HOME » NEWS » National-international » IMPOSING HINDI IS LIKE GIVING QURAN TO BRAHMIN TAMIL IRS OFFICER SLAMS HINDI CELL POSTING MAK

ಹಿಂದಿ ಹೇರಿಕೆ ಎಂಬುದು ಬ್ರಾಹ್ಮಣರ ಕೈಗೆ ಕುರಾನ್ ಕೊಟ್ಟಂತೆ; ಕೇಂದ್ರಕ್ಕೆ ಪತ್ರ ಬರೆದ ತಮಿಳುನಾಡಿನ IRS ಅಧಿಕಾರಿ

ಇಲ್ಲಿ ಕೆಲಸ ಮಾಡುವ ಅರ್ಧದಷ್ಟು ಜನರಿಗೆ ಹಿಂದಿ ಭಾಷೆಯ ಗಂಧ ಗಾಳಿ ಗೊತ್ತಿಲ್ಲ. ಇಂತವರನ್ನು ಹಿಂದಿ ಕೋಶಕ್ಕೆ ನೇಮಕ ಮಾಡಿರುವುದು ನ್ಯಾಯಯೋಚಿತವೇ? ಹಿಂದಿ ಹೇರಿಕೆಯ ರಾಜಕೀಯಕ್ಕೆ ಇಳಿಯಲು ಇಷ್ಟವಿಲ್ಲದಿದ್ದರೂ, ಒಬ್ಬ ಅಧಿಕಾರಿಯನ್ನು ಇದಕ್ಕೆ ಒಳಪಡಿಸುವುದು ಅನ್ಯಾಯವಾಗಿದೆ. ನಾನು CBICಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ಬಾಲಮುರುಗನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

MAshok Kumar | news18-kannada
Updated:September 10, 2020, 4:26 PM IST
ಹಿಂದಿ ಹೇರಿಕೆ ಎಂಬುದು ಬ್ರಾಹ್ಮಣರ ಕೈಗೆ ಕುರಾನ್ ಕೊಟ್ಟಂತೆ; ಕೇಂದ್ರಕ್ಕೆ ಪತ್ರ ಬರೆದ ತಮಿಳುನಾಡಿನ IRS ಅಧಿಕಾರಿ
ಚೆನ್ನೈ ಜಿಎಸ್‌ಟಿ ಭವನ.
  • Share this:
ಚೆನ್ನೈ: "ಹಿಂದಿ ಭಾಷೆ ಗೊತ್ತಿಲ್ಲದವರ ಮೇಲೆ ಹಿಂದಿ ಹೇರಿ ಹೇರಿಕೆ ಎಂಬುದು ಬ್ರಾಹ್ಮಣರ ಕೈಗೆ ಕುರಾನ್‌ ಕೊಟ್ಟಂತೆ" ಎಂದು ಆರೋಪಿಸಿ ತಮಿಳುನಾಡಿನ ಭಾರತೀಯ ಕಂದಾಯ ಇಲಾಖೆಯ (IRS) ಅಧಿಕಾರಿಯೊಬ್ಬರು ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿಗೆ ಪತ್ರ ಬರೆಯುವ ಮೂಲಕ ಇದೀಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ತಮಿಳುನಾಡಿನ ಐಆರ್‌ಎಸ್‌ ಅಧಿಕಾರಿ ಬಿ. ಬಾಲಮುರುಗನ್ ಅವರನ್ನು ಕಳೆದ ವರ್ಷ ಚೆನ್ನೈನಲ್ಲಿರುವ ಜಿಎಸ್‌ಟಿ ಕಛೇರಿಯ ಹಿಂದಿ ಸೆಲ್‌ಗೆ ವರ್ಗ ಮಾಡಲಾಗಿತ್ತು. ಮೂಲತಃ ತಮಿಳಿಗರಾಗಿದ್ದ ಬಾಲಮುರುಗನ್‌ ಅವರಿಗೆ ಹಿಂದಿ ಭಾಷೆ ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ ಅವರು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ (CBIC) ಪತ್ರವೊಂದನ್ನು ಬರೆದಿದ್ದು, ಅದರಲ್ಲಿ, “ಹಿಂದಿ ಸೆಲ್‌ಗೆ ನೇಮಿಸಿರುವ ಅಧಿಕಾರಿಗೆ ಹಿಂದಿಯನ್ನು ಓದಲು-ಬರೆಯಲು ಬರಬೇಕು. ಅಲ್ಲಿ ಕೆಲಸ ಮಾಡಲು ಕನಿಷ್ಟ ಇಚ್ಚೆಯಾದರೂ ಇರಬೇಕು ಎಂಬುದು ನನ್ನ ವಿನಮ್ರ ಸಲಹೆ” ಎಂದು ಬರೆದಿದ್ದಾರೆ ಎನ್ನಲಾಗಿದೆ.

2003ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಬಿ. ಬಾಲಮುರುಗನ್‌ ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿಗೆ ಆಗಸ್ಟ್‌ 09 ರಂದು ಬರೆದಿರುವ ಪತ್ರದಲ್ಲಿ, "ಹಿಂದಿ ಸೆಲ್‌ನಲ್ಲಿನ ಕೆಲಸದ ಅಧಿಕೃತ ಸಂವಹನ ಭಾಷೆ ಹಿಂದಿ. ಅಧಿಕೃತವಾಗಿ ಎಲ್ಲಾ ಅಧಿಕಾರಿಗಳು ಹಿಂದಿ ಭಾಷೆಯನ್ನೇ ಬಳಸಬೇಕು ಮತ್ತು ಈ ಭಾಷೆಯಲ್ಲೇ ಮೇಲ್ವಿಚಾರಣೆ ಮಾಡಬೇಕು. ಆದರೆ, ನನಗೆ ಹಿಂದಿಯಲ್ಲಿ ABCD ಯೂ ಗೊತ್ತಿಲ್ಲ. ಹಾಗಾಗಿ ಹಿಂದಿ ಕೋಶದಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ.

ನನ್ನನ್ನು ಹಿಂದಿ ಕೋಶಕ್ಕೆ ನೇಮಕ ಮಾಡುವುದು ನನ್ನ ಮೇಲಿನ ಹಿಂದಿ ಹೇರಿಕೆಯಲ್ಲದೇ ಮತ್ತೇನೂ ಅಲ್ಲ. ಇದು ಹೇಗಿದೆ ಎಂದರೆ ಬ್ರಾಹ್ಮಣನಿಗೆ ಬೈಬಲ್ ಅಥವಾ ಕುರಾನ್ ಕೊಟ್ಟು, ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ನಿರ್ದೇಶಿಸುವಂತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ ಎಂಬುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

"ಹಿಂದಿ ತಿಳಿದಿರುವ ಮತ್ತು ಹಿಂದಿ ಸೆಲ್‌ನಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಧಿಕಾರಿಗಳನ್ನು ಮಾತ್ರ ಅಲ್ಲಿಗೆ ನೇಮಿಸಬೇಕು ಎಂದು CBIC ಅಧ್ಯಕ್ಷರು ಮತ್ತು ಸಿಬಿಐಸಿಯ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದು ನಾನು ವಿನಂತಿಸುತ್ತೇನೆ. ಹಿಂದಿ ತಿಳಿಯದ ಕಾರಣ ನಾವು ಸಹಿ ಮಾಡುವ ಖಡತಗಳಲ್ಲಿ ಏನು ಬರೆದಿದೆ? ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೂ ನಮಗೆ ಸಾಧ್ಯವಿಲ್ಲ.

ಇದನ್ನೂ ಓದಿ : ಆಟೋರಿಕ್ಷಾ ಡಾಕ್ಟರ್‌ಗೆ ಯಾವ ಅಧಿಕಾರಿಗಳೂ ತೊಂದರೆಕೊಟ್ಟಿಲ್ಲ, ಅವರ ಅಮಾನತಿಗೆ ಕಾರಣವೇ ಬೇರೆ!

ಇಲ್ಲಿ ಕೆಲಸ ಮಾಡುವ ಅರ್ಧದಷ್ಟು ಜನರಿಗೆ ಹಿಂದಿ ಭಾಷೆಯ ಗಂಧ ಗಾಳಿ ಗೊತ್ತಿಲ್ಲ. ಇಂತವರನ್ನು ಹಿಂದಿ ಕೋಶಕ್ಕೆ ನೇಮಕ ಮಾಡಿರುವುದು ನ್ಯಾಯಯೋಚಿತವೇ? ಹಿಂದಿ ಹೇರಿಕೆಯ ರಾಜಕೀಯಕ್ಕೆ ಇಳಿಯಲು ಇಷ್ಟವಿಲ್ಲದಿದ್ದರೂ, ಒಬ್ಬ ಅಧಿಕಾರಿಯನ್ನು ಇದಕ್ಕೆ ಒಳಪಡಿಸುವುದು ಅನ್ಯಾಯವಾಗಿದೆ. ನಾನು CBICಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ" ಎಂದು ಬಾಲಮುರುಗನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
CBIC ಎಲ್ಲಾ IRS ಅಧಿಕಾರಿಗಳ ಕೇಡರ್ ನಿಯಂತ್ರಣ ಪ್ರಾಧಿಕಾರವಾಗಿದ್ದು, ಹಿಂದಿ ಸೆಲ್, ಹಿಂದಿ ಅನುಷ್ಠಾನದ ಬಗ್ಗೆ ತ್ರೈಮಾಸಿಕ ಸಂಖ್ಯಾಶಾಸ್ತ್ರೀಯ ವರದಿಗಳನ್ನು ಸಂಗ್ರಹಿಸುತ್ತದೆ. ಹಾಗಾಗಿ ತನ್ನ ಅಧಿಕೃತ ಕೆಲಸದಲ್ಲಿ ಹಿಂದಿ ಭಾಷೆಯ ಬಳಕೆಯು ಅಗತ್ಯವಾಗಿದೆ. ಆದರೆ, ಹಿಂದಿ ತಿಳಿಯದ ಅಧಿಕಾರಿಯನ್ನು ಹಿಂದಿ ಕೋಶಕ್ಕೆ ನೇಮಕ ಮಾಡಿದರೆ ಇಲಾಖೆಯ ಕೆಲಸ ಸಾಂಗೋಪವಾಗಿ ನಡೆಯುವುದಾದರೂ ಹೇಗೆ? ಈ ಕುರಿತು CBIC ಅಧಿಕಾರಿ ಬಾಲಮುರುಗನ್‌ ಪತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ? ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: September 10, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories