ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ, ಹೀಗಾಗಿ ಪಾಕ್ ಜೊತೆಗೆ ಸ್ನೇಹ ಹೊಂದಲು ಬಯಸುತ್ತಿಲ್ಲ; ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದಲ್ಲಿರುವ ಕರ್ತಾರಪುರದ ಸಿಖ್​ ಪವಿತ್ರ ಸ್ಥಳಕ್ಕೆ ಬರಲು ಇರುವ ಎಲ್ಲ ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಭಾರತದಲ್ಲಿ ಮುಂದಿನ ಚುನಾವಣೆ ಮುಗಿದ ಮೇಲೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಪ್ರಯತ್ನ ಮುಂದುವರೆಸುತ್ತೇನೆ ಎಂದು ಖಾನ್​ ಹೇಳಿದ್ದಾರೆ.

HR Ramesh | news18india
Updated:December 7, 2018, 1:27 PM IST
ಬಿಜೆಪಿ ಮುಸ್ಲಿಂ ವಿರೋಧಿ ಪಕ್ಷ, ಹೀಗಾಗಿ ಪಾಕ್ ಜೊತೆಗೆ ಸ್ನೇಹ ಹೊಂದಲು ಬಯಸುತ್ತಿಲ್ಲ; ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
HR Ramesh | news18india
Updated: December 7, 2018, 1:27 PM IST
ನವದೆಹಲಿ: ಭಾರತೀಯ ಜನತಾ ಪಕ್ಷ ಮತ್ತು ಆ ಪಕ್ಷದ ನಾಯಕರನ್ನು ತೀವ್ರ ಟೀಕಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​, ಭಾರತದ ಆಡಳಿತ ಪಕ್ಷ ಬಿಜೆಪಿ ಮುಸ್ಲಿಂ ವಿರೋಧಿ ಎಂದು ಹೇಳಿದ್ದಾರೆ.

ವಾಷಿಂಗ್ಟನ್​ ಪೋಸ್ಟ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಆಡಳಿತ ಪಕ್ಷ ಮುಸ್ಲಿಂ ವಿರೋಧಿ ಹಾಗೂ ಪಾಕಿಸ್ತಾನ ವಿರೋಧಿ ಧೋರಣೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ನಾಲ್ಕು ತಿಂಗಳ ಹಿಂದೆ ನೀವು ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತದೊಂದಿಗೆ ಸಂಬಂಧ ಸುಧಾರಿಸುಕೊಳ್ಳುವ ಪ್ರಯತ್ನ ಮಾಡಿದರೂ ಭಾರತ ಏಕೆ ಅದನ್ನು ನಿರಾಕರಿಸುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಖಾನ್​ ಹೀಗೆ ಉತ್ತರಿಸಿದ್ದಾರೆ.

ಕೆಲ ತಿಂಗಳುಗಳಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ ಅವರು ನಮ್ಮೊಂದಿಗೆ ಸ್ನೇಹ ಸಂಬಂಧದ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಇಮ್ರಾನ್​ ಖಾನ್​ ಟೀಕೆ ಮಾಡಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನದೊಂದಿಗೆ ವಿದೇಶಾಂಗ ಸಚಿವರ ಮಾತುಕತೆಯ ಆಹ್ವಾನವನ್ನು ಭಾರತ ತಿರಸ್ಕರಿಸಿದಾಗಲೂ ಇಮ್ರಾನ್ ಖಾನ್​ ಟ್ವಿಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದರು.

ಭಾರತದ ನಿರ್ಧಾರ ದುರಂಹಕಾರದ್ದು ಎಂದು ಹೇಳುವ ಮೂಲಕ ಇಮ್ರಾನ್​ ಖಾನ್​ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅತೃಪ್ತಿ ಹೊರಹಾಕಿದ್ದರು. "ಶಾಂತಿಯುತ ಮಾತುಕತೆ ನೀಡಿದ ಆಹ್ವಾನವನ್ನು ಭಾರತ ತಿರಸ್ಕರಿಸುವ ಮೂಲಕ ದರ್ಪದ ಹಾಗೂ ನಕಾರಾತ್ಮಕ ನಿರ್ಧಾರ ತೆಗೆದುಕೊಂಡಿದೆ. ದೊಡ್ಡ ಮಟ್ಟದ ದೂರದೃಷ್ಟಿ, ಕಲ್ಪನೆಗಳಿಲ್ಲದ ಸಣ್ಣ ವ್ಯಕ್ತಿಗಳು ದೊಡ್ಡ ಕಚೇರಿಯಲ್ಲಿ ಇದ್ದಾರೆ," ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದರು.

ಇದನ್ನು ಓದಿ: ಕಾಶ್ಮೀರ ಸಮಸ್ಯೆಯನ್ನು ಎಷ್ಟು ವರ್ಷ ಮುಂದುವರೆಸುವುದು, ನಮಗೆ ಬೇಕಿರುವುದು ಭಾರತದೊಂದಿಗೆ ಗಟ್ಟಿ ಸಂಬಂಧ; ಪಾಕ್ ಪ್ರಧಾನಿ

ಸಿಖ್ ಪವಿತ್ರ ಸ್ಥಳ ಕರ್ತಾರಪುರ ಗಡಿಯ ಕಾರಿಡಾರ್​ ಉದ್ಘಾಟನೆಯೊಂದಿಗೆ ಭಾರತ, ಪಾಕಿಸ್ತಾನದೊಂದಿಗಿನ ಉತ್ತಮ ಬಾಂಧವ್ಯದ ಕರೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿದೆ ಎನ್ನುವ ಆಶಾಭಾವನೆ ಇದೆ ಎಂದು ಖಾನ್​ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ. ಮತ್ತು ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
Loading...

ಪಾಕಿಸ್ತಾನದಲ್ಲಿರುವ ಕರ್ತಾರಪುರದ ಸಿಖ್​ ಪವಿತ್ರ ಸ್ಥಳಕ್ಕೆ ಬರಲು ಇರುವ ಎಲ್ಲ ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಭಾರತದಲ್ಲಿ ಮುಂದಿನ ಚುನಾವಣೆ ಮುಗಿದ ಮೇಲೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಪ್ರಯತ್ನ ಮುಂದುವರೆಸುತ್ತೇನೆ ಎಂದು ಖಾನ್​ ಹೇಳಿದ್ದಾರೆ.

 

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ