ನಾನು ಕಾನೂನು ಪಾಲಿಸುವ ಪ್ರಜೆ, ಚಿಕಿತ್ಸೆಗಾಗಿ ಭಾರತದಿಂದ ಅಮೆರಿಕ ತೆರಳಿದ್ದೆ: ಮೆಹುಲ್ ಚೋಕ್ಸಿ ಅಫಿಡವಿಟ್

ನಾನು ಭಾರತದಲ್ಲಿ ಕಾನೂನು ಪಾಲನೆಯನ್ನು ತಪ್ಪಿಸಲಿಲ್ಲ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ನಾನು ಭಾರತವನ್ನು ತೊರೆದಾಗ ಭಾರತದಲ್ಲಿ ಕಾನೂನು ಜಾರಿ ಅಧಿಕಾರಿಗಳು ನನ್ನ ವಿರುದ್ಧ ಯಾವುದೇ ವಾರಂಟ್ ಹೊರಡಿಸಿರಲಿಲ್ಲ ಎಂದು ಚೋಕ್ಸಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಮೆಹುಲ್ ಚೋಕ್ಸಿ

ಮೆಹುಲ್ ಚೋಕ್ಸಿ

 • Share this:
  ಭಾರತದ ವಿವಿಧ ಬ್ಯಾಂಕ್​ಗಳಿಗೆ ಸುಮಾರು 14,000 ಕೋಟಿ ವಂಚಿಸಿ ಭಾರತದಿಂದ ಪರಾರಿಯಾದ  ಮೆಹುಲ್ ಚೋಕ್ಸಿ ಇಂದು ಡೊಮಿನಿಕಾ ಹೈಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದು, ಆ ಅಫಿಡವಿಟ್​ನಲ್ಲಿ, "ಕಾನೂನು ಪಾಲಿಸುವ ಪ್ರಜೆ. ಯುನೈಟೆಡ್ ಸ್ಟೇಟ್ಸ್​ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಕಾರಣಕ್ಕೆ ಮಾತ್ರ ನಾನು ಭಾರತವನ್ನು ತೊರೆದಿದ್ದೆ. ಅಲ್ಲದೆ, ಯಾವುದೇ ವಿಚಾರಕ್ಕಾಗಿ ಭಾರತದ ಅಧಿಕಾರಿಗಳು ನನ್ನನ್ನು ತನಿಖೆ ನಡೆಸಬಹುದು. ಅಲ್ಲದೆ, ನಾನು ಭಾರತದಿಂದ ತೆರಳುವಾದ ನನ್ನ ವಿರುದ್ಧ ಯಾವುದೇ ವಾರೆಂಟ್ ಇರಲಿಲ್ಲ" ಎಂದು ತಿಳಿಸಿದ್ದಾರೆ. ಅಸಲಿಗೆ ಮೆಹುಲ್ ಚೋಕ್ಸಿ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂದು ಜಾರಿ ನಿರ್ದೆಶನಾಲಯ ಅಧಿಕಾರಿಗಳು ಅಲ್ಲಿನ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮೆಹುಲ್ ಚೋಕ್ಸಿ ಗಡಿಪಾರು ಮಾಡುವ ಸಂಬಂಧ ವಿಚಾರಣೆ ನಡೆಯುತ್ತಿದೆ. ಈ ವೇಳೆ ಅಫಿಡವಿಟ್​ನಲ್ಲಿ ತಾನು ಭಾರತದ ಕಾನೂನನ್ನು ಪಾಲಿಸುವ ಪ್ರಜೆ ಎಂದು ಮೆಹುಲ್ ಚೋಕ್ಸಿ ತಿಳಿಸಿದ್ದಾರೆ.

  ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಪರಾರಿಯಾಗಿದ್ದ ಉದ್ಯಮಿ ಈ ನಿಟ್ಟಿನಲ್ಲಿ ಎಂಟು ಪುಟಗಳ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. "ನನ್ನ ವಿರುದ್ಧ ತನಿಖೆ ನಡೆಸಲು ಮತ್ತು ಅವರು ನನ್ನ ವಿರುದ್ಧ ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಅವರು ನನ್ನಲ್ಲಿ ಯಾವುದೇ ಪ್ರಶ್ನೆಗಳನ್ನು ಕೇಳಲು ನಾನು ಭಾರತೀಯ ಅಧಿಕಾರಿಗಳಿಗೆ ಆಹ್ವಾನವನ್ನು ನೀಡಿದ್ದೇನೆ." ಎಂದು ಮೆಹುಲ್ ಚೋಕ್ಸಿ ತಿಳಿಸಿದ್ದಾರೆ.

  “ನಾನು ಭಾರತದಲ್ಲಿ ಕಾನೂನು ಪಾಲನೆಯನ್ನು ತಪ್ಪಿಸಲಿಲ್ಲ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ನಾನು ಭಾರತವನ್ನು ತೊರೆದಾಗ ಭಾರತದಲ್ಲಿ ಕಾನೂನು ಜಾರಿ ಅಧಿಕಾರಿಗಳು ನನ್ನ ವಿರುದ್ಧ ಯಾವುದೇ ವಾರಂಟ್ ಹೊರಡಿಸಿರಲಿಲ್ಲ"ಎಂದು ಚೋಕ್ಸಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

  ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರು 2018 ರ ಜನವರಿ ಮೊದಲ ವಾರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ಕೋಟ್ಯಂತರ ಹಗರಣವು ಭಾರತೀಯ ಬ್ಯಾಂಕಿಂಗ್ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಲೆಟರ್ಸ್ ಆಫ್ ಅಂಡರ್ಟೇಕಿಂಗ್ (ಎಲ್‌ಒಯು) ಪಡೆಯಲು ಇವರಿಬ್ಬರು ಸರ್ಕಾರಿ ಬ್ಯಾಂಕಿನ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

  ಇದನ್ನೂ ಓದಿ: Viral Video: ಹಸು-ಕರುವಿಗೆ ಪಾನಿಪುರಿ ತಿನ್ನಿಸುತ್ತಾನೆ ಪುಣ್ಯಾತ್ಮ, ಅವೂ ಬಾಯಿಚಪ್ಪರಿಸಿಕೊಂಡು ಮೆಲ್ಲುತ್ತಿವೆ ನೋಡಿ !

  ಏತನ್ಮಧ್ಯೆ, ಡೊಮಿನಿಕಾ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದ ನಂತರ ಚೋಕ್ಸಿಯನ್ನು ಗಡೀಪಾರು ಮಾಡಲು ಡೊಮಿನಿಕಾಗೆ ತೆರಳಿದ್ದ ಜಾರಿ ನಿರ್ದೇಶನಾಲಯ ತಂಡವು ಭಾರತಕ್ಕೆ ಮರಳಿದೆ. ಸಿಬಿಐ ಡಿಐಜಿ ಶಾರದಾ ರೌತ್ ನೇತೃತ್ವದ ತಂಡವನ್ನು ಹೊತ್ತ ಜೆಟ್ ಜೂನ್ 3 ರಂದು ರಾತ್ರಿ 8.09 ಕ್ಕೆ (ಸ್ಥಳೀಯ ಸಮಯ) ಡೊಮಿನಿಕಾದ ಮೆಲ್ವಿಲ್ಲೆ ಹಾಲ್ ವಿಮಾನ ನಿಲ್ದಾಣದಿಂದ ಹೊರಟು ಇಲ್ಲಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 11.02 ಗಂಟೆಗೆ (ಐಎಸ್ಟಿ) ತಲುಪಿತು. ಡೊಮಿನಿಕಾದ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮುಂದುವರೆದಿದ್ದರಿಂದ ಪಿಎನ್‌ಬಿಯಲ್ಲಿ 13,500 ಕೋಟಿ ರೂ.ಗಳ ಬ್ಯಾಂಕ್ ವಂಚನೆಯಲ್ಲಿ ಬಯಸಿದ್ದ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತಂಡವು ಸುಮಾರು ಏಳು ದಿನಗಳ ಕಾಲ ಹೋರಾಟ ನಡೆಸಿತ್ತು.

  ಇದನ್ನೂ ಓದಿ: SaveLakshaDweep: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್​ ಪಟೇಲ್ ವಿರೋಧಿಸಿ ಪ್ರಧಾನಿಗೆ 93 ಮಾಜಿ ಉನ್ನತ ಅಧಿಕಾರಿಗಳ ಪತ್ರ

  ಚೋಕ್ಸಿಯ ವಕೀಲರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಡೊಮಿನಿಕಾ ಹೈಕೋರ್ಟ್ ಗುರುವಾರ ಮುಂದೂಡಿದೆ. ಬಂಧನಕ್ಕೊಳಗಾದ ಅಥವಾ ಕಾನೂನುಬಾಹಿರ ಬಂಧನದಲ್ಲಿದ್ದ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಲಾಗುತ್ತದೆ.

  ಮುಂದಿನ ವಿಚಾರಣೆಯು ಒಂದು ತಿಂಗಳ ನಂತರ ನಡೆಯುವ ಸಾಧ್ಯತೆಯಿದೆ ಮತ್ತು ಉದ್ಯಮಿ ಡೊಮಿನಿಕಾದಲ್ಲಿಯೇ ಇರುತ್ತಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನ್ಯಾಯಾಧೀಶ ಬರ್ನಿ ಸ್ಟೀಫನ್ಸನ್ ಎರಡೂ ಕಡೆಯವರನ್ನು ಭೇಟಿಯಾದ ನಂತರ ಮುಂದಿನ ವಿಚಾರಣೆಯ ದಿನಾಂಕವನ್ನು ನಿರ್ಧರಿಸುತ್ತಾರೆ ಎಂದು ಮಾಧ್ಯಮಗಳು ಆಂಟಿಗುವಾ ನ್ಯೂಸ್ ರೂಮ್ ತಿಳಿಸಿವೆ.
  Published by:MAshok Kumar
  First published: