ನವದೆಹಲಿ(ಆ. 30): ಕಳೆದ ಬಾರಿಯ ಮನ್ ಕೀ ಬಾತ್ನಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಭಾರತದಲ್ಲಿ ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೆಲ ಉದ್ಯಮಗಳನ್ನ ಪ್ರಸ್ತಾಪಿಸಿದ್ದಾರೆ. ಭಾರತದ ಬೊಂಬೆಗಳ ಉದ್ಯಮ ಹಾಗೂ ಭಾರತೀಯ ಕಂಪ್ಯೂಟರ್ ಗೇಮ್ಗಳ ಉದ್ಯಮಕ್ಕೆ ಪುಷ್ಟಿ ನೀಡಿ. ಬೊಂಬೆಗಳ ನಿರ್ಮಾಣಕ್ಕೆ ಒಂದಾಗಿ(Team Up for Toys). ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ನೆರವಾಗಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.
“ಜಾಗತಿಕ ಬೊಂಬೆ ಉದ್ಯಮ 7 ಲಕ್ಷ ಕೋಟಿ ರೂ ಇದೆ. ಇದರಲ್ಲಿ ಭಾರತದ ಪಾಲು ಬಹಳ ಕಡಿಮೆ. ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು… ಸ್ಥಳೀಯ ಬೊಂಬೆಗಳ ಬಗ್ಗೆ ಮಾತನಾಡುವ ಸಮಯ ಬಂದಿದೆ. ಬನ್ನಿ ನಾವೆಲ್ಲರೂ ಆಡೋಣ” ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತರಲಿರುವ ನೂತನ ರಾಷ್ಟ್ರೀಯ ನೀತಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅದರಲ್ಲಿ ಮಕ್ಕಳಿಗೆ ಬೊಂಬೆಗಳ ಮೂಲಕ ಕ್ರಿಯಾಶೀಲತೆ, ಕೌಶಲ್ಯಗಳನ್ನ ಮೂಡಿಸುವ ಚಟುವಟಿಕೆಗಳಿಗೆ ಗಮನ ಕೊಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ರಾತ್ರೋರಾತ್ರಿ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರ ಹತ್ಯೆ
ಭಾರತದಲ್ಲಿ ಕಂಪ್ಯೂಟರ್ ಗೇಮ್ಗಳನ್ನ ಅಭಿವೃದ್ಧಿಪಡಿಸುವಂತೆ ಯುವ ಉದ್ಯಮಿಗಳಿಗೆ ಈ ಸಂದರ್ಭದಲ್ಲಿ ಮೋದಿ ಸಲಹೆ ನೀಡಿದರು. “ಭಾರತೀಯರ ಪ್ರಯೋಗಶೀಲತೆ ಸಾಮರ್ಥ್ಯ ಎಲ್ಲರಿಗೂ ಗೊತ್ತು. ಇದಕ್ಕೆ ಬದ್ಧತೆ ಮತ್ತು ಸೂಕ್ಷ್ಮತೆ ಸಿಕ್ಕರೆ ಈ ಶಕ್ತಿ ಅಗಾಧಗೊಳ್ಳುತ್ತದೆ” ಎಂದವರು ಅಭಿಪ್ರಾಯಪಟ್ಟರು
ಆತ್ಮನಿರ್ಭರ್ ಭಾರತ್ ಆ್ಯಪ್ ಇನೋವೇಶನ್ ಚಾಲೆಂಜ್ನಲ್ಲಿ ಕುಟುಕಿ ಕಿಡ್ಸ್ ಲರ್ನಿಂಗ್ ಆ್ಯಪ್ ಇದೆ. ಇದು ಮಕ್ಕಳಿಗೆ ಆಡಾಡುತ್ತಾ ಹಾಡು, ಕಥೆಗಳ ಮೂಲಕ ಗಣಿತ, ವಿಜ್ಞಾನಗಳನ್ನ ಸುಲಭವಾಗಿ ಕಲಿಸುತ್ತದೆ ಎಂದು ಹೇಳಿದ ಪ್ರಧಾನಿ, ಇದರ ಜೊತೆ ಇನ್ನೂ ಕೆಲ ದೇಶೀಯ ಗೇಮ್ ಆ್ಯಪ್ಗಳನ್ನ ಉಲ್ಲೇಖಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ