HOME » NEWS » National-international » IN FIRST HOURS AS PRESIDENT BIDEN TO UNDO TRUMP POLICIES ON CLIMATE VIRUS MAK

Joe Biden: ಅಧಿಕಾರವಹಿಸಿದ ಮೊದಲ ದಿನವೇ ಟ್ರಂಪ್ ನೀತಿಗಳಿಗೆ ಬದಲಾವಣೆ ತರುವ ಆದೇಶಕ್ಕೆ ಜೋ ಬೈಡೆನ್ ಸಹಿ

ವಲಸೆ ವಿಚಾರದಲ್ಲಿ ಬೈಡನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. 2012ರಲ್ಲಿ ಜಾರಿಗೆ ತಂದ ಬಾಲ್ಯದ ವಲಸೆಯ ಹಕ್ಕುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇದರಿಂದ ಲಕ್ಷಾಂತರ ಜನರನ್ನು ಗಡೀಪಾರು ಮಾಡುವಿಕೆಯಿಂದ ರಕ್ಷಿಸಲಾಗುತ್ತದೆ ಎಂದು ಬೈಡೆನ್ ತಿಳಿಸಿದ್ದಾರೆ.

news18-kannada
Updated:January 21, 2021, 1:46 PM IST
Joe Biden: ಅಧಿಕಾರವಹಿಸಿದ ಮೊದಲ ದಿನವೇ ಟ್ರಂಪ್ ನೀತಿಗಳಿಗೆ ಬದಲಾವಣೆ ತರುವ ಆದೇಶಕ್ಕೆ ಜೋ ಬೈಡೆನ್ ಸಹಿ
ಜೋ ಬೈಡನ್.
  • Share this:
ವಾಷಿಂಗ್ಟನ್​ (ಜನವರಿ 21); ಕಳೆದ ಎರಡು ತಿಂಗಳಿನಿಂದ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆಗಳು ಕೊನೆಗೂ ಮುಕ್ತಾಯವಾಗಿದ್ದು, ಜೋ ಬೈಡೆನ್​ ಅಮೆರಿಕದ ನೂತನ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸುವ ಮೂಲಕ  ಕಮಲಾ ಹ್ಯಾರೀಸ್ ಸಹ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಕಮಲಾ ಹ್ಯಾರೀಸ್​. ಆದರೆ, ಜೋ ಬೈಡೆನ್​ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಟ್ರಂಪ್ ಆಡಳಿತವು ಜಾರಿಗೆ ತಂದಿದ್ದ ಹಲವು ನೀತಿಗಳಲ್ಲಿ ಬದಲಾವಣೆ ತರುವುದಕ್ಕಾಗಿ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ. ವಲಸೆ, ಹವಾಮಾನ ಬದಲಾವಣೆ, ಕೋವಿಡ್ ನಿರ್ವಹಣೆ ಮತ್ತು ಜನಾಂಗೀಯ ಸಮಾನಯತೆಯ ವಿಷಯಗಳಲ್ಲಿ ಮಹತ್ವದ ತಿದ್ದುಪಡಿಗೆ ಮುಂದಾಗಿದ್ದಾರೆ.

ಕ್ಯಾಪಿಟಲ್ ಕಚೇರಿಯ ಅಧಿಕಾರ ಹಿಡಿದ ನಂತರ ಎರಡು ಪ್ರಮುಖ ನಿರ್ದೇಶನಗಳು ಮತ್ತು 15 ಕಾರ್ಯನಿರ್ವಾಹಕ ಕ್ರಮಗಳಿಗೆ ಬೈಡನ್ ಸಹಿ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್ ಆಡಳಿತ ಜಾರಿಗೆ ತಂದ ಹಲವು ನೀತಿಗಳಲ್ಲಿ ಬದಲಾವಣೆಗೆ ಬೈಡನ್ ಒತ್ತುನೀಡಿದ್ದಾರೆ. ಇಂದಿನಂತೆ ಆರಂಭಿಸಲು ಬೇರೆ ಸಮಯವಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಬೈಡನ್ ಉತ್ತರಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕವನ್ನು ಎದುರಿಸುವುದನ್ನು ಟ್ರಂಪ್ ಆಡಳಿತ ತನ್ನ ಮೊದಲ ಆದ್ಯತೆಯನ್ನಾಗಿಸಿಕೊಂಡಿದೆ. ಮುಂದಿನ ನೂರು ದಿನಗಳ ಕಾಲ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಲು ಬೈಡನ್ ಮನವಿ ಮಾಡಿದ್ದಾರೆ. ಹೊಸ ಫೆಡರಲ್ ಕಚೇರಿಯನ್ನು ರಚಿಸುವುದು ಮತ್ತು ಜಾಗತಿಕ ಆರೋಗ್ಯ ಸುರಕ್ಷತೆ ಮತ್ತು ರಕ್ಷಣೆಗಾಗಿ ಟ್ರಂಪ್ ಆಡಳಿತದಲ್ಲಿ ಮುಚ್ಚಿರುವ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ದೇಶನಾಲಯವನ್ನು ಪುನಃಸ್ಥಾಪಿಸಲು ಬೈಡನ್ ಮುಂದಾಗಿದ್ದಾರೆ.

ಇದನ್ನೂ ಓದಿ: ಟ್ವಿಟರ್​ನಲ್ಲಿ 2019ರಲ್ಲಿ ವೈರಲಾಗಿದ್ದ ಪೋಟೋದಿಂದಾಗಿ ಗ್ರಾಮಕ್ಕೆ ನಿರ್ಮಾಣವಾಯಿತು ಸೇತುವೆ!

ವಲಸೆ ವಿಚಾರದಲ್ಲಿ ಬೈಡನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. 2012ರಲ್ಲಿ ಜಾರಿಗೆ ತಂದ ಬಾಲ್ಯದ ವಲಸೆಯ ಹಕ್ಕುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇದರಿಂದ ಲಕ್ಷಾಂತರ ಜನರನ್ನು ಗಡೀಪಾರು ಮಾಡುವಿಕೆಯಿಂದ ರಕ್ಷಿಸಲಾಗುತ್ತದೆ.

ಅಲ್ಲದೆ ಅಂತರ್ಯುದ್ಧ ಮತ್ತು ಎಬೋಲಾ ದಾಳಿಯಿಂದ ಪಲಾಯನ ಮಾಡಿದ ಲೈಬೀರಿಯನ್ನರಿಗೆ ತಾತ್ಕಾಲಿಕ ಕಾನೂನು ಸ್ಥಾನಮಾನವನ್ನು ಜೂನ್ 2022 ರವರೆಗೆ ವಿಸ್ತರಿಸುವುದಾಗಿ ಅವರ ಆದೇಶಗಳಲ್ಲಿ ತಿಳಿಸಲಾಗಿದೆ. ಇದಲ್ಲದೆ ಹವಾಮಾನ ಬದಲಾವಣೆ ಮತ್ತು ಜನಾಂಗೀಯ ಸಮಾನತೆಗಾಗಿನ ಹಲವು ಆದೇಶಗಳಿಗೆ ಬೈಡನ್ ಸಹಿ ಹಾಕಿದ್ದಾರೆ ಎನ್ನಲಾಗಿದೆ.
Published by: MAshok Kumar
First published: January 21, 2021, 1:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories