ಮಹಾ ಶಾಕ್ - ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ತರಾತುರಿ ಪ್ರಮಾಣ ವಚನ, ಸೇನೆಗೆ ಭಾರೀ ಮುಖಭಂಗ

ದಿಢೀರ್​​ ಬೆಳವಣಿಗೆಯಲ್ಲಿ ಎನ್​​ಸಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿದೆ. ದೇವೇಂದ್ರ ಪಡ್ನವೀಸ್ ಅವರು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ

G Hareeshkumar | news18-kannada
Updated:November 23, 2019, 11:03 AM IST
ಮಹಾ ಶಾಕ್ - ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ತರಾತುರಿ ಪ್ರಮಾಣ ವಚನ, ಸೇನೆಗೆ ಭಾರೀ ಮುಖಭಂಗ
ಸಿಎಂ ದೇವೇಂದ್ರ ಫಡ್ನವೀಸ್
  • Share this:
ಮುಂಬೈ(ನ.23): ಮಹಾರಾಷ್ಟ್ರ ರಾಜಕಾರಣವೀಗ ಶನಿವಾರ ಬೆಳಿಗ್ಗೆಯೇ ಸ್ಟೋಟಕ ತಿರುವು ಪಡೆದುಕೊಂಡಿದೆ. ಇದುವರೆಗೂ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಶಿವಸೇನಾ ಮುಖ್ಯಸ್ಥ ಉದ್ಬವ್​ ಠಾಕ್ರೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೀಗ ದಿಢೀರ್​​ ಬೆಳವಣಿಗೆಯಲ್ಲಿ ಎನ್​​ಸಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿದೆ. ದೇವೇಂದ್ರ ಪಡ್ನವೀಸ್ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೇ ಎನ್​​ಸಿಪಿಯ ಅಜಿತ್​​ ಪವರ್​​​​ ಉಪಮುಖ್ಯಮಂತ್ರಿಯಾಗಿ ಪ್ರಮಾಣ ತೆಗೆದುಕೊಂಡಿದ್ಧಾರೆ.

ಶನಿವಾರ ಬೆಳಿಗ್ಗೆ ರಾಜಭವನದಲ್ಲಿ ನಡೆದ ಸರಳ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಭಗತ್​ ಸಿಂಗ್​​ ಕೋಶಿಯಾರ್​ ಅವರು ಪ್ರಮಾಣ ವಚನ ಬೋಧಿಸಿದರು

ಈ ಹಿಂದೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ-ಎನ್​​ಸಿಪಿ-ಕಾಂಗ್ರೆಸ್ ಪಕ್ಷಗಳು ಮಹಾ ಮೈತ್ರಿಕೂಟ ಸರ್ಕಾರ ರಚಿಸಲು ನಿರ್ಧರಿಸಿದ್ದವು. ನಿನ್ನೆ ಮೂರೂ ಪಕ್ಷಗಳ ಮುಖಂಡರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ ಘೋಷಣೆ ಮಾಡಿದ್ದರು. ಮೂರು ಪಕ್ಷಗಳ ಮುಖಂಡರು ಸಭೆ ನಡೆಸಿ ಚರ್ಚಿಸಿದ ಬಳಿಕವೇ ಈ ತೀರ್ಮಾನಕ್ಕೆ ಬಂದಿದ್ದರು. ಉದ್ಧವ್ ಠಾಕ್ರೆಯನ್ನು ಸಿಎಂ ಮಾಡಲು ಎಲ್ಲರೂ ಒಪ್ಪಿದ್ಧಾರೆನ್ನಲಾಗಿತ್ತು.

ಸಿಎಂ ವಿಚಾರದಲ್ಲಿ ಯಾವುದೇ ಅಧಿಕಾರ ಹಂಚಿಕೆ ಇರುವುದಿಲ್ಲ. ಉದ್ಧವ್ ಠಾಕ್ರೆ ಅವರೇ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿಯಾಗಲಿದ್ದಾರೆ. ಠಾಕ್ರೆ ಸಿಎಂ ಆಗಲು ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಮ್ಮತದಿಂದ ಸಮ್ಮತಿ ವ್ಯಕ್ತಪಡಿಸಿವೆ. ಮೂರು ಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಿವೆ ಎಂದು ಹೇಳಲಾಗಿತ್ತು. ಆದರೀಗ ಏಕಾಏಕಿ ಬಿಜೆಪಿ ಮತ್ತು ಎನ್​​ಸಿಪಿ ಮೈತ್ರಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿವೆ.

ಇದನ್ನೂ ಓದಿ : ‘ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್ ಮೈತ್ರಿ ಅನೈತಿಕ’ – ಬಿಜೆಪಿ ಕಾರ್ಯಕರ್ತನಿಂದ ಸುಪ್ರೀಂಗೆ ದೂರು

ಇನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಎರಡನೇ ಬಾರಿಗೆ ಸಿಎಂ ಆದ ದೇವೇಂದ್ರ ಫಢ್ನವೀಸ್​​​ ಅವರಿಗೆ ಶುಭಾಶಯ ಕೋರಿದ್ಧಾರೆ. ಇವರೊಂದಿಗೆ ಬಿಜೆಪಿ ಗಣ್ಯರು ಎನ್​ಸಿಪಿ ಮತ್ತು ಬಿಜೆಪಿ ನೇತೃತ್ವದ ಹೊಸ ಸರ್ಕಾರಕ್ಕೆ ಶುಭವಾಗಲಿ ಎಂದು ಟ್ವೀಟ್​ ಮಾಡಿದ್ಧಾರೆ. ಇತ್ತ ಶಿವಸೇನೆ ಮತ್ತು ಕಾಂಗ್ರೆಸ್​​ಗೆ​ ಮಹಾರಾಷ್ಟ್ರದಲ್ಲಾದ ಅಚ್ಚರಿ ಬೆಳವಣಿಗೆಯಿಂದ ಭಾರೀ ಮುಖಭಂಗವಾಗಿದೆ.

ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಬಿಜೆಪಿ-ಶಿವಸೇನಾ ಹಾಗೂ ಇತರ ಕೆಲ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. 288 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗಳಿಸಿ ನಂಬರ್ ಒನ್ ಪಕ್ಷ ಎನಿಸಿತ್ತು. ಶಿವಸೇನಾ 56, ಎನ್​ಸಿಪಿ 54 ಮತ್ತು ಕಾಂಗ್ರೆಸ್ ಪಕ್ಷ 44 ಸ್ಥಾನಗಳನ್ನು ಗೆದ್ದವು. ಬಿಜೆಪಿ ಮತ್ತು ಶಿವಸೇನಾ ಜೊತೆಗೂಡಿ ಸರ್ಕಾರ ರಚಿಸುವ ನಿರೀಕ್ಷೆ ಇತ್ತಾದರೂ ಸಿಎಂ ಸ್ಥಾನದ ವಿಚಾರವಾಗಿ ಭಿನ್ನಾಭಿಪ್ರಾಯವುಂಟಾಗಿ ಶಿವಸೇನಾ ತನ್ನ ಎದುರಾಳಿಗಳತ್ತ ಮುಖ ಮಾಡಿತು. ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ಶಿವಸೇನಾ ನಿರ್ಧರಿಸಿತು.


First published: November 23, 2019, 8:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading