HOME » NEWS » National-international » IMRAN KHAN TURNING CHAUFFEUR FOR SAUDI CROWN PRINCE MBS IS DRIVING TWITTER CRAZY

ಕಾರು​ ಚಾಲಕನಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​

ಇಸ್ಲಾಮಾಬಾದ್​ಗೆ ಬಂದಿಳಿದ ಸೌದಿ ರಾಜನಿಗೆ ಆತ್ಮೀಯವಾಗಿ ಬರಮಾಡಿಕೊಂಡ ಪಾಕ್​ ಪ್ರಧಾನಿ ಇಮ್ರಾನ್​ ಶಿಷ್ಟಾಚಾರ ಉಲ್ಲಂಘಿಸಿ, ತಾವೇ ಸ್ವತಃ ಕಾರು ಚಾಲನೆ ಮಾಡುವ ಮೂಲಕ  ಸೌದಿ ರಾಜನಿಗೆ ಡ್ರೈವರ್​ ಆಗಿದ್ದಾರೆ.

Seema.R | news18
Updated:February 19, 2019, 4:16 PM IST
ಕಾರು​ ಚಾಲಕನಾದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​
ಇಮ್ರಾನ್​ ಖಾನ್​- ಸೌದಿ ರಾಜ
  • News18
  • Last Updated: February 19, 2019, 4:16 PM IST
  • Share this:
ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ಗೆ ಹೊಸ ಉದ್ಯೋಗ ದೊರೆಯಿತೆ ಇದು ಸಾಮಾಜಿಕ ಜಾಲತಾಣದಲ್ಲಿ ಎದ್ದಿರುವ ಹೊಸ ಪ್ರಶ್ನೆ ಇದಕ್ಕೆ ಕಾರಣ ಅವರು ಕಾರ್​ ಡ್ರೈವರ್​ ಆಗಿರುವುದು.

ಎರಡು ದಿನದ ಹಿಂದೆ ಪಾಕಿಸ್ತಾನದ ಇಸ್ಲಾಮಾಬಾದ್​ಗೆ ಭೇಟಿ ನೀಡಿದ ಸೌದಿ ಅರೇಬಿಯಾದ ರಾಜ ಮೊಹಮ್ಮದ್​ ಬಿನ್​ ಸಲ್ಮಾನ್​ ಅವರಿಗೆ ಇಮ್ರಾನ್​ ಖಾನ್​ ರಾಜಾತಿಥ್ಯವನ್ನು ನೀಡಿದ್ದಾರೆ. ಇದೇ ವೇಳೆ ವಿವಿಧ ಅಭಿವೃದ್ಧಿ ಪರ ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದ್ದಾರೆ.

ಇಸ್ಲಾಮಾಬಾದ್​ಗೆ ಬಂದಿಳಿದ ಸೌದಿ ರಾಜನಿಗೆ ಆತ್ಮೀಯವಾಗಿ ಬರಮಾಡಿಕೊಂಡ ಪಾಕ್​ ಪ್ರಧಾನಿ ಇಮ್ರಾನ್​ ಶಿಷ್ಟಾಚಾರ ಉಲ್ಲಂಘಿಸಿ, ತಾವೇ ಸ್ವತಃ ಕಾರು ಚಾಲನೆ ಮಾಡುವ ಮೂಲಕ  ಸೌದಿ ರಾಜನಿಗೆ ಡ್ರೈವರ್​ ಆಗಿದ್ದಾರೆ.

ಇದನ್ನು ಓದಿ: ಭಾರತದ ಮಾತಿಗೆ ಗೌರವ ಕೊಟ್ಟು ಪಾಕ್​ನಿಂದ ವಾಪಸ್ ಸೌದಿಗೆ ಹೋಗಿ ನಂತರ ಭಾರತಕ್ಕೆ ಬಂದ ಸೌದಿ ರಾಜ

ಸೌದಿ ರಾಜನಿಗಾಗಿ ಕಾರ್​ ಡ್ರೈವರ್ ಆದ ಪ್ರಧಾನಿ ಇಮ್ರಾನ್​ ಖಾನ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ಕಾರ್ಯಕ್ಕೆ ಟೀಕೆಗಳು ವ್ಯಕ್ತವಾಗಿದೆ.

ಕೆಲವೇ ಕೆಲವು ಇರುವ ಉದ್ಯೋಗಗಳಿಗೂ ವಿವಿಐಪಿಗಳು ಬಂದಾರ? ಇಮ್ರಾನ್​ಗೆ ಹೊಸ ಉದ್ಯೋಗ ದೊರೆಯಿತಾ? ಅತಿ ದುಬಾರಿ ಸಂಪಾದನೆ ಮಾಡಿದ ಕಾರು ಚಾಲಕ ಇಮ್ರಾನ್​ ? ಉಬಾರ್​ ಚಾಲಕರ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

First published: February 19, 2019, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories