ಮುಸ್ಲಿಮರಿಂದ ಮರುನಿರ್ಮಾಣವಾಗುತ್ತಿದೆ ಪುರಾತನ ಶಿವನ ದೇಗುಲ; ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಯ್ತು ಪುಲ್ವಾಮಾ

ಮಹಾ ಶಿವರಾತ್ರಿಯ ಒಳಗೆ ದೇವಸ್ಥಾನದ ಕೆಲಸವನ್ನೆಲ್ಲ ಪೂರ್ಣಗೊಳಿಸಿ, ಹಿಂದುಗಳಿಂದ ಶಿವನಿಗೆ ವಿಶೇಷವಾದ ಪೂಜೆ ಮಾಡಿಸಬೇಕು ಎಂದು ಮುಸ್ಲಿಮರು ಬಯಸಿದ್ದರು. ಆದರೆ, ದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಕಾರಣ ಕೆಲಸಗಳು ಸ್ಥಗಿತಗೊಂಡು ವಿಳಂಬವಾಯಿತು.

sushma chakre | news18
Updated:March 5, 2019, 3:18 PM IST
ಮುಸ್ಲಿಮರಿಂದ ಮರುನಿರ್ಮಾಣವಾಗುತ್ತಿದೆ ಪುರಾತನ ಶಿವನ ದೇಗುಲ; ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಯ್ತು ಪುಲ್ವಾಮಾ
ಪುಲ್ವಾಮಾದಲ್ಲಿ ಮರುನಿರ್ಮಾಣವಾಗುತ್ತಿರುವ ಶಿವನ ದೇವಸ್ಥಾನ
  • News18
  • Last Updated: March 5, 2019, 3:18 PM IST
  • Share this:
ಮುಫ್ತಿ ಇಸ್ಲಾ

ಪುಲ್ವಾಮಾ (ಮಾ. 5): ಧಾರ್ಮಿಕ ಸಾಮರಸ್ಯ ನಿರ್ಮಿಸಲು ದೇಶದಲ್ಲಿ ಕೆಲವರು ಪ್ರಯತ್ನಿಸುತ್ತಿದ್ದರೆ ಇನ್ನು ಕೆಲವರು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯಲು ಪ್ರಯತ್ನಿಸುತ್ತಾರೆ. ಆದರೆ, ನಮ್ಮ ಇಚ್ಛಾಶಕ್ತಿ ಸ್ಥಿರವಾಗಿದ್ದರೆ ಸಾಮರಸ್ಯದ ಮೂಲಕ ಮಾದರಿಯಾಗುವಂತೆ ಜೀವಿಸಬಹುದು ಎಂಬುದನ್ನು ಪುಲ್ವಾಮಾದ 2  ಕುಟುಂಬಗಳು ಸಾಬೀತುಪಡಿಸಹೊರಟಿವೆ

ಕಳೆದ ತಿಂಗಳು ಉಗ್ರರ ದಾಳಿಯಲ್ಲಿ 40 ಯೋಧರು ಪ್ರಾಣವನ್ನು ಕಳೆದುಕೊಂಡಿದ್ದ ಪುಲ್ವಾಮಾ ಈಗ ಬೇರೊಂದು ಕಾರಣದಿಂದ ಸುದ್ದಿಯಲ್ಲಿದೆ. ಇಲ್ಲಿನ ಗ್ರಾಮವೊಂದರಲ್ಲಿ 3 ಶತಮಾನಗಳ ನಂತರ ಮಸೀದಿಯಲ್ಲಿ ಆಸಾನ್​ ಮತ್ತು ದೇವಸ್ಥಾನದಲ್ಲಿ ಗಂಟೆಯ ಶಬ್ದಗಳು ಕೇಳತೊಡಗಿವೆ. ಇದಕ್ಕೆ ಕಾರಣವಾಗಿದ್ದು ಅಚ್ಚನ್​ ಎಂಬ ಹಳ್ಳಿಯ ಹಿಂದು ಮತ್ತು ಮುಸ್ಲಿಂ ಕುಟುಂಬಗಳು.

ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಲಿದೆ ಈ ಊರು:

ಊರು ಎಂದಮೇಲೆ ಹಿಂದು, ಕ್ರೈಸ್ತ, ಮುಸಲ್ಮಾನರು ಇರುವುದು ಸಹಜ. ಹಾಗಾಗಿ, ದೇವಸ್ಥಾನ, ಚರ್ಚ್​, ಮಸೀದಿಗಳೂ ಇರುತ್ತವೆ. ಅದರಲ್ಲೇನು ವಿಶೇಷವಿದೆ? ಎಂದು ನೀವು ಅಂದುಕೊಳ್ಳಬಹುದು. ಆದರೆ, ಈ ಊರಿನಲ್ಲಿ ದೇವಸ್ಥಾನ ಮತ್ತು ಮಸೀದಿಗಳು ಒಂದರ ಪಕ್ಕದಲ್ಲಿ ಒಂದು ಎದ್ದು ನಿಂತಿವೆ. ಆದರೆ, ಪ್ರಾರ್ಥನೆ ಸಲ್ಲಿಸಲು ಬರುವವರಿಂದ ಮಸೀದಿ ತುಂಬಿತುಳುಕುತ್ತಿದ್ದರೆ ಪಕ್ಕದಲ್ಲಿಯೇ ಇದ್ದ ದೇವಸ್ಥಾನ ಯಾವಾಗಲೂ ಬಣಗುಟ್ಟುತ್ತಿತ್ತು. ಇದೀಗ ಅಲ್ಲಿನ ಪರಿಸ್ಥಿತಿ ಮೊದಲಿನಿಂತಿಲ್ಲ.

ಮಲಮಕ್ಕಳ ಜೊತೆ ಸೇರಿ ಗಂಡನನ್ನೇ ಮುಗಿಸಿದ್ದ ಹೆಂಡತಿ ಅರೆಸ್ಟ್​; ಕಂಪನಿ ಮುಖ್ಯಸ್ಥನ ಕೊಲೆ ರಹಸ್ಯ ಬಯಲು

ಹಿಂದು- ಮುಸ್ಲಿಮರ ನಡುವೆ ಇರುವ ಪೂರ್ವಾಗ್ರಹ ಅಭಿಪ್ರಾಯವನ್ನು ಸುಳ್ಳು ಮಾಡಲೆಂಬಂತೆ ಇಲ್ಲಿನ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತ್ ಕುಟುಂಬದವರು ಒಂದಾಗಿದ್ದು, ಮಸೀದಿಯ ಪಕ್ಕದಲ್ಲಿರುವ 80 ವರ್ಷಗಳ ಹಿಂದಿನ ಪುರಾತನ ದೇಗುಲವನ್ನು ಪುನರ್​ ನಿರ್ಮಾಣ ಮಾಡಲು ಮುಂದಾಗಿದ್ದಾರೆ. 1990ರಲ್ಲಿ ಮಿಲಿಟರಿ ಕಾರಣದಿಂದ ಹಿಂದುಗಳು ಇಲ್ಲಿಂದ ಬೇರೆಡೆಗೆ ವಲಸೆ ಹೋದ ನಂತರ ಈ ದೇವಸ್ಥಾನಕ್ಕೆ ಯಾರೂ ಹೋಗುತ್ತಿರಲಿಲ್ಲ. ಹಾಗಾಗಿ, ಪಕ್ಕದಲ್ಲಿಯೇ ಇರುವ ಮಸೀದಿಯಲ್ಲಿ ಪ್ರತಿನಿತ್ಯ ಆಸಾನ್​ ಮೊಳಗುತ್ತಿತ್ತು. ಆದರೆ, ಈ ಪುರಾತನ ಹಿಂದು ದೇವಸ್ಥಾನದಲ್ಲಿ ಗಂಟೆಯ ಶಬ್ದ ಕೇಳದೆ ದಶಕಗಳೇ ಕಳೆದಿದ್ದವು.
Loading...

ಕಳೆದ ತಿಂಗಳು ಉಗ್ರರ ದಾಳಿಯಿಂದ 40 ಸಿಆರ್​ಪಿಎಫ್​ ಯೋಧರು ಹುತಾತ್ಮರಾದ ಸ್ಥಳದಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ಈ ಊರಿನಲ್ಲಿ ಇದೀಗ ಹೊಸತನ ಕಾಣಲಾರಂಭಿಸಿದೆ. ನಿಶ್ಯಬ್ದವಾಗಿದ್ದ ದೇವಸ್ಥಾನದಲ್ಲಿ ಗಂಟೆಯ ಶಬ್ದ ಕೇಳತೊಡಗಿದೆ. ಈ ಮೂಲಕ ಆ ಊರಿನಲ್ಲಿ ವಾಸವಾಗಿದ್ದ ಹಿರಿಯರ ಹಳೆಯ ನೆನಪುಗಳು ಮರುಕಳಿಸತೊಡಗಿವೆ.

ಸಾಮಾನ್ಯ ವ್ಯಕ್ತಿ ಈಗ ಕೋಟ್ಯಧಿಪತಿ; ಅದೃಷ್ಟ ಖುಲಾಯಿಸಿದ್ದು ಹೇಗೆ ಅಂತೀರಾ..?

ವಲಸೆ ಹೋದವರು ಮತ್ತೆ ಬರುತ್ತಾರಾ?:

ಇಲ್ಲಿನ ಮುಸ್ಲಿಂ ಅಖಾಫ್​ ಟ್ರಸ್ಟ್​ ಈ ಹಿಂದು ದೇವಸ್ಥಾನದ ಪುನರ್​ನಿರ್ಮಾಣದ ನೇತೃತ್ವವನ್ನು ವಹಿಸಿಕೊಂಡಿರುವುದು ವಿಶೇಷ. ಈ ಊರಿನಲ್ಲಿ 1990ರ ವೇಳೆಗೆ 40 ಕಾಶ್ಮೀರಿ ಕುಟುಂಬಗಳು ವಾಸವಾಗಿತ್ತು. ಅದರ ದುಪ್ಪಟ್ಟು ಸಂಖ್ಯೆಯಷ್ಟು ಮುಸ್ಲಿಂ ಕುಟುಂಬಗಳು ವಾಸವಿದ್ದರು. ಆದರೆ, ಅವರೆಲ್ಲರೂ ಮಿಲಿಟರಿ ಭಯದಿಂದ ವಲಸೆ ಹೋದರು. ಅವರನ್ನು ಊರಿಗೆ ಮತ್ತೆ ವಾಪಾಸ್​ ಕರೆತರಲು ಮುಸ್ಲಿಂ ಕುಟುಂಬಗಳು ಪ್ರಯತ್ನಿಸುತ್ತಿವೆ. ಈ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಪುಲ್ವಾಮಾ ಸಾಕ್ಷಿಯಾಗಿದೆ.

ಶಿವಲಿಂಗದೊಂದಿಗೆ ಮುಸ್ಲಿಂ ಮಕ್ಕಳು


'80 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನದ ವೈಭವವನ್ನು ಮರುಕಳಿಸಬೇಕು ಎಂಬ ಉದ್ದೇಶದಿಂದ ಪುನರ್​ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದೇವೆ. ಈ ಊರಿನಲ್ಲಿ ವಾಸವಾಗಿದ್ದ ನೂರಾರು ಹಿಂದುಗಳು ಪಕ್ಕದ ಊರಿನಲ್ಲಿ ಬೀಡುಬಿಟ್ಟಿದ್ದು, ಅವರಿಗಾಗಿ ದೇವಸ್ಥಾನದಲ್ಲಿ ಮತ್ತೆ ಮಂತ್ರಘೋಷ ಕೇಳಲಿದೆ. ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಸದ್ಯದಲ್ಲೇ ಪಕ್ಕದ ಊರಿನ ಹಿಂದುಗಳನ್ನು ಕರೆಸಿ ವಿಶೇಷ ಪೂಜಾಕಾರ್ಯ ನಿರವೇರಿಸಲಾಗುವುದು. ಸಾಕಷ್ಟು ವರ್ಷಗಳ ನಂತರ ಮತ್ತೆ ಈ ಪ್ರದೇಶದಲ್ಲಿ ಮಂತ್ರಘೋಷ, ಗಂಟೆಯ ಶಬ್ದ ಕೇಳಲಿದೆ' ಎಂದು ಈ ದೇಗುಲದ ನವೀಕರಣದ ಉಸ್ತುವಾರಿ ವಹಿಸಿಕೊಂಡಿರುವ ಭೂಷಣ್​ ಲಾಲ್​ ತಿಳಿಸಿದ್ದಾರೆ.

ಗಂಡನ ಆತ್ಮಕ್ಕೆ ಶಾಂತಿ ನೀಡಲು ಸೇನೆಗೆ ಸೇರಿದ ಹುತಾತ್ಮ ಮೇಜರ್​​ ಮಡದಿ; ಇಲ್ಲಿದೆ ಒಂದು ಅಪರೂಪದ ಪ್ರೇಮಕಥೆ!

ಭಾರತ- ಪಾಕ್​ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರಿಂದ 2 ವಾರಗಳಿಂದ ದೇವಸ್ಥಾನದ ಪುನರ್​ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆ ಕೆಲಸ ಆರಂಭವಾಗಿದ್ದು, ದೇಗುಲದ ಸುತ್ತಲಿನ ಜಾಗವನ್ನು ಸಮತಟ್ಟುಗೊಳಿಸಿ, ಗೇಟುಗಳಿಗೆ ಪೇಂಟ್​ ಮಾಡಲಾಗುತ್ತಿದೆ. ಇನ್ನೊಂದು ವಾರದೊಳಗೆ ದೇವಸ್ಥಾನ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ. ಈ ಶಿವರಾತ್ರಿಯ ಒಳಗೆ ದೇವಸ್ಥಾನದ ಕೆಲಸವನ್ನೆಲ್ಲ ಪೂರ್ಣಗೊಳಿಸಿ, ಹಿಂದುಗಳಿಂದ ಶಿವನಿಗೆ ವಿಶೇಷವಾದ ಪೂಜೆ ಮಾಡಿಸಬೇಕು ಎಂದು ಮುಸ್ಲಿಮರು ಬಯಸಿದ್ದರು. ಆದರೆ, ದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಕಾರಣ ಕೆಲಸಗಳು ಸ್ಥಗಿತಗೊಂಡು ವಿಳಂಬವಾಯಿತು.

1990ಕ್ಕೂ ಮೊದಲು ಮುಸ್ಲಿಮರು ಕೂಡ ಈ ದೇವಸ್ಥಾನಕ್ಕೆ ತೆರಳಿ ಪ್ರಸಾದ ಸ್ವೀಕರಿಸುತ್ತಿದ್ದರು. ಇದೀಗ ಮತ್ತೆ ತಮ್ಮ ಮತ್ತು ಹಿಂದುಗಳ ನಡುವೆ ಹಳೆಯ ಬಂಧ ನಿರ್ಮಾಣವಾಗುವ ನಿರೀಕ್ಷೆಯಲ್ಲಿ ಇಲ್ಲಿನ ಮುಸ್ಲಿಮರಿದ್ದಾರೆ.

First published:March 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...