ಪಾಕಿಸ್ತಾನ-ಖಲಿಸ್ತಾನ ಹೋರಾಟಕ್ಕೆ ಬೆಂಬಲ; 1200 ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್​ಗೆ ಕೇಂದ್ರ ಸೂಚನೆ

ಹೊಸ ಪಟ್ಟಿಯು ಜನವರಿ 31 ರಂದು ನೋಟಿಸ್‌ನ ಭಾಗವಾಗಿ ಟ್ವಿಟರ್‌ಗೆ ಕಳುಹಿಸಲಾದ 257 ಖಾತೆಗಳ ಹಳೆಯ ಪಟ್ಟಿಗೆ ಹೆಚ್ಚುವರಿಯಾಗಿ ಹೊಸ ಖಾತೆಗಳನ್ನು ಮತ್ತು ಅವರು ಬಳಸುವ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ನಿರ್ಬಂಧಿಸಲು ಐಟಿ ಸಚಿವಾಲಯ ಸೂಚನೆ ನೀಡಿತ್ತು.

ಟ್ವಿಟ್ಟರ್.

ಟ್ವಿಟ್ಟರ್.

 • Share this:
  ನವ ದೆಹಲಿ; ಖಲಿಸ್ತಾನ ಅಥವಾ ಪಾಕಿಸ್ತಾನ ಬೆಂಬಲಿತ ಎಂದು ಭದ್ರತಾ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿರುವ ಸುಮಾರು 1200 ಖಾತೆಗಳನ್ನು ನಿರ್ಬಧಿಸುವಂತೆ ಕೋರಿ ಕೇಂದ್ರ ಸರ್ಕಾರ ಫೆಬ್ರವರಿ 4 ರಂದೇ ಟ್ವಿಟರ್​ಗೆ ಸೂಚನೆ ನೀಡಿದೆ. ಆದರೆ, ಟ್ವಿಟರ್​ ಈವರೆಗೆ ಈ ಯಾವ ಖಾತೆಗಳನ್ನೂ ನಿರ್ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ. "ಈ ಟ್ವಿಟರ್​ ಖಾತೆಗಳಲ್ಲಿ ಹಲವು ಸ್ವಯಂಚಾಲಿತ ರೀಬೂಟ್​ಗಳಾಗಿದ್ದು, ಭಾರತದ ರೈತ ಪ್ರತಿಭಟನೆಯ ಕುರಿತು ತಪ್ಪಾದ ಮತ್ತು ಪ್ರಚೋದನಕಾರಿ ಮಾಹಿತಿಗಳನ್ನು ಹಂಚಿಕೊಳ್ಳಲು ಈ ಟ್ವಿಟರ್​ ಖಾತೆಗಳನ್ನು ಬಳಸಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ವಿಚಾರವಾಗಿದೆ ಆದರೆ, ಟ್ವಿಟರ್ ಸರ್ಕಾರದ ಆದೇಶವನ್ನು ಇನ್ನೂ ಪಾಲಿಸಿಲ್ಲ" ಎಂದು ಸರ್ಕಾರಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  ಸರ್ಕಾರ ನೀಡಿರುವ ನೋಟಿಸ್ ಹೊರತಾಗಿಯೂ, ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸುವ ಸಲುವಾಗಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯಾಕ್ ಡಾರ್ಸೆ ವಿದೇಶಿ ಗಣ್ಯರು ಮಾಡಿದ ಕೆಲವು ಟ್ವೀಟ್‌ಗಳನ್ನು ಲೈಕ್ ಮಾಡಿದ್ದಾರೆ. ಸರ್ಕಾರ ಇದನ್ನು ಗಮನಿಸಿದ್ದು, ತಕ್ಕ ಕ್ರಮ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಈ ಕುರಿತು ಸ್ಪಷ್ಟ ಮಾಹಿತಿ ರವಾನಿಸಿರುವ ಅಧಿಕಾರಿಗಳು, "ನಾವು ಕಳುಹಿಸಿರುವ ನೊಟೀಸ್​ಗೆ ಪ್ರತಿಕ್ರಿಯಿಸಲು ಟ್ವಿಟರ್​ ಬಯಸದಿದ್ದರೆ, ಈ ಕುರಿತು ಕಾನೂನು ಬದ್ಧವಾಗಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಪಡೆಯಲು ಮುಕ್ತರಾಗಿದ್ದಾರೆ. ಆದರೆ, ತಡೆಯಾಜ್ಞೆ ಪಡೆಯುವವರೆಗೆ ಅವರು ಈ ದೇಶದ ಕಾನೂನಿಗೆ ಬದ್ಧರಾಗಿದ್ದಾರೆ ಮತ್ತು ನೋಟಿಸ್ ಪ್ರಕಾರ ಈ ಖಾತೆಗಳನ್ನು ನಿರ್ಬಂಧಿಸಬೇಕಾಗುತ್ತದೆ" ಎಂದು ತಾಕೀತು ಮಾಡಿದ್ದಾರೆ.

  ಇದನ್ನೂ ಓದಿ: Farmers Protest: ಕೇಂದ್ರ ಕೃಷಿ ಕಾನೂನನ್ನು ಬೆಂಬಲಿಸಿ ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್; ಮಹಾರಾಷ್ಟ್ರ ಸರ್ಕಾರದಿಂದ ತನಿಖೆಗೆ ಆದೇಶ

  ಹೊಸ ಪಟ್ಟಿಯು ಜನವರಿ 31 ರಂದು ನೋಟಿಸ್‌ನ ಭಾಗವಾಗಿ ಟ್ವಿಟರ್‌ಗೆ ಕಳುಹಿಸಲಾದ 257 ಖಾತೆಗಳ ಹಳೆಯ ಪಟ್ಟಿಗೆ ಹೆಚ್ಚುವರಿಯಾಗಿ ಹೊಸ ಖಾತೆಗಳನ್ನು ಮತ್ತು ಅವರು ಬಳಸುವ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ನಿರ್ಬಂಧಿಸಲು ಐಟಿ ಸಚಿವಾಲಯ ಸೂಚನೆ ನೀಡಿತ್ತು. ಕಳೆದ ತಿಂಗಳು ಕೆಲವು ಖಾತೆಗಳನ್ನು ನಿರ್ಬಂಧಿಸುವ ಮೂಲಕ ಟ್ವಿಟರ್​ ಪ್ರತಿಕ್ರಿಯಿಸಿತ್ತು. ಆದರೆ, ತರುವಾಯ ಈ ಖಾತೆಗಳ ಮೇಲಿನ ನಿರ್ಬಂಧವನ್ನು ಟ್ವಿಟರ್​ ತೆರವುಗೊಳಿಸಿತ್ತು. ಈ ನಡೆ ಸಾಮಾನ್ಯವಾಗಿ ಐಟಿ ಸಚಿವಾಲಯವನ್ನು ಕೆರಳಿಸಿತ್ತು.

  ನಂತರ ಈ ಕುರಿತು ಉತ್ತರ ನೀಡಿದ್ದ ಟ್ವಿಟರ್​, ತನ್ನ ವೇದಿಕೆಯಲ್ಲಿ ವಾಕ್ ಸ್ವಾತಂತ್ರ್ಯವನ್ನು ಉಲ್ಲೇಖಿಸಿ ಈ ಖಾತೆಗಳನ್ನು ನಿರ್ಬಂಧಿಸಲು ನಿರಾಕರಿಸಿತು. ಆದಾಗ್ಯೂ, ಈ ಉತ್ತರ ಸರ್ಕಾರಕ್ಕೆ ತೃಪ್ತಿ ನೀಡಿರಲಿಲ್ಲ. ಇದೀಗ ಟ್ವಿಟರ್​ ಸರ್ಕಾರ ಇತ್ತೀಚೆಗೆ ನೀಡಿರುವ ಟ್ವಿಟರ್​ ಖಾತೆಗಳನ್ನೂ ನಿರ್ಬಂಧಿಸಲು ನಿರಾಕರಿಸುತ್ತಿರುವುದು ಟ್ವಿಟರ್​ ಮತ್ತು ಸರ್ಕಾರದ ನಡುವಿನ ಮತ್ತೊಂದು ಚಟಾಪಟಿಗೆ ಕಾರಣವಾಗಲಿದೆಯೇ? ಎಂದು ವ್ಯಾಖ್ಯಾನಿಸಲಾಗುತ್ತಿದೆ.
  Published by:MAshok Kumar
  First published: