ಪಾಕ್​ ಚುನಾವಣೆ: ನೆಲಕಚ್ಚಿದ ದಿಗ್ಗಜರು, ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಿ ಇಮ್ರಾನ್​ ಖಾನ್​ ಬಹುತೇಕ ಖಚಿತ


Updated:July 26, 2018, 2:29 PM IST
ಪಾಕ್​ ಚುನಾವಣೆ: ನೆಲಕಚ್ಚಿದ ದಿಗ್ಗಜರು, ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಿ ಇಮ್ರಾನ್​ ಖಾನ್​ ಬಹುತೇಕ ಖಚಿತ
  • Share this:
ನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.26): ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ನಿರೀಕ್ಷೆಯಂತೆಯೇ ನಿವೃತ್ತ ಕ್ರೆಕೆಟಿಗ ಇಮ್ರಾನ್​ ಖಾನ್​ ನೇತೃತ್ವದ ತೆಹ್ರೀಕ್​-ಎ-ಇನ್ಸಾಫ್​ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಏಕೈಕ ಅಗ್ರಗಣ್ಯ ಪಕ್ಷವಾಗಿ ಹೊರಹೊಮ್ಮಿದೆ.

ಪಾಕ್​ ಇತಿಹಾಸದಲ್ಲೇ ಮೊದಲ ಬಾರಿಗೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದರೂ, ಅತಿ ಹೆಚ್ಚು ಸ್ಥಾನ ಗಳಿಸಿರುವ ಇಮ್ರಾನ್​ ಖಾನ್​ರ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮೈತ್ರಿ ಕುರಿತ ಮಾತುಕತೆ ಆರಂಭವಾಗಿದೆ. ಸರ್ಕಾರ ರಚಿಸಲು ಬೇಕಿರುವ ಸಂಖ್ಯಾಬಲ ಯಾವುದೇ ಪಕ್ಷಕ್ಕೆ ಸಿಗುವ ಸಾಧ್ಯತೆಯಿಲ್ಲದ ಕಾರಣ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿವೆ.

272 ಸ್ಥಾನಗಳ ಪೈಕಿ ಪಿಟಿಐ 115 ಸ್ಥಾನ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷಕ್ಕೆ 64 ಸ್ಥಾನ, ಭುಟ್ಟೋ ನೇತೃತ್ವದ ಪಿಪಿಪಿ ಪಕ್ಷ 38 ಸ್ಥಾನಗಳನ್ನು ಗೆಳಿಸಿವೆ.

ಇಮ್ರಾನ್​ ಖಾನ್​ಗೆ ಪ್ರಬಲ ಪೈಪೋಟಿ ಅನಿಸಿಕೊಂಡಿದ್ದ ಬಿಲಾವಲ್​ ಬುಟ್ಟೋ ಜರ್ದಾರಿ, ನಿರ್ಗಮಿತ ಪ್ರಧಾನಿಯಾಗಿರುವ ಶಾಹಿದ್​ ಕಗಸ್ಸೀ ಅಬ್ಬಾಸಿ ಮತ್ತು ಮಾಜಿ ಪ್ರಧಾನಿ ಯೂಸಫ್​ ರಾಜ್​ ಗಿಲಾನಿಗೆ ಸೋಲುಂಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಪ್ರಧಾನಿ ಹುದ್ದೆ ಇಮ್ರಾನ್​ ಖಾನ್​ರಿಗೆ ಒಲಿಯುವುದು ನಿಚ್ಛಳವಾಗಿದೆ.

ಅಧಿಕೃತವಾಗಿ ಪಾಕ್​ ಚುನಾವಣಾ ಆಯೋಗ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಘೋಷಿಸಲಿದ್ದು, ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನು ಪಾಕ್​ ರಾಜಕೀಯ ಅಂಗಳದಲ್ಲಿ ಮೈತ್ರಿ ಚರ್ಚೆಗಳು ಆರಂಭಗೊಂಡಿವೆ. ಇಮ್ರಾನ್​ ಖಾನ್​ ಬಿಲಾವಲ್​ ಬುಟ್ಟೋ ಪಕ್ಷದ ಶಾಸಕರ ಜತೆ ಮೈತ್ರಿ ಮಾಡಿಕೊಂಡು ಪ್ರಧಾನಿಯಾಗುವ ಸಾಧ್ಯೆತಗಳು ಹೆಚ್ಚಿವೆ. ಬೃಹತ್ ಅಕ್ರಮಗಳ ಆಪಾದಿತ ಪಿಎಂಎಲ್-ಎನ್‍ ಪಕ್ಷದ ಪ್ರಧಾನಿ ಅಭ್ಯರ್ಥಿ ಷರೀಫ್ ಅವರನ್ನು ಜನ ತಿರಸ್ಕರಿಸಿದ್ಧಾರೆ ಎಂದು ತಿಳಿದು ಬಂದಿದೆ.

ನಿನ್ನೆ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ ಮತ ಎಣಿಕೆ ಕಾರ್ಯವೂ ಪ್ರಾರಂಭವಾಗಿತ್ತು. ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವೂ ಆರಂಭಿಕ ಮುನ್ನಡೆ ಸಾದಿಸಿತ್ತು. ಈ ವೇಳೆ ಕೆಲವು ಸ್ಥಳಗಳಲ್ಲಿ ಬಾಂಬ್ ದಾಳಿಯಿಂದ ಹಿಂಸಾಚಾರಗಳು ನಡೆದವು. ಆದರೂ ಚುನಾವಣಾ ಅಧಿಕಾರಿಗಳು ಮತ ಎಣಿಕೆ ಕಾರ್ಯ ಮುಂದುವರಿಸಿದರು.ಇನ್ನು ಕೆಲವೇ ಕ್ಷಣಗಳಲ್ಲಿ ಅಧಿಕೃತ ಅಂತಿಮ ಫಲಿತಾಂಶ ಹೊರ ಬೀಳಲಿದೆ. ಇಮ್ರಾನ್​​ ಖಾನ್​ ಅವರಿಗೆ ಸಾಧ್ಯತೆಗಳಿದ್ದರು,  ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಕೆರಳಿಸಿದೆ. ಸರ್ಕಾರ ರಚಿಸಲು ಒಟ್ಟು 137 ಸ್ಥಾನಗಳು ಬೇಕಿದ್ದು, ಮೈತ್ರಿ ಸರ್ಕಾರ ರಚಿಸಬಹುದು ಎನ್ನಲಾಗಿದೆ.
First published:July 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ