• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Madya Pradesh: ಮಧ್ಯಪ್ರದೇಶದಲ್ಲಿ ಪಂಚಾಯ್ತಿ ಎಲೆಕ್ಷನ್ ಗೆದ್ದವರು ಹೆಂಗಸರಂತೆ, ಪ್ರಮಾಣವಚನ ಸ್ವೀಕರಿಸಿದ್ದು ಅವ್ರ ಗಂಡಂದಿರಂತೆ

Madya Pradesh: ಮಧ್ಯಪ್ರದೇಶದಲ್ಲಿ ಪಂಚಾಯ್ತಿ ಎಲೆಕ್ಷನ್ ಗೆದ್ದವರು ಹೆಂಗಸರಂತೆ, ಪ್ರಮಾಣವಚನ ಸ್ವೀಕರಿಸಿದ್ದು ಅವ್ರ ಗಂಡಂದಿರಂತೆ

ಮಹಿಳೆಯರ ಬದಲು ಪುರುಷರು ಪ್ರಮಾಣ ವಚನ ಸ್ವೀಕರಿಸುತ್ತಿರುವ ದೃಶ್ಯ

ಮಹಿಳೆಯರ ಬದಲು ಪುರುಷರು ಪ್ರಮಾಣ ವಚನ ಸ್ವೀಕರಿಸುತ್ತಿರುವ ದೃಶ್ಯ

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಜೈಸಿ ನಗರ್ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕೆಲವು ಮಹಿಳೆಯರು ಆಯ್ಕೆಯಾಗಿದ್ದರು. ಆದರೆ ಅಲ್ಲಿ ಅವರ ಅಧಿಕಾರದ ಪ್ರಮಾಣ ವಚನವನ್ನು ಅವರ ಗಂಡಂದಿರು ಸ್ವೀಕರಿದ ಘಟನೆ ನಡೆದಿದೆ.

  • Share this:

ಮಹಿಳಾ ಸಬಲೀಕರಣ ಎಂಬುದು ಭಾರತದ ಬಹುದೊಡ್ಡ ಕನಸುಗಳಲ್ಲಿ ಒಂದಾಗಿದೆ. ಅದಕ್ಕೆ ಸರಿಯಾಗಿ ಇತ್ತಿಚಿನ ದಿನಗಳಲ್ಲಿ ಮಹಿಳೆಯರು (Women's) ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ (Politically) ಸದೃಢವಾಗಿದ್ದಾರೆ. ಮತ್ತು ಎಲ್ಲಾ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ(Politics) ಕ್ಷೇತ್ರದಲ್ಲಿ ಮಹಿಳೆಯರು ಪಂಚಾಯಿತಿ (Panchayath) ಸದಸ್ಯರಿಂದ (Members) ಹಿಡಿದು ದೇಶದ ರಾಷ್ಟ್ರಪತಿಯವರೆಗೂ ಮಹಿಳೆಯವರ ಅಸ್ತಿತ್ವವನ್ನು ಕಾಣಬಹುದು. ಮಧ್ಯಪ್ರದೇಶದ (Madya Pradesh) ಪಂಚಾಯಿತಿ ಚುನಾವಣೆಯಲ್ಲಿ ಕೆಲವು ಮಹಿಳೆಯರು ಆಯ್ಕೆಯಾಗಿದ್ದರು. ಆದರೆ ಅಲ್ಲಿ ಅವರ ಅಧಿಕಾರದ ಪ್ರಮಾಣ ವಚನವನ್ನು (Oath) ಅವರ ಗಂಡಂದಿರು ಸ್ವೀಕರಿದ ಘಟನೆ ನಡೆದಿದೆ.


ಪಂಚಾಯತ್ ವೆಬ್ ಸರಣಿಯ ಕಥೆಯಂತಿದೆ ಈ ಘಟನೆ
2020 ರಲ್ಲಿ "ಪಂಚಾಯತ್" ಎಂಬ ಹೆಸರಿನಲ್ಲಿ ಒಂದು ಜನಪ್ರಿಯ ವೆಬ್ ಸರಣಿ ಪ್ರಸಾರವಾಗಿತ್ತು. ಇದನ್ನು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಮಹೋಡಿಯಾ ಗ್ರಾಮದಲ್ಲಿ ಚಿತ್ರಿಕರಿಸಲಾಗಿತ್ತು.


ಮಹಿಳೆಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರು ಕೂಡ ಅಧಿಕಾರವನ್ನು ಮಾತ್ರ ಪುರುಷರು ಚಲಾಯಿಸುವ ಘಟನೆಯನ್ನು ಈ ವೆಬ್ ಸರಣಿ ಒಳಗೊಂಡಿತ್ತು. ಆದರೆ ಇದೀಗ ಆ ವೆಬ್ ಸರಣಿಗೆ ಮಧ್ಯಪ್ರದೇಶದಲ್ಲಿ ನಡೆದ ಘಟನೆಗೆ ಜ್ವಲಂತ ಸಾಕ್ಷಿಯಾಗಿದೆ.


ಇದನ್ನೂ ಓದಿ:  Vice President Salary: ಇಂದು ಆಯ್ಕೆಯಾಗುವ ನೂತನ ಉಪ ರಾಷ್ಟ್ರಪತಿ ಅವರ ತಿಂಗಳ ವೇತನ ಎಷ್ಟು ಗೊತ್ತೇ?


ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದ ಘಟನೆ
ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಜೈಸಿ ನಗರ್ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಸರ್ ಪಂಚ್ ಸೇರಿದಂತೆ ಒಟ್ಟು 21 ಮಂದಿ ಸದಸ್ಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರು. ಇವರಲ್ಲಿ 10 ಮಹಿಳಾ ಸದಸ್ಯರಾಗಿದ್ದಾರೆ.


ಪ್ರಮಾಣ ವಚನ ಸ್ವೀಕರಿಸುವ ವೀಡಿಯೋ ವೈರಲ್
ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳು ಪ್ರಮಾಣ ವಚನ ಸ್ವೀಕರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಆಯ್ಕೆಯಾದ 10 ಮಹಿಳೆಯರಲ್ಲಿ ಕೇವಲ 3 ಮಹಿಳೆಯರು ಮಾತ್ರ ಪ್ರಮಾಣವಚನ ಸ್ವೀಕರಿಸುವುದನ್ನು ಕಾಣಬಹುದು. ಉಳಿದ ಏಳು ಮಂದಿ ಮಹಿಳಾ ಸದಸ್ಯರ ಬದಲಿಗೆ ಪುರುಷರು ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಣಬಹುದಾಗಿದೆ.


ಘಟನೆಯನ್ನು ಸಮರ್ಥಿಸಿಕೊಂಡ ಪಂಚಾಯತ್ ಕಾರ್ಯದರ್ಶಿ
ಈ ಘಟನೆಯ ಕುರಿತು ಪತ್ರಕರ್ತರೊಬ್ಬರು ಜೈಸಿ ನಗರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಆಶಾ ರಾಮ್ ಸಾಹು ಅವರಿಗೆ ಪ್ರಶ್ನಿಸಿದ್ದಾರೆ. ಆದರೆ ಇವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮಹಿಳೆಯರ ಬದಲು ಪುರುಷರು ಪ್ರಮಾಣ ವಚನ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.


"ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 10 ಮಹಿಳೆಯರಲ್ಲಿ ಕೇವಲ ಮೂವರು     ಮಹಿಳೆಯರು ಮಾತ್ರ ಬಂದಿದ್ದಾರೆ. ಆದ್ದರಿಂದ ಉಳಿದ ಮಹಿಳೆಯರ ಬದಲಿಗೆ ಅಲ್ಲಿಗೆ ಬಂದಿದ್ದ ಅವರ ಕುಟುಂಬದ ಪುರುಷ ಸದಸ್ಯರು ಪ್ರಮಾಣ ವಚನ ಬೋಧಿಸಲು ಕಾರಣವಾಯಿತು" ಎಂದು ಆಶಾ ರಾಮ್ ಸಾಹು ಹೇಳಿದರು. ಹಾಗೆಯೇ ಅವರು ವಿಜೇತರ ಬದಲು ಬೇರೆಯವರು ಪ್ರಮಾಣ ವಚನ ಸ್ವೀಕರಿಸಲು ಇಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.


ಪ್ರಮಾಣ ವಚನ ಸ್ವೀಕರಿಸಿದ ಪುರುಷರು
ಮಹಿಳಾ ಜನ ಪ್ರತಿನಿಧಿಗಳ ಬದಲು ಪ್ರಮಾಣ ವಚನ ಸ್ವೀಕರಿಸದ ಪುರುಷರಲ್ಲಿ ಅವರ ಪತಿ,ಸೋದರ ಮಾವ ಮತ್ತು ತಂದೆಯನ್ನು ಕಾಣಬಹುದಾಗಿದೆ.


ದಾಮೋಹ್ ಜಿಲ್ಲೆಯಲ್ಲೂ ಈ ರೀತಿಯ ಘಟನೆ
ಪಕ್ಕದ ದಾಮೋಹ್ ಜಿಲ್ಲೆಯ ಘೈಸಾಬಾದ್ ಗ್ರಾಮ ಪಂಚಾಯತ್‌ನಲ್ಲಿ ಹೊಸದಾಗಿ ಆಯ್ಕೆಯಾದ ಸರಪಂಚ್ (ಎಸ್‌ಸಿ ವರ್ಗದಿಂದ) ಮತ್ತು ಪಂಚಾಯತ್‌ನ 11 ಮಹಿಳಾ ಸದಸ್ಯರ ಬದಲಿಗೆ ಅವರ ಪತಿಯರಿಗೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಪ್ರಮಾಣ ವಚನ ಬೋಧಿಸಿದರು.


ಮಹಿಳೆಯರು ಪ್ರಮಾಣ ವಚನ ಸ್ವೀಕರಿಸುವುದನ್ನು ಖಚಿತ ಪಡಿಸಲು ಆದೇಶ
ದಾಮೋಹ್ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಜಯ್ ಕುಮಾರ್ ಶ್ರೀವಾಸ್ತವ ಅವರು ಚುನಾಯಿತ ಮಹಿಳೆಯರು ಪ್ರಮಾಣ ವಚನ ಸ್ವೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ಹಟ್ಟಾ ಜನಪದ ಪಂಚಾಯತ್ ಗೆ ಆದೇಶ ನೀಡಿದ್ದಾರೆ.


ಇದನ್ನೂ ಓದಿ: Vice Presidential Election 2022: ಜಗದೀಪ್ ಧನಕರ್ vs ಮಾರ್ಗರೇಟ್ ಆಳ್ವ; ಉಪರಾಷ್ಟ್ರಪತಿ ಚುನಾವಣೆ, ರಿಸಲ್ಟ್ ಎರಡೂ ಇಂದೇ


ಮಹಿಳೆಯರು ಆಯ್ಕೆಯಾಗುವ ಗ್ರಾಮ ಪಂಚಾಯ್ತಿಗಳಿಗೆ ಮಾತ್ರ 15 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದ ಎರಡು ತಿಂಗಳ ಬಳಿಕ ಪತ್ನಿ ಬದಲು ಪತಿ ಪ್ರಮಾಣವಚನ ಸ್ವೀಕರಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

Published by:Nalini Suvarna
First published: