HOME » NEWS » National-international » IN DELHI HC LAWYER QUESTIONS HASTE IN NIRBHAYA CASE VERDICT RESERVED GNR

ನಿರ್ಭಯಾ ಕೇಸ್​​​: ಮರಣದಂಡನೆ ವಿಳಂಬ ಮಾಡದಂತೆ ಕೇಂದ್ರ ಮನವಿ; ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ಅಪರಾಧಿ ವಿನಯ್ ಶರ್ಮಾ ಎಂಬಾತ ತಾನು ರಾಷ್ಟ್ರಪತಿಗಳಿಗೆ ಇನ್ನೂ ಕ್ಷಮಾದಾನದ ಅರ್ಜಿ ಸಲ್ಲಿಸದ ಕಾರಣ ಮರಣದಂಡನೆ ತೀರ್ಪಿಗೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿದ್ದ. ಈ ಮನವಿ ಪುರಸ್ಕರಿಸಿದ್ದ ನ್ಯಾಯಲಯವೂ ಮುಂದಿನ ಆದೇಶ ಬರುವವರೆಗೂ ಮರಣದಂಡನೆ ಶಿಕ್ಷೆಗೆ ತಡೆ ನೀಡಿತ್ತು.

news18-kannada
Updated:February 2, 2020, 7:48 PM IST
ನಿರ್ಭಯಾ ಕೇಸ್​​​: ಮರಣದಂಡನೆ ವಿಳಂಬ ಮಾಡದಂತೆ ಕೇಂದ್ರ ಮನವಿ; ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್
ರೇಖಾ ಚಿತ್ರ- ಮೀರ್ ಸುಹೈಲ್
  • Share this:
ನವದೆಹಲಿ(ಫೆ.02): ಏಳು ವರ್ಷಗಳ ಹಿಂದಿನ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಲಾದ ಮರಣದಂಡನೆ ಯಾವುದೇ ಕಾರಣಕ್ಕೂ ತಡವಾಗಬಾರದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್​​ಗೆ ತಿಳಿಸಿದ್ಧಾರೆ. ಇಂದು ಪ್ರಕರಣ ಸಂಬಂಧ ನಾಲ್ವರು ಅಪರಾಧಿಗಳಿಗೆ ವಿಧಿಸಿದ್ದ ಮರಣದಂಡನೆ ಆದೇಶಕ್ಕೆ ತಡೆ ನೀಡಿರುವ ಕುರಿತಂತೆ ದೆಹಲಿ ಹೈಕೋರ್ಟ್​​ನಲ್ಲಿ ವಿಶೇಷ ಕಲಾಪ ನಡೆಯಿತು. ಈ ವಿಶೇಷ ಕಲಾಪದಲ್ಲಿ ತಮ್ಮ ವಾದ ಮಂಡಿಸುವ ವೇಳೆ ತುಷಾರ್​​ ಮೆಹ್ತಾ ಹೀಗೆ ದೆಹಲಿ ಹೈಕೋರ್ಟ್​ಗೆ ಮನವಿ ಮಾಡಿದರು.

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾದ ಅಪಾರಾಧಿಯೋರ್ವ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿದ್ದಾನೆ. ಈ ಮೂಲಕ ಮರಣದಂಡನೆ ವಿಳಂಬ ಮಾಡಲು ಯತ್ನಿಸುತ್ತಿದ್ದಾನೆ. ಹೀಗಾಗಿ ಇನ್ನೂ ಮರಣದಂಡನೆ ತಡವಾದರೆ, ಆರೋಪಿ ಮೇಲೆ ಅಮಾನವೀಯ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.

ಇನ್ನು ನಿರ್ಭಯಾ ಹಂತಕರಿಗೆ ಫೆಬ್ರವರಿ 01ರಂದು ವಿಧಿಸಬೇಕಾಗಿದ್ದ ಗಲ್ಲು ಶಿಕ್ಷೆಗೆ ಶುಕ್ರವಾರದಂದು ತಡೆ ನೀಡಿದ್ದ ಪಟಿಯಾಲ ಹೌಸ್ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟ್​​ ಮೆಟ್ಟಿಲೇರಿತು. ಆದರೀಗ ಕೇಂದ್ರ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ಮುಕ್ತಾಯಗೊಂಡಿದ್ದು ನ್ಯಾಯಾಧೀಶರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಇದನ್ನೂ ಓದಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಹಂತಕ ಪವನ್ ಗುಪ್ತಾ ಅರ್ಜಿ ಮತ್ತೆ ವಜಾ

ಈ ಹಿಂದೆಯೇ ಅಪರಾಧಿ ವಿನಯ್ ಶರ್ಮಾ ಎಂಬಾತ ತಾನು ರಾಷ್ಟ್ರಪತಿಗಳಿಗೆ ಇನ್ನೂ ಕ್ಷಮಾದಾನದ ಅರ್ಜಿ ಸಲ್ಲಿಸದ ಕಾರಣ ಮರಣದಂಡನೆ ತೀರ್ಪಿಗೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿದ್ದ. ಈ ಮನವಿ ಪುರಸ್ಕರಿಸಿದ್ದ ನ್ಯಾಯಲಯವೂ ಮುಂದಿನ ಆದೇಶ ಬರುವವರೆಗೂ ಮರಣದಂಡನೆ ಶಿಕ್ಷೆಗೆ ತಡೆ ನೀಡಿತ್ತು.

2012ರ ಡಿ. 16ರಂದು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್ಸಿನೊಳಗೆ ಈ ಪೈಶಾಚಿಕ ಕೃತ್ಯ ಎಸಗಿ ಆಕೆಯನ್ನು ತೀರಾ ಗಂಭೀರವಾಗಿ ಗಾಯಗೊಳಿಸಿದ ಬಳಿಕ ಬಸ್ಸಿನಿಂದ ಹೊರ ಎಸೆದುಹೋಗಿದ್ದರು. ಬಹು ಅಂಗಾಂಗ ವೈಫಲ್ಯಗೊಂಡು ಈ ವಿದ್ಯಾರ್ಥಿನಿಯ ಕೆಲ ದಿನಗಳ ಬಳಿಕ ಅಸು ನೀಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಒಬ್ಬಾತ ಬಾಲಾಪರಾಧಿಯಾಗಿದ್ದ. ರಾಮ್ ಸಿಂಗ್ ಎಂಬ ಮತ್ತೊಬ್ಬ ಆರೋಪಿ ತಿಹಾರ್ ಜೈಲಿನ ಕೋಣೆಯಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
Youtube Video
First published: February 2, 2020, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories