ಭಾರತ - ಪಾಕ್​ ನಡುವಿನ ರಾಜತಾಂತ್ರಿಕ ಸಮಸ್ಯೆಗೆ ಇಮ್ರಾನ್​ ಖಾನ್​ - ಭಾರತ ಕ್ರಿಕೆಟಿಗರ​ ಸ್ನೇಹದಿಂದ ಪರಿಹಾರ ಸಿಗಬಹುದೇ?

news18
Updated:July 26, 2018, 8:21 PM IST
ಭಾರತ - ಪಾಕ್​ ನಡುವಿನ ರಾಜತಾಂತ್ರಿಕ ಸಮಸ್ಯೆಗೆ ಇಮ್ರಾನ್​ ಖಾನ್​ - ಭಾರತ ಕ್ರಿಕೆಟಿಗರ​ ಸ್ನೇಹದಿಂದ ಪರಿಹಾರ ಸಿಗಬಹುದೇ?
news18
Updated: July 26, 2018, 8:21 PM IST
ವಿನಯ್​ ಭಟ್​, ನ್ಯೂ​ಸ್ 18 ಕನ್ನಡ

ನವದೆಹಲಿ (ಜುಲೈ 25): ಕ್ರಿಕೆಟ್, ರಾಜಕಾರಣ, ತನ್ನ ವೈಯಕ್ತಿಕ ಸುದ್ದಿಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದ ಇಮ್ರಾನ್ ಖಾನ್ ಈಗ ಪಾಕಿಸ್ತಾನ ದೇಶದ 19ನೇ ಪ್ರಧಾನಿಯ ಪಟ್ಟವೇರಿದ್ದಾರೆ. 272 ಸ್ಥಾನಗಳ ಪೈಕಿ ಪಿಟಿಐ 115 ಸ್ಥಾನ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷಕ್ಕೆ 64 ಸ್ಥಾನ, ಭುಟ್ಟೋ ನೇತೃತ್ವದ ಪಿಪಿಪಿ ಪಕ್ಷ 38 ಸ್ಥಾನಗಳನ್ನು ಗಳಿಸಿದೆ. ಈ ಮೂಲಕ ಇಮ್ರಾನ್ ಖಾನ್ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಕ್ರಿಕೆಟಿಗ ಎಂಬ ಕೀರ್ತಿಯನ್ನು ತನ್ನದಾಗಿಸಿದ್ದಾರೆ.

ಇಮ್ರಾನ್ ಖಾನ್ ಅವರ ಕ್ರಿಕೆಟ್ ಇತಿಹಾಸ ನೋಡುವುದಾದರೆ 175 ಏಕದಿನ ಹಾಗೂ 88 ಟೆಸ್ಟ್​​ ಪಂದ್ಯವನ್ನಾಡಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 182 ವಿಕೆಟ್ ಪಡೆದು 3709 ರನ್​ ಕಲೆಹಾಕಿದ್ದಾರೆ. ಅಂತೆಯೆ ಟೆಸ್ಟ್​ನಲ್ಲಿ 362 ವಿಕೆಟ್​​ ಕಿತ್ತಿದ್ದು 3807 ರನ್ ಬಾರಿಸಿದ್ದಾರೆ. ಟೆಸ್ಟ್​ ಪಂದ್ಯದಲ್ಲಿ 58 ರನ್​ ನೀಡಿ 8 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ. ಇನ್ನು ಏಕದಿನ ಪಂದ್ಯದಲ್ಲಿ ಕೇವಲ 14 ರನ್​ಗೆ 6 ವಿಕೆಟ್ ಪಡೆದ ಸಾಧನೆ ಮಾಡಿ ಎಲ್ಲಾ ಮಾಧರಿಯಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ. 1992ರ ಮಾರ್ಚ್​​ 25ರಂದು ಇಂಗ್ಲೆಂಡ್ ವಿರುದ್ಧ ಆಡಿದ ಪಂದ್ಯವೇ ಇಮ್ರಾನ್ ಖಾನ್​ರ ವೃತ್ತಿ ಬದುಕಿನ ಕೊನೆಯ ಕ್ರಿಕೆಟ್ ಪಂದ್ಯವಾಗಿದೆ. ಅಲ್ಲದೆ 1992ರಲ್ಲಿ ಪಾಕಿಸ್ತಾನಕ್ಕೆ ಇಮ್ರಾನ್ ಖಾನ್ ಅವರು ವಿಶ್ವಕಪ್ ತಂದು ಕೊಟ್ಟಿದ್ದರು.

ಪ್ರಧಾನಿಯಾಗಿ ಆಯ್ಕೆಯಾದ ಇಮ್ರಾನ್ ಖಾನ್  ಅವರಿಗೆ ಅನೇಕ ಕ್ರಿಕೆಟರ್ಸ್​​ ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ. ಅದರಲ್ಲು ಇಮ್ರಾನ್ ಖಾನ್​ ಅವರ ಕ್ರಿಕೆಟ್ ಬದುಕಿನ ಸಮಕಾಲಿನವರಾದ ಭಾರತ ತಂಡದ ಮಾಜಿ ಆಟಗಾರ ಕಪಿಲ್ ದೇವ್ ಕೂಡ ವಿಷ್ ಮಾಡಿದ್ದಾರೆ. ಅಷ್ಟೆ ಅಲ್ಲದೆ ಭಾರತ-ಪಾಕಿಸ್ತಾನ ನಡುವಣ ರಾಜತಾಂತ್ರಿಕ ಸಮಸ್ಯೆನ್ನು ಬಗೆಹರಿಸಲು ಸಲಹೆ ನೀಡಿದ್ದಾರೆ. ಈ ಸಮಸ್ಯೆ ಬಗೆ ಹರಿಯಲು ಕ್ರಿಕೆಟ್ ಸಹಾಯ ಪಡೆದರೆ ಎಲ್ಲಾ ಆಟಗಾರರು ಸಂತೋಷ ಪಡುತ್ತಾರೆ ಎಂದು ಹೇಳಿದ್ದಾರೆ. ಇದು ಇಮ್ರಾನ್ ಖಾನ್ ಅವರ ಬಹು ದೊಡ್ಡ ಸಾಧನೆ. ಅವರು ಈ ಸ್ಥಾನ ತಲುಪಲು 25 ವರ್ಷ ತೆಗೆದುಕೊಂಡಿದ್ದಾರೆ. ಅವರ ಈ ಯಶಸ್ಸು ಉತ್ತಮ ದೇಶಕ್ಕಾಗಿರಲಿ ಎಂದು ಹೇಳಿದ್ದಾರೆ.

ಸದ್ಯ ಇಮ್ರಾನ್ ಖಾನ್ ಪಾಕ್ ಪ್ರಧಾನಿ ಆಗಿರುವುದು​ ಭಾರತ ದೇಶ ಸೇರಿದಂತೆ ಭಾರತ ಕ್ರಿಕೆಟ್ ತಂಡಕ್ಕೆ ಒಳಿತಾಗಬಹುದೇ..? ಎಂಬ ಪ್ರಶ್ನೆ ದೇಶದ ಜನರಲ್ಲಿ ಹುಟ್ಟುಕೊಂಡಿದೆ. ಯಾಕೆಂದರೆ ಬದ್ಧವೈರಿಗಳು ಎಂದು ಹೇಳಲ್ಪಡುವ ದೇಶ ಎಂದರೆ ಅದು ಭಾರತ ಹಾಗೂ ಪಾಕಿಸ್ತಾನ. ಇದರಿಂದ ಕ್ರಿಕೆಟ್ ಕೂಡ ಹೊರತಾಗಿಲ್ಲ. ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯ ಎಂದರೆ ಅದು ಎರಡು ದೇಶಗಳ ನಡುವಣ ಯುದ್ದ ಎಂದೆ ಹೇಳಲಾಗುತ್ತದೆ. ಆ ಮಟ್ಟಕ್ಕೆ ಭಾರತ-ಪಾಕಿಸ್ತಾನ ದೇಶ ಬೆಳೆದು ನಿಂತಿದೆ. ಅಲ್ಲದೆ ಈ ಹಿಂದೆ ಗಡಿಯಲ್ಲಿ ಗುಂಡಿನ ದಾಳಿ ಮತ್ತು ಭಯೋತ್ಪಾದನೆ ಕೃತ್ಯ ನಿಲ್ಲಿಸುವ ತನಕ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂದು ಭಾರತ ಸರ್ಕಾರ ಹೇಳಿತ್ತು. ಹೀಗಾಗಿ ಕ್ರಿಕೆಟಿಗರೂ ಆಗಿರುವ ಇಮ್ರಾನ್ ಖಾನ್ ಅವರಿಂದ ಭಾರತ ಹಾಗೂ ಪಾಕಿಸ್ತಾನ ನಡುವಣ ಕ್ರಿಕೆಟ್ ಕಾಳಗ ಸರಿಹೋಗ ಬಹುದಾ ಎಂಬುದು ಪ್ರಶ್ನೆಯಾಗಿದೆ. ಇನ್ನು ಇಮ್ರಾನ್ ಅವರು ಅನೇಕ ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಭಾರತೀಯ ಕ್ರಿಕೆಟ್ ಪ್ರೀತಿ ಬಗ್ಗೆ ಚೆನ್ನಾಗೆ ಅರಿತುಕೊಂಡಿದ್ದಾರೆ. ಅಲ್ಲದೆ ಈಗಾಗಲೇ ಭಾರತದ ಜೊತೆ ಉತ್ತಮ ಸಂಬಂಧಕ್ಕೆ ಯತ್ನ ಎಂಬ ಮಾತನ್ನೂ ಹೇಳಿದ್ದಾರೆ. ಈ ಮೂಲಕವಾದರು ಭಾರತ ಹಾಗೂ ಪಾಕಿಸ್ತಾನ ನಡವೆ ಇರುವ ತಡೆಗೋಡೆ ಕಳಚಿ ಬೀಳುತ್ತಾ ನೋಡಬೇಕಿದೆ.

ಪ್ರಧಾನಿಯಾಗಿ ಆಯ್ಕೆಯಾದ ಇಮ್ರಾನ್ ಖಾನ್  ಅವರಿಗೆ ಅನೇಕ ಕ್ರಿಕೆಟ್ ದಿಗ್ಗಜರು ಶುಭಕೋರಿದ್ದಾರೆ.

 
Loading...
    

First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...