Smriti Irani ಮಗಳ ವಿರುದ್ಧ ಅಕ್ರಮ ಬಾರ್ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ

ಕಾಂಗ್ರೆಸ್ ನಾಯಕರಾದ (Congress leaders) ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.

ಸ್ಕೃತಿ ಇರಾನಿ, ಜೈರಾಮ್​ ರಮೇಶ್​

ಸ್ಕೃತಿ ಇರಾನಿ, ಜೈರಾಮ್​ ರಮೇಶ್​

  • Share this:
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ (Union Minister Smriti Irani) ಅವರು ತಮ್ಮ ಪುತ್ರಿ ಜೊಯಿಶ್ ಇರಾನಿ (Zoish Irani) ವಿರುದ್ಧದ ಅಕ್ರಮ ಬಾರ್ (illegal bar) ಆಪಾದನೆ ಹಿನ್ನೆಲೆ ಸಲ್ಲಿಸಿರುವ ಸಿವಿಲ್ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕರಾದ (Congress leaders) ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ. ಜೊಯಿಶ್ ಇರಾನಿ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ. ಜುಲೈ 29 ರಂದು ಬಾರ್​ಗೆ ಶೋಕಾಸ್ ನೋಟಿಸ್ ನೀಡಿದ ಅಬಕಾರಿ ಆಯುಕ್ತ ನಾರಾಯಣ್ ಎಂ ಗಡ್ ಅವರಿಗೆ ಕಿರುಕುಳ ನೀಡಲು ತಮ್ಮ ರಾಜಕೀಯ ಪ್ರಭಾವವನ್ನು ಬಳಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿತ್ತು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಸಚಿವೆ ಸ್ಕೃತಿ ಇರಾನಿ, ತಮ್ಮ ಮಗಳು ಯಾವುದೇ ಬಾರ್​ ನಡೆಸುತ್ತಿಲ್ಲ. ಆಕೆ ವಿದ್ಯಾರ್ಥಿಯಷ್ಟೇ ಎಂದು ಸ್ಪಷ್ಟನೆ ನೀಡಿದ್ದರು.

ಕಾಂಗ್ರೆಸ್​ ಆರೋಪವೇನು..?

ಕಾಂಗ್ರೆಸ್ ಮುಖ್ಯ ವಕ್ತಾರ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮಾಧ್ಯಮ ಅಧ್ಯಕ್ಷ ಪವನ್ ಖೇರಾ ಮತ್ತು ಗುಜರಾತ್‌ನ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೆಸ್ಟೋರೆಂಟ್ ನಡೆಸಲು ಮಾತ್ರ ಪರವಾನಗಿ ಇದೆ. ಆದರೆ ಇರಾನಿ ಅವರ ಮಗಳು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ. ವಿದೇಶಿ, ಭಾರತ ನಿರ್ಮಿತ ವಿದೇಶಿ ಮತ್ತು ದೇಶದ ಮದ್ಯವನ್ನು ಪೂರೈಸಲು ಕಳೆದ ವರ್ಷ ಫೆಬ್ರವರಿಯಲ್ಲಿ ಪರವಾನಗಿಗಳನ್ನು ಸತ್ತ ವ್ಯಕ್ತಿಯ ಹೆಸರಲ್ಲಿ ಪಡೆಯದಿದ್ದಾರೆ.   ಕಳೆದ ತಿಂಗಳು ಪರವಾನಗಿಗಳನ್ನು ನವೀಕರಿಸಿದ್ದಾಳೆ ಎಂದು ಆರೋಪಿಸಿದ್ದರು.

ಸಮಸ್ಸ್​ ಬಳಿಕ ಜೈರಾಮ್ ರಮೇಶ್  ಟ್ವೀಟ್​ 

ಸ್ಮೃತಿ ಇರಾನಿ ಅವರು ದಾಖಲಿಸಿರುವ ಪ್ರಕರಣಕ್ಕೆ ಔಪಚಾರಿಕವಾಗಿ ಉತ್ತರಿಸುವಂತೆ ದೆಹಲಿ ಹೈಕೋರ್ಟ್ ನಮಗೆ ನೋಟಿಸ್ ನೀಡಿದೆ. ನ್ಯಾಯಾಲಯದ ಮುಂದೆ ಸತ್ಯವನ್ನು ಪ್ರಸ್ತುತಪಡಿಸಲು ನಾವು ಎದುರು ನೋಡುತ್ತೇವೆ ಎಂದು  ಜೈರಾಮ್ ರಮೇಶ್ ಹೇಳಿದ್ದಾರೆ. ಕೋರ್ಟ್ ಆದೇಶದ ನಂತರ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Rashtrapatni Remark: ‘ರಾಷ್ಟ್ರಪತ್ನಿ’ ವಿವಾದ: ನನ್ನನ್ನು ಗಲ್ಲಿಗೇರಿಸಿ, ಆದ್ರೆ ಸೋನಿಯಾ ಮೇಡಂ ಹೆಸರನ್ನು ಎಳೆದು ತರಬೇಡಿ

ಕಾರ್ಯಕರ್ತ ವಕೀಲ ಐರಿಸ್ ರಾಡ್ರಿಗಸ್ ಅವರು ಸಲ್ಲಿಸಿದ ಆರ್‌ಟಿಐ (ಮಾಹಿತಿ ಹಕ್ಕು) ಅರ್ಜಿಯಲ್ಲಿ ಬಾರ್ ಲೈಸೆನ್ಸ್‌ಗಳ ಅಕ್ರಮವು ಹೊರಬಿದ್ದಿದೆ ಎಂದು ಹೇಳಲಾಗಿದೆ. ಅವರ ದೂರಿನ ಮೇರೆಗೆ ಅಬಕಾರಿ ಆಯುಕ್ತರು ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸಿದರು.

ಆರೋಪವನ್ನು ತಳ್ಳಿಹಾಕಿರುವ ಸ್ಮೃತಿ ಇರಾನಿ

ಕಾಂಗ್ರೆಸ್ ಆರೋಪವನ್ನು ಸ್ಮೃತಿ ಇರಾನಿ ಅಲ್ಲಗಳೆದಿದ್ದರು. ನನ್ನ ಮಗಳು 18 ವರ್ಷದವಳಾಗಿದ್ದು, ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಆಕೆ ಯಾವುದೇ ಬಾರ್​ ಹೊಂದಿಲ್ಲ. ಹೀಗಾಗಿ ಕಾಂಗ್ರೆಸ್​ ಮಾಡಿರುವ ಆರೋಪಗಳು ದುರುದ್ದೇಶಪೂರಿತದಿಂದ ಕೂಡಿವೆ ಎಂದು ಸ್ಪಷ್ಟಪಡಿಸಿದ್ದರು. ಸ್ಮೃತಿ ಅವರ ಪುತ್ರಿ ಜೊಯಿಶ್ ಕೂಡ ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದರು ಮತ್ತು ಅವರು ರೆಸ್ಟೋರೆಂಟ್ ಮಾಲೀಕರಾಗಲೀ ಅಥವಾ ನಿರ್ವಹಿಸುವವರಾಗಲೀ ಅಲ್ಲ ಎಂದು ಹೇಳಿದ್ದಾರೆ. ಆಕೆಯ ಹೇಳಿಕೆಯನ್ನು ಬಿಡುಗಡೆ ಮಾಡಿದ ವಕೀಲ ಕಿರಾತ್ ನಾಗ್ರಾ, ನಮ್ಮ ಕಕ್ಷಿದಾರರು ಸಿಲ್ಲಿ ಸೋಲ್ಸ್ ಗೋವಾ ಎಂಬ ರೆಸ್ಟೋರೆಂಟ್ ಮಾಲೀಕರಾಗಲೀ ಅಥವಾ ನಿರ್ವಹಿಸುವವರಾಗಲೀ ಅಲ್ಲ. ಇದಲ್ಲದೆ, ಅವರು ಆರೋಪಿಸಿದಂತೆ ಯಾವುದೇ ಅಧಿಕಾರದಿಂದ ಯಾವುದೇ ಶೋಕಾಸ್ ನೋಟಿಸ್ ಸ್ವೀಕರಿಸಿಲ್ಲ ಎಂದಿದ್ದಾರೆ.

ನಕಲಿ ಲೈಸೆನ್ಸ್​ ಬಗ್ಗೆ ಆರೋಪ  

ಗೋವಾ ನಿಯಮಗಳ ಪ್ರಕಾರ ಒಂದು ರೆಸ್ಟೋರೆಂಟ್‌ಗೆ ಕೇವಲ ಒಂದು ಬಾರ್ ಲೈಸೆನ್ಸ್ ಸಿಗುತ್ತದೆ. ಆದರೆ ಈ ರೆಸ್ಟೊರೆಂಟ್‌ಗೆ ಎರಡು ಬಾರ್ ಲೈಸೆನ್ಸ್‌ಗಳಿವೆ ಎಂದು ಅವರು ಹೇಳಿದರು. ಸ್ಮೃತಿ ಇರಾನಿ ಅವರನ್ನು ತಕ್ಷಣವೇ ಕೇಂದ್ರ ಸಂಪುಟದಿಂದ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ನಾವು ಪ್ರಧಾನಿಯವರಲ್ಲಿ ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್​​ ಆರೋಪಿಸಿತ್ತು.
Published by:Kavya V
First published: