• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Baby Name: ಪಕೋಡಾ ಎಂದು ಮಗುವಿಗೆ ಹೆಸರಿಟ್ಟ ಬ್ರಿಟನ್ ದಂಪತಿ! ಭಾರತೀಯ ತಿಂಡಿ ಅಂದ್ರೆ ಅಷ್ಟೆಲ್ಲ ಇಷ್ಟವಂತೆ!

Baby Name: ಪಕೋಡಾ ಎಂದು ಮಗುವಿಗೆ ಹೆಸರಿಟ್ಟ ಬ್ರಿಟನ್ ದಂಪತಿ! ಭಾರತೀಯ ತಿಂಡಿ ಅಂದ್ರೆ ಅಷ್ಟೆಲ್ಲ ಇಷ್ಟವಂತೆ!

ಮಗುವಿಗೆ ಪ್ರಸಿದ್ಧ ಖಾದ್ಯ ಪಕೋರಾ ಹೆಸರಿಟ್ಟ ದಂಪತಿ

ಮಗುವಿಗೆ ಪ್ರಸಿದ್ಧ ಖಾದ್ಯ ಪಕೋರಾ ಹೆಸರಿಟ್ಟ ದಂಪತಿ

ಸೋಷಿಯಲ್ ಮೀಡಿಯಾದಲ್ಲಿ ಬ್ರಿಟಿಷ್ ದಂಪತಿ ತಮ್ಮ ಮಗುವಿಗೆ ಪಕೋಡಾ ಎಂದು ಹೆಸರಿಟ್ಟಿರುವುದು ಸಾಕಷ್ಟು ವೈರಲ್ ಆಗಿದೆ. ಇನ್ನು ಬ್ರಿಟಿಷ್ ದಂಪತಿ ತಮ್ಮ ಮಗುವಿನ ಫೋಟೋ ಮತ್ತು ಅವರು ಪಕೋಡಾ ಖರೀದಿಸಿದ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿಗೆ ವೈರಲ್ ಆಗುತ್ತಿದೆ.

 • Share this:

ಪ್ರತಿಯೊಬ್ಬರೂ  ತಮ್ಮ ಮಗುವಿಗೆ (Baby) ಹೆಸರು ಇಡುವಾಗ ಸಾಕಷ್ಟು ಯೋಚಿಸುತ್ತಾರೆ. ಮಗುವಿನ ಹೆಸರು (Name) ವಿಶೇಷ ಹಾಗೂ ವಿಶೇಷ ಅರ್ಥ (Special Meaning) ನೀಡುವಂತಿರಬೇಕು ಎಂದು ಬಯಸುತ್ತಾರೆ. ಅಲ್ಲದೇ ಮಗುವಿಗೆ ಹೆಸರಿಡುವಾಗ ಯೂನಿಕ್ ಹೆಸರನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಪಾಲಕರು ಮಗುವಿಗೆ ಹೆಸರಿಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಮತ್ತು ನಂತರ ತಮ್ಮ ಮಗುವಿನ ಹುಟ್ಟಿದ ಮುಹೂರ್ತದ ಅನುಸಾರ ಕೆಲವು ಅಕ್ಷರಗಳ ಹೆಸರುಗಳ ಪಟ್ಟಿ ಮಾಡುತ್ತಾರೆ. ಪಟ್ಟಿ ಮಾಡಿದ ಅನೇಕ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತಾರೆ. ಕೆಲವೊಮ್ಮೆ ಸಂಬಂಧಿಕರು ಮಗುವಿಗೆ ಹೆಸರಿಡಲು ಸೂಚನೆ ನೀಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮಗುವಿಗೆ ಹೆಸರಿಡಲು ಅದ್ಧೂರಿ ನಾಮಕರಣ ಸಮಾರಂಭ ಮಾಡಲಾಗುತ್ತದೆ.


ಬ್ರಿಟನ್‌ ನಲ್ಲಿ ತಮ್ಮ ಮಗುವಿಗೆ ಪಕೋಡಾ ಎಂದು ಹೆಸರಿಟ್ಟ ಪೋಷಕರು
ಕೆಲವರು ತಮ್ಮ ಮಗುವಿಗೆ ದೇವರ ಹೆಸರು ಆಯ್ಕೆ ಮಾಡುತ್ತಾರೆ. ಇನ್ನು ಕೆಲವರು ತಮ್ಮ ಪೂರ್ವಜರು, ಅಜ್ಜಂದಿರು, ತಂದೆ-ತಾಯಿ ಹೆಸರನ್ನು ಆಯ್ಕೆ ಮಾಡುತ್ತಾರೆ. ಜೊತೆಗೆ ಇನ್ನು ಕೆಲವರು ತಮ್ಮ ಮಗುವಿಗೆ ಪ್ರಸಿದ್ಧ ಸೆಲೆಬ್ರಿಟಿಗಳ ಹೆಸರು ಇಡಲು ಸೂಚನೆ ನೀಡುತ್ತಾರೆ.


ಈ ಮಧ್ಯೆ ಬ್ರಿಟನ್‌ ನಲ್ಲಿ ಪೋಷಕರು ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರು ಇಟ್ಟಿದ್ದಾರೆ. ಈ ಸುದ್ದಿ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.  ಬಂದಿದೆ. ಬ್ರಿಟನ್ ನಲ್ಲಿ ಪೋಷಕರು ತಮ್ಮ ಮಗುವಿಗೆ ಪಕೋರಾ ಎಂದು ಹೆಸರು ಇಟ್ಟಿದ್ದಾರೆ.


ಇದನ್ನೂ ಓದಿ: ಮಗುವನ್ನು ನಿದ್ರಿಸಲು ಅಜ್ಜಿ ಹೇಳುವ ಲಾಲಿ ಹಾಡು ಹಾಡಿ! ಗೊತ್ತಿಲ್ಲ ಅಂದ್ರೆ ಈ ವಿಡಿಯೋ ನೋಡಿ


ಮಗುವಿಗೆ 'ಪಕೋಡಾ' ಹೆಸರಿಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಬ್ರಿಟೀಷ್ ಪೋಷಕರು ತಮ್ಮ ಮಗುವಿಗೆ ಪಕೋಡಾ ಎಂದು ಹೆಸರಿಟ್ಟಿರುವುದು ಸಾಕಷ್ಟು ಸದ್ದು ಮಾಡ್ತಿದೆ. ಭಾರತೀಯ ಖಾದ್ಯಗಳಲ್ಲಿ ಒಂದಾದ ಪಕೋಡಾ ಯಾರಿಗೆ ತಾನೇ ತಿನ್ನಲು ಇಷ್ಟವಾಗಲ್ಲ. ಸಂಜೆ ಟೀ ಜೊತೆ ಪಕೋಡಾ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಅವರು ತಮ್ಮ ಮಗುವಿಗೆ ಪಕೋಡಾ ಎಂದು ಹೆಸರು ಇಟ್ಟಿದ್ದಾರೆ.


ಸೋಷಿಯಲ್ ಮೀಡಿಯಾದಲ್ಲಿ ಬ್ರಿಟಿಷ್ ದಂಪತಿ ತಮ್ಮ ಮಗುವಿಗೆ ಪಕೋಡಾ ಎಂದು ಹೆಸರಿಟ್ಟಿರುವುದು ಸಾಕಷ್ಟು ವೈರಲ್ ಆಗಿದೆ. ಇನ್ನು ಬ್ರಿಟಿಷ್ ದಂಪತಿ ತಮ್ಮ ಮಗುವಿನ ಫೋಟೋ ಮತ್ತು ಅವರು ಪಕೋಡಾ ಖರೀದಿಸಿದ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ಒಟ್ಟಿಗೆ ವೈರಲ್ ಆಗುತ್ತಿದೆ. ಈ ಬಗ್ಗೆ ಬಳಕೆದಾರರು ತಮಾಷೆ ಪ್ರತಿಕ್ರಿಯೆ ಸಹ ನೀಡುತ್ತಿದ್ದಾರೆ.


ನವಜಾತ ಶಿಶುವಿಗೆ ಪ್ರಸಿದ್ಧ ಖಾದ್ಯ ಪಕೋಡಾ ಹೆಸರಿಟ್ಟಿರುವ ಬಗ್ಗೆ ಪೋಸ್ಟ್ ವೈರಲ್
ಯಾರ ಮನೆಯಲ್ಲಿ ಮಗು ಹುಟ್ಟುತ್ತದೆಯೋ ಆ ಮಗುವಿಗೆ ನಾಮಕರಣ ಮಾಡುವ ವಿಚಾರ ಚರ್ಚೆ ಆಗುತ್ತದೆ. ಸಾಕಷ್ಟು ಸಂಶೋಧನೆ ಮಾಡಿ ಹೆಸರನ್ನು ಆಯ್ಕೆ ಮಾಡುತ್ತಾರೆ. ಈಗ ಬ್ರಿಟಿಷ್ ದಂಪತಿ ಮಗುವಿಗೆ ಪಕೋಡಾ ಹೆಸರು ಇಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಇದು ಜನರಲ್ಲಿ ಖುಷಿ ತಂದಿದೆ.


ಯುಕೆ ದಂಪತಿ ತಮ್ಮ ಮಗುವಿಗೆ ಭಾರತೀಯ ಖಾದ್ಯ ಪಕೋಡಾ ಹೆಸರಿಟ್ಟಿರುವುದು ಚರ್ಚೆ ಆಗುತ್ತಿದೆ. ಐರ್ಲೆಂಡ್‌ನ ನ್ಯೂಟೌನ್‌ ಬೇಯಲ್ಲಿ ಪ್ರಸಿದ್ಧ ರೆಸ್ಟೋರೆಂಟ್ ಕ್ಯಾಪ್ಟನ್ಸ್ ಟೇಬಲ್ ಪಕೋರಾ ಬಿಲ್ ನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದೆ.


ಇದನ್ನೂ ಓದಿ: ನ್ಯೂಸ್​ ಓದುವ ವೇಳೆ ಆ್ಯಂಕರ್​ ಬಾಯಿಯೊಳಕ್ಕೆ ಹೋದ ನೊಣ! ನಗು ತರಿಸುತ್ತೆ ಈ ವಿಡಿಯೋ

top videos


  ಈ ರೆಸ್ಟೋರೆಂಟ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಪೋಸ್ಟ್ ನಲ್ಲಿ ಇಂಗ್ಲಿಷ್ ದಂಪತಿ ಆಗಾಗ ಅಲ್ಲಿಗೆ ಭೇಟಿ ನೀಡುತ್ತಾರೆ ಎಂದು ರೆಸ್ಟೋರೆಂಟ್ ತಿಳಿಸಿದೆ. ದಂಪತಿ ತಮ್ಮ ನವಜಾತ ಶಿಶುವಿಗೆ ಪ್ರಸಿದ್ಧ ಖಾದ್ಯ ಪಕೋರಾ ಹೆಸರಿಟ್ಟಿದ್ದಾರೆ. ಪಕೋಡಾ ಒಂದು ಸ್ನ್ಯಾಕ್ಸ್ ಆಗಿದೆ. ಇದನ್ನು ಭಾರತೀಯರು ಚಹಾ ಜೊತೆ ಹೆಚ್ಚು ಸೇವನೆ ಮಾಡುತ್ತಾರೆ.

  First published: