Successful Farmer: ಬರಡು ಭೂಮಿಯಲ್ಲಿ ಛಲ ಬಿಡದ ರೈತ! 10 ಕೋಟಿ ಲೀಟರ್ ಹಿಡಿಯುವ ಬಾವಿ, ಒಣಗಿದ್ದ ನೆಲದಲ್ಲಿ ಈಗ ತಿಳಿನೀರು

ತಮ್ಮ ಕಣ್ಣುಗಳನ್ನೇ ನಂಬಲಾಗದಂತೆ ಪವಾಡವೊಂದು ನಡೆಯುತ್ತದೆ. ತಮ್ಮ ಸಮಯ, ಹಣ, ಶ್ರಮವನ್ನು ಈ ಒಂದು ಬಾವಿಗಾಗಿ ವ್ಯಯಿಸಿದ ಅವರು ಸುಂದರವಾದ ಬಾವಿಯೊಂದನ್ನು ತೋಡಿಯೇ ಬಿಟ್ಟಿದ್ದರು. ಆ ಬಾವಿಯ ತುಂಬ ಬೇಕಾದಷ್ಟು, ತೆಗೆದಷ್ಟೂ ಮುಗಿಯದ ತಿಳಿ ನೀರು ತುಂಬಿಕೊಂಡಿತ್ತು.

ಮರಾಠಾವಾಡದ ಬೃಹತ್ ಬಾವಿ

ಮರಾಠಾವಾಡದ ಬೃಹತ್ ಬಾವಿ

  • Share this:
ಕೆಲವೊಮ್ಮೆ ಪ್ರತಿಫಲ ಸಿಗುವ ಯಾವುದೇ ಛಾನ್ಸ್ ಇರದಿದ್ದರೂ ಅಲ್ಲಿ ಉತ್ತಮ ಪ್ರತಿಫಲ ಸಿಗುತ್ತದೆ. ಇದು ಶ್ರಮಕ್ಕೆ ಸಲ್ಲುವ ಗೌರವ. ಶ್ರಮ ಪಟ್ಟು ದುಡಿದರೆ ಎಂದಿಗೂ ಮೋಸವಾಗುವುದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆಯೊಂದು (Example) ಕಂಡು ಬಂದಿದ್ದು ಎಲ್ಲೆಡೆ ವೈರಲ್ ಆಗಿದೆ. ಸ್ವಲ್ಪವೇ ಸ್ವಲ್ಪ ಮಳೆ ಬೀಳುವ, ಅಗೆದಷ್ಟೂ ನೀರು ಸಿಗದ, ಬಹಳಷ್ಟು ರೈತರು ನೀರಿಗಾಗಿ ಹಣ ವ್ಯಯಿಸಿ ನಿರಾಸೆಯಲ್ಲಿ ಹೋದ ಆ ಭೂಮಿಯಲ್ಲಿ (Land) ಅಚ್ಚರಿ, ಪವಾಡ ಪ್ರಕೃತಿಯ ವರ ಎನ್ನುವಂತಹ ದೊಡ್ಡದೊಂದು ಬಾವಿ ಇದೆ. ಇದು ನೋಡೋಕೆ ಕೆರೆಯಂತೆ ಕಂಡರೂ ಇದು ಕೆರೆ ಏನೂ ಅಲ್ಲ. ಇದೂ ಕೂಡಾ ಬಾವಿಯೇ! ಆದರೆ ಇದರ ಗಾತ್ರ ನೋಡಿದರೆ ಇದರಲ್ಲಿ ತೆಪ್ಪವನ್ನೇ ತೇಲಿ ಬಿಡಬಹುದೇನೋ. ಈ ಬಾವಿಯ (Well) ತುಂಬಾ ತಿಳಿಯಾದ, ತಂಪಾದ ಸಿಹಿನೀರಿ. ಭೂಮಿಯ ಒರತೆಯಿಂದ ಸಿಕ್ಕಿರುವ ಅಪ್ಪಟ ನೈಸರ್ಗಿಕ ನೀರು. ನಿಜಕ್ಕೂ ಈ ಬಾವಿ ತೋಡಿದ ರೈತ ಭಾರೀ ಅದೃಷ್ಟ ಮಾಡಿರಬೇಕು ನೋಡಿ.

ಮರಾಠವಾಡವು ಮಹಾರಾಷ್ಟ್ರದ (Maharastra) ಅತ್ಯಂತ ಒಣ ಪ್ರದೇಶಗಳಲ್ಲಿ ಒಂದಾಗಿದೆ. ಭೂ-ಆವೃತವಾಗಿರುವುದರ ಜೊತೆಗೆ, ಇದು ಮಳೆ-ನೆರಳು ಪ್ರದೇಶದಲ್ಲಿ ಬೀಳುತ್ತದೆ, ಅಲ್ಲಿ ಮಳೆಯು ಅಲ್ಲಿಗೆ ತಲುಪುವ ಹೊತ್ತಿಗೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ಇದರ ಪರಿಣಾಮವಾಗಿ ಅಲ್ಪ ಪ್ರಮಾಣದ ಮಳೆ ಮತ್ತು ಆಗಾಗ್ಗೆ ಬರಗಾಲ ಉಂಟಾಗುತ್ತದೆ. ಎಷ್ಟೋ ರೈತರು ತಮ್ಮ ಉಳಿತಾಯದ ಹಣವನ್ನೆಲ್ಲ ನೀರಿಗಾಗಿ ಹೂಳೆತ್ತಲು ವ್ಯಯಿಸಿದ್ದಾರೆ. ತನ್ನ ಬೀಡಿನ ರೈತ ಇದನ್ನು ಹೇಗೆ ಸಾಧ್ಯ ಮಾಡಿದನೆಂದು ಹೇಳುವ ಮೊದಲು ಪ್ರಕೃತಿಯ ಈ ಅದ್ಭುತವನ್ನು ಚೆನ್ನಾಗಿ ನೋಡಿ.

ತೆಗೆದಷ್ಟೂ ಮುಗಿಯದ ನೀರು, ಗಂಗಾ ಮಾತೆಯೇ ಅವತರಿಸಿದ್ದಳು

ಇದು ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ. ಅಗತ್ಯ ಮಳೆಯೂ ಇಲ್ಲದೆ ಈ ಪ್ರದೇಶದಲ್ಲಿ ನೀರು ಸಿಗೋದು ಬಿಡಿ ಏನೇನು ಮಾಡಿದರೂ ಹನಿ ನೀರಿನ ಪಸೆಯೂ ಸಿಗದು. ಆದರೆ ಮಾರುತಿ ಎನ್ನುವ ರೈತ ಇದೇ ಜಾಗದಲ್ಲಿ ತಮ್ಮ ಜೀವಮಾನದ ಎಲ್ಲ ಸಂಪಾದನೆಯನ್ನು ವ್ಯಯಿಸಿ ಒಂದು ಬಾವಿಯನ್ನು ತೋಡುತ್ತಾರೆ.

ಆದರೆ ತಮ್ಮ ಕಣ್ಣುಗಳನ್ನೇ ನಂಬಲಾಗದಂತೆ ಪವಾಡವೊಂದು ನಡೆಯುತ್ತದೆ. ತಮ್ಮ ಸಮಯ, ಹಣ, ಶ್ರಮವನ್ನು ಈ ಒಂದು ಬಾವಿಗಾಗಿ ವ್ಯಯಿಸಿದ ಅವರು ಸುಂದರವಾದ ಬಾವಿಯೊಂದನ್ನು ತೋಡಿಯೇ ಬಿಟ್ಟಿದ್ದರು. ಆ ಬಾವಿಯ ತುಂಬ ಬೇಕಾದಷ್ಟು, ತೆಗೆದಷ್ಟೂ ಮುಗಿಯದ ತಿಳಿ ನೀರು ತುಂಬಿಕೊಂಡಿತ್ತು.

ಲಕ್ಷ ಲಕ್ಷ ಸುರಿದರೂ ಹನಿ ನೀರು ಸಿಗದ ರೈತರ ಪಾಡು

ಸುಭಾಷ್ ಎನ್ನುವವರು ತಮ್ಮ ಜೀವಮಾನದ ಸಂಪಾದನೆಯನ್ನೆಲ್ಲ ಬೋರ್​ವೆಲ್ ತೋಡಲು ಬಳಸಿದರು. ಸುಮಾರು 6 ಲಕ್ಷಗಳನ್ನು ವ್ಯಯಿಸಿ 4 ಬೋರ್​ವೆಲ್​ಗಳನ್ನು ತೋಡಿದ್ದರು. ಇದರಿಂದ 3 ಗಂಟೆಯ ನೀರಿನ ಲಭ್ಯತೆ ಸಿಕ್ಕಿತಷ್ಟೇ. ಬೇರೇನೂ ಇಲ್ಲ. ಮಾಡಿದ ಖರ್ಚು ಕೂಡಾ ಮರಳಿ ಸಿಗಲಿಲ್ಲ. ಕೆಲಸಗಾರರಿಗಾಗಿ ವ್ಯಯಿಸಿದ ಹಣವೂ ಸಿಗಲಿಲ್ಲ ಎನ್ನುತ್ತಾರೆ ಅವರು.

ಮರಾಠವಾಡದಲ್ಲಿ ಇದು ಅತ್ಯಂತ ಕಡಿಮೆ ಮಳೆ ಪಡೆಯುವ ಗ್ರಾಮ

ಮರಾಠವಾಡದಲ್ಲಿ ಇದು ಅತ್ಯಂತ ಕಡಿಮೆ ಮಳೆ ಪಡೆಯುವ ಗ್ರಾಮ. ನೀರಿಲ್ಲದ ಕಾರಣ 60 ರಿಂದ 70ರಷ್ಟು ನಷ್ಟವಾಗುತ್ತದೆ ಎನ್ನುತ್ತಾರೆ ನಾಗ್​​ನಾಥ ಎನ್ನುವ ಇನ್ನೊಬ್ಬ ರೈತ. ಬ್ಯಾಂಕ್​ನ ಲೋನ್ ಕಟ್ಟಲಾಗುವುದಿಲ್ಲ. ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ಕೊನೆಗೆ ಹಣ ಸಾಲದೆ ಸಂಕಷ್ಟದಲ್ಲಿ ಬೀಳಬೇಕಾಗುತ್ತದೆ.

ಇದನ್ನೂ ಓದಿ: Day Outing: ಕೆಲಸದಾಕೆಯನ್ನು ಮಾಲ್, ಶಾಪಿಂಗ್, ಸಲೂನ್​ಗೆ ಕರೆದೊಯ್ದ ಮಾಲೀಕ!

ಮಾರುತಿ ಬಾಸ್​ಗುಡೆ ಎನ್ನುವ ಈ ರೈತನಿಗೆ ಇದೆಲ್ಲರ ಅರಿವಿತ್ತು. ತಮ್ಮ ಸುತ್ತಮುತ್ತಲಿನ ನೀರಿನ ಸಮಸ್ಯೆಗಳನ್ನು ನೋಡಿದ್ದರು. ಆದರೆ ಇವೆಲ್ಲವನ್ನೂ ಎದುರಿಸಿ ರಿಸ್ಕ್ ತೆಗೆದುಕೊಳ್ಳಲು ಮುಂದಾದರು, ಬರೋಬ್ಬರಿ 9 ತಿಂಗಳು ಕೆಲಸ ಮಾಡಿ ಅವರು ಈ ಬಾವಿ ನಿರ್ಮಿಸಿದ್ದಾರೆ. ಅವರ ಪ್ರಕಾರ ಈ ಬಾವಿಯಲ್ಲಿ 10 ಕೋಟಿ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. 80 ಕೆಲಸಗಾರರು ಇದರಲ್ಲಿ ಕೆಲಸ ಮಾಡಿದ್ದಾರೆ. 2 ತಿಂಗಳಿಗೂ ಹೆಚ್ಚು ಕಾಲ ಈ ಬಾವಿಯ ಕಾಂಕ್ರೀಟ್ ಕೆಲಸ ಮಾಡಲಾಗಿತ್ತು.

200 ಫೀಟ್ ಡಯಾಮೀಟರ್​ನ ಬಾವಿ

200 ಫೀಟ್ ಡಯಾಮೀಟರ್ ಹಾಗೂ 41 ಫೀಟ್ ಆಳದ ಬಾವಿಯಲ್ಲಿ ಬೇಸಿಗೆಯಲ್ಲೂ ಅರ್ಧಕ್ಕಿಂತ ಹೆಚ್ಚು ನೀರನ್ನು ಹೊಂದಿರುತ್ತದೆ. ಇದನ್ನು ಅವಲಂಬಿಸಿದ ಯಾರಿಗೂ ಇದು ಮೋಸ ಮಾಡುವುದಿಲ್ಲ. ನೀರಿಗೂ ಕೊರತೆಯಾಗುವುದಿಲ್ಲ. ಈ ಪ್ರದೇಶದ 5ರಿಂದ 10 ಜನರು ಒಟ್ಟಾಗಿ ಕೆಲಸ ಮಾಡಿದೆವು.

ಇದನ್ನೂ ಓದಿ: Relationship: ಅಜ್ಜನನ್ನು ಪ್ರೀತಿಯಿಂದ ತಬ್ಬಿಕೊಂಡ ಪುಟ್ಟ ಮೊಮ್ಮಗಳು! ವೀಡಿಯೊ ವೈರಲ್

ರೈತರ ಆತ್ಮಹತ್ಯೆ ಕಡಿಮೆ ಮಾಡಲು ಇದು ನೆರವಾಯಿತು. ಕಡಿಮೆ ಮಳೆ ಎನ್ನುವುದು ನಿಜಕ್ಕೂ ಸವಾಲಾಗಿತ್ತು. ಈಗ ಇವರ ಬಾಯಿ ಒಂದು ಸೆಲ್ಫೀ ಪಾಯಿಂಟ್ ಆಗಿದೆ. ಜನರು ಬಂದು ಈ ಸುಂದರ ಬಾವಿಯ ಮುಂದೆ ಫೊಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.
Published by:Divya D
First published: