ಮಹಾರಾಷ್ಟ್ರ: ಮದುವೆ (Marriage) ಎಲ್ಲರ ಜೀವನದಲ್ಲೂ ಅತಿ ಮುಖ್ಯವಾದ ಘಟ್ಟ. ಜೀವನದ ಅತಿ ದೊಡ್ಡ ತಿರುವು. ಮದುವೆ ಹೇಗೆ ಬೇಕಾದ್ರೂ ಜೀವನವನ್ನು ಬದಲಾಯಿಸಬಹುದು. ಎಲ್ಲರಿಗೂ ತಮ್ಮ ಮದುವೆ ಇದೇ ರೀತಿ ಆಗಬೇಕು. ಸಂಗಾತಿ ಈ ರೀತಿಯ ಗುಣಗಳನ್ನು ಹೊಂದಿರಬೇಕು ಎಂದು ಏನೇನೋ ಕನಸು (Dream) ಇಟ್ಟುಕೊಂಡಿರುತ್ತಾರೆ. ಆ ಕನಸು ಕೆಲವರಿಗೆ ಈಡೇರುತ್ತೆ. ಇನ್ನೂ ಕೆಲವರಿಗೆ ಅದು ಕನಸಾಗಿ ಉಳಿಯುತ್ತೆ. ಇನ್ನೂ ಎಷ್ಟೋ ಗಂಡುಗಳಿಗೆ ಹೆಣ್ಣೇ ಸಿಗುವುದಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಹೋಗಿರ್ತಾರೆ. ಮದುವೆ ಸಹವಾಸ ಬೇಡಪ್ಪ ಎನ್ನೋ ಮಟ್ಟಿಗೆ ಹೋಗಿರ್ತಾರೆ. ಆದ್ರೆ ಇಲ್ಲೊಬ್ಬ ಅಸಾಮಿಯನ್ನು ಎರೆಡೆರೆಡು ಹೆಣ್ಣು ಮಕ್ಕಳು ಒಟ್ಟಿಗೆ ಮದುವೆ ಆಗಿದ್ದಾರೆ. ಹೌದು ಮಹಾರಾಷ್ಟ್ರದ (Maharashtra) ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್ನಲ್ಲಿ ಅವಳಿ ಸಹೋದರಿಯರು (Twin Sisters) ಒಬ್ಬನನ್ನೇ ಮದುವೆ ಆಗಿದ್ದಾರೆ.
ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ಮದುವೆಯೊಂದು ನಡೆದಿದೆ. ಮಾಮೂಲಿ ಮದುವೆ ಆಗಿದ್ರೆ, ನಾವು ನಿಮಗೆ ತಿಳಿಸಬೇಕಾದ ಅವಶ್ಯಕತೆ ಇರಲಿಲ್ಲ. ಆದ್ರೆ ಇದು ಅಪರೂಪದ ಮದುವೆ. ಯಾಕಂದ್ರೆ ಅವಳಿ ಸಹೋದರಿಯರು ಒಂದೇ ಹುಡುಗನ ಜೊತೆ ಹೊಸ ಪಯಣ ಶುರು ಮಾಡಿದ್ದಾರೆ. ಇದಕ್ಕೆ 2 ಮನೆಯವರು ಒಪ್ಪಿಗೆ ಸೂಚಿಸಿರುವುದು ಆಶ್ಚರ್ಯದ ಸಂಗತಿ.
ಬಿಟ್ಟಿರಲಾಗದೇ ಈ ನಿರ್ಧಾರ
ಮುಂಬೈನ ಅವಳಿ ಸಹೋದರಿಯರಾದ ಪಿಂಕಿ ಮತ್ತು ರಿಂಕಿ ನೋಡಲು ಒಂದೇ ರೀತಿ ಇದ್ದಾರೆ. ಅಲ್ಲದೇ ಇವರಿಬ್ಬರು ಐಟಿ ಇಂಜಿನಿಯರ್. ಇಬ್ಬರು ಸಹೋದರಿಯರು ಬಾಲ್ಯದಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದಾರೆ. ಯಾವತ್ತೂ ಇಬ್ಬರು ದೂರ ಹೋಗಿದ್ದೇ ಗೊತ್ತಿಲ್ಲ. ಇಬ್ಬರು ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ. ಅದಕ್ಕೆ ಒಬ್ಬನನ್ನೇ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ. ಅಂತೆಯೇ ಅತುಲ್ನನ್ನು ಮದುವೆ ಆಗಲು ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ: Bigg Boss Kannada: ಆರ್ಯವರ್ಧನ್, ರಾಜಣ್ಣ ಇವರಿಬ್ಬರಲ್ಲಿ ಯಾರು ಮುಗ್ಧರು? ಮನೆಯವರು ಹೇಳಿದ್ದೇನು ನೋಡಿ
ಕಾನೂನುಬದ್ಧವೇ ಅಥವಾ ನೈತಿಕವೇ?
ಅವಳಿ ಸಹೋದರಿಯರು ಒಬ್ಬನನ್ನೇ ಮದುವೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಸರಿಯೇ ಎಂಬ ಚರ್ಚೆ ಎದ್ದಿದೆ. ಇದು ಕಾನೂನುಬದ್ಧವೇ ಅಥವಾ ನೈತಿಕವೇ ಎಂದು ಜನ ಪ್ರಶ್ನೆ ಕೇಳ್ತಾ ಇದ್ದಾರೆ. ಅಲ್ಲದೇ ಇಬ್ಬರ ಮನೆಯವರಿಗೆ ಬುದ್ಧಿ ಇಲ್ವಾ ಎಂದು ಕೆಲವರು ಕೇಳ್ತಾ ಇದ್ದಾರೆ.
Two sisters, both IT professionals, from Mumbai marry same man from Akluj village in Solapur, Maharashtra. pic.twitter.com/xsTAaGhNAt
— Love (@LocalBabaji) December 4, 2022
ಅದ್ದೂರಿ ಮದುವೆ ತಂದ ಆಪತ್ತು!
ಡಿಸೆಂಬರ್ 2 ರಂದು ಅತುಲ್ ಜೊತೆ ಪಿಂಕಿ ಮತ್ತು ರಿಂಕಿ ಮದುವೆಯನ್ನು ಮನೆಯವರು ಗ್ರ್ಯಾಂಡ್ ಆಗಿ ಮಾಡಿದ್ದಾರೆ. ಸಹೋದರು ಇಬ್ಬರು ವರನಿಗೆ ಹಾರ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ವರನ ಕಡೆಯವರು ಹುಡುಗನನ್ನು ಮೇಲೆ ಎತ್ತಿಕೊಂಡಿರುತ್ತಾರೆ. ಹುಡುಗಿಯರು ಹಾರ ಹಾಕಲು ಪರದಾಡುತ್ತಿರುತ್ತಾರೆ. ಆಗ ಒಬ್ಬಾಕೆಯನ್ನಯ ಯಾರು ಮೇಲೆತ್ತಿ ಹಾರ ಹಾಕಿಸುತ್ತಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡ್ತಿದೆ. ಇದು ಈಗ ವಿವಾದಕ್ಕೆ ಒಳಗಾಗಿದೆ.
ಇದನ್ನೂ ಓದಿ: Daisy Bopanna Birthday: ಡೈಸಿ ಬೋಪಣ್ಣ ಬರ್ತ್ಡೇ, ಸ್ಯಾಂಡಲ್ವುಡ್-ಬಾಲಿವುಡ್ನಲ್ಲಿ ಮಿಂಚಿದ್ದ ನಟಿ!
ವರನ ವಿರುದ್ಧ ದೂರು ದಾಖಲು
ಈ ವಿಡಿಯೋ ನೋಡಿ ವರನ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅತುಲ್ ವಿರುದ್ಧ ಐಸಿಪಿ ಸೆಕ್ಷನ್ 494 (ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ