ಇಸ್ಲಮಾಬಾದ್: ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲೇ ಇರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಇದೀಗ ಮಹಿಳೆ ಜೊತೆಗೆ ಅಶ್ಲೀಲ ಸಂಭಾಷಣೆ ನಡೆಸಿರುವ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಧ್ವನಿ ಇಮ್ರಾನ್ ಖಾನ್ ಅವರದ್ದೇ ಎಂದು ವಿರೋಧ ಪಕ್ಷ ಆರೋಪಿಸಿದೆ. ಆದರೆ ಇದು ನಕಲಿ ಎಂದು ಇಮ್ರಾನ್ ಖಾನ್ ನಾಯಕತ್ವದ ‘ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್‘ (Pakistan Tehreek -e-Insaaf ) (ಪಿಟಿಐ) ಪಕ್ಷ ಹೇಳಿದೆ. ಪಾಕಿಸ್ತಾನಿ ಪತ್ರಕರ್ತ ಸೈಯದ್ ಅಲಿ ಹೈದರ್ ಅವರು ಯೂಟ್ಯೂಬ್ (You tube) ಚಾನೆಲ್ವೊಂದರಲ್ಲಿ ಲೀಕ್ ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಗೂ (General Election) ಮುನ್ನವೇ ಈ ಆಡಿಯೋ ಹೊರಬಿದ್ದಿದ್ದು, ಇಡೀ ರಾಷ್ಟ್ರವೇ ಶಾಕ್ ಆಗಿದೆ. ಅಲ್ಲದೇ ಈ ಆಡಿಯೋ ಪಾಕಿಸ್ತಾನದ ಪ್ರಧಾನಿ ಕಚೇರಿಯಿಂದ ಹೊರಬಿದ್ದಿದೆ ಎಂದು ಕೆಲವು ವರದಿಗಳು ತಿಳಿಸಿದೆ.
ಇಮ್ರಾನ್ ಖಾನ್ ಆಡಿಯೋ ನಕಲಿ ಅಂದ ಪಿಟಿಐ
ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಇಮ್ರಾನ್ ಖಾನ್ ಅವರ ಈ ಆಡಿಯೋ ವೈರಲ್ ಆಗಿದೆ. ಆದರೆ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಈ ಆಡಿಯೋ ಕ್ಲಿಪ್ ನಕಲಿ ಮತ್ತು ತಮ್ಮ ನಾಯಕರನ್ನು ಟಾರ್ಗೆಟ್ ಮಾಡಿ ಅವರ ಹೆಸರಿಗೆ ಧಕ್ಕೆ ತರಲು ಸರ್ಕಾರ ಈ ರೀತಿಯ ಆಡಿಯೋ ಮತ್ತು ವೀಡಿಯೋಗಳನ್ನು ಉಪಯೋಗಿಸುತ್ತಿದೆ ಎಂದು ಇಮ್ರಾನ್ ಪರ ಬ್ಯಾಟಿಂಗ್ ನಡೆಸಿದೆ.
ಆಡಿಯೋದಲ್ಲಿ ಇಮ್ರಾನ್ ಖಾನ್ ಅವರು, ತಮ್ಮನ್ನು ಭೇಟಿಯಾಗಲು ಮಹಿಳೆಗೆ ಒತ್ತಾಯಿಸುವುದನ್ನು ಹಾಗೂ ಲೈಂಗಿಕತೆ ಕುರಿತಂತೆ ಸಂಭಾಷಣೆ ನಡೆಸುವುದನ್ನು ಕೇಳಬಹುದಾಗಿದೆ.
ಮಹಿಳೆಗೆ ತಮ್ಮನ್ನು ಭೇಟಿಯಾಗುವಂತೆ ಇಮ್ರಾನ್ ಖಾನ್ ಒತ್ತಾಯ
ಇಮ್ರಾನ್ ಅವರು ತಮ್ಮ ಬಳಿಗೆ ಬರುವಂತೆ ಮಹಿಳೆಯನ್ನು ಕರೆಯುತ್ತಾರೆ. ಆದರೆ ಮಹಿಳೆ ನಾನು ಈಗ ಬರುವುದಿಲ್ಲ. ಈಗಾಗಲೇ ನಿಮ್ಮ ವರ್ತನೆಯಿಂದ ನನ್ನ ಖಾಸಗಿ ಅಂಗಗಳಿಗೆ ನೋವಾಗುತ್ತಿದೆ. ಮತ್ತೊಂದು ದಿನ ಬರುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್, ಆ ದಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ಬದಲಾಯಿಸುತ್ತೇನೆ ಎಂದು ಹೇಳುತ್ತಾರೆ.
ಇದನ್ನೂ ಓದಿ: Anti Terrorism: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಕಂಟಕ, ಯಾವುದೇ ಕ್ಷಣದಲ್ಲೂ ಬಂಧನದ ಆತಂಕ!
ಇಂದು ನನ್ನ ಸಂಬಂಧಿಕರು ಮತ್ತು ಮಕ್ಕಳು ಬರುತ್ತಿದ್ದಾರೆ. ಹಾಗಾಗಿ ನಿನ್ನನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಆದರೆ ಅವರು ಹೋದ ಬಳಿಕ ಸಮಯ ನೋಡಿಕೊಂಡು ನಾಳೆ ನಿನಗೆ ತಿಳಿಸುತ್ತೇನೆ ಎಂದು ಹೇಳುತ್ತಾರೆ.
ರಾಜಕೀಯ ನಾಯಕರಿಂದ ಟೀಕೆಗೊಳಗಾದ ಇಮ್ರಾನ್ ಖಾನ್
ಇನ್ನೂ ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ, ಪ್ರಧಾನಿ ಕಚೇರಿಯಲ್ಲಿ ಇಮ್ರಾನ್ ಖಾನ್ ಏನೆಲ್ಲಾ ಆಟವಾಡಿದ್ದಾರೆ ಎಂದು ಹಲವು ಪಕ್ಷಗಳ ರಾಜಕೀಯ ನಾಯಕರು ಟೀಕಿಸುತ್ತಿದ್ದಾರೆ. ಈ ಆಡಿಯೋ ಇದೀಗ ಪಾಕಿಸ್ತಾನ ಮಾತ್ರವಲ್ಲ, ವಿಶ್ವಾದ್ಯಂತ ಪಾಕಿಸ್ತಾನದ ಪ್ರಧಾನಿ ಕಚೇರಿಯಲ್ಲಿ ನಡೆಯುತ್ತಿರುವ ಅಸಲಿ ಆಟಗಳನ್ನು ಬೆತ್ತಲೆ ಮಾಡಿದೆ ಎಂದು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Imran Khan: ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ, ಪಾಕ್ ಮಾಜಿ ಪ್ರಧಾನಿಗೆ ಗಾಯ
ಇನ್ನೂ ಈ ಕ್ಲಿಪ್ನಲ್ಲಿರುವ ಧ್ವನಿ ಇಮ್ರಾನ್ ಖಾನ್ ಅವರದ್ದೋ, ಇಲ್ಲವೋ ಎಂಬುವುದು ದೃಢವಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಅಶ್ಲೀಲ ಸಂಭಾಷಣೆಯ ಆಡಿಯೋ ವೈರಲ್ನಿಂದ ಇಮ್ರಾನ್ ಖಾನ್ ಅವರಿಗೆ ತೀವ್ರ ಮುಖಭಂಗವಾಗಿದೆ ಎಂದು ಪತ್ರಕರ್ತೆ ಮತ್ತು ದಕ್ಷಿಣ ಏಷ್ಯಾ ವರದಿಗಾರ್ತಿ ನೈಲಾ ಇನಾಯತ್ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ