಸು, ಕೊಲ್ಲು (ರೊಕೊ, ಫಿರ್ ಟೊಕೊ, ಫಿರ್ ಥೋಕೊ) ನಿಯಮವನ್ನು ಪಾಲಿಸಿ" ಎಂದಿದ್ದಾರೆ.

  ವೀಡಿಯೋದಲ್ಲಿ, ಮಾಜಿ ಸಂಸದೆ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಮಾಜಿ ಅಧ್ಯಕ್ಷ ನಂದ ಕುಮಾರ್ ಸಾಯಿ ಪರಮಾತ್ಮಾನಂದರ ಭಾಷಣಕ್ಕೆ ನಗುತ್ತಾ, ಚಪ್ಪಾಳೆ ತಟ್ಟುವುದು, ಅವರ ಮಾತುಗಳಿಗೆ ಒಪ್ಪಿಗೆ ಸೂಚಿಸಿರುವಂತೆ ಕಾಣುವುದನ್ನು ನೋಡಬಹುದು. ವೇದಿಕೆಯಲ್ಲಿ ನಾಯಕರೆಲ್ಲರೂ ಬಿಲ್ಲು, ಬಾಣ ಮತ್ತು ಈಟಿಯೊಂದಿಗೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.

  ಇದನ್ನೂ ಓದಿ: Yogi Adityanath| ಭಯೋತ್ಪಾದನೆಯ ಬೇರುಗಳನ್ನು ಕಲಂ 370 ಹೆಸರಲ್ಲಿ ಕಾಂಗ್ರೆಸ್ 1952ರಲ್ಲಿ ನೆಟ್ಟಿತ್ತು; ಯೋಗಿ ಆದಿತ್ಯನಾಥ್

  ಪರಮಾತ್ಮಾನಂದರ ಛತ್ತೀಸ್ ಗಡದ ಪ್ರಮುಖ ಹಿಂದುತ್ವವಾದಿ ನಾಯಕ:

  ಸಂಸ್ಕೃತ ಮಂಡಳಿಯ ಮಾಜಿ ಮುಖ್ಯಸ್ಥ ಪರಮಾತ್ಮಾನಂದರ ಛತ್ತೀಸ್ ಗಡದ ಪ್ರಮುಖ ಹಿಂದುತ್ವವಾದಿ ನಾಯಕರಾಗಿದ್ದು, ಅಲ್ಪಸಂಖ್ಯಾತರ ವಿರುದ್ಧ ಹಿಂಸಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಈ ಹಿಂದೆ ಹಸು ಕಳ್ಳ ಸಾಗಣೆದಾರರನ್ನು ಕೊಲ್ಲುವವರನ್ನು ಅಭಿನಂದಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. 2017ರಲ್ಲಿ ‘ಗೋವುಗಳನ್ನು ಕೊಲ್ಲುವವರನ್ನು ಗಾಜಿನ ಗುಂಡುಗಳಿಂದ ಹೊಡೆದು ಸಾಯಿಸಬೇಕು’ ಎಂದು ಹೇಳಿಕೆ ನೀಡಿದ್ದರು.

  ಇದನ್ನೂ ಓದಿ: PM Modi: ಬೆದರುಬೊಂಬೆಗೆ ಮೋದಿ-ಅಮಿತ್ ಶಾ ಚಿತ್ರ ಅಂಟಿಸಿದ ವ್ಯಕ್ತಿ, ವಾಟ್ಸಪ್ ಸ್ಟೇಟಸ್​ನಿಂದ ನೇರ ಜೈಲಿಗೆ!

  ಸಮಾನ ಮನಸ್ಕ ಹಿಂದುತ್ವವಾದಿಗಳ ಒಕ್ಕೂಟ ಸರ್ವ ಸನಾತನ ಹಿಂದು ರಕ್ಷಾ ಮಂಚ್, ಸುಕ್ಮಾದ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಸಲ್ಲಿಸಿದ್ದು, ಕಾನೂನು ಬಾಹಿರ’ ಧಾರ್ಮಿಕ ಮತಾಂತರವನ್ನು ತಡೆಗಟ್ಟಲು, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಹಾಗೂ ಇತ್ತೀಚೆಗೆ ಮತಾಂತರಗೊಂಡ ಬುಡಕಟ್ಟು ಜನರ ಮೇಲೆ ಮೇಲೆ ಕಣ್ಣಿಡುವಂತೆ ಮನವಿ ಮಾಡಿತ್ತು.
  Published by:MAshok Kumar
  First published: