news18-kannada Updated:February 21, 2021, 8:17 AM IST
ನಾಯಿ
ಇಷ್ಟು ದಿನ ಕೊರೋನಾ ಸೋಂಕು ಜನರನ್ನು ಬೆಚ್ಚುವಂತೆ ಮಾಡಿತ್ತು. ಇದೀಗ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಕೇವಲ ಮೂರು ದಿನದಲ್ಲಿ 200ಕ್ಕೂ ಹೆಚ್ಚು ನಾಯಿಗಳು ಮೃತಪಟ್ಟಿವೆ ಎಂದು ವರದಿಯಾಗಿದೆ. ಕೊರೋನಾ ಸೋಂಕಿನ ವೇಳೆ ಸಾವಿರಾರು ಜನರು ಮೃತಪಟ್ಟ ಘಟನೆ ಬಳಿಕ ನೂರಾರು ನಾಯಿಗಳು ಸಾವನ್ನಪ್ಪಿರುವುದು ಅಲ್ಲಿನ ಸ್ಥಳೀಯರಿಗೆ ಆತಂಕವನ್ನುಂಟು ಮಾಡಿದೆ.
ಹೌದು, ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ್ ನಗರದಲ್ಲಿನ ಜನರಿಗೆ ಆತಂಕ ಮೂಡಿಸಿದೆ. ಬಿಷ್ಣುಪುರ್ ನಗರದಲ್ಲಿ ಮೂರು ದಿನದಲ್ಲಿ 200ಕ್ಕೂ ಹೆಚ್ಚು ನಾಯಿಗಳು ಸತ್ತಿವೆ. ಮಂಗಳವಾರದಂದು 60 ನಾಯಿ ಮೃತಪಟ್ಟರೆ, ಬುಧವಾರದಂದು 97 ನಾಯಿ ಮೃತಪಟ್ಟರೆ, ಗುರುವಾರದಂದು 45 ನಾಯಿಗಳು ಸತ್ತಿವೆ.
ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ನಾಸಾ ರೋವರ್; ಪರ್ಸಿವಿಯರೆನ್ಸ್ ಹಂಚಿಕೊಂಡಿರುವ ಈ ಅದ್ಭುತ ಚಿತ್ರಗಳನ್ನು ನೋಡಿ..!
ಈ ಕುರಿತಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದು ಬಿಷ್ಣುಪುರದ ನಾಗರಿಕ ಸಂಸ್ಥೆಯ ಮುಖ್ಯಸ್ಥ ದಿವಿಯೇಂಡು ಬಂಡೋಪಾಧ್ಯಾಯ ಅವರು ತಿಳಿಸಿದ್ದಾರೆ. ಇನ್ನು ಮೃತಪಟ್ಟಿರುವ ನಾಯಿಗಳ ದ್ರವವನ್ನು ಸಂಗ್ರಹಿಸಿ, ಕೋಲ್ಕತಾಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ನಾಯಿಗಳ ಶವಗಳನ್ನು ಬಿಷ್ಣುಪುರ ಪುರಸಭೆ ಡಂಪಿಂಗ್ ಮೈದಾನದಲ್ಲಿ ಹೂಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶು ವೈದ್ಯರು ಹೇಳಿದ್ದೇನು?:
ಮೂರು ದಿನದಲ್ಲಿ ಸತ್ತಿರುವ ನಾಯಿಗಳು ಸೋಂಕಿನಿಂದ ಮೃತಪಟ್ಟಿವೆ ಎಂದು ಪಶುವೈದ್ಯರು ಶಂಕಿಸಿದ್ದಾರೆ. ನಾಯಿಗಳಿಗೆ ಈ ಸಮಯದಲ್ಲಿ ಸೋಂಕು ಬರುವುದು ಸಾಮಾನ್ಯ. ನಾಯಿಗಳ ಸಾವಿನಿಂದ ಮನುಷ್ಯರು ಆತಂಕ ಪಡಬೇಕಾಗಿಲ್ಲ. ನಾಯಿಗಳಿಗೆ ಹರಡಿದ ಸೋಂಕು ಇತರೆ ಪ್ರಾಣಿಗಳಿಗೆ ಆಗಲಿ, ಮನುಷ್ಯರಿಗೆ ಆಗಲಿ ಹರಡುವ ಸಾಧ್ಯತೆಗಳಿಲ್ಲ. ಜನರು ನಿರ್ಭೀತಿಯಿಂದ ಇರಬೇಕು ಎಂದು ಪಶುವೈದ್ಯರು ಹೇಳಿದ್ದಾರೆ.
Published by:
Sushma Chakre
First published:
February 21, 2021, 8:17 AM IST