ಪುದುಚೇರಿ: ಮಹಿಳಾ ಫಿಟ್‌ನೆಸ್ ತರಬೇತುದಾರನಂತೆ (Woman Fitness Trainer) ನಟಿಸಿ ಮಹಿಳೆಯರ ನಗ್ನ ಫೋಟೋ ಪಡೆದು ಬೆದರಿಕೆ ಹಾಕುತ್ತಿದ್ದ ಯುವಕನೊಬ್ಬನನ್ನು ಪೊಲೀಸರು (Police) ಬಂಧಿಸಿದ್ದಾರೆ. 22 ವರ್ಷದ ಯುವಕ ಹುಡುಗಿಯ ಹೆಸರಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಮಹಿಳೆಯರಿಗೆ ಫಿಟ್ನೆಸ್ ಸಲಹೆ ನೀಡುವ ಪೇಜ್ ತೆರೆದಿದ್ದ. ಇದನ್ನು ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಫಿಟ್ನೆಸ್ಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದಾರೆ. ಹೀಗೆ ಆನ್‌ಲೈನ್‌ನಲ್ಲಿ ಸಂಭಾಷಣೆ ನಡೆದಿದ್ದು, ಮಹಿಳೆಗೆ ತಮ್ಮ ತೂಕ ಕಡಿಮೆ ಮಾಡಿಕೊಳ್ಳುವ, ದೇಹರಚನೆಗೆ ಸಂಬಂಧಿಸಿದ ಸಲಹೆ ಪಡೆಯಲು ಇನ್‌ಸ್ಟಾಗ್ರಾಮ್ ಮೂಲಕ ತಮ್ಮ ನಗ್ನ ಫೋಟೋಗಳನ್ನು ಕಳುಹಿಸುವಂತೆ ಮನವೊಲಿಸಿದ್ದಾನೆ. ಆದರೆ ಇದೇ ಫೋಟೋಗಳನ್ನು ಬಳಸಿಕೊಂಡ ಆ ವ್ಯಕ್ತಿ ಮಹಿಳೆಯರಿಗೆ ತನ್ನ ಜೊತೆ ನಗ್ನವಾಗಿ ವಿಡಿಯೋ ಕರೆ ಮಾತನಾಡಲು ಒತ್ತಾಯಿಸಿದ್ದಾನೆ. ಒಪ್ಪದಿದ್ದಕ್ಕೆ ಆನ್‌ಲೈನ್‌ನಲ್ಲಿ ಫೋಟೋಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆಯಾಕಿದ್ದಾನೆ. ಮಹಿಳೆ ನೀಡಿದ ದೂರಿನ ಮೇಲೆ 22 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮಹಿಳೆ ಎಂದು ನಂಬಿ ಮೋಸ ಹೋದರು
Instagram ನಲ್ಲಿ ಕಡಿಮೆ ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳಲು ಬಯಸುವಿರಾ? ನೀವು ಸುಂದರವಾಗಿರಲು ಬಯಸುವಿರಾ? ಎಂಬ ಹಲವು ವಿಡಿಯೋಗಳನ್ನು ಆತ ಪೋಸ್ಟ್ ಮಾಡಿದ್ದ. ಈ ವಿಡಿಯೋಗಳಲ್ಲಿ ಮಹಿಳೆಯರ ಧ್ವನಿಯಲ್ಲೇ ವ್ಯಾಯಾಮ ಮಾಡುವುದನ್ನು ವಿವರಿಸುತ್ತಿದ್ದ. ಈ ಆಕರ್ಷಕ ವಿಡಿಯೋಗಳನ್ನು ನೋಡಿದ ಮಹಿಳೆಯೊಬ್ಬರು, ಈ ಪೇಜ್ಅನ್ನು ಯಾರೋ ಮಹಿಳೆ ನಿರ್ವಹಿಸುತ್ತಿರಬೇಕೆಂದು ನಂಬಿದ್ದಾರೆ. ಅಲ್ಲದೆ ಈ ಪೇಜ್ನಲ್ಲಿ ಮಹಿಳೆಯರು ವ್ಯಾಯಾಮ ಮಾಡುವ ಹಲವಾರು ವೀಡಿಯೊಗಳು ಸಹ ಇದ್ದಿದ್ದರಿಂದ ಆತನ ಬಲೆಗೆ ಸುಲಭವಾಗಿ ಬಿದ್ದಿದ್ದಾರೆ.
ಇದನ್ನೂ ಓದಿ: Cyber Crime: ಸೈಬರ್ ಕ್ರೈಮ್ ಎಂದರೇನು? ದೂರು ದಾಲಿಸೋದು ಹೇಗೆ? ಹಣ ಮರಳಿ ಪಡೆಯಲು ಹೀಗೆ ಮಾಡಿ
ಮಹಿಳೆಯೊಬ್ಬರು ಈ ಪೇಜ್ ಅನ್ನು ನಿರ್ವಹಿಸುತ್ತಿದ್ದಾರೆ ಎಂದು ನಂಬಿ ಪುದುಚೇರಿ ಮತ್ತು ತಮಿಳುನಾಡಿನ ಹಲವು ಮಹಿಳೆಯರು ಪೇಜ್ ಫಾಲೋ ಮಾಡಲು ಆರಂಭಿಸಿದ್ದಾರೆ. ಆಗ ಇನ್ಸ್ಟಾಗ್ರಾಮ್ ಮೂಲಕ ವ್ಯಾಯಾಮದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆಗ ಪೇಜ್ ನಿರ್ವಾಹಕ ನಾವು ಸೂಚಿಸುವ ವ್ಯಾಯಾಮಗಳನ್ನು ನೀವು ಮಾಡಿದರೆ, ನಿಮ್ಮ ದೇಹ ರಚನೆಯು ಸುಂದರವಾಗಿ ಬದಲಾಗುತ್ತದೆ. ಅದಕ್ಕಾಗಿ ಮೊದಲು ನಿಮ್ಮ ನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದರೆ, ಅದಕ್ಕೆ ಅನುಗುಣವಾಗಿ ದೈಹಿಕ ವ್ಯಾಯಾಮವನ್ನು ಶಿಫಾರಸು ಮಾಡುತ್ತೇವೆ ಎಂದು ಅವರು ಹೇಳಿದ್ದಾನೆ.
ಪೇಜ್ ನಿರ್ವಾಹಕರು ಮಹಿಳಾ ಬಾಡಿಬಿಲ್ಡರ್ ಎಂದು ನಂಬಿರುವ ಕೆಲವು ಮಹಿಳೆಯರು ತಮ್ಮ ನಗ್ನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರತಿಯಾಗಿ ಮಹಿಳೆ ಕೆಲವು ವ್ಯಾಯಾಮ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಹೀಗೆ ಹಲವರು ತಮ್ಮ ನಗ್ನ ಚಿತ್ರಗಳನ್ನು ಕಳುಹಿಸಿ ಫಿಟ್ನೆಸ್ ಸಲಹೆ ಪಡೆದಿದ್ದಾರೆ.
ಮತ್ತೊಂದು ಐಡಿಯಿಂದ ಬ್ಲಾಕ್ಮೇಲ್
ಆದರೆ ಆರೋಪಿ ಮತ್ತೊಂದು ಇನ್ಸ್ಟಾಗ್ರಾಮ್ ಐಡಿಯಲ್ಲಿ ಮಹಿಳೆಯರಿಗೆ ನಗ್ನ ಫೋಟೋ ಕಳುಹಿಸಿದ್ದಾನೆ. ನಂತರ ನನ್ನ ಬಳಿ ನಿಮ್ಮ ಖಾಸಗಿ ಫೋಟೋ, ವಿಡಿಯೋಗಳಿವೆ, ಇದನ್ನು ಬಹಿರಂಗ ಪಡಿಸದಿರಲು ತನಗೆ ಬೆತ್ತಲೆಯಾಗಿ ಕರೆ ಮಾಡುವಂತೆ ಕೆಲವು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಆಘಾತಗೊಂಡ ಮಹಿಳೆ ಪುದುಚೇರಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಜಿಮ್ ತರಬೇತುದಾರನಂತೆ ಮಾತನಾಡಿ, ಮಹಿಳೆಯರ ನಗ್ನ ಫೋಟೋಗಳನ್ನು ಪಡೆದಿದ್ದವವರೇ, ಈಗ ಮಹಿಳೆಗೆ ಬೆದರಿಕೆ ಹಾಕುತ್ತಿರುವ ವ್ಯಕ್ತಿ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದ್ದು, ಪುದುವ ಮುತಿಯಾಲ್ಪೇಟ್ ಮೂಲದ ಖಾಸಗಿ ಕಂಪನಿಯ ಉದ್ಯೋಗಿ 22 ವರ್ಷದ ದಿವಾಕರ್ ಎಂಬಾತನನ್ನು ಬಂಧಿಸಿದ್ದಾರೆ.
ಅನೇಕ ಮಹಿಳೆಯರಿಗೆ ಇದೇ ರೀತಿ ವಂಚನೆ
ದಿವಾಕರ್ ಹೆಣ್ಣಿನ ರೀತಿ ಮಾತನಾಡುವುದು, ಹಲವರ ನಗ್ನ ಚಿತ್ರಗಳನ್ನು ಪಡೆದು ಹಣಕ್ಕಾಗಿ ಬೇಡಿಕೆಯಿಡುವುದು, ನಗ್ನವಾಗಿ ಕರೆ ಮಾಡುವಂತೆ ಒತ್ತಾಯಿಸುವುದೇ ಈತನ ಕಾಯಕವಾಗಿತ್ತು ಎಂದು ತನಿಖೆಯಲ್ಲಿ ದೃಢಪಟ್ಟಿದೆ. ಪೊಲೀಸರು ದಿವಾಕರ್‌ನನ್ನು ಬಂಧಿಸಿ ಆತನ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆತನ ಟೆಲಿಗ್ರಾಮ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯರನ್ನು ವಂಚನೆ ಮಾಡಲು ಹಲವು ಖಾತೆಗಳನ್ನು ಮಹಿಳೆಯರ ಹೆಸರಿನಲ್ಲಿ ರಚಿಸಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Cyber Crime: ಪೊಲೀಸರನ್ನೂ ಬಿಡದ ವಂಚಕರು; ಸೈಬರ್ ವಂಚನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ
ಆರೋಪಿಯ ಫೋನ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು, ಅದರಲ್ಲಿ 10 ಕ್ಕೂ ಹೆಚ್ಚು ಮಹಿಳೆಯರ ಬೆತ್ತಲೆ ರೆಕಾರ್ಡಿಂಗ್‌ಗಳನ್ನು ಪತ್ತೆಹಚ್ಚಿದ್ದಾರೆ. ನಂತರ ಅದನ್ನು ಸಂಪೂರ್ಣ ಪರೀಕ್ಷೆಗಾಗಿ ಕ್ರೈಂ ಬ್ರ್ಯಾಂಚ್ಗೆ ನೀಡಲಾಗಿದೆ. ಸಂತ್ರಸ್ತ ಮಹಿಳೆಯರು ದೂರು ನೀಡುವುದನ್ನು ಮುಂದುವರಿಸಿದರೆ, ಮತ್ತಷ್ಟು ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ ತಮ್ಮ ಖಾಸಗಿ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಗುರುತು ಪರಿಚಯವಿಲ್ಲದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ