Moral Policing: ನೈತಿಕ ಪೊಲೀಸ್​ಗಿರಿ ಮೆರೆದ ಗ್ರಾಮಪಂಚಾಯತ್​ ಅಧ್ಯಕ್ಷ: ಅಕ್ರಮ ಸಂಬಂಧ ಆರೋಪದ ಮೇಲೆ ಬುಡಕಟ್ಟು ಜನಾಂಗದ ಮಹಿಳೆಯ ಬೆತ್ತಲೆ ಮೆರವಣಿಗೆ 

Tribal woman paraded naked in Jharkhand: ಬುಡಕಟ್ಟು ಜನಾಂಗದ ವಿವಾಹಿತ ಮಹಿಳೆ ಅನ್ಯ ಕೋಮಿನ ಅಂದರೆ ಬುಡಕಟ್ಟು ಜನಾಂಗಕ್ಕೆ ಸೇರದ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗಿ ಹೆಂಗಸು ಮತ್ತು ಗಂಡಸು ಇಬ್ಬರನ್ನೂ ಹಿಡಿದು ಬೆತ್ತಲೆಯಾಗಿ ಊರು ತುಂಬ ಮೆರವಣಿಗೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Moral Policing: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಮೇಲೆ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳನ್ನು ಅಮಾನವೀಯವಾಗಿ ನಡೆಸಿಕೊಂಡ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ. ದುಮ್ಕಾ ತಾಲೂಕಿನ ಮಯೂರ್ನಾಚಾ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬುಡಕಟ್ಟು ಜನಾಂಗದ ವಿವಾಹಿತ ಮಹಿಳೆ ಅನ್ಯ ಕೋಮಿನ ಅಂದರೆ ಬುಡಕಟ್ಟು ಜನಾಂಗಕ್ಕೆ ಸೇರದ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಈ ಕಾರಣಕ್ಕಾಗಿ ಹೆಂಗಸು ಮತ್ತು ಗಂಡಸು ಇಬ್ಬರನ್ನೂ ಹಿಡಿದು ಬೆತ್ತಲೆಯಾಗಿ ಊರು ತುಂಬ ಮೆರವಣಿಗೆ ಮಾಡಲಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದ್ದು, ನಾಲ್ವರು ಪ್ರಮುಖ ಆರೋಪಿಗಳು ಮತ್ತು 50 ಇತರೆ ಹಳ್ಳಿಯ ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

  ಪೊಲೀಸ್​ ಮೂಲಗಳ ಮಾಹಿತಿ ಪ್ರಕಾರ, ಗಂಡು ಮಂಗಳವಾರ ತಡರಾತ್ರಿ, ಮಹಿಳೆಯನ್ನು ಭೇಟಿಯಾಗಲು ಹೋಗಿದ್ದನಂತೆ. ಈ ವೇಳೆ, ಕದ್ದು ಮುಚ್ಚಿ ಭೇಟಿ ಮಾಡುತ್ತಿರುವುದನ್ನು ನೋಡಿದ ಹಳ್ಳಿಗರು, ಇಬ್ಬರನ್ನೂ ಹಿಡಿದಿದ್ದಾರೆ. ನಂತರ ಇಬ್ಬರನ್ನೂ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಇಡೀ ಊರಿನ ಜನ ಈ ಅಮಾನವೀಯ ಘಟನೆಗೆ ಸಾಕ್ಷಿಯಾಗಿದ್ದಾರೆ ಮತ್ತು ಎಲ್ಲರೂ ಒಗ್ಗೂಡಿ ಹೇಯ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು, ಹಳ್ಳಿಗರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾ ಉಪ ವರಿಷ್ಠಾಧಿಕಾರಿ ಹಳ್ಳಿಗೆ ಭೇಟಿ ನೀಡಿ ವಿಚಾರಣೆ ಮುಂದುವರೆಸಿದ್ದಾರೆ.

  ಇದನ್ನೂ ಓದಿ: Crime News: ಗಲಾಟೆ ಮಾಡಿದ್ದಕ್ಕೆ ಬಾಲಕನ ನಾಲಿಗೆ ಕಟ್! ಸ್ನೇಹಿತನ ಕುಟುಂಬಸ್ಥರಿಂದಲೇ ನಡೀತು ಹೇಯ ಕೃತ್ಯ..!

  ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಹುಡುಗನನ್ನು ಗ್ರಾಮ ಪ್ರಧಾನ್​ ಮತ್ತು ಇತರ ಕೆಲ ಗ್ರಾಮ ಪಂಚಾಯತಿ ಸದಸ್ಯರು ರಾತ್ರಿ ಮಹಿಳೆಯ ಮನೆಗೆ ಹೋಗುತ್ತಿರುವುದನ್ನು ನೋಡಿದ್ದಾರೆ. ನಂತರ ವಶಕ್ಕೆ ಪಡೆದು, ನೈತಿಕ ಪೊಲೀಸ್​ಗಿರಿ ಮಾಡಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಆರು ಜನರನ್ನು ಬಂಧಿಸಲಾಗಿತ್ತು ಇನ್ನಷ್ಟು ಜನರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಎಸ್​ಪಿ ವಿಜಯ್​ ಕುಮಾರ್​, ಸುಮಾರು ಒಂದು ಕಿಲೋಮೀಟರ್​ ದೂರ ಇಬ್ಬರನ್ನೂ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಮಹಿಳೆಗೆ ಪೊಲೀಸ್​ ಸುರಕ್ಷತೆ ಒದಗಿಸಲಾಗಿದ್ದು, ಆಕೆಯ ಮೇಲೆ ಯಾವುದೇ ರೀತಿಯ ಕೃತ್ಯ ಘಟಿಸದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಇದನ್ನೂ ಓದಿ: ಸೆಕಂಡ್​ ಹ್ಯಾಂಡ್​ ಕಾರ್​ ಷೋರೂಮಿನ ಕಾರ್​ ಡಿಕ್ಕಿಯಲ್ಲಿ ಬೆತ್ತಲಾಗಿ ಸಿಕ್ಕಿಬಿದ್ದ ಮಹಿಳೆ: ಬಂಧಿಸಿದ ಪೊಲೀಸರು

  ಸ್ಥಳೀಯರ ಮಾಹಿತಿ ಪ್ರಕಾರ, ಸಂತ್ರಸ್ಥ ಮಹಿಳೆಯ ಗಂಡ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದು, ಮೂರು ವರ್ಷಗಳಿಂದ ಆಚೆ ಬಂದಿಲ್ಲ. ಮಹಿಳೆಗೆ ಮೂವರು ಮಕ್ಕಳಿದ್ದು, ದಿನಗೂಲಿ ನೌಕರಳಾಗಿ ಕೆಲಸ ಮಾಡಿ ಸಂಸಾರ ಸಾಗಿಸುತ್ತಿದ್ದಾರೆ. ಈ ವೇಳೆ ಬುಡಕಟ್ಟು ಜನಾಂಗಕ್ಕೆ ಸೇರದ ವ್ಯಕ್ತಿಯೊಬ್ಬನ ಜೊತೆ ಆಕೆಗೆ ಪ್ರೇಮಾಂಕುರವಾಗಿದೆ. ಆತ ಕೂಡ ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸ್ಥಳೀಯರ ಆರೋಪದ ಪ್ರಕಾರ ಮಹಿಳೆಯೇ ಗಂಡಸನ್ನು ಮಂಗಳವಾರ ರಾತ್ರಿ ಮನೆಗೆ ಕರೆಸಿಕೊಂಡಿದ್ದು ಗ್ರಾಮ ಪ್ರಧಾನ್​ ನೋಡಿದಾಗ ಬೆತ್ತಲೆಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಈ ಕಾರಣಕ್ಕಾಗಿ ಅವರಿಗೆ ಪಾಠ ಕಲಿಸಲು ಬೆತ್ತಲೆ ಮೆರವಣಿಗೆ ಮಾಡಲಾಗಿದೆ ಎಂದು ದೂರಲಾಗಿದೆ. ಅದೇನೆ ಇದ್ದರೂ ನೈತಿಕ ಪೊಲೀಸ್​ ಗಿರಿಯನ್ನು ಸಮರ್ಥಿಸುವ ಹುಂಬರಿಗೆ ಬುದ್ಧಿ ಕಲಿಸುವ ಕೆಲಸ ಪೊಲೀಸ್​ ಇಲಾಖೆ ಮಾಡಬೇಕಿದೆ. ಜತೆಗೆ ಘಟನೆಯ ವಿಡಿಯೋ ಕೂಡ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಇಬ್ಬರ ಮಾನಭಂಗ ಮಾಡಲಾಗಿದೆ.

  ಇದನ್ನೂ ಓದಿ: ತರಕಾರಿ ಕೀಳುವ ಕೆಲಸಕ್ಕೆ ಈ ಸಂಸ್ಥೆ ಕೊಡುತ್ತಿದೆ ವಾರ್ಷಿಕ ರೂ. 63 ಲಕ್ಷ ಸಂಬಳ: ಅದೇನು ಚಿನ್ನದ ತರಕಾರಿಯೇ? ಇಲ್ಲಿದೆ ಉತ್ತರ

  ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್​ ಆದ ನಂತರ ಪೊಲೀಸರು ಸ್ವಇಚ್ಛಾ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಗ್ರಾಮ ಪ್ರಧಾನ್​ ಶಮುದಾನ್​ ಕಿಸ್ಕು, ಅವರ ಮಗ ಕಿರನ್​ ಕಿಸ್ಕು ಮತ್ತು ಅವರದ್ದೇ ಕುಟುಂಬದ ಖಂಡು ಮುರ್ಮು, ದಿವಾನ್​ ಮುರ್ಮು, ಮೋತಿ ಲಾಲ್​ ಮುರ್ಮು ಮತ್ತು ಗೋಪಿನ್​ ಮುರ್ಮು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
  Published by:Sharath Sharma Kalagaru
  First published: