• Home
  • »
  • News
  • »
  • national-international
  • »
  • Doctors Strike: ವೈದ್ಯರಿಂದ ಕೆಲಸ ಬಹಿಷ್ಕಾರ; ಆಸ್ಪತ್ರೆಗಳ ಹೊರರೋಗಿ ವಿಭಾಗ ಬಂದ್!

Doctors Strike: ವೈದ್ಯರಿಂದ ಕೆಲಸ ಬಹಿಷ್ಕಾರ; ಆಸ್ಪತ್ರೆಗಳ ಹೊರರೋಗಿ ವಿಭಾಗ ಬಂದ್!

ವೈದ್ಯರ ಪ್ರತಿಭಟನೆ (ಸಾಂಕೇತಿಕ ಚಿತ್ರ)

ವೈದ್ಯರ ಪ್ರತಿಭಟನೆ (ಸಾಂಕೇತಿಕ ಚಿತ್ರ)

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳು ಡಾ ಅರ್ಚನಾ ಶರ್ಮಾ ಅವರಿಗೆ ನ್ಯಾಯ ದೊರಕಿಸಲು ಭಾರತೀಯ ದಂಡ ಸಂಹಿತೆಯಲ್ಲಿ ಬದಲಾವಣೆಗೆ ಒತ್ತಾಯಿಸಿ ಏಪ್ರಿಲ್ 2 ರಂದು ಪ್ರತಿಭಟನಾ ದಿನವನ್ನು ಆಚರಿಸಲಿವೆ.

  • Share this:

    ದೇಶದಾದ್ಯಂತ ಏಪ್ರಿಲ್ 2 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಆಸ್ಪತ್ರೆಗಳ ಹೊರರೋಗಿ ವಿಭಾಗ (OPD) ಬಂದ್ ಆಗಲಿದೆ. ಜೊತೆಗೆ ಆಸ್ಪತ್ರೆಗಳ ದಿನನಿತ್ಯದ ಕೆಲಸ ಸ್ಥಗಿತಗೊಳ್ಳಲಿದೆ. ಈಕುರಿತು ಭಾರತೀಯ ವೈದ್ಯಕೀಯ ಸಂಘ (IMA) ಅಧಿಕೃತ ಮಾಹಿತಿ ನೀಡಿದೆ. ಸ್ಥಳೀಯ ಮತ್ತು ರಾಜ್ಯ ಮಟ್ಟದ ಭಾರತೀಯ ವೈದ್ಯಕೀಯ ಸಂಘದ ಘಟಕಗಳು ಮೊಂಬತ್ತಿ ಹಿಡಿದು ಮೌನ ಪ್ರತಿಭಟನಾ (IMA Protest) ಮೆರವಣಿಗೆ ನಡೆಸಲಿವೆ ಎಂದು ಸಂಘಟನೆ ತಿಳಿಸಿದೆ. ಡಾ.ಅರ್ಚನಾ ಶರ್ಮಾ (Dr. Archana Sharma) ಅವರ ಆತ್ಮಹತ್ಯೆಯನ್ನು ವಿರೋಧಿಸಿ ಅಖಿಲ ಭಾರತ ಮಟ್ಟದಲ್ಲಿ ವೈದ್ಯರು  ಶನಿವಾರ ಏಪ್ರಿಲ್ 2 ರಂದು ತಮ್ಮ ಕೆಲಸವನ್ನು ಬಹಿಷ್ಕರಿಸಲಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕೆಲಸ ಬಹಿಷ್ಕರಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘ ಮಾಹಿತಿ ನೀಡಿದೆ.


    ರಾಜಸ್ಥಾನದ ದೌಸಾದಲ್ಲಿ ಡಾ.ಅರ್ಚನಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ರಾಜಸ್ಥಾನದ ದೌಸಾದ ಆನಂದ್ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞರಾಗಿ ಕೆಲಸ ಮಾಡುತ್ತಿದ್ದರು. ಮಾರ್ಚ್ 28 ರಂದು ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಗರ್ಭಿಣಿ ಮಹಿಳೆಯೋರ್ವರು ಸಾವನ್ನಪ್ಪಿದರು. ಮೃತ ಮಹಿಳೆಯ ಸಂಬಂಧಿಕರು ಡಾ.ಅರ್ಚನಾ ಮತ್ತು ಅವರ ಪತಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದರು.


    ಪ್ರಕರಣದ ಹಿನ್ನೆಲೆ ಇಲ್ಲಿದೆ
    ಈ ಘಟನೆಯಿಂದ ನೊಂದ ಮಹಿಳಾ ವೈದ್ಯೆ ಅರ್ಚನಾ ಶರ್ಮಾ ಖಿನ್ನತೆಗೆ ಒಳಗಾಗಿದ್ದರು. ಘಟನೆಯ ಮರುದಿನವೇ ಅವರು ತಮ್ಮ ದೌಸಾ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ಕುರಿತು ಭಾರತೀಯ ವೈದ್ಯಕೀಯ ಸಂಘ ತೀವ್ರ ಆಘಾತ ವ್ಯಕ್ತಪಡಿಸದ್ದು ಏಪ್ರಿಲ್ 2 ರಂದು ಪ್ರತಿಭಟನಾ ದಿನವನ್ನು ಆಚರಿಸಲಿವೆ.


    ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳು ಡಾ ಅರ್ಚನಾ ಶರ್ಮಾ ಅವರಿಗೆ ನ್ಯಾಯ ದೊರಕಿಸಲು ಭಾರತೀಯ ದಂಡ ಸಂಹಿತೆಯಲ್ಲಿ ಬದಲಾವಣೆಗೆ ಒತ್ತಾಯಿಸಿ ಏಪ್ರಿಲ್ 2 ರಂದು ಪ್ರತಿಭಟನಾ ದಿನವನ್ನು ಆಚರಿಸಲಿವೆ.


    ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಬಂಧನ
    ರೋಗಿಯ ಸಾವಿಗೆ ಡಾ ಅರ್ಚನಾ ಶರ್ಮಾ ವಿರುದ್ಧ ಕೊಲೆ ಆರೋಪ ಹೋರಿಸಿ ಎಫ್‌ಐಆರ್ ದಾಖಲಿಸಲು ಮೃತ ರೋಗಿಯ ಕುಟುಂಬಕ್ಕೆ ಪ್ರಚೋದನೆ ನೀಡಲಾಗಿದೆ. ಡಾ ಅರ್ಚನಾ ಶರ್ಮಾ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಬಿಜೆಪಿಯ ಮಾಜಿ ಶಾಸಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.


    ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಸಹಜಾನಂದ ಪ್ರಸಾದ್ ಸಿಂಗ್ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ಐಎಂಎ ಗೌರವ ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್ ಲೆಲೆ, ಸ್ಥಳೀಯ ಮತ್ತು ರಾಜ್ಯ ಘಟಕಗಳು ರಾಜಕೀಯ ಮತ್ತು ಸಾಮಾಜಿಕ ಮುಖಂಡರನ್ನು ಆಹ್ವಾನಿಸಿ ಬೇಡಿಕೆಗಳ ಮನವಿ ಸಲ್ಲಿಸಲಿವೆ.


    ಇದನ್ನೂ ಓದಿ: IISc Bengaluruಲ್ಲಿ ಹೊಸ B.Tech ಕೋರ್ಸ್! ಪ್ರವೇಶ ಪಡೆಯೋದು ಹೇಗೆ?


    ವೈದ್ಯರ ವಿರುದ್ಧದ ಹಿಂಸಾಚಾರದ ವಿಷಯವನ್ನು ಅಧಿಕಾರಿಗಳೊಂದಿಗೆ IMA ನಿರಂತರವಾಗಿ ಚರ್ಚಿಸುತ್ತಿದೆ. ರಾಜಸ್ಥಾನದಲ್ಲಿ ಕಾನೂನು ಜಾರಿ ಮಾಡುವ ಅಧಿಕಾರಿಗಳು ಯುವ ವೈದ್ಯೆ ಡಾ.ಅರ್ಚನಾ ಶರ್ಮಾ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಯನ್ನು ಸೃಷ್ಟಿಸಿದ ರೀತಿ ನಮಗೆ ನೋವು ತಂದಿದೆ. ಸಮಾಜದ ಅಗತ್ಯತೆಗಳನ್ನು ಪೂರೈಸುವ ವೈದ್ಯಕೀಯ ಸಮುದಾಯದ ಮೇಲೆ ಈ ರೀತಿ ಕ್ರೂರವಾಗಿ ವರ್ತಿಸುವುದು ದುರಂತದ ಸಂಗತಿ ಎಂದು ಐಎಂಎ ಪದಾಧಿಕಾರಿಗಳು ಅಧಿಕೃತ ಪ್ರಕಟಣೆಯಲ್ಲಿ ಹೇಳಿದ್ದಾರೆ.


    ಇದನ್ನೂ ಓದಿ: ಕೋವಿಡ್​ ಸೋಂಕಿತರ ಸಾಕು ಪ್ರಾಣಿಗಳು ಕೊಲ್ಲಲು ಯೋಜಿಸಿದ್ದ China Officers!


    ಐಎಂಎಯ ಕ್ರಿಯಾ ಯೋಜನೆಯು ವೈದ್ಯರ ಮೇಲಿನ ದೌರ್ಜನ್ಯದ ಮೇಲಿನ ಅಸ್ತಿತ್ವದಲ್ಲಿರುವ ಕಾನೂನನ್ನು ಹೆಚ್ಚು ಕಠಿಣ ಮತ್ತು ಆರೋಗ್ಯ ವೃತ್ತಿಪರರ ವಿರುದ್ಧದ ಹಿಂಸಾಚಾರದ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚುವಂತೆ ಒತ್ತಾಯಿಸಲಿದೆ. ಈ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತಿಭಟನಾ ಪತ್ರಗಳ ಪ್ರತಿಗಳನ್ನು ಕಳುಹಿಸಲು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

    Published by:ಗುರುಗಣೇಶ ಡಬ್ಗುಳಿ
    First published: