ಅನಿಶ್ಚಿತ ಜಗತ್ತಿನಲ್ಲಿ, ಭಾರತ-ಚೀನಾ ಸಂಬಂಧಗಳು ಸ್ಥಿರತೆಯ ಅಂಶವಾಗಿದೆ; ಸಂತಸ ಸೂಚಿಸಿದ ಜೈಶಂಕರ್​!

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ವಿಭಜಿಸುವ ನಿರ್ಧಾರ ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಬೇರೆ ದೇಶಗಳ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಭಾರತ ಸರ್ಕಾರ ಚೀನಾಗೆ ಮನವರಿಕೆ ಮಾಡಿಸಿತ್ತು. ಹೀಗಾಗಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನಗೊಂಡಿದೆ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

MAshok Kumar | news18
Updated:August 12, 2019, 12:43 PM IST
ಅನಿಶ್ಚಿತ ಜಗತ್ತಿನಲ್ಲಿ, ಭಾರತ-ಚೀನಾ ಸಂಬಂಧಗಳು ಸ್ಥಿರತೆಯ ಅಂಶವಾಗಿದೆ; ಸಂತಸ ಸೂಚಿಸಿದ ಜೈಶಂಕರ್​!
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್​.
  • News18
  • Last Updated: August 12, 2019, 12:43 PM IST
  • Share this:
ಬೀಜಿಂಗ್ (ಆಗಸ್ಟ್.12); ಇಡೀ ಜಗತ್ತು ಇಂದು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿರು ಸಮಯದಲ್ಲಿ ಭಾರತ-ಚೀನಾ ನಡುವಿನ ಸಂಬಂಧ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಿರಬೇಕು ಎಂದು ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಭಾನುವಾರ ಚೀನಾಗೆ ತೆರಳಿದ್ದ ಜೈಶಂಕರ್ ಚೀನಾದ ಉನ್ನತ ನಾಯಕರು ವಾಸಿಸುವ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರ ವಸತಿ ಸಂಕೀರ್ಣದಲ್ಲಿ ಉಪಾಧ್ಯಕ್ಷ ವಾಂಗ್ ಕಿಶನ್ ಅವರನ್ನು ಭೇಟಿಯಾಗಿದ್ದರು. ನಂತರ ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ನಿಯೋಗ ಮಟ್ಟದ ಸಭೆ ನಡೆಸಿದ್ದರು.

ಚೀನಾದ ಅಧ್ಯಕ್ಷ ಕ್ಸಿ-ಚಿನ್​ಪಿಂಗ್ ಅವರ ವಿಶ್ವಾಸಾರ್ಹರೆಂದು ಪರಿಗಣಿಸಲ್ಪಟ್ಟ ವಾಂಗ್ ಅವರೊಂದಿಗೆ ಸಭೆಯಲ್ಲಿ ಮಾತನಾಡಿದ ಜೈಶಂಕರ್, “ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ವುಹಾನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಹಾಗೂ ಚೀನಾ ಪ್ರಧಾನಿ ಪಾಲ್ಗೊಂಡು ಒಮ್ಮತದ ನಿಲುವು ತಳೆದ ನಂತರ ನಾನು ಚೀನಾ ಆಗಮಿಸಿದ್ದು ನನಗೆ ಸಂತೋಷವನ್ನುಂಟು ಮಾಡುತ್ತಿದೆ. ಎರಡು ವರ್ಷಗಳಿಂದ ಭಾರತ ಮತ್ತು ಚೀನಾ ಒಮ್ಮತದ ಅಭಿಪ್ರಾಯವನ್ನು ತಳೆಯುತ್ತಿದೆ. ಇಡೀ ಜಗತ್ತು ಅನಿಶ್ಚಿತವಾಗಿರುವ ಸಮಯದಲ್ಲಿ ನಮ್ಮ ಸಂಬಂಧಗಳು ಸ್ಥಿರತೆಯ ಅಂಶವಾಗಿರಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಸಭೆಯ ನಂತರ ಮಾತನಾಡಿದ ಅವರು, “ಭಾರತ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, “ಚೀನಾ ಸಹ ಈ ತೀರ್ಮಾನವನ್ನು ವಿರೋಧಿಸಿದೆ. ಅಲ್ಲದೆ, ಈ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿರುವ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎದುರು ದೂರು ಸಲ್ಲಿಸಲಿದೆ” ಎಂದು ತಿಳಿಸಿದ್ದರು.

ಆದರೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ವಿಭಜಿಸುವ ನಿರ್ಧಾರ ಭಾರತದ ಆಂತರಿಕ ವಿಚಾರವಾಗಿದ್ದು, ಇದರಲ್ಲಿ ಬೇರೆ ದೇಶಗಳ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಭಾರತ ಸರ್ಕಾರ ಚೀನಾಗೆ ಮನವರಿಕೆ ಮಾಡಿಸಿತ್ತು. ಹೀಗಾಗಿ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನಗೊಂಡಿದೆ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಚೀನಾ ಪ್ರವಾಸ ಬೆಳೆಸಿರುವ ಮೊದಲ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೈಶಂಕರ್ ತಮ್ಮ ಮೂರು ದಿನದ ಪ್ರವಾಸದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರನ್ನು ಭೇಟಿಯಾಗಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದಕ್ಕೂ ಮುಂಚಿತವಾಗಿಯೇ ಜೈಶಂಕರ್ ಅವರ ಚೀನಾ ಭೇಟಿಯನ್ನು ನಿಗದಿಪಡಿಸಲಾಗಿತ್ತು. ಅಲ್ಲದೆ 2009 ರಿಂದ 2013ರ ಅವಧಿಯಲ್ಲಿ ಅವರು ಭಾರತ ದೇಶದ ಚೀನಾ ರಾಯಭಾರಿಯಾಗಿಯೂ ದೀರ್ಘಾವಧಿಗೆ ಕೆಲಸ ನಿರ್ವಹಿಸಿದ ಅನುಭವ ಅವರಿಗಿದೆ.ಇದನ್ನೂ ಓದಿ : ಸಂಜೋತಾ ಎಕ್ಸ್​ಪ್ರೆಸ್​ ಬೆನ್ನಲ್ಲೇ ಭಾರತಕ್ಕೆ ಬಸ್​ ಸಂಚಾರವನ್ನೂ ನಿಲ್ಲಿಸಿದ ಪಾಕಿಸ್ತಾನ

First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading