• Home
  • »
  • News
  • »
  • national-international
  • »
  • Mohan Bhagawat: ಮೋಹನ್ ಭಾಗವತ್ ರಾಷ್ಟ್ರಪಿತ ಎಂದಿದ್ದ ಇಮಾಮ್‌ಗೆ ಜೀವ ಬೆದರಿಕೆ!

Mohan Bhagawat: ಮೋಹನ್ ಭಾಗವತ್ ರಾಷ್ಟ್ರಪಿತ ಎಂದಿದ್ದ ಇಮಾಮ್‌ಗೆ ಜೀವ ಬೆದರಿಕೆ!

ಆರ್​ ಎಸ್​ಎಸ್ ಮುಖಂಡ ಮೋಹನ್ ಭಾಗವತ್

ಆರ್​ ಎಸ್​ಎಸ್ ಮುಖಂಡ ಮೋಹನ್ ಭಾಗವತ್

ಡಾ.ಉಮರ್ ಅಹ್ಮದ್ ಇಲ್ಯಾಸಿಗೆ ಇಂಗ್ಲೆಂಡ್ ನಿಂದ ಬೆದರಿಕೆ ಕರೆ ಬಂದಿದೆ. ಹೀಗಿದ್ದರೂ, ಮೋಹನ್ ಭಾಗವತ್ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದಿರುವ ಡಾ.ಉಮರ್ ಅಹಮದ್ ಇಲ್ಯಾಸಿ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

  • Share this:

ನವದೆಹಲಿ(ಸೆ.30): ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagawat) ಅವರನ್ನು 'ರಾಷ್ಟ್ರಪಿತ' ಮತ್ತು 'ರಾಷ್ಟ್ರ ಋಷಿ' ಎಂದು ಬಣ್ಣಿಸಿದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ (ಎಐಐಒ) ಮುಖ್ಯಸ್ಥ ಡಾ. ಉಮರ್ ಅಹ್ಮದ್ ಇಲ್ಯಾಸಿ (Dr.Imam Umer Ahmed Ilyasi) ಅವರಿಗೆ ಬೆದರಿಕೆಗಳು ಬಂದಿವೆ. ಮುಖ್ಯ ಇಮಾಮ್ ಪ್ರಕಾರ, ಅವರಿಗೆ ಇಂಗ್ಲೆಂಡ್‌ನಿಂದ ಕರೆ ಬಂದಿತ್ತು. ವ್ಯಕ್ತಿಯೊಬ್ಬ ಮೊದಲು ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಡಾ.ಒಮರ್ ಅಹಮದ್ ಇಲ್ಯಾಸಿ ತಿಳಿಸಿದ್ದಾರೆ. ಮುಖ್ಯ ಇಮಾಮ್ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಗಳನ್ನು ಸ್ವೀಕರಿಸುವ ಬಗ್ಗೆ ಮಾತನಾಡಿದ್ದಾರೆ.


ಆದರೆ, ಬೆದರಿಕೆಯ ಹೊರತಾಗಿಯೂ, ಮುಖ್ಯ ಇಮಾಮ್ ತಮ್ಮ ಮಾತಿನಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಮೋಹನ್ ಭಾಗವತ್ ರಾಷ್ಟ್ರಪಿತ ಮತ್ತು ರಾಷ್ಟ್ರದ ಋಷಿಗಳು ಎಂಬ ಮಾತುಗಳನ್ನು ಹಿಂದೆ ಪಡೆಯುವುದಿಲ್ಲ. ಇದರ ಪರಿಣಾಮ ಏನೇ ಇದ್ದರೂ ಎದುರಿಸುತ್ತೇನೆ ಎಂದಿದ್ದಾರೆ. ಬೆದರಿಕೆಯ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸರ್ಕಾರ ಮತ್ತು ಸಂಸ್ಥೆಗಳಿಗೆ ತಿಳಿದಿದೆ ಎಂದು ಮುಖ್ಯ ಇಮಾಮ್ ಹೇಳಿದರು. ಮುಖ್ಯ ಇಮಾಮ್ ಅವರಿಗೆ ಈ ಮೊದಲಿನಿಂದಲೇ ಭದ್ರತೆ ನೀಡಲಾಗುತ್ತಿದೆ ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: ಕೊರೋನಾ ಭೀತಿ, ಸಾಂಸ್ಕೃತಿಕ ನಗರಿಯ ಶುಕವನ ಬಂದ್; ಗಣಪತಿ ಸಚ್ಜಿದಾನಂದ ಸ್ವಾಮೀಜಿಯೂ ಹಾಕಿದ್ದಾರೆ ಮಾಸ್ಕ್


PFI ನಿಷೇಧ ಬೆಂಬಲಿಸಿದ್ದ ಇಲ್ಯಾಸಿ


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ನಿಷೇಧದ ಕುರಿತು ಉಮರ್ ಇಲ್ಯಾಸಿ ಅವರು ಸರ್ಕಾರದ ಬಳಿ ಸಾಕ್ಷ್ಯಾಧಾರಗಳಿವೆ, ಆದ್ದರಿಂದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಸೆಪ್ಟೆಂಬರ್ 22 ರಂದು ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಮೋಹನ್ ಭಾಗವತ್ ಮತ್ತು ಡಾ. ಉಮರ್ ಅಹ್ಮದ್ ಇಲ್ಯಾಸಿ ನಡುವೆ ಸಭೆ ನಡೆದಿತ್ತು ಎಂಬುವುದಷು ಉಲ್ಲೇಖನೀಯ. ಇದಾದ ನಂತರ ಭಾಗವತ್ ಉತ್ತರ ದೆಹಲಿಯ ಆಜಾದ್‌ಪುರದಲ್ಲಿರುವ ಮದರಸಾವನ್ನು ತಲುಪಿದ್ದರು. ಭಾಗವತ್ ಇಲ್ಲಿನ ಮಕ್ಕಳೊಂದಿಗೆ ಮಾತನಾಡುತ್ತಿದ್ದಾಗ ಇಲ್ಯಾಸಿ ಅವರನ್ನು ‘ರಾಷ್ಟ್ರಪಿತ’ ಎಂದು ಕರೆದಿದ್ದರು. ಇಂದು ನನ್ನ ಆಹ್ವಾನದ ಮೇರೆಗೆ ಮೋಹನ್ ಭಾಗವತ್ ಬಂದಿದ್ದಾರೆ ಎಂದು ಹೇಳಿದ್ದರು. ಅವರು 'ರಾಷ್ಟ್ರಪಿತ' ಮತ್ತು 'ರಾಷ್ಟ್ರ ಋಷಿ'. ಇಂದಿನ ಭೇಟಿ ದೇಶಕ್ಕೆ ಉತ್ತಮ ಸಂದೇಶ ನೀಡಲಿದೆ. ದೇವರನ್ನು ಆರಾಧಿಸುವ ನಮ್ಮ ವಿಧಾನಗಳು ವಿಭಿನ್ನವಾಗಿವೆ ಆದರೆ ದೊಡ್ಡ ಧರ್ಮವೆಂದರೆ ಮಾನವೀಯತೆ. ದೇಶವು ಮೊದಲು ಬರುತ್ತದೆ ಎಂದು ನಾವು ನಂಬುತ್ತೇವೆ ಎಂದಿದ್ದರು.


ಮದರಸಾಗಳ ಸಮೀಕ್ಷೆಗೂ ಬೆಂಬಲ


AIIO ಇದು ವಿಶ್ವದ ಇಮಾಮ್‌ಗಳ ಅತಿದೊಡ್ಡ ಸಂಸ್ಥೆ ಎಂದು ಹೇಳಿಕೊಂಡಿದೆ. ಈ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಎಂದು ಅವರು ಹೇಳುತ್ತಾರೆ. ಉಮರ್ ಅಹಮದ್ ಇಲ್ಯಾಸಿ ಕೂಡ ಹಲವು ರಾಜ್ಯಗಳ ಮದರಸಾಗಳ ಸಮೀಕ್ಷೆ ಸರಿಯಾಗಿದೆ ಇದು ಸರಿ. ಮದರಸಾಗಳ ಸಮೀಕ್ಷೆ ಆಗಬೇಕು, ಆಧುನಿಕ ಶಿಕ್ಷಣ ನೀಡಬೇಕು ಎಂದಿದ್ದರು.


ಇದನ್ನೂ ಓದಿ: ಮೋಹನ್ ಭಾಗವತ್ ಸಮಾವೇಶದ ಮೇಲೆ ಉಗ್ರರ ಕಣ್ಣು; ಪೊಲೀಸರಿಂದ ತಪ್ಪಿತಾ ಅನಾಹುತ?


ಹಿಂದೂವಾಗಲು ಧರ್ಮ ಬದಲಾಯಿಸಬೇಕಿಲ್ಲ: ಮೋಹನ್ ಭಾಗವತ್


ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೇಘಾಲಯದ ಶಿಲ್ಲಾಂಗ್‌ನಲ್ಲಿ  ಭಾನುವಾರ ಪ್ರತಿಷ್ಠಿತ ನಾಗರಿಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಸಾಂಪ್ರದಾಯಿಕ ಖಾಸಿ ಸ್ವಾಗತದೊಂದಿಗೆ ಸಭೆ ಪ್ರಾರಂಭವಾಯಿತು, ಇದರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಹಿಮಾಲಯದ ದಕ್ಷಿಣ, ಹಿಂದೂ ಮಹಾಸಾಗರದ ಉತ್ತರ ಮತ್ತು ಸಿಂಧೂ ನದಿಯ ದಡದ ನಿವಾಸಿಗಳನ್ನು ಸಾಂಪ್ರದಾಯಿಕವಾಗಿ ಹಿಂದೂಗಳು  ಎಂದು ಕರೆಯುತ್ತಾರೆ. ಇಸ್ಲಾಂ ಧರ್ಮವನ್ನು ಹರಡಿದ ಮೊಘಲರು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಹರಡುವ ಬ್ರಿಟಿಷ್ ಆಡಳಿತಗಾರರಿಗಿಂತ ಮುಂಚೆಯೇ ಹಿಂದೂಗಳು ಅಸ್ತಿತ್ವದಲ್ಲಿದ್ದರು. ಹಿಂದೂ ಧರ್ಮ ಒಂದು ಧರ್ಮವಲ್ಲ, ಆದರೆ ಜೀವನ ವಿಧಾನ ಎಂಬ ಸಂದೇಶ ನೀಡಿದ್ದಾರೆ.

Published by:Precilla Olivia Dias
First published: