ನವದೆಹಲಿ: ದೇಶದಲ್ಲಿ (Country) ಟ್ವಿಟ್ಟರ್ (Twitter) ಸಾಮಾಜಿಕ ಜಾಲತಾಣದ (Social Media) ಬಳಕೆಯನ್ನು ಜಗತ್ತಿನ ಬಹುತೇಕ ಜನರು ಬಳಕೆ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿ ಟ್ವಿಟ್ಟರ್ ಕಚೇರಿಗಳು (Indian Twitter Offices) ಒಂದೊಂದಾಗಿ ಬಂದ್ (Close) ಆಗುತ್ತಿವೆ. ಮೂಲಗಳ ಮಾಹಿತಿ ಪ್ರಕಾರ, ಟ್ವಿಟ್ಟರ್ ನ ದೆಹಲಿ ಮತ್ತು ಮುಂಬೈ ಕಚೇರಿಗಳು ಬಾಗಿಲು ಹಾಕುತ್ತಿವೆ ಎಂದಬ ಸುದ್ದಿ ಹೊರ ಬಿದ್ದಿದೆ. ಈಗಾಗಲೇ ಟ್ವಿಟ್ಟರ್ ಕಂಪನಿಯು ಬೆಂಗಳೂರು ಕಚೇರಿ ಮುಚ್ಚಿದೆ. ಈಗ ಮತ್ತಷ್ಟು ಪ್ರದೇಶಗಳ ಕಚೇರಿ ಮೇಲೆ ಕಣ್ಣಿಡಲಾಗಿದ್ದು, ಅಲ್ಲಿಯ ಕಚೇರಿಗಳನ್ನೂ ಸಹ ಮುಚ್ಚುವುದಾಗಿ ಹೇಳಲಾಗಿದೆ. ಟ್ವಿಟ್ಟರ್ ತನಗಾಗುತ್ತಿರುವ ಖರ್ಚು ಮತ್ತು ಹಾನಿ ತಡೆಯಲು ಭಾರತದ ಹಲವು ಪ್ರದೇಶಗಳಲ್ಲಿರುವ ಕಂಪನಿಗಳನ್ನು ಮುಚ್ಚಲು ಮುಂದಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಭಾರತದ ಹಲವು ಪ್ರದೇಶಗಳಲ್ಲಿ ಟ್ವಿಟ್ಟರ್ ಕಚೇರಿಗಳು ಬಂದ್
ಎಲಾನ್ ಮಸ್ಕ್ ಟ್ವಿಟ್ಟರ್ ಸ್ವಾಧೀನ ಮಾಡಿಕೊಂಡಿದ್ದಾರೆ. ಅಂದಿನಿಂದ ಟ್ವಿಟ್ಟರ್ ಕಂಪನಿ ಉದ್ಯೋಗಿಗಳು ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ. ಜೊತೆಗೆ ಅಸಮಾಧಾನ ಸಹ ವ್ಯಕ್ತಪಡಿಸಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ.
ಉದ್ಯೋಗಿಗಳು ಮುಂಬಡ್ತಿ ಸೇರಿದಂತೆ ಹಲವು ವಿಷಯಗಳಿಂದಾಗಿ ತೊಂದರೆ ಅನುಭವಿಸುತ್ತಾರೆ. ಯಾಕಂದ್ರೆ ಕೆಲವೊಮ್ಮೆ ಮನೆಯಿಂದಲೂ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಅಧಿಕ ಅವಧಿ, ಗಂಟೆಗಳವರೆಗೆ ಕೆಲಸ ಮಾಡುವಂತೆ ಹೇಳಲಾಗಿದೆ. ಹೀಗಾಗಿ ಸಾಕಷ್ಟು ಸಮಸ್ಯೆ ಎದುರಾಗಿದೆಯಂತೆ.
ಕಂಪನಿಯ ವೆಚ್ಚ ಕಡಿಮೆ ಮಾಡಲು ಕಚೇರಿಗಳು ಕ್ಲೋಸ್
ಅಲ್ಲದೇ ಎಲಾನ್ ಮಸ್ಕ್, ಕಂಪನಿಯ ವೆಚ್ಚ ಕಡಿಮೆ ಮಾಡಲು ವಿಶ್ವದ ಅನೇಕ ಸ್ಥಳಗಳಲ್ಲಿ ಇರುವ ಟ್ವಿಟ್ಟರ್ ಕಚೇರಿ ಬಂದ್ ಮಾಡಿಸುತ್ತಿದ್ದಾರೆ. ಜೊತೆಗೆ ಭಾರತದಲ್ಲಿ ಟ್ವಿಟ್ಟರ್ ಕಚೇರಿಗಳು ಬಂದ್ ಆಗುತ್ತಿವೆ.
ದೆಹಲಿ ಮತ್ತು ಮುಂಬೈ ಕಚೇರಿ ಬಂದ್ ಮಾಡಲು ಯೋಜನೆ
ಈಗಾಗಲೇ ಟ್ವಿಟ್ಟರ್ ಭಾರತವು ದೆಹಲಿ ಮತ್ತು ಮುಂಬೈ ಟ್ವಿಟ್ಟರ್ ಕಚೇರಿ ಬಂದ್ ಮಾಡುವಂತೆ ಹೇಳಲಾಗಿದೆ. ದೆಹಲಿ ಮತ್ತು ಮುಂಬೈನಲ್ಲಿರುವ ಎಲ್ಲಾ ಕಚೇರಿ ಮತ್ತು ಸೌಲಭ್ಯ ಖಾಲಿ ಮತ್ತು ಬಂದ್ ಮಾಡುವುದಾಗಿ ಹೇಳಿದೆ. ಈಗಾಗಲೇ ಟ್ವಿಟ್ಟರ್ ಕಚೇರಿ, ಬೆಂಗಳೂರಿನ ಸೌಲಭ್ಯ ಸಹ ತೊರೆದಿದೆ.
ಟ್ವಿಟ್ಟರ್ ಕಚೇರಿಗಳನ್ನು ಬಂದ್ ಮಾಡಿಸುವ ಪ್ರಕ್ರಿಯೆ ಡಿಸೆಂಬರ್ ನಲ್ಲಿ ಆರಂಭವಾಗಿದೆ. ಕಂಪನಿಯು ಮುಂಬೈನ ಬಿಕೆಸಿ ಯಲ್ಲಿನ ವಿವರ್ಕ್ ನಲ್ಲಿ 150 ಮಂದಿ, ದೆಹಲಿಯ ಕುತುಬ್ ಪ್ರದೇಶದಲ್ಲಿ 80 ಸೀಟು ಹಾಗೂ ಬೆಂಗಳೂರಿನ ಕೆಲವು ಸೀಟುಗಳನ್ನು ತೆಗೆದು ಹಾಕಿದೆ.
ವರ್ಕ್ ಫ್ರಂ ಹೋಂಗೆ ಕರೆ
ಕಳೆದ ವರ್ಷ ನವೆಂಬರ್ ನಲ್ಲಿ ಟ್ವಿಟ್ಟರ್ ತನ್ನ ಕೆಲವು ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಹೇಳಿತ್ತು. ಅಲ್ಲದೇ ಜನವರಿ 11 ರಂದು ಸಿಂಗಾಪುರದ ಕಚೇರಿ ಉದ್ಯೋಗಿಗಳಿಗೆ ಕಚೇರಿ ತೊರೆಯುವಂತೆ ತಿಳಿಸಲಾಗಿತ್ತು ಎಂದು ವರದಿಗಳು ಹೇಳಿವೆ.
ಇನ್ನು ಮನೆಯಿಂದಲೇ ಉದ್ಯೋಗಿಗಳು ಕೆಲಸ ಮಾಡುವಂತೆ ಹೇಳಲಾಗಿದೆಯಂತೆ. ಇಮೇಲ್ ಮೂಲಕ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಟ್ವಿಟ್ಟರ್ ತನ್ನ ಕಚೇರಿಗಳ ಬಾಡಿಗೆಯನ್ನು ಹಲವು ವಾರಗಳು ಕಳೆದರೂ ಪಾವತಿ ಮಾಡಿಲ್ಲವಂತೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಚೇರಿ ಸ್ಥಳದ ಬಾಡಿಗೆ ಕೊಡದ ಕಾರಣದಿಂದ ಟ್ವಿಟ್ಟರ್ ಕಾನೂನು ಮೊಕದ್ದಮೆ ಸಹ ಎದುರಿಸಿದ ಪ್ರಸಂಗವಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಎಲೋನ್ ಮಸ್ಕ್ ಟ್ವಿಟ್ಟರ್ ಸ್ವಾಧೀನಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಪಾಕ್ ಅಧಿಕಾರಿ ವಿರುದ್ಧ ಭಾರತೀಯ ಮಹಿಳೆಯ ಆರೋಪ, ಅನುಚಿತ ವರ್ತನೆ ಸಹಿಸಲ್ಲ ಎಂದ ನೆರೆ ರಾಷ್ಟ್ರ
ನಂತರ ಕಂಪನಿಯ ವೆಚ್ಚ ಕಡಿಮೆ ಮಾಡಲು ಅರ್ಧದಷ್ಟು ಸಿಬ್ಬಂದಿಯನ್ನು ತೆಗೆದು ಹಾಕಲಾಯಿತು. ಇದರಿಂದಾಗಿ ಎಲೋನ್ ಮಸ್ಕ್ ಜಾಗತಿಕವಾಗಿ ಸಾಕಷ್ಟು ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ