Heat Wave: ಈ ಐದು ರಾಜ್ಯಗಳಲ್ಲಿ ಸುಡುವ ಬಿಸಿಲಿನಿಂದ ತತ್ತರಿಸಲಿದ್ದಾರೆ ಜನ; ಹವಾಮಾನ ಇಲಾಖೆ ಎಚ್ಚರಿಕೆ

ರಾಜಸ್ಥಾನ, ದೆಹಲಿ, ಹರಿಯಾಣ, ಯುಪಿ ಮತ್ತು ಒಡಿಶಾದಲ್ಲಿ ಉಷ್ಣ ಅಲೆಯ ಹೆಚ್ಚಲಿದೆ. ಮೇ ಮೊದಲ ವಾರದವರೆಗೆ ಇದೇ ರೀತಿ ಪರಿಸ್ಥಿತಿ ಇರಲಿದ್ದು, ನಂತರ ಮಳೆ ಆಗುವ ಸಾಧ್ಯತೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ (ಏ. 28): ಬೇಸಿಗೆ ಬಿಸಿ (Heat Wave) ಈಗಾಗಲೇ ದೇಶವನ್ನು ಆವರಿಸಿದೆ. ನೆತ್ತಿ ಮೇಲೆ ಸುಡುವ ಸೂರ್ಯನಿಂದ ಜನರು ಈಗಾಗಲೇ ಬಳಲಿದ್ದಾರೆ. ಅದರಲ್ಲೂ ಉತ್ತರ ಭಾರತದ ಈ ಪ್ರದೇಶಗಳಲ್ಲಿ ಈ ಸೂರ್ಯ (Summer Heat) ಇನ್ನು ಮೂರು ದಿನ ಬೆಂಕಿಯಂತೆ ಸುಡಲಿದ್ದಾನೆ. ದೈನಂದಿನ ತಾಪಮಾನ 2 ಡಿಗ್ರಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ವಿದರ್ಭ, ರಾಜಸ್ಥಾನ ಮತ್ತು ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಗಂಗಾನದಿಯ ಪಶ್ಚಿಮ ಬಂಗಾಳ ಮತ್ತು ಒಳನಾಡಿನ ಒಡಿಶಾದಲ್ಲಿ ಬಿಸಿಲಿನ ತಾಪಮಾನ ಹೆಚ್ಚಲಿದೆ. ಏಪ್ರಿಲ್ 30 ರವರೆಗೆ, ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ ಉಷ್ಣ ಅಲೆಯ ಪರಿಸ್ಥಿತಿಗಳು ಮುಂದುವರಿಯಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

    ಈ ರಾಜ್ಯಗಳಲ್ಲಿ ಹೆಚ್ಚಲಿದೆ ತಾಪಮಾನ

    ದೆಹಲಿಯು ಮೇ 1 ರವರೆಗೆ, ಬಿಹಾರ ಏಪ್ರಿಲ್ 29 ರವರೆಗೆ, ಏಪ್ರಿಲ್ 28-30 ರ ಅವಧಿಯಲ್ಲಿ ಛತ್ತೀಸ್‌ಗಢದ ಮೇಲೆ ಮತ್ತು ಏಪ್ರಿಲ್ 28 ರಂದು ಗುಜರಾತ್‌ನ ಉತ್ತರ ಭಾಗಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಲಿದೆ.

    ಈಗಾಗಲೇ ಕೆಲವು ಭಾಗಗಳಲ್ಲಿ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ, ರಾಜಸ್ಥಾನ, ದೆಹಲಿ, ಹರಿಯಾಣ, ಯುಪಿ ಮತ್ತು ಒಡಿಶಾದಲ್ಲಿ ಉಷ್ಣ ಅಲೆಯ ಹೆಚ್ಚಲಿದೆ. ಮೇ ಮೊದಲ ವಾರದವರೆಗೆ ಇದೇ ರೀತಿ ಪರಿಸ್ಥಿತಿ ಇರಲಿದ್ದು, ನಂತರ ಮಳೆ ಆಗುವ ಸಾಧ್ಯತೆ ಇದೆ.

    ಜನರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
    ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ, ಬಿಹಾರ, ಪಶ್ಚಿಮ ರಾಜಸ್ಥಾನ, ಒಡಿಶಾ, ವಿದರ್ಭ ಮತ್ತು ಸೌರಾಷ್ಟ್ರ ಕಚ್‌ನಲ್ಲಿ ಈಗಾಗಲೇ ಜನರು ಬಿಸಿಲಿಗೆ ತತ್ತರಿಸಿದ್ದಾರೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ದಾಟಲಿದೆ. ದೆಹಲಿಯಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್​ ಇರಲಿದ್ದು, ಹಳದಿ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಮಕ್ಕಳು, ವೃದ್ಧರು, ಕಾಯಿಲೆಯಿಂದ ಬಳಲುತ್ತಿರುವವರು ಎಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ.

    ಇದನ್ನು ಓದಿ: ಮೋದಿ ಸಭೆ ವೇಳೆ ಮೈಮುರಿದ ಕೇಜ್ರಿವಾಲ್, ‘ಮ್ಯಾನರ್‌ಲೆಸ್‌ ದೆಹಲಿ ಸಿಎಂ’ ಎಂದ ಬಿಜೆಪಿ

    ಜಮ್ಮುನಲ್ಲೂ ದಾಖಲೆ ತಾಪಮಾನ
    ಇನ್ನು ಕಣಿವೆ ರಾಜ್ಯ ಜಮ್ಮುನಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅತ್ಯಂತ ಬಿಸಿಯಾದ ದಿನವಾಗಿ ದಾಖಲಾಗಿದೆ. ಹೆಚ್ಚುತ್ತಿರುವ ತಾಪಮಾನವು ಕೇಂದ್ರಾಡಳಿತ ಪ್ರದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತ ಮತ್ತು ನೀರಿನ ಸಮಸ್ಯೆಗೆ ಕಾರಣವಾಗಿದೆ.

    ಶಾಲೆಗಳಿಗೆ ರಜೆ ಘೋಷಣೆ

    ಒಡಿಶಾದಲ್ಲಿ 24 ಸ್ಥಳಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್-ದಾಖಲಾಗಿದೆ. ಬಿಸಿಗಾಳಿಯಿಂದಾಗಿ ರಾಜ್ಯದ ಎಲ್ಲಾ ಶಾಲೆಗಳಿಗೆ ಏಪ್ರಿಲ್ 30 ರವರೆಗೆ ರಜೆ ನೀಡಲಾಗಿದೆ. ಇನ್ನು ಪಶ್ಚಿಮ ಬಂಗಾಳದಲ್ಲೂ ತೀವ್ರ ಬಿಸಿಲಿನ ಕಾರಣದಿಂದ ಮೇ 2ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

    ಇದನ್ನು ಓದಿ: ತೆರಿಗೆ ಕೇಂದ್ರ ಸರ್ಕಾರಕ್ಕೆ, ಜವಾಬ್ದಾರಿ ರಾಜ್ಯಗಳಿಗೆ! ಇದು 'ಮೋದಿ ಒಕ್ಕೂಟ ವ್ಯವಸ್ಥೆ' ಎಂದ ರಾಹುಲ್ ಗಾಂಧಿ!

    ದಾಖಲೆ ನಿರ್ಮಾಣದ ತಾಪಮಾನ

    ಈ ವರ್ಷ, ವಾಯುವ್ಯ ಭಾರತದಲ್ಲಿ ಮಾರ್ಚ್​ನಲ್ಲಿ ಅತಿ ಹೆಚ್ಚು ಅಂದರೆ, 122 ವರ್ಷಗಳಲ್ಲಿ ಅತ್ಯಾಧಿಕ ಉಷ್ಣಾಂಶವನ್ನು ದಾಖಲಿಸಿದೆ. 2004 ರಲ್ಲಿ ದಾಖಲಾಗಿದ್ದ ಸರಾಸರಿ ಗರಿಷ್ಠ ತಾಪಮಾನವು 30.67 ಡಿಗ್ರಿ ಸೆಲ್ಸಿಯಸ್ ಅನ್ನು ಈ ಬಾರಿ ಮೀರಿಸಲಾಗಿದೆ.

    ಬಿಸಿಲಿನಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿ
    ಬೇಸಿಗೆಯ ದಿನಗಳಲ್ಲಿ ಹಗುರವಾದ, ತಿಳಿ ಬಣ್ಣದ, ಸಡಿಲವಾದ, ಹತ್ತಿ ಬಟ್ಟೆಗಳನ್ನು ಧರಿಸಬೇಕು
    ಬಟ್ಟೆ, ಟೋಪಿ ಅಥವಾ ಛತ್ರಿ ಇತ್ಯಾದಿಗಳನ್ನು ಬಳಸುವುದರ ಮೂಲಕ ಸುಡುವ ನೆತ್ತಿಯನ್ನು ಮುಚ್ಚಿಕೊಳ್ಳಬೇಕು
    ಈ ಕಾಲದಲ್ಲಿ ಹೆಚ್ಚು ನೀರು, ಹಣ್ಣಿನ ಪದಾರ್ಥಗಳ ಮೊರೆ ಹೋಗಿ.
    ಅಧಿಕ ತಿಂಡಿ- ಊಟಗಳಿಂದ ಹಾಗೂ ಮಸಾಲೆಯುಕ್ತ ಆಹಾರಗಳಿಂದ ದೂರವಿದ್ದು, ಲಘು ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ.
    Published by:Seema R
    First published: