ಇಲ್ಲಿ ದೇವಾಲಯವೇ ಶಾಲೆ; ಹಿಂದೂ ಮಕ್ಕಳಿಗೆ ಮುಸ್ಲಿಂರೇ ಶಿಕ್ಷಕರು!

news18
Updated:August 6, 2018, 4:47 PM IST
ಇಲ್ಲಿ ದೇವಾಲಯವೇ ಶಾಲೆ; ಹಿಂದೂ ಮಕ್ಕಳಿಗೆ ಮುಸ್ಲಿಂರೇ ಶಿಕ್ಷಕರು!
ಸಾಂದರ್ಭಿಕ ಚಿತ್ರ
news18
Updated: August 6, 2018, 4:47 PM IST
-ನ್ಯೂಸ್​ 18 ಕನ್ನಡ

ಕರಾಚಿ,(ಆ.06):  ದೇವಾಲಯದೊಳಗೆ ಶಾಲೆ ಇರುವುದು ಸಾಮಾನ್ಯ ಸಂಗತಿಯಲ್ಲ. ಆದರೆ ಇಂತಹ ಅಸಾಮಾನ್ಯ ದೃಶ್ಯವೊಂದು ಪಾಕಿಸ್ತಾನದ ಕರಾಚಿಯಲ್ಲಿ ಕಂಡುಬಂದಿದೆ. ದೇವಸ್ಥಾನದೊಳಗೆ ಶಾಲೆಯೊಂದನ್ನು ನಡೆಸುತ್ತಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಹಿಂದೂ ಮಕ್ಕಳಿಗೆ ಮುಸ್ಲಿಂ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ.

ದಿ ನ್ಯೂಸ್​ ವರದಿಯ ಪ್ರಕಾರ, ಶಾಲೆ ತೆರೆಯಲು ದೇವಸ್ಥಾನದಲ್ಲಿ ಮಾತ್ರ ಸ್ಥಳ ಲಭ್ಯವಿದ್ದುದರಿಂದ ಪ್ರಾರಂಭಿಕ ಮಾನವ ಅಭಿವೃದ್ಧಿ ಸಂಸ್ಥೆಯ ಮೂಲಕ ರೆಹಮಾನ್​ ಕಾಲೋನಿಯ ಹಿಂದೂ ದೇವಾಲಯದಲ್ಲಿ ಶಾಲೆಯನ್ನು ತೆರೆಯಲಾಯಿತು. ಆದಾಗ್ಯೂ, ಎನ್​ಜಿಓ ಶಾಲೆ ತೆರೆಯುವ ಮುನ್ನ ಸ್ಥಳೀಯ ಸಮುದಾಯಗಳ ಅನುಮತಿಯನ್ನು ಕೋರಿತ್ತು.

ಪ್ರಸ್ತುತ ಈ ದೇವಾಲಯದ ಶಾಲೆಯಲ್ಲಿ 93 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರು ಈ ದೇವಾಲಯದೊಳಗಿನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಕಲಿಸಿಕೊಡುತ್ತಾರೆ. ಬಳಿಕ ಆ ಮಕ್ಕಳನ್ನು ನಗರದ ಸರ್ಕಾರಿ ಶಾಲೆಗಳಿಗೆ ಕಳುಹಿಸಲಾಗುತ್ತದೆ.

ರೆಹಮಾನ್​ ಕಾಲೋನಿಯ ಸ್ಥಳೀಯ ಹಿಂದೂ ಸಮುದಾಯವು ಆ ಪ್ರದೇಶದಲ್ಲಿ ಶಾಲೆಯನ್ನು ತೆರೆಯಲು ಹಲವು ಬಾರಿ ಪ್ರಯತ್ನಿಸಿತ್ತು. ಆದರೆ ಪೊಲೀಸರು ಹೆಚ್ಚು ಲಂಚ ಕೇಳಿದ್ದರಿಂದ ಪ್ರಯತ್ನವನ್ನು ಕೈಬಿಟ್ಟಿದ್ದರು.

ವರದಿಗಳ ಪ್ರಕಾರ, ರೆಹಮಾನ್​ ಕಾಲೋನಿಯ ಹಿಂದೂಗಳು ಶುದ್ಧ ಕುಡಿಯುವ ನೀರಿಲ್ಲದೆ, ಶೌಚಾಲಯಗಳಿಲ್ಲದೇ ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಆ ಜನರಿಗೆ ಬೇರೆಡೆಗೆ ತೆರಳುವಂತೆ ಸದಾ ಬೆದರಿಕೆ ಒಡ್ಡುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟಗಳಿದ್ದರೂ ಸಹ ಮುಸ್ಲಿಂ ಸಮುದಾಯವು ಹಿಂದೂ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಆಸಕ್ತಿ ತೋರಿಸುತ್ತಿರುವುದರಿಂದ ಅಲ್ಲಿನ ಹಿಂದೂಗಳು ಸುರಕ್ಷತಾ ಮನೋಭಾವದಲ್ಲಿದ್ದಾರೆ.

ಅಲ್​ ಜಜೀರಾದ ಇತ್ತೀಚಿನ ವರದಿಯ ಪ್ರಕಾರ, ಕರಾಚಿಯಲ್ಲಿರುವ ಹಿಂದೂ ದೇವಾಲಯಗಳು ಮತ್ತು ಐತಿಹಾಸಿಕ ಪ್ರದೇಶಗಳಲ್ಲಿ ಭೂ ಆಕ್ರಮಣ ಹೆಚ್ಚಾಗಿ ಕಂಡುಬಂದಿದೆ. ದೇವಾಲಯಗಳು ಮಾತ್ರವಲ್ಲ, ಐತಿಹಾಸಿಕ ಗಡಿಯಾರ ಗೋಪುರಗಳು, ಮತ್ತು ಶಿಥಿಲಾವಸ್ಥೆಯಲ್ಲಿರುವ ಸಿನಿಮಾ ಥಿಯೇಟರ್​ಗಳು, ಗೋದಾಮುಗಳನ್ನು ತಾತ್ಕಾಲಿಕ ಮಾರುಕಟ್ಟೆಗಳನ್ನಾಗಿ ಬಳಸಲಾಗುತ್ತಿದೆ.
Loading...

ಹೆಚ್ಚಿದ ಜನಸಂಖ್ಯೆ, ಅನಿಯೋಜಿತ ನಗರೀಕರಣ, ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಿಕೊಳ್ಳಲು ಬರದ ಸರ್ಕಾರದ ಬೇಜವಾಬ್ದಾರಿ ವರ್ತನೆಗೆ ಕರಾಚಿಯ ಸೌಂದರ್ಯ ಹಾಳಾಗಿದೆ.

ಅದೇನಿದ್ದರೂ, ಈ ಒಂದು ಚಿಕ್ಕ ಶಾಲೆ  ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಬಂಧ ಬೆಸೆಯುತ್ತದೆ ಎಂದರೆ ತಪ್ಪಾಗಲಾರದು.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...