ಬೇರೆ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಶಿಕ್ಷೆ!: ಸೈಕಲ್​ನಲ್ಲೇ ಶವವನ್ನು ಕೊಂಡೊಯ್ದ ಬಡಪಾಯಿ...!


Updated:August 3, 2018, 12:57 PM IST
ಬೇರೆ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ಶಿಕ್ಷೆ!: ಸೈಕಲ್​ನಲ್ಲೇ ಶವವನ್ನು ಕೊಂಡೊಯ್ದ ಬಡಪಾಯಿ...!

Updated: August 3, 2018, 12:57 PM IST
ನ್ಯೂಸ್​ 18 ಕನ್ನಡ

ಒಡಿಶಾ(ಆ.03): ಆ್ಯಂಬುಲೆನ್ಸ್​ಗೆ ನೀಡಲು ಹಣವಿರಲಿಲ್ಲ ಎಂಬ ಕಾರಣಕ್ಕಾಗಿ ದಾನಾ ಮಾಂಜಿ ಎಂಬ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಶವವನ್ನು ಕಿ. ಮೀಟರ್​ಗಟ್ಟಲೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ಘಟನೆ ಯಾರೂ ಮರೆಯುವಂತಿಲ್ಲ. ದೂರದ ಒಡಿಶಾದಲ್ಲಿ ಈ ಘಟನೆ ನಡೆದಿದ್ದರೂ ದೇಶದ ಜನರನ್ನು ಭಾವುಕರನ್ನಾಗಿಸಿತ್ತು. ಆದರೀಗ ಮತ್ತದೇ ಒಡಿಶಾದಲ್ಲಿ ಇಂತಹುದೇ ಅಮಾನವೀಯ ಘಟನೆ ಮರುಕಳಿಸಿದೆ. ಈ ಬಾರಿ ಶವವನ್ನು ಸ್ಮಶಾನದವರೆಗೆ ಕೊಂಡೊಯ್ಯಲು ಇಡೀ ಒಂದು ಗ್ರಾಮವೇ ನಿರಾಕರಿಸಿದ್ದು, ಬೇರೆ ದಾರಿ ಇಲ್ಲದ ವ್ಯಕ್ತಿಯು ತನ್ನ ದಸೈಕಲ್​ಗೆ ಶವವನ್ನು ಕಟ್ಟಿ ಸ್ಮಶಾನಕ್ಕೆ ಸಾಗಿಸಿದ್ದಾನೆ. ಸಾವನ್ನಪ್ಪಿದ ಮಹಿಳೆಯ ತಂಗಿಯ ಗಂಡ ಬೇರೆ ಜಾತಿಯ ವಧುವನ್ನು ಮದುವೆಯಾಗಿದ್ದನೆಂದು ಗ್ರಾಮಸ್ಥರು ಈ ರೀತಿ ನಡೆಗೆ ಕಾರಣವೆನ್ನಲಾಗಿದೆ.

ಒಡಿಶಾದ ಕೃಷ್ಣಪಲ್ಲಿಯ ನಿವಾಸಿಯಾಗಿರುವ ಚರುರ್ಭುಜ್​ ಬಾಂಕ್​ ಎಂಬಾತ ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕಾಗಿ ಬೇರೆ ಜಾತಿಯ ಯುವತಿಯನ್ನು ಎರಡನೇ ವಿವಾಹವಾಗಿದ್ದ. ಇದರಿಂದಾಗಿ ಇಡೀ ಗ್ರಾಮವೇ ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ನೀರು ಆಹಾರವನ್ನೂ ನೀಡುತ್ತಿರಲಿಲ್ಲ. ಚತುರ್ಭುಜನ ಹೆಂಡತಿಯ ಅಕ್ಕನಿಗೆ ಕಳೆದ ಕೆಲ ದಿನಗಳ ಹಿಂದಷ್ಟೇ ಡಯೇರಿಯಾ ಆಗಿದ್ದು, ಎರಡು ದಿನಗಳ ಚಿಕಿತ್ಸೆ ಬಳಿಕ ಬುಧವಾರದಂದು ಆಸ್ಪತ್ರೆಯಲ್ಲೇ ಆವರು ಕೊನೆಯುಸಿರೆಳೆದಿದ್ದಾರೆ.


ಆಸ್ಪತ್ರೆಯ ಆ್ಯಂಬುಲೆನ್ಸ್​ ಮಹಿಳೆಯ ಶವವನ್ನು ಚತುರ್ಭುಜ್​ರವರ ಮನೆಯವರೆಗೂ ತಲುಪಿಸಿತ್ತು. ಆದರೆ ಶವ ಸ್ಮಶಾನಕ್ಕೆ ಕೊಂಡೊಯ್ಯಬೇಕಾಗಿತ್ತು,, ಈ ಸಂದರ್ಭದಲ್ಲಿ ಇಡೀ ಗ್ರಾಮವೇ ಆತನಿಗೆ ಸಹಾಯ ಮಾಡಲು ನಿತರಾಕರಿಸಿದೆ. ಮಹಿಳೆಯ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಡೀ ಗ್ರಾಮವೇ ನಿರಾಕರಿಸಿದ್ದನ್ನು ಕಂಡ ಚತುರ್ಭುಜ ತನ್ನ ಸೈಕಜಲ್​ಗೆ ಶವವನ್ನು ಕಟ್ಟಿ ಸ್ಮಶಾನಕ್ಕೊಯ್ದು ಅಂತಿಮ ಕ್ರಿಯೆ ನೆರವೇರಿಸಿದ್ದಾನೆ.

ಸದ್ಯ ವ್ಯಕ್ತಿಯು ಶವವನ್ನು ತನ್ನ ಸೈಕಲ್​ಗೆ ಕಟ್ಟಿ ಕೊಂಡೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗಿವೆ. ಜಾತಿ ಮೇಲಿನ ಕುರುಡು ಪ್ರೀತಿಗಾಗಿ ಮನುಷ್ಯತ್ವವನ್ನೇ ಮರೆತ ಗ್ರಾಮಸ್ಥರ ವಿರುದ್ಧ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ