Imran Khan: ಕೊನೆಗೂ 'Out' ಆದ ಇಮ್ರಾನ್‌ ಖಾನ್! 'ವಿಶ್ವಾಸ' ಕಳೆದುಕೊಂಡಿದ್ದಕ್ಕೆ ಪಾಕ್ ಪ್ರಧಾನಿ ಪದಚ್ಯುತಿ

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ವೇಳೆ ಮೈತ್ರಿ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದ ಇಮ್ರಾನ್ ಖಾನ್, ಪ್ರಧಾನಿ ಪಟ್ಟಕ್ಕೇರಿದ್ದರು. ಇದೀಗ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅಧಿಕಾರ ಕೊನೆಗೊಂಡಿದೆ.

ಪಾಕಿಸ್ತಾನ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್

  • Share this:
ಪಾಕಿಸ್ತಾನ: ಪಕ್ಕದ ದೇಶ ಪಾಕಿಸ್ತಾನದ (Pakistan) ಪ್ರಧಾನಿಯಾಗಿದ್ದ (Prime Minister) ಇಮ್ರಾನ್ ಖಾನ್ (Imran Khan) ಪ್ರಧಾನಮಂತ್ರಿ ಸ್ಥಾನದಿಂದ ಪದಚ್ಯುತಿಗೊಂಡಿದ್ದಾರೆ. ವಿಶ್ವಾಸಮತ (Trust Vote) ಸಾಬೀತು ಮಾಡುವಲ್ಲಿ ಇಮ್ರಾನ್ ಖಾನ್ ವಿಫಲರಾದ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನದಿಂದ ಅವರನ್ನು ಪದಚ್ಯುತಿಗೊಳಿಸಲಾಗಿದೆ (Overthrow). ನಿನ್ನೆ ಮಧ್ಯರಾತ್ರಿಯವರೆಗೂ (Mid Night) ನಡೆದ ರಾಜಕೀಯ ಹೈಡ್ರಾಮಾ (Political High Drama) ನಡುವೆಯೇ ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಅವಿಶ್ವಾಸ ನಿರ್ಣಯ ಮಂಡಿಸಿ ಇಮ್ರಾನ್ ಸರ್ಕಾರವನ್ನು ಪತಗಗೊಳಿಸಿವೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ವೇಳೆ ಮೈತ್ರಿ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದ ಇಮ್ರಾನ್ ಖಾನ್, ಪ್ರಧಾನಿ ಪಟ್ಟಕ್ಕೇರಿದ್ದರು. ಇದೀಗ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅಧಿಕಾರ ಕೊನೆಗೊಂಡಿದೆ.

ನಿನ್ನೆ ಮಧ್ಯರಾತ್ರಿವರೆಗೂ ಹೈಡ್ರಾಮಾ

ಅಧಿಕಾರ ಉಳಿಸಿಕೊಳ್ಳಲು ಕೊನೆಕ್ಷಣದವರೆಗೂ ಕಸರತ್ತು ನಡೆಸಿದ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಡಳಿತ ಪಕ್ಷದ ಸದಸ್ಯರ ಸಭಾತ್ಯಾಗದ ನಡುವೆ ರಾತ್ರಿ 11.58ಕ್ಕೆ ನಡೆದ ಅವಿಶ್ವಾಸ ನಿರ್ಣಯದ ಮತದಾನದಲ್ಲಿ ಇಮ್ರಾನ್ ಖಾನ್ ಸೋಲು ಅನುಭವಿಸಿದ್ದಾರೆ. ಸದನದಲ್ಲಿ ಹಾಜರಿದ್ದ ಪ್ರತಿಪಕ್ಷಗಳ 176 ಹಾಗೂ ಆಡಳಿತ ಪಕ್ಷದ 22 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು.

ತಮ್ಮ ನಿವಾಸದಲ್ಲೇ ತಂತ್ರ ಹೆಣೆದಿದ್ದ ಇಮ್ರಾನ್ ಖಾನ್

ತಡರಾತ್ರಿವರೆಗೆ ಇಮ್ರಾನ್‌ ಖಾನ್‌ ತಮ್ಮ ನಿವಾಸದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ ನಡೆಸಿದ್ರು. ಈ ನಡುವೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಐಎಸ್‌ಐ ಮುಖ್ಯಸ್ಥರು ಕೂಡ ಇಮ್ರಾನ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮತ ಹಾಕಲಾಯಿತು.

ಇದನ್ನೂ ಓದಿ: Arrest: ಪ್ರಸಿದ್ಧ ಮಸೀದಿಯಲ್ಲಿ ಕೇಳಿ ಬಂತು ದೇಶದ್ರೋಹಿ ಘೋಷಣೆ! 13 ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಖಾಕಿ

ವಿಶ್ವಾಸಮತ ಗೆಲ್ಲುವಲ್ಲಿ ಇಮ್ರಾನ್ ಖಾನ್ ವಿಫಲ

342 ಸದಸ್ಯರ ಪೈಕಿ ಅಸೆಂಬ್ಲಿಯಲ್ಲಿ 174 ಮಂದಿ ಇಮ್ರಾನ್ ಸರ್ಕಾರದ ವಿರುದ್ಧ, ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿ ಇಮ್ರಾನ್‌ ಖಾನ್‌ ಸರ್ಕಾರವನ್ನು ಕೆಳಗಿಳಿಸಿದರು. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ಕೊನೆಯವರೆಗೂ ತಡೆಯಲು ಆಡಳಿತ ಪಕ್ಷದ ಸದಸ್ಯರು ರಣತಂತ್ರ ಹೆಣೆದರೂ ಅಂತಿಮವಾಗಿ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಮಧ್ಯರಾತ್ರಿ 12.30ಕ್ಕೆ ನಡೆಯಿತು.

ಮತದಾನಕ್ಕೂ ಮುನ್ನವೇ ಸ್ಪೀಕರ್ ರಾಜೀನಾಮೆ

ಮತದಾನಕ್ಕೂ ಮುನ್ನವೇ ಸ್ಪೀಕರ್ ಮತ್ತು ಉಪಸಭಾಪತಿ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದರು. ಪ್ರತಿಪಕ್ಷದ ಪಿಎಂಎಲ್-ಎನ್ ನಾಯಕ ಅಯಾಜ್ ಸಾದಿಕ್ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು.

ಅಧಿಕಾರ ಕಳೆದುಕೊಂಡು ನಿರ್ಗಮಿಸಿದ ಇಮ್ರಾನ್ ಖಾನ್

ಸ್ಪೀಕರ್‌ಗಳ ಪ್ಯಾನೆಲ್‌ ಪಟ್ಟಿಯಲ್ಲಿಮೂರನೇಯವರಾದ ನವಾಜ್‌ ಷರೀಫ್‌ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ‌(ನವಾಜ್‌) ಪಕ್ಷದ ಹಿರಿಯ ಸದಸ್ಯ ಅಯಾಜ್‌ ಸಾದಿಕ್‌ ಅವರು ಹಂಗಾಮಿ ಸ್ಪೀಕರ್‌ ಆಗಿ ಆಯ್ಕೆಯಾದರು. ಹೊರ ಹೋಗಿರುವ ಆಡಳಿತ ಪಕ್ಷದ ಸದಸ್ಯರು ಒಳಬರಲು ಐದು ನಿಮಿಷ ಅವಕಾಶ ನೀಡಿದ ಸಾದಿಕ್‌ ಅವರು, 11.58ಕ್ಕೆ ಮತಕ್ಕೆ ಹಾಕಿದರು. ವಿಶ್ವಾಸಮತ ಕಳೆದುಕೊಳ್ಳುತ್ತಿದ್ದಂತೆಯೇ ಇಮ್ರಾನ್‌ ಖಾನ್‌ ಅವರು ಪ್ರಧಾನಿ ಕಚೇರಿಯಿಂದ ನಿರ್ಗಮಿಸಿದರು.

ಇದನ್ನೂ ಓದಿ: Mumbai Attack ಮಾಸ್ಟರ್‌ಮೈಂಡ್‌ಗೆ 31 ವರ್ಷ ಜೈಲು ಶಿಕ್ಷೆ! ಹಫೀಜ್ ಸಯೀದ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

ಮುಂದಿನ ಪ್ರಧಾನಿ ಯಾರು?

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಸೋದರ ಶಹಬಾಜ್‌ ಷರೀಫ್‌ ನೂತನ ಪ್ರಧಾನಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಸದ್ಯ ವಿರೋಧ ಪಕ್ಷದ ನಾಯಕ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಶೆಹಬಾಜ್ ಷರೀಫ್ ಅವರ ನೇತೃತ್ವದಲ್ಲಿ ಪಾಕಿಸ್ತಾನದಲ್ಲಿ ಹೊಸ ಸರ್ಕಾರವನ್ನು ರಚಿಸಬಹುದು ಎನ್ನಲಾಗುತ್ತಿದೆ.
Published by:Annappa Achari
First published: