HOME » NEWS » National-international » IMRAN KHAN AGAIN BLAMES WOMENS CLOTHING FOR RAPES SESR

Imran Khan : ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಅವರು ಉಡುಗೆಯೇ ಕಾರಣ; ಪಾಕ್​ ಪ್ರಧಾನಿ

ಮಹಿಳೆಯರು ಚಿಕ್ಕ ಚಿಕ್ಕ ಉಡುಪುಗಳನ್ನು ಧರಿಸಿದಾಗ ಅವು ಪುರುಷರ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂದರ್ಶನವೊಂದರಲ್ಲಿ ಪಾಕ್​ ಪ್ರಧಾನಿ ತಿಳಿಸಿದ್ದಾರೆ

news18-kannada
Updated:June 21, 2021, 5:25 PM IST
Imran Khan : ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಅವರು ಉಡುಗೆಯೇ ಕಾರಣ; ಪಾಕ್​ ಪ್ರಧಾನಿ
ಇಮ್ರಾನ್ ಖಾನ್
  • Share this:
ಮಹಿಳೆ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಘಟನೆಗಳಿಗೆ ಕಾರಣ ಅವರು ತೊಡುವ ಬಟ್ಟೆಯೇ ಕಾರಣ. ಮಹಿಳೆಯರು ಧರಿಸುವ ಧಿರಿಸಿಗಳಿಂದಲೇ ಅವರ ಮೇಲೆ ದೇಶದಲ್ಲಿ ಇಂದು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಹೇಳಿಕೆ ನೀಡಿದ್ದಾರೆ. ದೇಶದ ಪ್ರಧಾನಿಯಾಗಿ ಈ ರೀತಿ ಹೇಳಿಕೆ ನೀಡುವ ಅವರ ನಡೆಗೆ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಕ್​ ಪ್ರಧಾನಿ, ಮಹಿಳೆಯರು ಚಿಕ್ಕ ಚಿಕ್ಕ ಉಡುಪುಗಳನ್ನು ಧರಿಸಿದಾಗ ಅವು ಪುರುಷರ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಮಾನ್ಯ ಜ್ಞಾನ. ಮಹಿಳೆಯರ ಕಡಿಮೆ ಉಡುಪುಗಳು ಪುರುಷರನ್ನು ಪ್ರಚೋದಿಸುತ್ತವೆ. ರೋಬೋರ್ಟ್​ಗಳನಲ್ಲ ಎಂದಿದ್ದಾರೆ. ಪಾಕ್​ ಪ್ರಧಾನಿಯ ಈ ಹೇಳಿಕೆಯನ್ನು ವಿಪಕ್ಷಗಳು ಟೀಕಿಸಿವೆ.

ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಕೂಡ ಅವರ ಹೇಳಿಕೆ ವಿರುದ್ಧ ಸಾಕಷ್ಟು ಕಡು ಟೀಕೆ ವ್ಯಕ್ತವಾಗಿದೆ. ಈ ಕುರಿತು ಟೀಕಿಸಿರುವ ದಕ್ಷಿಣ ಏಷ್ಯಾದ ಕಾನೂನು ಸಲಹೆಗಾರ ರೀಮಾ ಒಮರ್​, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳಿಗೆ ಮಹಿಳೆಯರ ಉಡುಪನ್ನು ಪದೇ ಪದೇ ದೂಷಿಸುತ್ತಿರುವ ಪ್ರಧಾನಿ ಆರೋಪ ಗಮನಿಸಿದರೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದು ಖಾತ್ರಿಯಾಗುತ್ತದೆ ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

ಈ ಟೀಕೆ ವ್ಯಕ್ತವಾಗುತ್ತಲೇ ಈ ಕುರಿತು ಸಮಾಜಾಯಿಷಿ ನೀಡಿರುವ ಪ್ರಧಾನಿ ಡಿಜಿಟಲ್​ ಮಾಧ್ಯಮ, ಪ್ರಧಾನಿ ಮಾತನಾಡಿದ ಕೆಲ ಆಯ್ದ ಭಾಗಗಳನ್ನು ಮಾತ್ರ ಟ್ವೀಟ್​ ಮೂಲಕ ಪ್ರಸಾರವಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಅಪ್ಪಂದಿರ ದಿನದಂದು ಅವಳಿ ಮಕ್ಕಳ ಫೋಟೋ ಹಂಚಿಕೊಂಡ ಉಸೇನ್​ ಬೋಲ್ಟ್​

ಕಳೆದೊಂದು ತಿಂಗಳ ಹಿಂದೆ ಕೂಡ ಪ್ರಧಾನಿ ಇಮ್ರಾನ್​ ಖಾನ್​, ಪಾಕಿಸ್ತಾನದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಅಶ್ಲೀಲತೆಯೇ ಕಾರಣ ಎಂದು ಆರೋಪಿಸಿದ್ದರು
ದೇಶದಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ತಪ್ಪಿಸಲು ಸರ್ಕಾರ ಕೈ ಗೊಂಡ ಕ್ರಮದ ಬಗ್ಗೆ ನೇರ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್​ ಖಾನ್​, ಪ್ರಚೋದನೆಯನ್ನು ತಪ್ಪಿಸುವ ಇಚ್ಛಾಶಕ್ತಿ ಪ್ರತಿಯೊಬ್ಬರಿಗೂ ಇಲ್ಲ ಎಂದಿದ್ದರು. ಅವರ ಈ ಹೇಳಿಕೆ ಬಳಿಕ ಖಾಮ್​ ಅವರು ಈ ಕುರಿತು ಕ್ಷಮೆಯಾಚಿಸಬೇಕು ಎಂದು ನೂರಾರು ಜನರು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದರು.

ಅತ್ಯಾಚಾರಿಗಳ ಶಿಕ್ಷೆ ಪ್ರಮಾಣ ತೀರ ಕಡಿಮೆ
ಪಾಕಿಸ್ತಾನದಲ್ಲಿ ಬಿಡುಗಡೆ ಯಾಗಿರುವ ದತ್ತಾಂಶ ಪ್ರಕರಣ ಕಳೆದ 24 ಗಂಟೆಗಳಲ್ಲಿ ಕನಿಷ್ಟ 11 ಪ್ರಕರಣಗಳು ದಾಖಲಾಗಿದೆ. 22 ಸಾವಿರ ಪ್ರಕರಣಗಳಲ್ಲಿ ಪೊಲೀಸರು ಕೇವಲ 6 ಪ್ರಕರಣಗಳನ್ನು ಮಾತ್ರ ದಾಖಲಿಸಿದ್ದಾರೆ. ಶಿಕ್ಷೆ ಪ್ರಮಾಣ ಕೂಡ ಕೇವಲ 0.3 ರಷ್ಟಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by: Seema R
First published: June 21, 2021, 5:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories