ಗೋವಾ: ಮಹಾರಾಷ್ಟ್ರ ರಾಜ್ಯ ರಾಜಕೀಯ (Maharashtra State Politics) ಹೈಡ್ರಾಮಾ (High Drama) ಮತ್ತೊಂದು ಹಂತ ತಲುಪುತ್ತಿದೆ. ಉದ್ಧವ್ ಠಾಕ್ರೆ (Uddhav Thackrey) ವಿರುದ್ಧ ಬಂಡಾಯ ಎದ್ದು, ಇದೀಗ ತಾನೇ ಸಿಎಂ (CM) ಆಗಿರುವ ಏಕನಾಥ್ ಶಿಂಧೆ (Eknath Shinde) ನಾಳೆ ವಿಶ್ವಾಸಮತ ಯಾಚಿಸಲಿದ್ದಾರೆ. ಈ ನಡುವೆ ಇಂದು ಸ್ಪೀಕರ್ ಚುನಾವಣೆ (Speaker Election) ನಡೆದಿದ್ದು, ಗೋವಾದ (Goa) ರೆಸಾರ್ಟ್‌ನಲ್ಲಿದ್ದ (Resort) ಶಿವಸೇನೆ ರೆಬೆಲ್ ಶಾಸಕರು (Shiv Sena Rebel MLA’s) ಮುಂಬೈಗೆ (Mumbai) ವಾಪಸ್ಸಾಗಿದ್ದಾರೆ. ಆದರೆ ಈ ಶಾಸಕರ ಜೊತೆ ರೆಸಾರ್ಟ್‌ನಲ್ಲಿದ್ದ ಓರ್ವ ಮಹಿಳೆ (Women) ಹಾಗೂ ಓರ್ವ ಪುರುಷ ಸೇರಿ ಇಬ್ಬರು ವ್ಯಕ್ತಿಗಳನ್ನು ಗೋವಾದಲ್ಲಿ ಪೊಲೀಸರು (Police) ಅರೆಸ್ಟ್ (Arrest) ಮಾಡಿದ್ದಾರೆ.
ರೆಬೆಲ್ ಶಾಸಕರ ಜೊತೆಗಿದ್ದ ಓರ್ವ ಪುರುಷ, ಮಹಿಳೆ ಅರೆಸ್ಟ್
ಮಹಾರಾಷ್ಟ್ರದ ಶಿವಸೇನಾ ಬಂಡಾಯ ಶಾಸಕರು ತಂಗಿದ್ದ ಗೋವಾದ ಪಣಜಿಯ ಡೊನಾ ಪೌಲಾದ ಸ್ಟಾರ್ ಹೋಟೆಲ್‌ನಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತಾವು ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಸುಳ್ಳು ಹೇಳಿ ವಾಸ್ತವ್ಯ ಹೂಡಿದ್ದ ಮಹಿಳೆ, ಓರ್ವ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಕಣ್ತಪ್ಪಿಸಿ ಬಂದಿದ್ದ ಇಬ್ಬರು
ಶಿವಸೇನೆಯ ಬಂಡಾಯ ನಾಯಕ, ಮಹಾರಾಷ್ಟರ ನೂತನ ಸಿಎಂ ಏಕನಾಥ್ ಶಿಂಧೆ ಮತ್ತು ಅವರ ಬಣದ 50 ಶಾಸಕರು ಇದೇ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಹೋಟೆಲ್ಗೆ ಬಿಗಿ ಭದ್ರತೆ ನೀಡಲಾಗಿತ್ತು. ಸಾರ್ವಜನಿಕರು, ಮಾಧ್ಯಮದವರಿಗೂ ಪ್ರವೇಶ ನಿಷೇಧಿಸಲಾಗಿತ್ತು. ಆದರೂ ಇಬ್ಬರು ಪೊಲೀಸರ ಕಣ್ಣು ತಪ್ಪಿಸಿ, ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.
ಇದನ್ನೂ ಓದಿ: Eknath Shinde: ಜುಲೈ 4ರಂದು ಶಿಂಧೆ ಸರ್ಕಾರಕ್ಕೆ ಮಹಾ ಪರೀಕ್ಷೆ! 12ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ
ನಾವು ರೆಬೆಲ್ ಶಾಸಕರ ಕಡೆಯವರು ಎಂದಿದ್ದ ಆರೋಪಿಗಳು
ಆರೋಪಿಗಳು ತಾವು ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಹೇಳಿದ್ದರು. ಶಿವಸೇನೆ ರೆಬೆಲ್ ಶಾಸಕರ ಜೊತೆ ಬಂದಿದ್ದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಈ ರೀತಿ ಸುಳ್ಳು ಹೇಳಿ ಹೋಟೆಲ್‌ನಲ್ಲಿ ಒಂದು ದಿನ ತಂಗಿದ್ದರು. ತಪಾಸಣೆ ನಡೆಸಿದಾಗ ಸುಳ್ಳು ದಾಖಲೆ ನೀಡಿದ್ದು ಗೊತ್ತಾಗಿ ಮಹಿಳೆ ಮತ್ತು ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧಿತರ ಹೆಸರು, ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಮಹಾರಾಷ್ಟ್ರ ವಿಧಾನಸಭೆಗೆ ಬಿಜೆಪಿಯ ರಾಹುಲ್ ನಾರ್ವೇಕರ್ ಸ್ಪೀಕರ್
ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಆಯ್ಕೆ ಆಗಿದ್ದಾರೆ. ಮೊದಲ ಬಾರಿಗೆ ಬಿಜೆಪಿ ಶಾಸಕ ಮತ್ತು ಕೊಲಾಬಾ ಶಾಸಕ ನಾರ್ವೇಕರ್ ಶಿವಸೇನಾ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಆಗಿದ್ದ ರಾಜನ್ ಸಾಲ್ವಿ ಅವರನ್ನು ಸ್ಪೀಕರ್ ಚುನಾವಣೆಯಲ್ಲಿ ಸೋಲಿಸಿದರು. ಶಿಂಧೆ ಬಣದ ಬಿಜೆಪಿ ಅಭ್ಯರ್ಥಿಯಾದ ನಾರ್ವೇಕರ್ 164 ಮತಗಳನ್ನು ಪಡೆದರೆ, ಸಲ್ವಿ 107 ಮತಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಇದನ್ನೂ ಓದಿ: Eknath Shinde: ಸಿಎಂ ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಶಾಕ್, ಶಿವಸೇನೆ ನಾಯಕನ ಸ್ಥಾನದಿಂದ ಔಟ್!
ನಾಳೆ ಶಿಂಧೆ ಸರ್ಕಾರಕ್ಕೆ ಮಹಾ ಪರೀಕ್ಷೆ!
ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ ಜುಲೈ 4 ಅಂದರೆ ನಾಳೆ ತಮ್ಮ ನೂತನ ಸರ್ಕಾರದ ಬಹುಮತ ಸಾಬೀತು ಮಾಡಬೇಕಿದೆ. ಏಕನಾಥ್ ಶಿಂಧೆ ತಮ್ಮ ಕಡೆ 39 ಶಾಸಕರ ಬೆಂಬಲವಿದ್ದು, ನಮ್ಮದೇ ನಿಜವಾದ ಶಿವಸೇನೆ ಅಂತ ಹೇಳಿಕೊಂಡಿದ್ದರು. ಇದೀಗ ಅವರ ಬಳಿ ಎಷ್ಟು ಶಾಸರರ ಬಲವಿದೆ ಎನ್ನುವುದು ಸೋಮವಾರ ಗೊತ್ತಾಗಲಿದೆ. ಸೋಮವಾರದ ಮತದಾನದಲ್ಲಿ ಅದು ದೃಢಪಟ್ಟರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಮೈತ್ರಿ ಸರ್ಕಾರ ಸುರಕ್ಷಿತವಾಗಿರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ