• Home
  • »
  • News
  • »
  • national-international
  • »
  • ಭಾರತದ ಯೋಜನೆಗಳು ಇತರ ದೇಶಗಳಿಗೆ ಸ್ಫೂರ್ತಿ; IMF ಶ್ಲಾಘನೆ

ಭಾರತದ ಯೋಜನೆಗಳು ಇತರ ದೇಶಗಳಿಗೆ ಸ್ಫೂರ್ತಿ; IMF ಶ್ಲಾಘನೆ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

IMF ವಿಶ್ವ ಆರ್ಥಿಕತೆಯ ದೃಷ್ಟಿಕೋನದಲ್ಲಿ ಬೆಳವಣಿಗೆಯ ದರವನ್ನು ಸೂಚಿಸಿದ್ದು ಭಾರತ 2021 ರಲ್ಲಿ 8.7% ದಾಖಲಿಸಿದರೆ, 2022 ರಲ್ಲಿ 6.8% ಬೆಳವಣಿಗೆ ದರವನ್ನು ಯೋಜಿಸಿದೆ.

  • Share this:

ಭಾರತದ ನೇರ ನಗದು ವರ್ಗಾವಣೆ ಯೋಜನೆಯನ್ನು ಶ್ಲಾಘಿಸಿರುವ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ದೇಶವು ದುರ್ಬಲ ವರ್ಗದವರ ಸಹಕಾರಕ್ಕೆ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಶ್ಲಾಘಿಸಿ "ಲಾಜಿಸ್ಟಿಕ್ ಅದ್ಭುತ" ಎಂದು ಬಣ್ಣಿಸಿದೆ. IMF ನ ಹಣಕಾಸು ವ್ಯವಹಾರಗಳ ಉಪ ನಿರ್ದೇಶಕ ಪಾವೊಲೊ ಮೌರೊ ಭಾರತದಿಂದ ಇತರ ದೇಶಗಳು ಕಲಿಯಬೇಕಾದ್ದು ಬಹಳಷ್ಟಿದೆ ಎಂದು ತಿಳಿಸಿದ್ದು ಪ್ರತಿಯೊಂದು ಖಂಡ ಹಾಗೂ ಪ್ರತಿಯೊಂದು ಹಂತದಿಂದ ಬಂದಿರುವ ಆದಾಯಗಳು ಬಹಳಷ್ಟನ್ನು ಕಲಿಯಲು ಅವಕಾಶ ಮಾಡಿಕೊಡುತ್ತವೆ. ಇನ್ನು ಈ ವಿಷಯದಲ್ಲಿ ಭಾರತವನ್ನು (India) ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ದೇಶವು ನಿಜಕ್ಕೂ ಪ್ರಭಾವಶಾಲಿ ಧೋರಣೆಯನ್ನು ಹೊಂದಿದ್ದು ಇತರ ದೇಶಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದು ಕೊಂಡಾಡಿದ್ದಾರೆ.


ಭಾರತದ ಸಂಪೂರ್ಣ ಗಾತ್ರದಿಂದಾಗಿ, ಕಡಿಮೆ ಆದಾಯವನ್ನು ಹೊಂದಿರುವ ಜನರಿಗೆ ಸಹಕಾರಿಯಾಗಿರುವ ಕಾರ್ಯಕ್ರಮಗಳು ನೂರಾರು ಮಿಲಿಯನ್ ಜನರನ್ನು ಹೇಗೆ ತಲುಪುತ್ತವೆ ಎಂಬುದೇ ಅದ್ಭುತವಾದ ತಾರ್ಕಿಕತೆಯಾಗಿದೆ ಎಂದು ಪಾವೊಲೊ ತಿಳಿಸಿದ್ದಾರೆ. ಪ್ರಭಾವಶಾಲಿಯಾದ ನೇರ ನಗದು ವರ್ಗಾವಣೆ ಕಾರ್ಯಕ್ರಮವನ್ನು ಭಾರತ ಸರ್ಕಾರವು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ.


ಭಾರತ ಸರಕಾರದ ಹಲವಾರು ಯೋಜನೆಗಳು
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಹಾಗೂ ಅವರಿಗೆ ಬೆಂಬಲವನ್ನೊದಗಿಸುವ ಹಲವಾರು ಕಾರ್ಯಕ್ರಮಗಳನ್ನು ಭಾರತ ಸರಕಾರ ನಡೆಸುತ್ತಿದೆ. ಇನ್ನು ವೃದ್ಧರು, ರೈತರಿಗೆ ಬೆಂಬಲ ನೀಡುವ ಹಲವಾರು ಯೋಜನೆಗಳನ್ನು ಭಾರತ ಹಾಕಿಕೊಂಡಿದೆ ಮತ್ತು ಅನುಷ್ಠಾನಗೊಳಿಸಿದೆ. ಈ ವಿಭಾಗಗಳಲ್ಲಿ ಸಾಕಷ್ಟು ತಾಂತ್ರಿಕ ನವೀನತೆಗಳನ್ನು ಕೂಡ ದೇಶ ಪರಿಚಯಿಸಿದ್ದು ಅತ್ಯಂತ ಶ್ಲಾಘನೀಯವಾದ ಉದ್ದೇಶವಾಗಿದೆ ಎಂದು ಪಾವೊಲೊ ಹೊಗಳಿದ್ದಾರೆ.


ಸಾಕಷ್ಟು ತಾಂತ್ರಿಕ ಆವಿಷ್ಕಾರಗಳಲ್ಲಿ ಯಶಸ್ಸನ್ನು ಪಡೆದುಕೊಂಡಿರುವ ಭಾರತದ ನಿರ್ಧಾರಗಳನ್ನು ಶ್ಲಾಘಿಸಿರುವ ಐಎಮ್‌ಎಫ್ ಅಧಿಕಾರಿ, ನಗದು ವರ್ಗಾವಣೆ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ಅನನ್ಯ ಗುರುತಿನ ವ್ಯವಸ್ಥೆಯಾದ ಆಧಾರ್‌ನ ಬಳಕೆಯನ್ನು ಸೂಚಿಸಿದ್ದಾರೆ.


ಹಣ ವರ್ಗಾವಣೆಗೆ ಡಿಜಿಟಲ್ ವಿಧಾನ
ಇತರ ದೇಶಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ಕಳುಹಿಸುವ ವ್ಯವಸ್ಥೆ ಜಾರಿಯಲ್ಲಿದ್ದು, ಸೆಲ್ ಫೋನ್ ಹೊಂದಿರುವವರು ಸಾಕಷ್ಟು ನಗದನ್ನು ಹೊಂದಿರುವುದಿಲ್ಲ. ಆದರೆ ಭಾರತವು ಅಂತಹ ಜನರಿಗೆ ಸಹಕಾರ ನೀಡುವಲ್ಲಿ ಡಿಜಿಟಲ್ ವಿಧಾನಗಳ ಮೂಲಕ ಹಣ ವರ್ಗಾವಣೆಗಾಗಿ ಅವರ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಉತ್ತಮ ಅನುಷ್ಠಾನಗಳನ್ನು ಜಾರಿಗೆ ತಂದಿದೆ ಅಂತೆಯೇ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ನಿಯೋಜಿಸುವಲ್ಲಿ ನವೀನತೆಯ ವಿಧಾನವನ್ನು ಅನುಸರಿಸಿದೆ. ಇತರ ದೇಶಗಳು ಈ ವಿಧಾವನ್ನು ಕಲಿತುಕೊಳ್ಳಬೇಕಾಗಿರುವುದು ಮುಖ್ಯವಾಗಿದೆ ಎಂಬುದು ಪಾವೊಲೊ ಹೇಳಿಕೆಯಾಗಿದೆ.


ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್ ಗ್ರೂಪ್ (WBG) ನ ಆಡಳಿತ ಮಂಡಳಿಗಳ ವಾರ್ಷಿಕ ಸಭೆಯಲ್ಲಿ IMF ನ ಉನ್ನತ ಅಧಿಕಾರಿ ಪಾವೊಲೊ ಭಾರತದ ನಡೆಯನ್ನು ಹಾಡಿ ಹೊಗಳಿದ್ದಾರೆ.


ತಂತ್ರಜ್ಞಾನದ ಅಳವಡಿಕೆಯಲ್ಲಿ ಐಎಮ್‌ಎಫ್ ಬೆಂಬಲ
ಐಎಂಎಫ್‌ನ ಹಣಕಾಸು ವ್ಯವಹಾರಗಳ ವಿಭಾಗದ ನಿರ್ದೇಶಕ ವಿಟರ್ ಗ್ಯಾಸ್ಪರ್ ಕೂಡ ಭಾರತವು ಅನುಷ್ಠಾನಗೊಳಿಸಿರುವ ತಂತ್ರಜ್ಞಾನದ ಅಳವಡಿಕೆಯಲ್ಲಿ ಕೈಜೋಡಿಸುವುದಾಗಿ ತಿಳಿಸಿದೆ ಇದರಿಂದ ನಗದಿನ ಅಗತ್ಯವಿರುವ ಜನರು ಎದುರಿಸುವ ಅದೆಷ್ಟೋ ಸವಾಲುಗಳನ್ನು ಪರಿಹರಿಸಲು ಈ ಅಳವಡಿಕೆ ಕಾರಣವಾಗಿದೆ ಎಂದು ಗುರುತಿಸಿದ್ದಾರೆ.


ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ


IMF ವಿಶ್ವ ಆರ್ಥಿಕತೆಯ ದೃಷ್ಟಿಕೋನದಲ್ಲಿ ಬೆಳವಣಿಗೆಯ ದರವನ್ನು ಸೂಚಿಸಿದ್ದು ಭಾರತ 2021 ರಲ್ಲಿ 8.7% ದಾಖಲಿಸಿದರೆ, 2022 ರಲ್ಲಿ 6.8% ಬೆಳವಣಿಗೆ ದರವನ್ನು ಯೋಜಿಸಿದೆ.


ಸಂಸ್ಥೆಯು ಜುಲೈ 2022 ರ ವರದಿಯಲ್ಲಿ, IMF 2022 ರ ಭಾರತದ GDP ಬೆಳವಣಿಗೆಯನ್ನು 7.4% ಕ್ಕೆ ನಿಗದಿಪಡಿಸಿದೆ. ಭಾರತದ GDP ಬೆಳವಣಿಗೆಯ ಮೇಲಿನ IMF ಇತ್ತೀಚಿನ ಮುನ್ಸೂಚನೆಯು 2022-23 ರ ಹಣಕಾಸು ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರುವ 7% ಬೆಳವಣಿಗೆ ದರಕ್ಕಿಂತ ಕಡಿಮೆಯಾಗಿದೆ.


ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!


ಆರ್ಥಿಕ ವರ್ಷ 2023 ಕ್ಕಾಗಿ ಐಎಮ್‌ಎಫ್ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ತೀವ್ರವಾಗಿ ಕಡಿತಗೊಳಿಸಿದ್ದು ಎರಡನೇ ತ್ರೈಮಾಸಿಕ ಬೆಳವಣಿಗೆಯು ನಿರೀಕ್ಷೆಗಿಂತ ದುರ್ಬಲವಾಗಿದೆ ಎಂಬ ಕಾರಣವನ್ನು ನೀಡಿದೆ.

Published by:ಗುರುಗಣೇಶ ಡಬ್ಗುಳಿ
First published: