ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಆಡಳಿತ (Taliban Govt) ಬಂದಾಗಿನಿಂದ ಮಹಿಳೆಯರಿಗೆ ಕಠಿಣ ನಿಯಮಗಳನ್ನು ಹೇರಲಾಗಿದೆ. 2-3 ದಿನಗಳ ಹಿಂದೆ ಪುನಾರಂಭಗೊಂಡಿದ್ದ ಬಾಲಕಿಯರ ಶಾಲೆಯನ್ನು ಕೆಲವೇ ಗಂಟೆಗಳಲ್ಲಿ ಮುಚ್ಚಿಸಲಾಗಿತ್ತು. ಈಗ ಮಹಿಳೆಯರ ಪ್ರಯಾಣದ ಹಕ್ಕಿನ ಮೇಲೂ ಕಠಿಣ ನಿಯಮವನ್ನು ತಾಲಿಬಾನ್ ಸರ್ಕಾರ ಹೇರಿದೆ. ಶನಿವಾರ ಮಹಿಳೆಯರು ವಿಮಾನ (flights) ಪ್ರಯಾಣಕ್ಕಾಗಿ ಏರ್ಪೋರ್ಟ್ಗೆ (Airport) ಬಂದಾಗ ಅವರನ್ನು ತಡೆಯಲಾಗಿದೆ. ನಿಮ್ಮೊಂದಿಗೆ ಒಬ್ಬೇ ಒಬ್ಬ ಗಂಡಸು ಇಲ್ಲ. ಪುರುಷರಿಲ್ಲದೆ ಮಹಿಳೆಯರೇ ಪ್ರಯಾಣಿಸುವಂತಿಲ್ಲ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಪ್ರಯಾಣವನ್ನು ನಿರಾಕರಿಸಿದ್ದಾರೆ. ಡಜನ್ಗಟ್ಟಲೆ ಮಹಿಳೆಯರು ಪುರುಷರಿಲ್ಲದೆ ಪ್ರಯಾಣಿಸಲು ಮುಂದಾಗಿದ್ದ ಕಾರಣ ವಿಮಾನಗಳನ್ನು ಹತ್ತಲು ನಿರಾಕರಿಸಿದ್ದಾರೆ ಎಂದು ಇಬ್ಬರು ಅಫ್ಘಾನ್ ಏರ್ಲೈನ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಾಲೆಗಳನ್ನು ಮುಚ್ಚಿಸಿದ Taliban.. ಅಳುತ್ತ ಹೊರ ನಡೆದ ವಿದ್ಯಾರ್ಥಿನಿಯರು!
ಏರ್ಪೋರ್ಟ್ನಿಂದ ಮನೆಗಳಿಗೆ ಹಿಂತಿರುಗಿದ ಮಹಿಳೆಯರು
ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ಹತ್ತಲು ಶುಕ್ರವಾರ ಕಾಬೂಲ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಜನ್ಗಟ್ಟಲೆ ಮಹಿಳೆಯರಿಗೆ ಪುರುಷ ರಕ್ಷಕರಿಲ್ಲದೆ ಪ್ರಯಾಣಿಸಲು ಅನುಮತಿಸುವುದು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ ಎಂದು ಹೇಳಿದರು. ಗಂಡಸರಿಲ್ಲದೇ ವಿಮಾನ ಪ್ರಯಾಣ ಮಾಡಲಾಗದ ಮಹಿಳೆಯರು ಏರ್ಪೋರ್ಟ್ನಿಂದ ಮನೆಗಳಿಗೆ ಹಿಂತಿರುಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಮ್ ಏರ್ ಮತ್ತು ಸರ್ಕಾರಿ ಸ್ವಾಮ್ಯದ ಅರಿಯಾನಾ ಏರ್ಲೈನ್ನಲ್ಲಿ ಇಸ್ಲಾಮಾಬಾದ್, ದುಬೈ ಮತ್ತು ಟರ್ಕಿಯ ವಿಮಾನಗಳಿಗೆ ಮಹಿಳೆಯರಿಗೆ ಹತ್ತಲು ನಿರಾಕರಿಸಲಾಗಿದೆ. ತಾಲಿಬಾನ್ ನಾಯಕತ್ವದಿಂದ ಈ ಆದೇಶ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂಟಿಯಾಗಿ ಪ್ರಯಾಣಿಸಲು ಮುಂದಾಗಿದ್ದ ಮಹಿಳೆಯರು
ಒಂಟಿಯಾಗಿ ಪ್ರಯಾಣಿಸಲು ಮುಂದಾಗಿದ್ದ ಮಹಿಳೆಯರಿಗೆ ಪಶ್ಚಿಮ ಹೆರಾತ್ ಪ್ರಾಂತ್ಯಕ್ಕೆ ಅರಿಯಾನಾ ಏರ್ಲೈನ್ಸ್ ವಿಮಾನ ಹತ್ತಲು ಅನುಮತಿ ನೀಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ, ಅನುಮತಿ ನೀಡುವ ವೇಳೆಗೆ ಅವರ ವಿಮಾನ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಅಧ್ಯಕ್ಷರು ಮತ್ತು ಪೊಲೀಸ್ ಮುಖ್ಯಸ್ಥರು, ತಾಲಿಬಾನ್ ಚಳವಳಿಯ ಇಬ್ಬರೂ ಮತ್ತು ಇಸ್ಲಾಮಿಕ್ ಮೌಲ್ವಿಗಳಿಬ್ಬರೂ ಶನಿವಾರ ವಿಮಾನಯಾನ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದಾರೆ. ತಾಲಿಬಾನ್ ತಿಂಗಳ ಹಿಂದೆ ಹೊರಡಿಸಿದ ಆದೇಶದಿಂದ ವಿಮಾನ ಪ್ರಯಾಣಕ್ಕೆ ವಿನಾಯಿತಿ ನೀಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬಾಲಕಿಯರ ಶಿಕ್ಷಣಕ್ಕೂ ಕುತ್ತು
ತಾಲಿಬಾನ್ ಸರ್ಕಾರವಿರುವ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಕಡೆಗಣಿಸಲಾಗುತ್ತಿದೆ. ಇತ್ತೀಚಿನ ಸರ್ಕಾರವು ಆರನೇ ತರಗತಿಯ ನಂತರ ಹುಡುಗಿಯರು ಶಾಲೆಗೆ ತೆರಳುವುದಕ್ಕೆ ಅವಕಾಶ ನಿರಾಕರಿಸಿದೆ. ಆರನೇ ತರಗತಿಯ ನಂತರ ಹೆಣ್ಣುಮಕ್ಕಳ ಶಿಕ್ಷಣವನ್ನು ತಾಲಿಬಾನ್ ನಿಷೇಧಿಸಿದ ನಂತರ, ಮಹಿಳಾ ಹಕ್ಕುಗಳ ಕಾರ್ಯಕರ್ತ ಮಹಬೂಬ ಸೆರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಒಂದು ರಾಷ್ಟ್ರವಾಗಿ ನಾವು ಇನ್ನು ಮುಂದೆ ನಿಮ್ಮ ಮಾತುಗಳನ್ನು ಹೇಗೆ ನಂಬುತ್ತೇವೆ? ನಿಮ್ಮನ್ನು ಮೆಚ್ಚಿಸಲು ನಾವು ಏನು ಮಾಡಬೇಕು? ನಾವೆಲ್ಲರೂ ಸಾಯಬೇಕೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Hijab Row: ಹಿಜಾಬ್ ಧರಿಸಿ ತರಗತಿ ಒಳಗೆ ನಮಾಜ್ ಮಾಡಿದ ಮುಸ್ಲಿಂ ವಿದ್ಯಾರ್ಥಿನಿ.. ವಿವಾದಕ್ಕೀಡಾದ ವಿಡಿಯೋ
ಸಾವಿರಾರು ಸ್ವಯಂಸೇವಕರನ್ನು ಹೊಂದಿರುವ ಹತ್ತಾರು "ರಹಸ್ಯ' ಶಾಲೆಗಳನ್ನು ನಡೆಸುತ್ತಿರುವ ಪೆನ್ಪಾತ್ ಎಂಬ ಅಫಘಾನ್ ಚಾರಿಟಿ, ತಾಲಿಬಾನ್ ತನ್ನ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಯೋಜಿಸುತ್ತಿದೆ ಎಂದು ಪೆನ್ಪಾತ್ ಸಂಸ್ಥಾಪಕ ಮತಿಯುಲ್ಲಾ ವೆಸಾ ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಾಗ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ಮುಚ್ಚಲಾಯಿತು. ಆದರೆ ಎರಡು ತಿಂಗಳ ನಂತರ ತರಗತಿಗಳನ್ನು ಪುನರಾರಂಭಿಸಲು ಹುಡುಗರು ಮತ್ತು ಕಿರಿಯ ಹುಡುಗಿಯರಿಗೆ ಮಾತ್ರ ಅವಕಾಶ ನೀಡಲಾಯಿತು. ತಾಲಿಬಾನ್ 1996 ರಿಂದ 2001 ರವರೆಗೆ ತಮ್ಮ ಮೊದಲ ಅಧಿಕಾರದ ಅವಧಿಯಲ್ಲಿ ಮಾಡಿದಂತೆ ಹುಡುಗಿಯರ ಎಲ್ಲಾ ಔಪಚಾರಿಕ ಶಿಕ್ಷಣವನ್ನು ಸ್ಥಗಿತಗೊಳಿಸುತ್ತದೆ ಎಂಬ ಭಯವಿತ್ತು. ಹಲವಾರು ರಾಷ್ಟ್ರಗಳು ಮತ್ತು ಸಂಸ್ಥೆಗಳು ಶಿಕ್ಷಕರಿಗೆ ವೇತನ ನೀಡಲು ಮುಂದಾಗುವುದರೂ ಹೊಸ ತಾಲಿಬಾನ್ ಆಡಳಿತ ಬಾಲಕಿಯ ಶಿಕ್ಷಣಕ್ಕೆ ಅಡ್ಡಗಾಲು ಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ